Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಡಿಕೆ ಕಾಳಿನ ಪಲ್ಯ ಎಂದಾದ್ರು ಮಾಡಿದ್ದೀರಾ? 2 ನಿಮಿಷ ಸಾಕಾಗುತ್ತೆ..!
ಕಾಳುಗಳು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬುದು ನಿಮಗೆಲ್ಲಾ ಗೊತ್ತಿದೆ. ಮೊಳಕೆ ಭರಿಸಿದ ಕಾಳುಗಳು ಅತ್ಯಧಿಕ ಪ್ರೋಟೋನ್ ಹೊಂದಿರುತ್ತದೆ. ಇದು ನೈಸರ್ಗಿಕ ಪ್ರೋಟೀನ್‌ನ ಮೂಲವಾಗಿರುತ್ತದೆ. ಹೀಗಾಗಿ ಕಾಳುಗಳನ್ನು ಸವಿಯುವುದು ಬಹಳ ಉತ್ತಮ. ಈ ಕಾಳುಗಳಿಂದ ಮಾಡುವ ಎಲ್ಲಾ ರೀತಿಯ ಅಡುಗೆಯು ಅತ್ಯುತ್ತಮ ರುಚಿ ನೀಡುತ್ತದೆ. ಅದರಲ್ಲೂ ಕಾಳಿನ ಪಲ್ಯಗಳಂತೂ ಸವಿದಷ್ಟು ರುಚಿ ನೀಡುತ್ತವೆ.
ಅದೇ ರೀತಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಕಾಳಿನ ಪಲ್ಯ, ಕಾಳುಗಳಿಂದ ಮಾಡುವ ವಿವಿಧ ರೀತಿಯ ಖಾದ್ಯಗಳನ್ನು ನಾವು ನೋಡುತ್ತೇವೆ. ಹೀಗೆ ನಾವಿಂದು ಈ ಮಾಡಿಕೆ ಕಾಳನ್ನು ಮೊಳಕೆ ಬರಿಸಿ ಅದರಿಂದ ಪಲ್ಯ ಮಾಡುವ ಕುರಿತು ತಿಳಿಯೋಣ. ಈ ಮಡಿಕೆ ಕಾಳನ್ನು ಇಂಗ್ಲೀಷ್‌ನಲ್ಲಿ ಮೋತ್ ಬೀನ್ ಎನ್ನಲಾಗುತ್ತದೆ.

ಬೇಯಿಸಿ ಸವಿಯುವ ಈ ಕಾಳು ಬಹಳ ರುಚಿಕರ ಹಾಗೂ ಆರೋಗ್ಯಕ್ಕೆ ಅತ್ಯುತ್ತಮವಾಗಿರುವ ಖಾದ್ಯವಾಗಿದೆ. ಮಡಿಕೆ ಕಾಳು ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿದೆ. ಈ ಕಾಳುಗಳ ಸೇವನೆಯಿಂದ ಮೂಳೆಗಳ ಬಲ ಹೆಚ್ಚಾಗುತ್ತದೆ. ಈ ಕಾಳಿನಲ್ಲಿ ವಿಟಮಿನ್ ಬಿ ಹೆಚ್ಚಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹ ಸಹಕಾರಿಯಾಗಿದೆ.
