Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
10 ಲಡ್ಡು ತಿಂದರೆ ಯೌವನ ಮರಳಿ ಬರುತ್ತೆ, ಆರೋಗ್ಯವೂ ಸುಧಾರಿಸುತ್ತೆ
ನೀವು ನಿತ್ಯ ಆರೋಗ್ಯಕರ ತಿಂಡಿಗಳ ಮಾಡಿ ಸವಿಯುವ ಅಭ್ಯಾಸ ಇಟ್ಟುಕೊಂಡಿರಬಹುದು. ಅದ್ರಲ್ಲೂ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ತರುವ ತಿಂಡಿಗಳು ಅಂದ್ರೆ ಯಾರಿಗೆ ತಾನೆ ಇಷ್ಟವಾಗಲ್ಲ. ಅದ್ರಲ್ಲೂ ತೂಕ ಹೆಚ್ಚಿಸಿಕೊಳ್ಳುವುದು ಹಾಗೆ ತೂಕ ಇಳಿಸಿಕೊಳ್ಳಲು ಬಹುತೇಕರು ಹಲವು ರೀತಿಯ ತಿಂಡಿಯನ್ನು ಸವಿಯುವುದು ನೋಡಬಹುದು. ಆದ್ರೆ ನಾವಿಂದು ರುಚಿ ರುಚಿಯಾದ ಹಾಗೆ ನಿಮ್ಮಲ್ಲಿ ವಯಸ್ಸಾಗುವಿಕೆಯ ಲಕ್ಷಣವನ್ನು ಮರೆ ಮಾಡುವ ತಿಂಡಿಯೊಂದರ ಕುರಿತಾಗಿ ತಿಳಿದುಕೊಳ್ಳೋಣ.
ವಯಸ್ಸಾಗುವಿಕೆ ಅಂದರೆ ಚರ್ಮವು ಸುಕ್ಕುಗಟ್ಟುವುದು ಅಥವಾ ಹೊಳಪನ್ನು ಕಳೆದುಕೊಳ್ಳುವುದು. ಆದ್ರೆ ನಾವಿಂದು ಹೇಳುವ ತಿಂಡಿಯನ್ನು ನೀವು ನಿತ್ಯ ಸವಿದರೆ ನಿಮ್ಮಲ್ಲಿ ಚರ್ಮ ಸುಕ್ಕುಗಟ್ಟುವಿಕೆ ನಿಧಾನವಾಗಲಿದೆ. ಹಾಗೆ ಈ ತಿಂಡಿಯು ರುಚಿಯ ಜೊತೆಗೆ ನಿಮ್ಮ ಆರೋಗ್ಯಕ್ಕೂ ಉತ್ತಮವಾಗಿದೆ. ಇದಕ್ಕೆ ಶೇಂಗಾ ಕಾಳಿನಿಂದ ಹಿಡಿದು ಹಲವು ರೀತಿಯ ಕಾಳುಗಳು, ಡ್ರೈ ಫ್ರೂಟ್ಸ್ ಸೇರಿ ಬೇಳೆ ಬಳಸಲಾಗುತ್ತದೆ. ಈ ಆರೋಗ್ಯಕರ ಲಡ್ಡು ನೀವು ಯಾವುದೇ ಬೇಕರಿಯಲ್ಲಿ ಹುಡುಕಿದರು ಸಹ ಸಿಗುವುದಿಲ್ಲ.

ಹಾಗಾದ್ರೆ ಮನೆಯಲ್ಲಿ ಈ ಲಡ್ಡು ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಡ್ರೈ ಫ್ರೂಟ್ಸ್ ಲಡ್ಡು ಮಾಡಲು ಬೇಕಾಗುವ ವಸ್ತುಗಳು
- ಶೇಂಗಾ
- ಬಾದಾಮಿ
- ಹುರಿಗಡಲೆ
- ಬಿಳಿ ಎಳ್ಳು
- ಕುಂಬಳ ಕಾಯಿ ಬೀಜ
- ಖರ್ಬೂಜ ಬೀಜ
- ತುಪ್ಪ
- ಗಸೆಗಸೆ
- ಕೊಬ್ಬರಿ ತುರಿ
ಡ್ರೈ ಫ್ರೂಟ್ಸ್ ಲಡ್ಡು ಮಾಡುವುದು ಹೇಗೆ?
