Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
1 ಪ್ಯಾಕ್ ಮ್ಯಾಗಿ ಇದ್ರೆ ಮ್ಯಾಗಿ ಆಮ್ಲೆಟ್ ಮಾಡಿ! 5 ನಿಮಿಷದಲ್ಲಿ ರೆಡಿ!
ಮನೆಯಲ್ಲಿ ನೀವು ಸಮಯ ಇದ್ದಾಗಲೆಲ್ಲ ಯಾವುದಾದರು ಸಣ್ಣ ಪುಟ್ಟ ಖಾದ್ಯಗಳ ಮಾಡಿ ಸವಿಯುವ ಅಭ್ಯಾಸ ಇಟ್ಟು ಕೊಂಡಿರಬಹುದು. ಅದ್ರಲ್ಲೂ ಮ್ಯಾಗಿ, ಗೋಬಿ ಮಂಚೂರಿಯನ್, ನೂಡಲ್ಸ್ ಹೀಗೆ ಹಲವು ಸ್ನ್ಯಾಕ್ಸ್ ಸವಿಯೋಕೆ ಎಲ್ಲರಿಗೂ ಇಷ್ಟವಾಗುತ್ತೆ. ಮತ್ತೆ ಕೆಲವರು ನೂಡಲ್ಸ್, ಮ್ಯಾಗಿಯನ್ನು ಬೆಳಗಿನ ತಿಂಡಿಗೂ ಮಾಡಿ ಸವಿಯೋದು ನೋಡಬಹುದು. ಆದ್ರೆ ಇದನ್ನೇ ನಾವಿಂದು ವಿಶೇಷ ರೀತಿಯಲ್ಲಿ ಮಾಡುತ್ತಿದ್ದೇವೆ.
ಮ್ಯಾಗಿಯೊಂದಿಗೆ ಎಗ್ ಆಮ್ಲೆಟ್ ಮಾಡಿ ಸವಿಯುವ ಕುರಿತಾಗಿ ಇಂದು ತಿಳಿಯೋಣ. ನೀವು ಮನೆಯಲ್ಲಿ ಊಟದೊಂದಿಗೆ ಸವಿಯಲು ಹಲವು ಬಾರಿ ಎಗ್ ಆಮ್ಲೆಟ್ ಮಾಡಿ ಸವಿದಿರುತ್ತೀರಿ. ಆದ್ರೆ ಮ್ಯಾಗಿ ಹಾಗೂ ಆಮ್ಲೆಟ್ ಒಟ್ಟಿಗೆ ಸವಿದಿದ್ದೀರಾ? ಮ್ಯಾಗಿ ಆಮ್ಲೆಟ್ ಮಾಡಿದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಇದರ ವಿಭಿನ್ನ ರುಚಿ ಸವಿದರೆ ಮತ್ತೆ ಮತ್ತೆ ಸವಿಯಲು ಮುಂದಾಗೋದು ಖಚಿತ.

ಸಂಜೆ ಸಮಯದಲ್ಲಿ ಅಥವಾ ಬೆಳಗ್ಗೆ ತಿಂಡಿಗೂ ಕೂಡ ಈ ಮ್ಯಾಗಿ ಆಮ್ಲೆಟ್ ಮಾಡಿ ಸವಿಯಬಹುದು. ನಾವಿಂದು ಈ ಮ್ಯಾಗಿ ಆಮ್ಲೆಟ್ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ. ಮ್ಯಾಗಿ ಆಮ್ಲೆಟ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿಯೋಣ.