ಹಾಗಾದ್ರೆ ಈ ಕಾಳಿನಲ್ಲಿ ಮೊಳಕೆ ಬರಿಸಿ ಅದರಿಂದ ಪಲ್ಯ ಮಾಡುವುದು ಹೇಗೆ? ಪಲ್ಯ ಮಾಡುವ ವಿಧಾನವೇನು? ಮಡಿಕೆ ಕಾಳಿನ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಡಿಕೆ ಕಾಳಿನ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು
- ಮಡಿಕೆ ಕಾಳು - 1 ಕಪ್
- ಮೆಂತ್ಯ- 1 ಸ್ಪೂನ್
- ಸಾಸಿವೆ
- ಜೀರಿಗೆ
- ಶುಂಠಿ
- ಬೆಳ್ಳುಳ್ಳಿ
- ಕರಿಬೇವು
- ಉಪ್ಪು
- ಅರಶಿನ
- ಇಂಗು
- ಈರುಳ್ಳಿ
- ಟೊಮೆಟೋ
- ಹುಣಸೆ ಹುಳಿ
- ಎಣ್ಣೆ
ಮಡಿಕೆ ಕಾಳಿನ ಪಲ್ಯ ಮಾಡುವುದು ಹೇಗೆ
ಮೊದಲು ಈ ಮಡಿಕೆ ಕಾಳನ್ನು ಮೊಳಕೆ ಬರಿಸುವುದು ಹೇಗೆ ಎಂಬುದನ್ನು ನೋಡೋಣ. ಒಂದು ಕಪ್ ಮಡಿಕೆ ಕಾಳು ತೆಗೆದುಕೊಂಡು ಒಂದು ಬೌಲ್‌ಗೆ ಹಾಕಿ. ಇದಕ್ಕೆ ಒಂದು ಸ್ಪೂನ್ ಮೆಂತ್ಯ ಕಾಳು ಸಹ ಹಾಕಿಕೊಂಡು ನೀರು ಹಾಖಿ ಚೆನ್ನಾಗಿ ಒಂದು ಬಾರಿ ತೊಳೆದುಕೊಳ್ಳಿ. ಬಳಿಕ ಈ ನೀರು ಚೆಲ್ಲಿ ಅದಕ್ಕೆ ಕಾಳುಗಳು ಮುಚ್ಚುವಷ್ಟು ಅಥವಾ ಎರಡರಷ್ಟು ನೀರು ಹಾಕಿ ನೆನೆಯಲು ಬಿಡಿ. ಒಟ್ಟು 7 ಗಂಟೆ ನೆನೆಯಲು ಬಿಟ್ಟರೆ ಸಾಕಾಗುತ್ತದೆ.
7 ಗಂಟೆಯ ಬಳಿಕ ನೀರನ್ನು ಬಸಿದು ಮತ್ತೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಾಳು ತೊಳೆದು ಮತ್ತೆ ನೀರು ಬಸಿದುಕೊಳ್ಳಿ. ಬಳಿಕ ಒಂದು ಬಟ್ಟೆಗೆ ಹಾಕಿ ಚೆನ್ನಾಗಿ ಕಟ್ಟಿ ಪಾತ್ರೆಯೊಳಗೆ ಇಟ್ಟು ಅದರ ಮುಚ್ಚಳ ಮುಚ್ಚಿ ಒಂದು ದಿನ ಬಿಡಿ. ಒಂದು ದಿನದಲ್ಲಿ ಮೊಳಕೆ ಒಡೆಯುತ್ತದೆ. ಈಗ ಕಾಳುಗಳನ್ನು ತೆಗೆದು ಒಂದು ಬೌಲ್‌ಗೆ ಹಾಕಿಕೊಳ್ಳಿ.
ಈಗ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಇದಕ್ಕೆ ಸಾಸಿವೆ, ಜೀರಿಗೆ, ಕರಿವೇವು, ಶುಂಠಿ, ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ಹಾಕಿ, ಹಸಿ ಮೆಣಸು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಒಂದು ಈರುಳ್ಳಿ ಸಣ್ಣದಾಗಿ ಕತ್ತರಿಸಿಕೊಂಡು ಹಾಕಿ, ಇಂಗು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಚಿಕ್ಕ ಟೊಮೆಟೋ, ಉಪ್ಪು, ಬೆಲ್ಲ, ಅರಶಿಣ, ನಿಮಗೆ ಖಾರ ಬೇಕಿದ್ದರೆ ಪಾತ್ರ ಖಾರದ ಪುಡಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ನಂತರ 3 ಸ್ಪೂನ್ ಹುಣಸೆ ಹುಳಿ ಹಾಕಿಕೊಂಡು 2 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಮೊಳಕೆ ಬರಿಸಿರುವ ಮಡಿಕೆ ಕಾಳನ್ನು ಹಾಕಿ ಫ್ರೈ ಮಾಡಲು ಬಿಡಿ. ಸುಮಾರು 5 ನಿಮಿಷ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ಕೊನೆಯದಾಗಿ ಕೊತ್ತಂಬರಿ ಹಾಕಿ ಮಿಕ್ಸ್ ಮಾಡಿಕೊಂಡು ಗ್ಯಾಸ್ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಮಡಿಕೆ ಕಾಳಿನ ಪಲ್ಯ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಇದನ್ನು ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications