Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಿಂಪಲ್ ರೆಸಿಪಿ ಸಖತ್ ರುಚಿಯ ಮ್ಯಾಗಿ ಮಸಾಲ ಪಾಸ್ತಾ ಮಾಡಿ ನೋಡಿ.!
ಬೆಳಗ್ಗೆ ತಿಂಡಿ ಅಥವಾ ಸಂಜೆ ಸ್ನ್ಯಾಕ್ಸ್‌ಗೆ ಏನಾದರು ತಿಂಡಿ ಮಾಡಬೇಕು ಅಂದುಕೊಂಡ್ರೆ ಹತ್ತಾರು ರೀತಿಯ ಖಾದ್ಯ ನಿಮ್ಮ ತಲೆಗೆ ಬರಬಹುದು. ಆದ್ರೆ ಯಾವುದನ್ನು ಮಾಡಬೇಕು ಎಂಬ ಗೊಂದಲವಂತು ಇದ್ದೇ ಇರುತ್ತೆ. ಹೀಗಾಗಿ ಯಾವುದೇ ಖಾದ್ಯ ಮಾಡುವ ಮುನ್ನ ನೀವು ಹತ್ತಾರು ಬಾರಿ ಯೋಚಿಸುತ್ತೀರಿ, ಯಾವ ವಸ್ತು ಇದೆ, ಯಾವ ಪದಾರ್ಥದಿಂದ ಯಾವ ತಿಂಡಿ ಅಥವಾ ಸ್ನ್ಯಾಕ್ಸ್ ಮಾಡಬಹುದು ಎಂಬ ಆಲೋಚನೆಯಲ್ಲೊ ತೊಡಗುವುದು ಕಾಮನ್.
ಆದ್ರೆ ಸಿಂಪಲ್ ಆಗಿ, ಮನೆಯಲ್ಲಿರುವ ವಸ್ತು ಬಳಸಿ ಮನೆ ಮಂದಿಯಲ್ಲ ಕುಳಿತು ಬಾಯಿ ಚಪ್ಪರಿಸಿ ಸವಿಯುವಂತಹ ಒಂದು ಖಾದ್ಯ ನೀವು ಸವಿಯಲು ಮುಂದಾದರೆ ಹೇಗಿರುತ್ತೆ ಹೇಳಿ. ಹೌದು ಸಂಜೆಯ ಸ್ನ್ಯಾಕ್ಸ್ ಗೆ ಅಥವಾ ಬೆಳಗ್ಗೆ ತಿಂಡಿಗೆ ನೀವು ಪಾಸ್ತಾ ಬಳಸಿ ಏನಾದರು ಮಾಡಬೇಕು ಎಂಬ ಆಲೋಚನೆಯಲ್ಲಿದ್ದರೆ ನಾವಿಂದು ನಿಮಗಾಗಿ ಮಸಾಲ ಪಾಸ್ತಾ ಮಾಡುವ ಕುರಿತು ತಿಳಿಸಲಿದ್ದೇವೆ.

ಮ್ಯಾಗಿ ಮಸಾಲ ಪಾಸ್ತಾ ಮನೆಯ ಮಕ್ಕಳು ಸೇರಿ ಹಿರಿಯರು ಕೂಡ ಇಷ್ಟಪಟ್ಟು ಸವಿಯಬಹುದಾದ ಒಂದು ತಿಂಡಿ. ನೀವು ರಸ್ತೆ ಬದಿಯ ಅಂಗಡಿಗಳಲ್ಲಿ ಈ ರುಚಿಕರವಾದ ಖಾದ್ಯವನ್ನು ಸವಿದು ಬಾಯಿ ಚಪ್ಪರಿಸಿರಬಹುದು. ಹಾಗೆ ಹೋಟೆಲ್, ರೆಸ್ಟೋರೆಂಟ್‌ನಲ್ಲೂ ದುಬಾರಿ ಹಣ ನೀಡಿ ಇದನ್ನು ಸವಿದಿರುತ್ತೀರಿ, ಆದ್ರೆ ಮನೆಯಲ್ಲೇ ಮಾಡಲು ಎಂದಾದರು ಪ್ರಯತ್ನಿಸಿದ್ದೀರಾ?
