Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರತಿದಿನ ಈ ಟೀ ಕುಡಿದರೆ ಸಾಕು! ತೂಕ ಇಳಿಕೆ, ಉತ್ತಮ ನಿದ್ರೆ, ಒತ್ತಡ ಕಡಿಮೆ.. ಮಾಡುವುದು ಹೇಗೆ?
ಬೆಳಗ್ಗೆ ಈ ಟೀ ಕುಡಿದರೆ ಹೊಟ್ಟೆಯ ಕೊಬ್ಬು ಕರಗುತ್ತೆ! ಯಾರಿಗೂ ಗೊತ್ತಿಲ್ಲದ ಸಿಂಪಲ್ ಸೀಕ್ರೆಟ್ ಇಲ್ಲಿದೆ. ಇತ್ತೀಚಿನ ದಿನಗಳಲ್ಲಿ ದೇಹದ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸವಾಲಾಗಿದೆ. ಆದರೆ, ಪ್ರಕೃತಿಯಲ್ಲಿ ಹಲವು ಗಿಡಮೂಲಿಕೆಗಳು ನಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. ಅಂತಹ ಗಿಡಮೂಲಿಕೆಗಳಲ್ಲಿ ಲೆಮನ್ ಗ್ರಾಸ್ (Lemongrass Tea) ಒಂದು. ಇದನ್ನು 'ಸೂಪರ್ ಹರ್ಬ್' ಎಂದೇ ಕರೆಯಲಾಗುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಕಪ್ ಲೆಮನ್ ಗ್ರಾಸ್ ಟೀ ಕುಡಿಯುವುದರಿಂದ ದೇಹದಲ್ಲಿ ಅನೇಕ ಬದಲಾವಣೆಗಳನ್ನು ಗಮನಿಸಬಹುದು. ಇದು ಬೊಜ್ಜು ಕಡಿಮೆ ಮಾಡುವುದರಿಂದ ಹಿಡಿದು ಮಾನಸಿಕ ಆರೋಗ್ಯ ಸುಧಾರಿಸುವವರೆಗೆ ಅನೇಕ ಪ್ರಯೋಜನಗಳನ್ನು (Lemongrass Tea Benefits) ನೀಡುತ್ತದೆ.
ಹೌದು, ನಿಮ್ಮ ದೈನಂದಿನ ಚಹಾ ಅಭ್ಯಾಸಕ್ಕೆ ಲೆಮನ್ಗ್ರಾಸ್ ಸೇರಿಸಿಕೊಳ್ಳುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ತೂಕ ಇಳಿಕೆ ಮತ್ತು ಜೀರ್ಣಕ್ರಿಯೆ ಸುಧಾರಣೆಯಿಂದ ಹಿಡಿದು ಕಾಲೋಚಿತ ಸೋಂಕುಗಳ ವಿರುದ್ಧ ರಕ್ಷಣೆ ನೀಡುವವರೆಗೆ, ಈ ಗಿಡಮೂಲಿಕೆ ಚಹಾವು ನಿಮ್ಮ ಆರೋಗ್ಯಕ್ಕೆ ಉತ್ತಮವಾಗಿದೆ. ಇದನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಉತ್ತಮ ಫಲಿತಾಂಶಗಳು ಸಿಗುತ್ತವೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಮೊದಲೇ ಹೇಳಿದಂತೆ ಲೆಮನ್ಗ್ರಾಸ್ ಅನ್ನು 'ಸೂಪರ್ ಹರ್ಬ್' ಎಂದು ಗುರುತಿಸಲಾಗುತ್ತದೆ. ಇದು ಆ್ಯಂಟಿಆಕ್ಸಿಡೆಂಟ್ಗಳು ಮತ್ತು ಆ್ಯಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಇದು ದೇಹದಲ್ಲಿನ ಫ್ರೀ ರಾಡಿಕಲ್ಗಳ ಹಾನಿಕಾರಕ ಪರಿಣಾಮಗಳನ್ನು ತಡೆಯುತ್ತದೆ ಮತ್ತು ಕಾಲೋಚಿತ ಸೋಂಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಬನ್ನಿ, ಲೆಮನ್ ಗ್ರಾಸ್ ಟೀ ತಯಾರಿಸುವ ವಿಧಾನ ಹೇಗೆ ಎಂಬುವುದನ್ನು ತಿಳಿಯೋಣ.
ಲೆಮನ್ ಗ್ರಾಸ್ ಟೀಯ ಪ್ರಮುಖ ಆರೋಗ್ಯ ಗುಣಗಳು
ತೂಕ ಇಳಿಕೆಗೆ ಸಹಕಾರಿ
ಲೆಮನ್ ಗ್ರಾಸ್ ಟೀ ತೂಕ ಇಳಿಕೆಗೆ ಪರಿಣಾಮಕಾರಿಯಾಗಿದೆ. ಇದು ದೇಹದಲ್ಲಿನ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸಿ, ಹೊಟ್ಟೆಯ ಸುತ್ತ ಇರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಎರಡು ಬಾರಿ ಇದನ್ನು ಕುಡಿಯುವುದರಿಂದ ತೂಕ ಇಳಿಸುವ (ಹೊಟ್ಟೆಯ ಸುತ್ತಲಿನ ಕೊಬ್ಬು) ಪ್ರಕ್ರಿಯೆ ಸುಲಭವಾಗುತ್ತದೆ.