ಮ್ಯಾಗಿ ಆಮ್ಲೆಟ್ ಮಾಡಲು ಬೇಕಾಗುವ ವಸ್ತುಗಳು
- ಮ್ಯಾಗಿ
- ಮೊಟ್ಟೆ
- ಈರುಳ್ಳಿ
- ಹಸಿ ಮೆಣಸು
- ಕೊತ್ತಂಬರಿ ಸೊಪ್ಪು
- ಶುಂಠಿ
- ಎಣ್ಣೆ
ಮ್ಯಾಗಿ ಆಮ್ಲೆಟ್ ಮಾಡುವ ವಿಧಾನವಿದು
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ನೀರು ಹಾಕಿ ಬಿಸಿಯಾಗಲು ಬಿಡಿ. ನಂತರ ನೀರು ಬಿಸಿಯಾದಾಗ ಇದಕ್ಕೆ ಮ್ಯಾಗಿ ಹಾಕಿಕೊಳ್ಳಿ. ನಿಮಗೆ ಎಷ್ಟು ಬೇಕೋ ಅಷ್ಟು ಪ್ರಮಾಣದ ಮ್ಯಾಗಿ ಹಾಕಿಕೊಳ್ಳಿ. ಇದಕ್ಕೆ ಉಪ್ಪು ಸಹ ಹಾಕಿಕೊಳ್ಳಿ. ನೀರು ಸ್ವಲ್ಪ ಇಂಗಿದ ಬಳಿಕ ಇದಕ್ಕೆ ಮ್ಯಾಗಿ ಮಸಾಲೆಯನ್ನು ಹಾಕಿಕೊಳ್ಳಿ.
ಈಗ ಒಂದು ಬೌಲ್‌ಗೆ 2 ಅಥವಾ ಅದಕ್ಕಿಂತ ಹೆಚ್ಚು ಮೊಟ್ಟೆಯನ್ನು ಒಡೆದು ಹಾಕಿಕೊಳ್ಳಿ. ನಂತರ ಉಪ್ಪು, ಹಾಗೆ ಶುಂಠಿ, ಈರುಳ್ಳಿ, ಹಸಿ ಮೆಣಸು, ಹಾಗೆ ಸಣ್ಣದಾಗಿ ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪು ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿ ರೆಡಿ ಇಟ್ಟುಕೊಳ್ಳಿ.
ಈಗ ಒಲೆ ಮೇಲೆ ಕಾವಲಿ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಈಗ ಮೊಟ್ಟೆಯ ಮಿಶ್ರಣವನ್ನು ಹಾಕಿಕೊಂಡು ಸ್ವಲ್ಪ ಬಿಸಿಯಾಗಲು ಬಿಡಿ. ಹಾಗೆ ಸ್ವಲ್ಪ ಬೆಂದ ನಂತರ ಇದರ ಮೇಲೆ ಒಲೆ ಮೇಲೆ ಇರುವ ಮ್ಯಾಗಿಯನ್ನು ಮೊಟ್ಟೆಯ ಮೇಲೆ ಹಾಕಿಕೊಳ್ಳಿ. ಹರಡಿಕೊಳ್ಳುವುದು ಉತ್ತಮ. ಹಾಗೆ 1 ನಿಮಿಷ ಬೇಯಲು ಬಿಡಿ. ನಂತರ ಒಂದು ಕಡೆಯಿಂದ ಈ ಮೊಟ್ಟೆಯನ್ನು ಮಡಚಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಮ್ಯಾಗಿ ಆಮ್ಲೆಟ್ ಸಿದ್ದವಾಗುತ್ತದೆ. ನೀವು ಕೂಡ ಇದನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ.
ನೀವು ಬೆಳಗ್ಗೆ ತಿಂಡಿಗೂ ಕೂಡ ಇದನ್ನು ಮಾಡಿ ಸವಿಯಬಹುದು. ಮನೆಯಲ್ಲಿ ಮಕ್ಕಳು ಬೆಳಗ್ಗೆ ತಿಂಡಿ ಸೇವಿಸೋದಿಲ್ಲ ಅನ್ನೋದು ಇದನ್ನು ಮಾಡಿ ನೀಡಬಹುದು. ಅದ್ಭುತ ರುಚಿಯೊಂದಿಗೆ ಎಲ್ಲರಿಗೂ ಇಷ್ಟವಾಗುವ ಸುಲಭದ ರೆಸಿಪಿ ಇದು.



Click it and Unblock the Notifications