ಈ ಮ್ಯಾಗಿ ಮಸಾಲ ಪಾಸ್ತಾ ಮಾಡೋದು ತುಂಬಾನೆ ಸುಲಭ. ಆದ್ರೆ ಕೆಲವರಿಗೆ ಇದನ್ನು ಮಾಡುವ ಸರಿಯಾದ ವಿಧಾನ ತಿಳಿಯದೆ ಕಷ್ಟ ಎಂದುಕೊಂಡಿರುತ್ತಾರೆ. ಹಾಗಾದ್ರೆ ಈ ಮ್ಯಾಗಿ ಮಸಾಲ ಪಾಸ್ತಾ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮ್ಯಾಗಿ ಮಸಾಲ ಪಾಸ್ತಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಪಾಸ್ತಾ - 200 ಗ್ರಾಮ್
- ಈರುಳ್ಳಿ
- ಟೊಮೆಟೋ
- ಎಣ್ಣೆ
- ಉಪ್ಪು
- ಒಣ ಮೆಣಸು
- ಮ್ಯಾಗಿ ಮಸಾಲೆ 2 ಪ್ಯಾಕ್
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಕೊತ್ತಂಬರಿ ಸೊಪ್ಪು
ಮ್ಯಾಗಿ ಮಸಾಲ ಪಾಸ್ತಾ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ ನೀರು ಇಟ್ಟು ಬಿಸಿ ಮಾಡಿಕೊಳ್ಳಬೇಕು, ಈ ನೀರಿಗೆ ಒಂದು ಸ್ಪೂನ್ ಎಣ್ಣೆ ಹಾಗೂ ಉಪ್ಪು ಹಾಕಿಕೊಂಡು ಅದಕ್ಕೆ 200 ಗ್ರಾಮ್ ಪಾಸ್ತಾ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. 4 ನಿಮಿಷ ಬೇಯಿಸಿಕೊಳ್ಳಿ. ಬಳಿಕ ಪಾಸ್ತಾವನ್ನು ನೀರಿನಿಂದ ತೆಗೆದು ಅದನ್ನು ತೆಗೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ನೀರು ಸಂಪೂರ್ಣ ಇಳಿಯಬೇಕು, ಹಾಗೆ ಮೇಲೆ ತಣ್ಣೀರು ಹಾಕಿ ಶೋಧಿಸಿಕೊಳ್ಳಬೇಕು. ಇಲ್ಲದಿದ್ದರೆ ಪಾಸ್ತಾ ಮೆತ್ತಗಾಗುತ್ತದೆ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಕಾದ ಬಳಿಕ ಒಣ ಮೆಣಸು, ಒಂದು ಈರುಳ್ಳಿ ಕತ್ತರಿಸಿಕೊಂಡು ಹಾಕಿಕೊಳ್ಳಿ. ಅನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೋ, ಉಪ್ಪು ಹಾಕಿಕೊಂಡು 3ರಿಂದ 4 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಮ್ಯಾಗಿ ಮಸಾಲ ಪೌಡರ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಮಸಾಲೆ ಹಾಕಿದರೆ ಬೇರೆ ಯಾವುದೇ ಮಸಾಲೆ ಹಾಕುವುದು ಬೇಡ. 5 ರೂಪಾಯಿಯ ಎರಡು ಪ್ಯಾಕ್ ಪಡೆದು ಹಾಕಿಕೊಳ್ಳಿ.
ಈಗ ಬೌಲ್‌ನಲ್ಲಿಟ್ಟ ಪಾಸ್ತಾವನ್ನು ಇದಕ್ಕೆ ಹಾಕಿಕೊಂಡು ನಿಧಾನವಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಮುಚ್ಚಳ ಮುಚ್ಚಿ 4 ನಿಮಿಷ ಬೇಯಿಸಿಕೊಳ್ಳಿ, ಅನಂತರ ಮುಚ್ಚಳ ತೆಗೆದು ಸ್ವಲ್ಪ ತಿರುಗಿಸಿಕೊಂಡು ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಒಮ್ಮೆ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಮ್ಯಾಗಿ ಮಸಾಲ ಪಾಸ್ತಾ ರೆಡಿಯಾಗುತ್ತದೆ. ಇದನ್ನು ಮಕ್ಕಳು ಬಹಳ ಇಷ್ಟಪಟ್ಟು ಸವಿಯುತ್ತಾರೆ.



Click it and Unblock the Notifications