Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸಿಪಿ: ಮಾವಿನಕಾಯಿ ಉಪ್ಪಿನಕಾಯಿ ಹೀಗೆ ಮಾಡಿದರೆ ವರ್ಷದವರೆಗೆ ಇಟ್ಟರೂ ಹಾಳಾಗಲ್ಲ
ಮಾವಿನಕಾಯಿ, ಮಾವಿನ ಹಣ್ಣು ಎಲ್ಲಾ ಮಾರ್ಕೆಟ್ಗೆ ಬಂದಿದೆ, ಈ ಮಾವಿನಕಾಯಿ ಸಮಯದಲ್ಲಿ ಮಾವಿನಕಾಯಿ ಉಪ್ಪಿನಕಾಯಿ ಹಾಕದೆ ಇರಲು ಸಾಧ್ಯವೇ, ಮಾವಿನಕಾಯಿ ಉಪ್ಪಿನಕಾಯಿಯನ್ನು ಒಬ್ಬೊಬ್ಬರು ಒಂದೊಂದು ರೀತಿ ಹಾಕುತ್ತಾರೆ.
ನೀವು ಬೇಕಿದ್ದರೆ 100ಕ್ಕೂ ಅಧಿಕ ರುಚಿಯಲ್ಲಿ ಮಾವಿನಕಾಯಿ ಉಪ್ಪಿನಕಾಯಿ ಹಾಕಬಹುದು, ನಾವಿಲ್ಲಿ ಮಾವಿನ ಕಾಯಿ ಉಪ್ಪಿನಕಾಯಿ ತುಂಬಾ ಸಮಯ ಇಟ್ಟರೂ ಹಾಳಾಗದಿರುವ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಗ್ರಿ
ಅರ್ಧ ಕೆಜಿ ಮಾವಿನಕಾಯಿ
2 ಚಮಚ ಸಾಸಿವೆ ಮತ್ತು 1/2 ಚಮಚ ಮೆಂತೆ
3 ಚಮಚ ಖಾರದ ಪುಡಿ
ಒಂದೂವರೆ ಚಮಚ ಉಪ್ಪಿನ ಪುಡಿ (ಕಲ್ಲುಪ್ಪು ಕೂಡ ಬಳಸಬಹುದು)
4 ಜಜ್ಜಿದ ಬೆಳ್ಳುಳ್ಳಿ ಎಸಳು
3 ಚಮಚ ಎಣ್ಣೆ
ಮಾಡುವ ವಿಧಾನ
ಮಾವಿನಕಾಯಿ ತೊಳೆದು ಅದನ್ನು ಒಣ ಬಟ್ಟೆಯಿಂದ ಒರೆಸಿ, ನೀರಿನಂಶವಿರಬಾರದು. ಇದನ್ನು ಉಪ್ಪಿಕಾಯಿ ಮಾಡುವ ಹಿಂದಿನ ದಿನವೇ ಮಾಡಿಡಿ.
ಉಪ್ಪಿನಕಾಯಿ ಮಾಡುವಾಗ ಮೆಂತೆಯನ್ನು ಹುರಿಯಿರಿ,
ಈಗ ಅದೇ ಪ್ಯಾನ್ಗೆ ಎಣ್ಣೆ ಹಾಕಿ ಸ್ವಲ್ಪ ಬಿಸಿಯಾದಾಗ ಉರಿಯಿಂದ ಇಳಿಸಿ, ನೀವು
ಮಾವಿನಕಾಯಿಯನ್ನು ಹೆಚ್ಚು ಸಮಯ ಇಡಲ್ಲ ಎಂದಾದರೆ (ಯಾವುದಾದರೂ ಫಂಕ್ಷನ್ಗೆ
ಮಾಡುವಾಗ) ಎಣ್ಣೆ ಬಿಸಿ ಮಾಡಬೇಕಾಗಿಲ್ಲ.
ಈಗ ಮೆಂತೆ ಹಾಗೂ ಸಾಸಿವೆಯನ್ನು ಪುಡಿ ಮಾಡಿ ಮಾಡಿ
ಉಪ್ಪಿನಕಾಯಿ ಕತ್ತರಿಸಿ, ಸ್ವಲ್ಪ ದೊಡ್ಡ ಪಾತ್ರೆಗೆ ಹಾಕಿ. ಪಾತ್ರೆಯಲ್ಲಿ
ಒಂದಿಷ್ಟೂ ನೀರಿನಂಶವಿರಬಾರದು.
ಈಗ ಖಾರದ ಪುಡಿ, ಉಪ್ಪು, ಬೆಳ್ಳುಳ್ಳಿ, ಕತ್ತರಿಸಿದ ಮಾವಿನಕಾಯಿಯನ್ನು ಒಂದು ಗಂಟೆ
ಬಿಸಿಲಿನಲ್ಲಿ ಇಡಿ. ಬೇಕಿದ್ದರೆ 60-70C ಉಷ್ಣತೆಯನ್ನು ಓವನ್ನಲ್ಲಿಯೂ
ಇಡಬಹುದು.
ರೆಸಿಪಿ:
ಈಗ ಮಾವಿನಕಾಯಿ ಕತ್ತರಿಸಿ ಹಾಕಿದ ಪಾತ್ರೆಗೆ ಖಾರದ ಪುಡಿ, ಜಜ್ಜಿದ
ಬೆಳ್ಳುಳ್ಳಿ, ಉಪ್ಪು, ಸಾಸಿವೆ-ಮೆಂತೆ ಪುಡಿ ಹಾಕಿ ಮಿಕ್ಸ್ ಮಾಡಿ, ಸೌಟ್ನಿಂದ
ಮಿಕ್ಸ್ ಮಾಡಬೇಕು, ಕೈ ಹಾಕಬಾರದು.
ನಂತರ ಎಣ್ಣೆಯನ್ನು ಸೇರಿಸಿ.
ಬಳಿಕ ಪಾತ್ರೆ ಅಥವಾ ಬಾಟಲಿಯ ಬಾಯಿ ಮುಚ್ಚಿ 24-28 ಗಂಟೆ ಇಡಿ, ಆವಾಗ ಮಾವಿನಕಾಯಿ
ರಸ ಬಿಡಲಾರಂಭಿಸುತ್ತದೆ, ನಂತರ ಅದರಲ್ಲಿ ಉಪ್ಪು, ಖಾರ ಸರಿಯಾಗಿ ಇದೆಯೇ ನೋಡಿ,
ಬೇಕಿದ್ದರೆ ಮತ್ತೆ ಸೇರಿಸಬಹುದು.
ನಂತರ ಅದನ್ನು ಮತ್ತೊಮ್ಮೆ ಮಿಕ್ಸ್ ಮಾಡಿ, ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.
2-3 ದಿನಕ್ಕೆ ನೀವು ಸರ್ವ್ ಮಾಡಬಹುದು, ಉಪ್ಪಿನಕಾಯಿಗೆ ಸ್ಪೂನ್ ಹಾಕುವಾಗ ಕೂಡ
ಅದರಲ್ಲಿ ನೀರಿನಂಶ ಇರದಂತೆ ಜಾಗ್ರತೆವಹಿಸಿ, ಇಲ್ಲದಿದ್ದರೆ ಹಾಳಾಗುತ್ತದೆ.



Click it and Unblock the Notifications