ಮೊದಲಿಗೆ ಒಲೆ ಮೇಲೆ ಒಂದು ಬಾಣಲೆ ಇಟ್ಟು 1 ಕಪ್ ಶೇಂಗಾ ಹಾಕಿಕೊಂಡು ಹುರಿದುಕೊಳ್ಳಿ. ನಿಧಾನವಾಗಿ ಹುರಿದುಕೊಳ್ಳಿ. ನಂತರ ತೆಗೆದಿಟ್ಟು, ಈಗ ಒಂದು ಕಪ್ ಬಾದಾಮಿ ಹಾಕಿ ಹುರಿಯಬೇಕು. ಈಗ ಅರ್ಧ ಕಪ್ ಹುರಿಗಡಲೆ ಸಹ ಹಾಕಿ ಹುರಿದುಕೊಂಡು ತೆಗೆದಿಟ್ಟುಕೊಳ್ಳಿ. ಈಗ ಅರ್ಧ ಕಪ್ ಬಿಳಿ ಎಳ್ಳು, 3 ಸ್ಪೂನ್ ಕುಂಬಳ ಕಾಯಿ ಬೀಜ, 2 ಸ್ಪೂನ್ ಖರ್ಬೂಜ ಹಣ್ಣಿನ ಬೀಜ ಎಲ್ಲವನ್ನು ಬೇರೆ ಬೇರೆಯಾಗಿ ಹಾಕಿ ಹುರಿದು ತೆಗೆದಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿಕೊಳ್ಳಿ. ಇದಕ್ಕೆ ಕತ್ತರಿಸಿಕೊಂಡ ಗೋಡಂಬಿ, ಪಿಸ್ತಾವನ್ನು ಸಹ ಸಣ್ಣದಾಗಿ ಕತ್ತರಿಸಿಕೊಂಡು ಹಾಕಿ ತುಪ್ಪದಲ್ಲಿ ಹುರಿದುಕೊಳ್ಳಿ. 2 ನಿಮಿಷ ಬಿಟ್ಟು ಇದಕ್ಕೆ 2 ಸ್ಪೂನ್ ಗಸೆಗಸೆ ಸಹ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡುತ್ತಾ ಇರಿ. ನಂತರ 2 ಸ್ಪೂನ್ ಹುರಿದ ಎಳ್ಳನ್ನು ಸಹ ಹಾಕಿಕೊಂಡು ಮಿಕ್ಸ್ ಮಾಡಿ.
ಅರ್ಧ ಕಪ್ ಕೊಬ್ಬರಿ ತುರಿ, ಸಹ ಹಾಕಿ ಮತ್ತೆ 2 ನಿಮಿಷ ರೋಸ್ಟ್ ಮಾಡಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹುರಿದ ಹುರಿಗಡಲೆ, ಕೊಬ್ಬರಿ ಚೂರು ಹಾಕಿ ರುಬ್ಬಿಕೊಂಡು ಒಂದು ಪ್ಲೇಟ್‌ಗೆ ಪುಡಿ ಹಾಕಿಡಿ. ಈಗ ಮತ್ತೆ ಮಿಕ್ಸಿ ಜಾರ್‌ಗೆ ರೋಸ್ಟ್ ಮಾಡಿದ್ದ ಕೆಲವು ಬದಾಮಿಗಳು, ಕಡಲೆ ಬೀಜ, ಕುಂಬಳ ಬೀಜಗಳನ್ನು ಸಹ ಹಾಕಿ ಮತ್ತೆ ಪುಡಿ ಮಾಡಿ ಅದನ್ನು ಸಹ ತೆಗೆದು ಇಟ್ಟುಕೊಳ್ಳಿ.
ಈಗ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ತುಪ್ಪ ಹಾಕಿ ಬಳಿಕ ಮೊದಲು ಹುರಿದುಕೊಂಡಿದ್ದ ಬಾದಾಮಿ ಕಾಳುಗಳ ಸಣ್ಣದಾಗಿ ಕತ್ತರಿಸಿಕೊಂಡು ಇದಕ್ಕೆ ಹಾಕಿ ಹಾಗೆ ಶೇಂಗಾ ಬೀಜದ ಸಿಪ್ಪೆ ತೆಗೆದು ಎರಡು ಭಾಗ ಮಾಡಿ ಇದಕ್ಕೆ ಹಾಕಿ. ಹಾಗೆ ಮತ್ತೆ 2 ಸ್ಪೂನ್ ತುಪ್ಪ ಹಾಕಿ. ಈ ಸಮಯದಲ್ಲಿ ಖರ್ಜೂರ ಇದ್ದರೆ ಕತ್ತರಿಸಕೊಂಡು ಹಾಕಿ. ಇದಕ್ಕೆ 1 ಕಪ್ ಬೆಲ್ಲದ ಪುಡಿ ಸಹ ಹಾಕಿಕೊಂಡು ಮಿಶ್ರಣ ಮಾಡಿ.
ಈಗ ಮೊದಲು ಪುಡಿ ಮಾಡಿ ಇಟ್ಟ ಎರಡೂ ಬೇರೆ ಬೇರೆ ಪುಡಿಗಳನ್ನು ಸಹ ಇದಕ್ಕೆ ಸೇರಿಸಿಕೊಳ್ಳಿ. ಹಾಗೆ ಉಳಿದ ಎಲ್ಲಾ ಡ್ರೈಫ್ರೂಟ್ಸ್ ಸಹ ಇದಕ್ಕೆ ಹಾಕಿ. ಮಿಶ್ರಣ ಮಾಡುತ್ತಾ 3 ರಿಂದ 4 ನಿಮಿಷ ಬಿಡಿ. ಇದು ಅಂಟಾಗಿ ಬರಬೇಕು. ಬಹಳ ಗಟ್ಟಿಯಾದರೆ ಅಥವಾ ಉಂಡೆ ಕಟ್ಟಲು ಬಾರದೆ ಇದ್ದರೆ ಬಿಸಿ ಹಾಲು ಹಾಕಿ, ಇಲ್ಲದಿದ್ದರೆ ಹಾಲಿನ ಅಗತ್ಯವಿಲ್ಲ. ನಂತರ ಇದನ್ನು ಒಲೆಯಿಂದ ಇಳಿಸಿ ಉಗುರು ಬೆಚ್ಚಗಾದ ಬಳಿಕ ಉಂಡೆ ಕಟ್ಟಿಕೊಳ್ಳಿ.



Click it and Unblock the Notifications