Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ತೆಂಗಿನಕಾಯಿ ಹಾಲು ಹೀಗೆ ತೆಗೆದರೆ ತೆಗೆಯುವುದು ತುಂಬಾ ಸುಲಭ, ತಿಂಗಳವರೆಗೆ ಇಟ್ಟು ಬಳಸಬಹುದು
Recipes
oi-Reena TK
Posted By: Reena TK
ತೆಂಗಿನಕಾಯಿ ಹಾಲು ಅಂಗಡಿಗಳಲ್ಲಿ ಡಬ್ಬಗಳಲ್ಲಿ ಸಿಗುತ್ತದೆ, ಆದರೆ ಅದು ಬಜೆಟ್ ಫ್ರೆಂಡ್ಲಿ ಆಗಿರಲ್ಲ, ತೆಂಗಿನಕಾಯಿ ಹಾಲು ನೀವೆ ತೆಗೆದು ಅದನ್ನು ಡಬ್ಬದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಟ್ಟರೆ ತಿಂಗಳವರೆಗೆ ಬಳಸಬಹುದು. ಪಾಯಸ ಮಾಡುವಾಗ ಅಥವಶಾ ಕುರ್ಮಾ ಮತ್ತಿತರ ಅಡುಗೆ ಮಾಡುವಾಗ , ಚಿಕನ್ ಸಾರು ಮಾಡುವಾಗ ತೆಂಗಿನ ಹಾಲು ಸೇರಿಸಿದರೆ ರುಚಿ ತುಂಬಾನೇ ಚೆನ್ನಾಗಿರುತ್ತದೆ.

ಹಾಗಾಗಿ ಪುರಸೊತ್ತು ಸಿಕ್ಕಾಗ ತೆಂಗಿನಕಾಯಿ ಹಾಲು ತೆಗೆದಿಟ್ಟರೆ ಬೇಕಾದಾಗ ಅಡುಗೆಗೆ ಬಲಸಬಹುದು, ಅಲ್ಲದೆ ತೆಂಗಿನಕಾಯಿ ಹಾಲು ತೆಗೆಯುವುದು ನೀವು ಅಂದುಕೊಂಡಷ್ಟು ಸುಲಭದ ಕೆಲಸವಂತು ಅಲ್ವೇ ಅಲ್ಲ, ಬನ್ನಿ ತೆಂಗಿನಕಾಯಿ ಹಾಲು ಸುಲಭದಲ್ಲಿ ತೆಗೆಯುವುದು ಹೇಗೆ ಎಂದು ನೋಡೋಣ:
- 2 ಕಪ್ ತೆಂಗಿನತುರಿ
- 4 ಕಪ್ ಕುದಿಸಿ ಆರಿದ ನೀರು (ನೀವು ತೆಂಗಿನಕಾಯಿ ಹಾಲು ತುಂಬಾ ಸಮಯ ಇಡಲು ಬಯಸುವುದಾದರೆ ಕುದಿಸಿ ಆರಿದ ನೀರು ಬಳಸಿ, ಒಂದು ವಾರದೊಳಗೆ ಬಳಸುವುದಾದರೆ ತಣ್ಣೀರು ಬಳಸಬಹುದು)
- ಈಗ ತೆಂಗಿನ ತುರಿಗೆ ನೀರು ಹಾಕಿ ಗ್ರೈಂಡ್ ಮಶಾಡಿ, ನುಣ್ಣನೆ ರುಬ್ಬಬೇಡಿ
- ನಂತರ ಒಂದು ಮಸ್ಲಿನ್ ಬಟ್ಟೆ ತೆಗೆದು , ಕೆಳಗಡೆ ಶುದ್ಧವಾದ ಪಾತ್ರೆ ಇಟ್ಟು ಅದರ ಮೇಲೆ ಬಟ್ಟೆ ಹರಡಿ, ಅದರಲ್ಲಿ ರುಬ್ಬುದ ತೆಂಗಿನಕಾಯಿ ಹಾಕಿ ನಂತರ ಹಿಂಡಿ, ಚೆನ್ನಾಗಿ ಹಿಂಡಿ.
- ಮೊದಲು ತೆಗದ ಹಾಲನ್ನು ಪ್ರತ್ಯೇಕ ಒಂದು ಡಬ್ಬದಲ್ಲಿ ಹಾಕಿಡಿ
- ನಂತರ ತೆಗೆದ ಹಿಂಡಿ ತೆಗೆದ ಹಾಲನ್ನು ಮತ್ತೊಂದು ಪಾತ್ರೆಯಲ್ಲಿ ತೆಗೆದಿಡಿ (ಏಕೆ ಎಂದು ಮುಂದೆಕ್ಕೆ ಹೇಳುತ್ತೇವೆ)
- ನಂತರ ಇವುಗಳನ್ನು ಪ್ರತ್ಯೇಕ ಡಬ್ಬದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಡಿ.
- ನೀವು ಸಾರು ಮಾಡುವಾಗ ಸ್ವಲ್ಪ ತೆಳ್ಳಗೆ ಬಂದ ತೆಂಗಿನ ಹಾಲನ್ನು ಹಾಕಿ ಕುದಿಸಿ, ಬಳಿಕ ಗಟ್ಟಿ ಹಾಲನ್ನು ಸ್ವಲ್ಪ ಹಾಕಿ ಒಂದು 1/4 ಕಪ್ ಹಾಕಿ ಒಂದು ಕುದಿ ಬರಿಸಿದರೆ ಸಾಕು ಟೇಸ್ಟ್ ತುಂಬಾ ಸೂಪರ್ ಆಗಿರುತ್ತದೆ.
Comments
[ of 5 - Users]
Story first published: Friday, August 23, 2024, 12:56 [IST]
Other articles published on Aug 23, 2024



Click it and Unblock the Notifications