Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಲೆನಾಡ ಗೋಲಿ ಕಡಬು ಸವಿದು ನೋಡಿ..! ಎಂಥಾ ರುಚಿ ಗೊತ್ತಾ?
ಬೆಳಗ್ಗೆ ತಿಂಡಿಗೆ ನೀವು ವಿವಿಧ ಬಗೆಯ ತಿಂಡಿ ಸವಿಯಲು ಮುಂದಾಗುವುದು ಹೆಚ್ಚು ಅದರಲ್ಲೂ ವಿಶೇಷ ಎನ್ನುವಂತೆ ಮಲೆನಾಡು ಶೈಲಿಯ ತಿಂಡಿಗಳೆಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಕಡುಬು, ಇಡ್ಲಿ, ದೋಸೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಎಲ್ಲರೂ ಇಷ್ಟಪಡುವಂತಹ ಖಾದ್ಯ ಆಗಿದೆ. ಹಾಗೆ ಮಳೆಗಾಲದ ಸಮಯ ಈಗಷ್ಟೇ ಆರಂಭವಾಗುತ್ತಿದೆ. ಈ ಸಮಯದಲ್ಲಿ ನಾವು ಗೋಲಿ ಕಡಬು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ನೀವು ಸಾಮಾನ್ಯವಾಗಿ ಅಕ್ಕಿ ಹಿಟ್ಟಿನಿಂದ ಮಾಡುವ ಕಡಬು ಸವಿದಿರುತ್ತೀರಿ. ಆದ್ರೆ ಅದು ಗಾತ್ರದಲ್ಲೂ ದೊಡ್ಡದಾಗಿರುತ್ತೆ. ಆದ್ರೆ ಈ ರೀತಿಯಾಗಿ ಮಸಾಲೆ ಭರಿತ ಚಿಕ್ಕ ಚಿಕ್ಕ ಗೋಲಿಗಳಂತೆ ಕಾಣುವ ಕಡಬಿನ ರುಚಿ ನೋಡಿದ್ದೀರಾ? ಈ ಕಡಬು ಒಮ್ಮೆ 10ರಿಂದ 15 ಆದರು ಸವಿಯಬಹುದು. ಹಾಗೆ ಅದರ ಮಸಾಲೆ ಭರತಿ ಖಾರ ಖಾರವಾದ ರುಚಿ ಮತ್ತಷ್ಟು ಸವಿಯುವಂತೆ ಮಾಡಲಿದೆ.

ಇನ್ನು ಗೋಲಿ ಗಾತ್ರದ ಕಡಬನ್ನು ವಿಶೇಷ ದಿನಗಳ ಸಮಯದಲ್ಲಿ ಹಾಗೆ ವಿಭಿನ್ನ ರುಚಿಯ ಸವಿಯಲು ಮುಂದಾಗುವವರು ಇಷ್ಟಪಡುತ್ತಾರೆ. ಹಾಗೆ ಇಂತಹ ರುಚಿಯನ್ನು ಮಕ್ಕಳು ಕೂಡ ಬಹಳ ಇಷ್ಟಪಟ್ಟು ಸವಿಯುತ್ತಾರೆ. ನೀವು ಕೂಡ ಮನೆಯಲ್ಲಿ ವಿಶೇಷ ಬಗೆಯ ತಿಂಡಿ ಮಾಡಲು ಮುಂದಾಗುವುದಾದರೆ ಈ ಗೋಲಿ ಕಡಬು ಮಾಡಿ ಸವಿಯಲು ಮುಂದಾಗಿ.
