Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಮನವಮಿಗೆ ಕೋಸಂಬರಿ ಮಾಡೋದು ಹೇಗೆ? 5 ನಿಮಿಷವೂ ಹಿಡಿಯಲ್ಲ..!
ಈ ತಿಂಗಳಲ್ಲಿ ಯುಗಾದಿ ಹಬ್ಬ ಸಂಭ್ರಮದಿಂದ ಆಚರಿಸಲಿದ್ದೇವೆ. ಯುಗಾದಿಯ ಬಳಿಕ ರಾಮನವಮಿ ಹಬ್ಬ ಕೂಡ ಆಚರಿಸಲಾಗುತ್ತದೆ. ಏಪ್ರಿಲ್ ಮೊದಲ ವಾರದಲ್ಲಿ ರಾಮನವಮಿ ಹಬ್ಬ ಆಗಮಿಸಲಿದೆ. ಹೀಗಾಗಿ ಈ ಹಬ್ಬದ ದಿನದಂದು ಸಿಹಿ, ಭಕ್ತಿ, ಸಂಭ್ರಮ ಮನೆ ಮಾಡಲಿದೆ. ಇನ್ನು ರಾಮ ನವಮಿ ಹಬ್ಬ ಅಂದರೆ ಆ ದಿನ ಬಗೆ ಬಗೆಯ ಖಾದ್ಯಗಳನ್ನು ನಾವು ನೋಡಬಹುದು.
ಹಾಗೆ ರಾಮನವಮಿಯಲ್ಲಿ ವಿಶೇಷವಾಗಿ ಎಲ್ಲರು ಸವಿಯುವಂತಹ ಖಾದ್ಯ ಅಂದ್ರೆ ಅದು ಕೋಸಂಬರಿ. ಹಲವರು ಈ ದಿನ ಮನೆಯಲ್ಲೇ ಶ್ರೀರಾಮನ ಮೂರ್ತಿಗೆ ಪೂಜೆ ಮಾಡುತ್ತಾರೆ. ಹಾಗೆ ಈ ದಿನ ವಿಶೇಷ ಖಾದ್ಯಗಳ ಮಾಡಿ ಸವಿಯುವುದು ಕೂಡ ನಾವು ನೋಡಬಹುದು. ಅದರಲ್ಲೂ ಕೋಸಂಬರಿ ಮಾಡಿ ನೈವೇದ್ಯಕ್ಕೆ ಇಟ್ಟು ಬಳಿಕ ಎಲ್ಲರಿಗೂ ಹಂಚುವುದು, ಹಾಗೆ ಊಟದ ಜೊತೆಗೆ ಸವಿಯುವುದು ನಡೆದುಕೊಂಡು ಬಂದಿದೆ.

ರಾಮನವಮಿಯಲ್ಲಿ ಕೋಸಂಬರಿ ಬಹಳ ಫೇಮಸ್. ಆದ್ರೆ ಈ ಕೋಸಂಬರಿ ಮಾಡುವುದು ಹೇಗೆ ಅನ್ನೋದು ನಿಮಗೆ ಗೊತ್ತಾ?, ಹಾಗೆ ಈ ಕೋಸಂಬರಿ ಮಾಡುವ ಕುರಿತು ನಿಮಗೆ ತಿಳಿದಿದ್ಯಾ? ಈ ರಾಮನವಮಿಯ ದಿನದಂದು ನೈವೇದ್ಯ ಹಾಗೂ ಪ್ರಸಾದವಾಗಿ ಈ ಕೋಸಂಬರಿ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ. ಈ ಕೋಸಂಬರಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿಯಿರಿ.
ರಾಮನವಮಿ ಕೋಸಂಬರಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
ಹೆಸರು ಬೇಳೆ
ತೆಂಗಿನಕಾಯಿ ತುರಿ
ಕ್ಯಾರೆಟ್ ತುರಿ
ಸೌತೆಕಾಯಿ
ಸಾವಿವೆ
ಉಪ್ಪು
ಒಣ ಮೆಣಸು
ಕೊತ್ತಂಬರಿ ಸೊಪ್ಪು
ಹಸಿ ಮೆಣಸು
ನಿಂಬೆ ರಸ
ಎಣ್ಣೆ
ಕಾಳು ಮೆಣಸು
ರಾಮನವಮಿ ಕೋಸಂಬರಿ ಮಾಡುವ ವಿಧಾನವೇನು?
