Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಯಲ್ಲಿ ನೀರು ತರಿಸುವ ಈ ಹುಣಸೆ ಹುಳಿ ಚಿತ್ರಾನ್ನ ಮಾಡಿ
ಬ್ರೇಕ್ ಫಾಸ್ಟ್‌ಗೆ ನೀವು ಎಷ್ಟು ಬಗೆಯ ಚಿತ್ರಾನ್ನ ಮಾಡಿರುತ್ತೀರಿ, ಹಿಂದಿನ ದಿನ ಅನ್ನ ಉಳಿದರೆ ಅದು ಚಿತ್ರಾನ್ನ ಆಗೋದೇ ಹೆಚ್ಚು. ಹಿಂದಿನ ದಿನದ ಅನ್ನ ಚಿತ್ರಾನ್ನ ಮಾಡಿದ್ರೆ ಬಾಯಿ ಚಪ್ಪರಿಸಿ ಎಲ್ಲರು ಸವಿಯುತ್ತಾರೆ. ಹಾಗೆ ಮಕ್ಕಳಿಗೆ ಚಿತ್ರಾನ್ನ ಅಂದರೆ ಇಷ್ಟವಿರುವುದಿಲ್ಲ. ಹಲವರು ಮಕ್ಕಳಿಗೆ ಇಷ್ಟವಾಗುವುದಿಲ್ಲ ಎಂಬ ಕಾರಣಕ್ಕೆ ಮನೆಯಲ್ಲಿ ಚಿತ್ರಾನ್ನ ಮಾಡುವುದೇ ಇಲ್ಲ.
ಇನ್ನು ಚಿತ್ರಾನ್ನ ಮಾಡುವುದರಲ್ಲಿ ಎಷ್ಟೊಂದು ವಿಧಗಳಿವೆ ಎಂಬುದನ್ನು ನೀವು ಊಹೆ ಕೂಡ ಮಾಡಿರುವುದಿಲ್ಲ. ಅಷ್ಟೊಂದು ವಿಧಾನದಲ್ಲಿ ಈ ಚಿತ್ರಾನ್ನ ಮಾಡಬಹುದಾಗಿದೆ. ಹಾಗೆ ಅಂತಹ ಹತ್ತಾರು ವಿಧಾನಗಳ ಪೈಕಿ ನಾವಿಂದು ಹೊಸದೊಂದು ವಿಧಾನದಲ್ಲಿ ಚಿತ್ರಾನ್ನ ಮಾಡುವುದನ್ನು ತಿಳಿದುಕೊಳ್ಳೋಣ.

ನಾವಿಂದು ಅದ್ಭುತ ರುಚಿಯ ಹುಣಸೆ ಹುಳಿ ಚಿತ್ರಾನ್ನ ಮಾಡುವುದು ತಿಳಿದುಕೊಳ್ಳೋಣ. ಚಿತ್ರಾನ್ನಕ್ಕೆ ಸಾಮಾನ್ಯವಾಗಿ ನಿಂಬೆ ಹುಳಿಯನ್ನು ಬಳಸಿ ಮಾಡಲಾಗುತ್ತೆ, ಆದ್ರೆ ಹುಣಸೆ ಹುಳಿಯ ಈ ಚಿತ್ರಾನ್ನ ಬಾಯಿ ರುಚಿ ಹೆಚ್ಚಿಸಲಿದೆ. ಹಾಗಾದ್ರೆ ಈ ಹುಣಸೆ ಹುಳಿ ಚಿತ್ರಾನ್ನ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹುಣಸೆ ಹುಳಿಯ ಚಿತ್ರಾನ್ನ ಮಾಡುವುದು ಹೇಗೆ?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹುಣಸೆ ಹುಳಿ ಚಿತ್ರಾನ್ನ ಮಾಡಲು ಬೇಕಾಗುವ ಪದಾರ್ಥಗಳು
- ಅನ್ನ
- ಕಾಳು ಮೆಣಸು
- ಹುಣಸೆ ಹುಳಿ
- ಮೆಂತ್ಯ
- ಜೀರಿಗೆ
- ಸಾಸಿವೆ
- ಅರಶಿಣ
- ಕಡಲೆ ಬೀಜ
- ಖಾರದ ಪುಡಿ
- ಉಪ್ಪು
- ಎಣ್ಣೆ
- ಕ್ರರಿಬೇವು
- ಉದ್ದಿನ ಬೇಳೆ
- ಕಡಲೆ ಬೇಳೆ
ಹುಣಸೆ ಹುಳಿ ಚಿತ್ರಾನ್ನ ಮಾಡುವುದು ಹೇಗೆ?