ಹಾಗಾದ್ರೆ ಈ ಗೋಲಿ ಕಡಬು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗೋಲಿ ಕಡಬು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅಕ್ಕಿ ಹಿಟ್ಟು
- ತುಪ್ಪ
- ಎಣ್ಣೆ
- ಸಾಸಿವೆ
- ಜೀರಿಗೆ
- ಉದ್ದಿನ ಬೇಳೆ
- ಬೆಳ್ಳುಳ್ಳಿ
- ಕರಿಬೇವು
- ಮೆಂತ್ಯ ಸೊಪ್ಪು
- ಹುರಿಗಡಲೆ
- ಹಸಿ ಮೆಣಸು
- ಉಪ್ಪು
ಗೋಲಿ ಕಡಬು ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆಗೆ ನೀರು ಹಾಕಿಕೊಳ್ಳಿ. ಅಳತೆ ಕಪ್‌ನಲ್ಲಿ 1 ಕಪ್ ಅಕ್ಕಿಹಿಟ್ಟಿಗೆ 2 ಕಪ್ ನೀರು ಹಾಕಿಕೊಳ್ಳಿ. ನೀರು ಹಾಕಿದ ಬಳಿಕ ಉಪ್ಪು, 1 ಸ್ಪೂನ್ ತುಪ್ಪ ಹಾಕಿ ಕುದಿಯಲು ಬಿಡಿ. ನೀರು ಕುದಿಯಲು ಆರಂಭಿಸಿದಾಗ ನಿಧಾನವಾಗಿ ಅಕ್ಕಿ ಹಿಟ್ಟನ್ನು ನೀರಿಗೆ ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಿ. (ಅಕ್ಕಿ ಹಿಟ್ಟನ್ನು ಜರಡಿ ಹಿಡಿದು ನುಣ್ಣಗೆ ಇರುವ ಹಿಟ್ಟನ್ನು ಮಾತ್ರ ಇದಕ್ಕೆ ಬಳಸಿ)
ಅಕ್ಕಿ ಹಿಟ್ಟು ಹಾಕಿ ನಿಧಾನವಾಗಿ ಮಿಕ್ಸ್ ಮಾಡಿಕೊಳ್ಳಿ. ಇದು ಗಟ್ಟಿಯಾಗಿ ಚಪಾತಿ ಹಿಟ್ಟಿನಂತೆ ಅಂಟು ಅಂಟಾದ ಬಳಿಕ ಒಲೆ ಆಫ್ ಮಾಡಿಕೊಂಡು ಹಿಟ್ಟನ್ನು ತಟ್ಟೆಗೆ ಹಾಕಿಕೊಳ್ಳಿ. ಈಗ ಕೈಗೆ ಎಣ್ಣೆ ಅಥವಾ ನೀರು ಹಚ್ಚಿಕೊಂಡು ಹಿಟ್ಟನ್ನು ಹದ ಮಾಡಿಕೊಳ್ಳಿ. ನಂತರ ಗೋಲಿ ರೀತಿ ಉಂಡೆ ಕಟ್ಟಿಕೊಳ್ಳಿ. ಹಿಟ್ಟನ್ನು ಸಂಪೂರ್ಣ ಉಂಡೆ ಕಟ್ಟಿದ ಬಳಿಕ ಈ ಉಂಟೆಗಳನ್ನು ಕಡಬು ಮಾಡುವ ಕುಕ್ಕರ್ ಅಥವಾ ಇಡ್ಲಿ ಪಾತ್ರೆಗೂ ಹಾಕಿ ಬೇಯಲು ಬಿಡಿ.
ಮಧ್ಯಮ ಉರಿಯಲ್ಲಿ 10 ನಿಮಿಷ ಬೇಯಿಸಿದರೆ ಸಾಕು. ಈಗ ಒಂದು ಬಾಣಲೆಗೆ ಎಣ್ಣೆ ಹಾಕಿಕೊಂಡು ಬಳಿಕ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಹಸಿ ಮೆಣಸು, ಕರಿಬೇವು, ಉಪ್ಪು, ಮೆಂತ್ಯ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿ. ಇಷ್ಟಾದ ಬಳಿಕ ಬೆಂದಿರುವ ಗೋಲಿ ಕಡಬುಗಳನ್ನು ಇದಕ್ಕೆ ಹಾಕಿಕೊಂಡು ನಿಧಾನಕ್ಕೆ ಮಿಕ್ಸ್ ಮಾಡಿ.
ನಂತರ ತಟ್ಟೆ ಮುಚ್ಚಿ ಚೆನ್ನಾಗಿ 1 ನಿಮಿಷ ಬೇಯಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಸವಿಯಲು ಈ ಗೋಲಿ ಕಡಬು ರೆಡಿಯಾಗುತ್ತದೆ. ನೀವು ಕೂಡ ಈ ಕಡಬನ್ನು ಮಾಡಿ ಸವಿದು ನೋಡಿ.



Click it and Unblock the Notifications