ಜೀರ್ಣಕ್ರಿಯೆ ಸುಧಾರಣೆ
ಪ್ರತಿದಿನ ಒಂದು ಕಪ್ ಲೆಮನ್ ಗ್ರಾಸ್ ಟೀ ಕುಡಿಯುವುದರಿಂದ ಆ್ಯಸಿಡಿಟಿ, ಗ್ಯಾಸ್ಟ್ರಿಕ್ ಅಲ್ಸರ್ನಿಂದ ಪರಿಹಾರ ದೊರೆಯುತ್ತದೆ. ಇದು ಮಲಬದ್ಧತೆ, ಗ್ಯಾಸ್ ಮತ್ತು ಹೊಟ್ಟೆ ಉಬ್ಬರಗಳಿಂದ ಮುಕ್ತಿ ನೀಡುತ್ತದೆ. ಕರುಳಿನ ಚಲನೆಯನ್ನು ಸುಗಮಗೊಳಿಸಿ, ಒಟ್ಟಾರೆ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

ಕೀಲು ನೋವು ಮತ್ತು ಉರಿಯೂತಕ್ಕೆ ಪರಿಹಾರ
ಲೆಮನ್ ಗ್ರಾಸ್ ಟೀ ಯಲ್ಲಿ ಆ್ಯಂಟಿ-ಇನ್ಫ್ಲಮೇಟರಿ ಗುಣಗಳಿವೆ. ಇದು ಕೀಲುಗಳಲ್ಲಿನ ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಫ್ಲೇವನಾಯ್ಡ್ಗಳು ಮತ್ತು ಫಿನಾಲಿಕ್ ಸಂಯುಕ್ತಗಳು ಉರಿಯೂತವನ್ನು ನಿವಾರಿಸುತ್ತವೆ. ಇದರಿಂದ ಕೀಲು ನೋವು ಕಡಿಮೆಯಾಗುತ್ತದೆ.
ಮಾನಸಿಕ ಆರೋಗ್ಯಕ್ಕೆ ಉತ್ತಮ
ಲೆಮನ್ ಗ್ರಾಸ್ ಟೀ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಮೆದುಳನ್ನು ಶಾಂತಗೊಳಿಸುತ್ತದೆ. ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ತಲೆನೋವು ಮತ್ತು ನಿದ್ರಾಹೀನತೆಯ ಸಮಸ್ಯೆಯನ್ನು ಪರಿಹರಿಸುತ್ತದೆ. ಬೆಳಗ್ಗೆ ಈ ಟೀ ಸೇವಿಸುವುದರಿಂದ ದಿನವಿಡೀ ಚುರುಕಾಗಿರಬಹುದು ಅಥವಾ ಚೈತನ್ಯದಿಂದಿರಬಹುದು.
ರೋಗನಿರೋಧಕ ಶಕ್ತಿ ಹೆಚ್ಚಳ
ಲೆಮನ್ ಗ್ರಾಸ್ ಟೀ ಅಲ್ಲಿ ಆ್ಯಂಟಿಆಕ್ಸಿಡೆಂಟ್ಗಳು ಮತ್ತು ಆ್ಯಂಟಿಮೈಕ್ರೋಬಿಯಲ್ ಗುಣಗಳು ಹೇರಳವಾಗಿವೆ. ಇವು ದೇಹದಲ್ಲಿ ಫ್ರೀ ರಾಡಿಕಲ್ಗಳ ಪರಿಣಾಮವನ್ನು ಕಡಿಮೆ ಮಾಡಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದು ಕಾಲೋಚಿತ ಸೋಂಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಲೆಮನ್ ಗ್ರಾಸ್ ಟೀ ತಯಾರಿಸುವ ವಿಧಾನ
ಲೆಮನ್ ಗ್ರಾಸ್ ಟೀ ತಯಾರಿಸುದು ತುಂಬಾನೇ ಸುಲಭ. ಒಂದು ಪಾತ್ರೆಯಲ್ಲಿ ಒಂದು ಕಪ್ ನೀರನ್ನು ಬಿಸಿ ಮಾಡಿ. ನೀರು ಕುದಿಯಲು ಪ್ರಾರಂಭಿಸಿದಾಗ ಲೆಮನ್ ಗ್ರಾಸ್ ಎಲೆಗಳನ್ನು ಹಾಕಿ ಕೆಲವು ನಿಮಿಷಗಳ ಕಾಲ ಕುದಿಸಿ. ನಂತರ ಇದನ್ನು ಸೋಸಿ, ರುಚಿಗಾಗಿ ಸ್ವಲ್ಪ ಜೇನುತುಪ್ಪವನ್ನು ಸೇರಿಸಬಹುದು. ಪ್ರತಿದಿನ ಇದನ್ನು ಎರಡು ಬಾರಿ ತೆಗೆದುಕೊಳ್ಳುವುದರಿಂದ ದೇಹಕ್ಕೆ ಅಗತ್ಯವಿರುವ ಆ್ಯಂಟಿಆಕ್ಸಿಡೆಂಟ್ಗಳು ದೊರೆಯುತ್ತವೆ.



Click it and Unblock the Notifications