Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಎಲ್ಲಾ ತಿಂಡಿಗೂ ಹೇಳಿ ಮಾಡಿಸಿದ ಚಟ್ನಿ ಇಲ್ಲಿದೆ ನೋಡಿ..! ಮಾಡೋದು ತುಂಬಾ ಸುಲಭ
ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ತಿಂಡಿ ಮಾಡುವುದ ಒಂದು ಸಾಹಸ ಆದ್ರೆ ಅದಕ್ಕೆ ಬೇಕಾದ ಸಾಂಬಾರ್, ಚಟ್ನಿ ಮಾಡೋದು ಮತ್ತೊಂದು ರೀತಿಯ ಸಾಹಸವೇ. ಯಾವ ತಿಂಡಿ ಮಾಡಿದರೆ ಅದರನ್ನು ಸವಿಯಲು ಬೇರೆ ಇನ್ನೊಂದು ಪದಾರ್ಥ ಯಾವುದು ಮಾಡಬೇಕು ಅನ್ನೋದು ಎಲ್ಲರ ಪ್ರಶ್ನೆಯಾಗಿರುತ್ತದೆ.
ಈ ನಡುವೆ ಎಲ್ಲಾ ತಿಂಡಿಗೂ ನಾವು ಸಾಮಾನ್ಯವಾಗಿ ತೆಂಗಿನಕಾಯಿ ಚಟ್ನಿಯಂತು ಮಾಡುತ್ತೇವೆ. ಏಕೆಂದರೆ ಈ ಚಟ್ನಿ ಮಾಡೋದು ತುಂಬಾನೆ ಸುಲಭ, ಜೊತೆಗೆ ರುಚಿಯು ಸಹ ಅಷ್ಟೇ ಚೆನ್ನಾಗಿರುತ್ತೆ. ಎಲ್ಲಾ ತಿಂಡಿಗಳಿಗೂ ಇದು ಹೊಂದಿಕೊಳ್ಳುತ್ತೆ. ಆದ್ರೆ ನೀವು ಎಂದಾದ್ರು ಕೊತ್ತಂಬರಿ ಚಟ್ನಿ ಮಾಡಿದ್ದೀರಾ?

ಹೌದು ಕೊತ್ತಂಬರಿ ಸೊಪ್ಪಿನ ಚಟ್ನಿ ರುಚಿಯಲ್ಲಿ ಎಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ. ಜೊತೆಗೆ ಆರೋಗ್ಯಕ್ಕೂ ಉತ್ತಮ. ಎಲ್ಲಾ ಬ್ರೇಕ್‌ಫಾಸ್ಟ್ ರೆಸಿಪಿಗಳ ಜೊತೆಗೂ ಈ ಕೊತ್ತಂಬರಿ ಚಟ್ನಿ ತುಂಬ ರುಚಿ ನೀಡಲಿದೆ. ಹಾಗಾದ್ರೆ ನಾವಿಂದು ರುಚಿಕರವಾದ ಈ ಕೊತ್ತಂಬರಿ ಸೊಪ್ಪಿನ ಚಟ್ನಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಕೊತ್ತಂಬರಿ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಕೊತ್ತಂಬರಿ ಚಟ್ನಿ ಮಾಡೋದು ಹೇಗೆ? ಅದರ ಪಾಕವಿಧಾನವೇನು? ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ತಿಳಿಯೋಣ.
ಕೊತ್ತಂಬರಿ ಸೊಪ್ಪಿನ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
- ಕೊತ್ತಂಬರಿ - 1 ಕಟ್
- ಎಣ್ಣೆ -
- ಸಾಸಿವೆ -
- ಈರುಳ್ಳಿ- 1
- ಬೆಳ್ಳುಳ್ಳಿ - 1
- ಒಣಮೆಣಸು -3
- ಹಸಿ ಮೆಣಸು - 2
- ಉದ್ದಿನ ಬೇಳೆ
- ಕಡಲೆ ಬೇಳೆ
- ಹುಣಸೆ ಹುಳಿ
- ಇಂಗು
- ಉಪ್ಪು
- ತೆಂಗಿನ ಕಾಯಿ - ಸ್ವಲ್ಪ
ಕೊತ್ತಂಬರಿ ಸೊಪ್ಪಿನ ಚಟ್ನಿ ಮಾಡುವುದು ಹೇಗೆ?
ಮೊದಲು ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಎಣ್ಣೆ ಕಾದ ಬಳಿಕ ಅದಕ್ಕೆ ಸಾಸಿವೆ ಹಾಕಿ. ಇದರ ಜೊತೆಗೆ ಈರುಳ್ಳಿ, ಬೆಳ್ಳುಳ್ಳಿ, ಒಣ ಮೆಣಸು, ಜೀರಿಗೆ, ಹಸಿ ಮೆಣಸು, ಕೊತ್ತಂಬರಿ ಸೊಪ್ಪು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಒಂದು ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಈ ವೇಳೆ ಫ್ರೈ ಮಾಡುವಾಗ ಹುಣಸೆ ಹುಳ್ಳಿ ಹಾಕಿಕೊಳ್ಳಿ. ಇನ್ನೊಂದೆಡೆ ಕಾಯಿಯನ್ನು ತೆಗೆದುಕೊಂಡು ಅದನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿ, ಇದರ ಜೊತೆಗೆ ನೀವು ಫ್ರೈ ಮಾಡಿಕೊಂಡ ಮಸಾಲೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ರುಬ್ಬಿಕೊಳ್ಳಿ. ನುಣ್ಣಗೆ ಚಟ್ನಿ ರುಬ್ಬಿಕೊಳ್ಳುವಂತೆಯೇ ರುಬ್ಬಿಕೊಳ್ಳಿ.
ರುಬ್ಬಿದ ಬಳಿಕ ಅದನ್ನು ಬದಿಗಿಟ್ಟುಕೊಳ್ಳಿ. ಬಳಿಕ ಮತ್ತೊಂದು ಪಾತ್ರೆಗೆ ಎಣ್ಣೆ ಹಾಕಿಕೊಂಡು ಒಲೆ ಮೇಲೆ ಇಡಿ. ಇದಕ್ಕೆ ಸ್ವಲ್ಪ ಸಾಸಿವೆ ಹಾಕಿಕೊಳ್ಳಿ. ಅದಕ್ಕೆ ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಇದಕ್ಕೆ ಕರಿ ಬೇವು ಹಾಕಿಕೊಳ್ಳಿ. ಒಂದು ನಿಮಿಷ ಫ್ರೈ ಮಾಡಿಕೊಂಡರೆ ಸಾಕು. ಈ ಪ್ರೈ ಮಾಡಿಕೊಂಡ ಮಸಾಲೆಯನ್ನು ನೀವು ಈ ಮೊದಲು ರುಬ್ಬಿಕೊಂಡಿರುವ ಚಟ್ನಿಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಕೊತ್ತಂಬರಿ ಚಟ್ನಿ ಸವಿಯಲು ಸಿದ್ಧವಾಗುತ್ತದೆ. ನೀವು ಈ ಚಟ್ನಿಯನ್ನು ಎಲ್ಲಾ ತಿಂಡಿಯೊಂದಿಗೂ ಸವಿಯಬಹುದು.



Click it and Unblock the Notifications