ಮೊದಲು ಹುಣಸೆ ಹುಳಿಯನ್ನು ನೀರಿಗೆ ಹಾಕಿ ನೆನೆಸಿಟ್ಟು ಅದನ್ನು ಹಿಂಡಿಕೊಂಡು ಅದರ ಹುಳಿ ತೆಗೆದಿಟ್ಟುಕೊಳ್ಳಿ. ಮೊದಲು ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಕಾಳು ಮೆಣಸು, ಜೀರಿಗೆ, ಮೆಂತ್ಯ ಹಾಕಿಕೊಂಡು ಹುರಿದುಕೊಳ್ಳಿ. ಅನಂತರ ಒಲೆ ಆಫ್ ಮಾಡಿ ಬಿಳಿ ಎಳ್ಳು ಇದಕ್ಕೆ ಹಾಕಿ ಫ್ರೈ ಮಾಡಿ. ಅನಂತರ ಈ ಎಲ್ಲಾ ವಸ್ತುಗಳ ಎತ್ತಿಕೊಳ್ಳಿ.
ಈಗ ಸಣ್ಣ ಮಿಕ್ಸಿ ಜಾರ್‌ಗೆ ಈ ಎಲ್ಲಾ ವಸ್ತುಗಳ ಹಾಕಿ ಪೌಡರ್ ಮಾಡಿಕೊಂಡು ಬದಿಗಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ನಂತರ ಕಡಲೆ ಬೀಜ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಉರಿ ಸಣ್ಣದಾಗಿ ಇಟ್ಟುಕೊಳ್ಳಿ. ಕಡಲೆ ಫ್ರೈ ಮಾಡಿದ ಬಳಿಕ ತೆಗೆದು ಬದಿಗಿಟ್ಟುಕೊಳ್ಳಿ.
ಅನಂತರ ಅದೇ ಬಾಣಲೆಗೆ ಜೀರಿಗೆ, ಸಾಸಿವೆ, ಕರಿಬೇವು, ಒಣ ಮೆಣಸು, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಫ್ರೈ ಮಾಡಿಕೊಳ್ಳಿ. 2 ನಿಮಿಷದ ಬಳಿಕ ಇದಕ್ಕೆ ಹುಣಸೆ ಹುಳಿಯನ್ನು ಇದಕ್ಕೆ ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅರಶಿಣ, ಖಾರದ ಪುಡಿ ಹಾಕಿ ಒಂದು ಕುದಿಬರಲು ಬಿಡಬೇಕು. ಈ ವೇಳೆ ಚೆನ್ನಾಗಿ ಕೈ ಆಡಿಸುತ್ತಾ ಇರಿ.
ಈಗ ಕುದಿಬಂದ ಬಳಿಕ ಒಲೆ ಆಫ್ ಮಾಡಿಕೊಳ್ಳಿ. ಇನ್ನೊಂದು ಕಡೆ ಬೌಲ್‌ನಲ್ಲಿ ಹುಡಿ ಹುಡಿಯಾಗಿರುವ ಅನ್ನವನ್ನು ತೆಗೆದುಕೊಳ್ಳಿ, ಈ ಅನ್ನಕ್ಕೆ ರೆಡಿಯಾಗಿರುವ ಗೊಜ್ಜನ್ನು ಹಾಕಿ, ಹಾಗೆ ಮೊದಲು ಹುರಿದುಕೊಂಡಿರುವ ಕಡಲೆ ಬೀಜವನ್ನು ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಹುಣಸೆ ಹುಳಿ ಚಿತ್ರಾನ್ನ ರೆಡಿಯಾಗುತ್ತದೆ. ನೀವು ಕೂಡ ಒಮ್ಮೆ ಮನೆಯಲ್ಲಿ ಈ ಹುಣಸೆ ಹುಳಿ ಚಿತ್ರಾನ್ನ ಮಾಡಿ ನೋಡಿ.



Click it and Unblock the Notifications