ಮೊದಲು ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು 2 ಗಂಟೆಯಾದರು ನೆನೆಸಿಡಬೇಕು. ಹಾಗೆ ಸೌತೆಕಾಯಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಬೇಕು. ಈ ಹೆಸರು ಬೇಳೆಯನ್ನು ಒಂದು ದೊಡ್ಡ ಬೌಲ್‌ಗೆ ಹಾಕಿಕೊಳ್ಳಿ. ಇದಕ್ಕೆ ಸೌತೆಕಾಯಿ ಕೂಡ ಹಾಕಿಕೊಳ್ಳಿ. ನಂತರ ಇದಕ್ಕೆ ತೆಂಗಿನಕಾಯಿ ತುರಿ, ಕ್ಯಾರೆಟ್, ಕಾಳು ಮೆಣಸಿನ ಪುಡಿ, ಉಪ್ಪು, ನಿಂಬೆ ಹಣ್ಣಿನ ರಸ ಹಾಕಿಕೊಳ್ಳಿ.
ನಂತರ ಮೇಲೆ ಕೊತ್ತಂಬರಿ ಸೊಪ್ಪು ಕೂಡ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ಸಾಸಿವೆ, ಸಣ್ಣದಾಗಿ ಕತ್ತರಿಸಕೊಂಡಿರುವ ಹಸಿ ಮೆಣಸು ಇಲ್ಲವೆ ಒಣ ಮೆಣಸು ಕೂಡ ಹಾಕಿಕೊಂಡು ಒಗ್ಗರಣೆ ಮಾಡಿ ಕೋಸಂಬರಿಗೆ ಹಾಕಿಕೊಳ್ಳಿ. ನಂತರ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಕೋಸಂಬರಿ ರೆಡಿಯಾಗುತ್ತದೆ. ಇದನ್ನು ದೇವರ ಮುಂದೆ ನೈವೇದ್ಯಕ್ಕೆ ಇಟ್ಟು ಸವಿಯಬಹುದು, ಹಾಗೆ ಪ್ರವಾದವಾಗಿ, ಊಟದ ನಡುವೆಯೂ ಇದನ್ನು ಸವಿಯಬಹುದು. ಇದರ ರುಚಿ ನೀವು ಸವಿದರೆ ಪದೇ ಪದೇ ಮಾಡುತ್ತೀರಿ. ಕೇವಲ 5 ನಿಮಿಷದಲ್ಲಿ ಈ ಕೋಸಂಬರಿ ಮಾಡಬಹುದು. ಮಕ್ಕಳಿಗಂತು ಈ ಕೋಸಂಬರಿ ಅತ್ಯಂತ ಪ್ರಿಯವಾಗಲಿದೆ, ನೀವು ಕೂಡ ಈ ರಾಮನವಮಿಯಲ್ಲಿ ಈ ಕೋಸಂಬರಿ ಮಾಡಿ ಸವಿದು ನೋಡಿ.
ಈ ಬಾರಿ ಏಪ್ರಿಲ್ 6ರಂದು ರಾಮನವಮಿ ಆಚರಿಸಲಾಗುತ್ತಿದೆ. ಈ ದಿನದಂದು ಕೋಸಂಬರಿ ಖಾದ್ಯ ಮನೆ ಮನೆಯಲ್ಲೂ ಮಾಡಲಾಗುತ್ತದೆ. ಇದನ್ನು ಮಾಡಲು ಕಡಿಮೆ ಸಮಯ ಹಾಗೆ ಕಡಿಮೆ ವಸ್ತುಗಳಿದ್ದರೆ ಸಾಕಾಗುತ್ತೆ. ನೀವು ಕೂಡ ಮನೆಯಲ್ಲಿ ಮಾಡಿ ನೋಡಿ.



Click it and Unblock the Notifications