Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸುಲಭದ ವಿಧಾನದಲ್ಲಿ ಕರಿ ಕರಿಯಾದ ಕೋಡುಬಳೆ ಮಾಡಿ..! ಇಲ್ಲಿದೆ ಸ್ಪೆಷಲ್ ರೆಸಿಪಿ
ಮನೆಯಲ್ಲಿ ಯಾವಾಗಲು ಅಂಗಡಿ ತಿಂಡಿ ಇಲ್ಲವೆ ಮನೆಯಲ್ಲಿ ಮಾಡಿದ ಯಾವುದಾದರು ತಿಂಡಿಯನ್ನು ಇಟ್ಟುಕೊಂಡಿರುತ್ತೇವೆ. ನಾವು ಸಂಜೆಯ ಸಮಯದಲ್ಲಿ ಇಲ್ಲವೆ ಯಾರಾದರು ಅತಿಥಿಗಳು ಬಂದಾಗ ಈ ತಿಂಡಿಗಳ ಬಳಸುತ್ತೇವೆ. ಅಂಗಡಿ, ಬೇಕರಿಯಿಂದ ತಂದಿರುವ ತಿಂಡಿಗಳನ್ನು ಬಹಳ ದಿನಗಳ ಕಾಲ ಇಡಬಹುದಾದರು ಬೇಗ ಹಾಳಾಗುವುದು ಸಹ ನಾವು ನೋಡಿದ್ದೇವೆ.
ಇನ್ನು ಹಲವು ತಿಂಡಿಗಳನ್ನು ಮನೆಯಲ್ಲಿ ಅತ್ಯಂತ ಶುದ್ಧ ಎಣ್ಣೆ ಬಳಸಿ ನಾವೇ ಮಾಡಿ ಸವಿದರೆ ಅದರಲ್ಲೊಂದು ಸಮಾಧಾನ ಸಿಗುತ್ತೆ. ಹಾಗೆ ಮನೆಯಲ್ಲಿ ಮಾಡಿದ ತಿಂಡಿ ಎಂಬ ಒಂದು ನೆಮ್ಮದಿಯೂ ಇರುತ್ತೆ. ಇಂತಹ ತಿಂಡಿಗಳ ಪೈಕಿ ನಾವಿಂದು ಸುಲಭವಾಗಿ ಮಾಡುವಂತಹ ಹಾಗೆ ಎಲ್ಲರಿಗೂ ರುಚಿಸುವಂತಹ ಕೋಡುಬಳೆ ಮಾಡುವ ಕುರಿತಂತೆ ತಿಳಿಯೋಣ.

ಕೋಡುಬಳೆ ಮಕ್ಕಳಿಂದ ಹಿಡಿದು ಹಿರಿಯರು ಸೇರಿ ಎಲ್ಲರಿಗೂ ಇಷ್ಟವಾಗುವಂತಹ ತಿಂಡಿಯಾಗಿದೆ. ಮನೆಯಲ್ಲಿ ಮಾಡುವುದು ಬಿಡಿ ಇದು ಅಂಗಡಿ ಬೇಕರಿಗಳಲ್ಲಿ ಹಲವು ಬಗೆಯಲ್ಲಿ ನೋಡಬಹುದು. ಒಂದೊಂದು ಒಂದೊಂದು ರೀತಿ ರುಚಿಯಲ್ಲಿ ಸಿಗುತ್ತವೆ. ಹೀಗಾಗಿ ಈಗಲೂ ಕೋಡುಬಳೆ ಎಲ್ಲರ ಫೇಮಸ್ ತಿಂಡಿಯಂತು ಹೌದು. ಹೀಗಾಗಿ ನಾವಿಂದು ಗರಿಗರಿಯಾದ ಸುಲಭದ ವಿಧಾನದಲ್ಲಿ ಈ ಕೋಡುಬಳೆ ಮಾಡುವ ಕುರಿತಂತೆ ತಿಳಿದುಕೊಳ್ಳೋಣ.
ಗರಿ ಗರಿ ಕೋಡುಬಳೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಎಂಬುದನ್ಉ ನಾವಿಂದು ತಿಳಿದುಕೊಳ್ಳೋಣ.
ಕೋಡುಬಳೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮೈದಾ ಹಿಟ್ಟು - 1 ಕಪ್
- ಅಜ್ವೈನ- 1/2 ಟೀಸ್ಪೂನ್
- ಜೀರಿಗೆ - 1/2 ಟೀಸ್ಪೂನ್
- ಬಿಳಿ ಎಳ್ಳು - 1 ಟೀಸ್ಪೂನ್
- ಅರಿಶಿನ ಪುಡಿ - 1/4 ಟೀಸ್ಪೂನ್
- ಖಾರದ ಪುಡಿ - 1/2 ಟೀಸ್ಪೂನ್
- ಎಣ್ಣೆ
- ಉಪ್ಪು
- ತುಪ್ಪ - 2 tbs
- ಕೋಡುಬಳೆ ಮಾಡುವ ವಿಧಾನ
ಮೊದಲು ಯಾವ ಕಪ್‌ನಲ್ಲಿ ಹಿಟ್ಟು ತೆಗೆದುಕೊಳ್ಳುತ್ತೀರೋ ಅದೇ ಕಪ್‌ನ ಅಳತೆಯಲ್ಲಿ ಒಂದೂವರೆ ಕಪ್ ನೀರು ತೆಗೆದುಕೊಂಡು ಒಂದು ಬಾಣಲೆಗೆ ಹಾಕಿ ಬಿಸಿ ಮಾಡಲು ಇಡಿ. ಈ ನೀರಿಗೆ ತುಪ್ಪ, ಜೀರಿಗೆ, ಒಂಕಾಳು, ಬಿಳಿ ಎಳ್ಳು, ಅರಶಿಣ, ಖಾರದ ಪುಡಿ, ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಂಡು ಕುದಿಯಲು ಬಿಡಿ.
2 ನಿಮಿಷ ಚೆನ್ನಾಗಿ ಕುದಿಬಂದ ಬಳಿಕ ಇದಕ್ಕೆ ಮೈದಾ ಹಿಟ್ಟನ್ನು ಹಾಕಿಕೊಳ್ಳಬೇಕು. ಇದು ಗಟ್ಟಿಯಾಗಿ ಗಂಟು ಗಂಟಾಗಿ 1 ನಿಮಿಷ ಒಲೆ ಮೇಲೆ ಮಿಕ್ಸ್ ಮಾಡಿ. ನಂತರ ತಣ್ಣಗಾಗಲು ಬಿಡಿ. ಸ್ವಲ್ಪ ಉಗುರು ಬೆಚ್ಚಗೆ ಇದ್ದಾಗಲೇ ಕೈಯನ್ನು ನೆನೆಸಿಕೊಂಡು ಚಪಾತಿ ಹಿಟ್ಟು ನಾದಿಸುವಂತೆ ಹದ ಮಾಡಿಕೊಳ್ಳಬೇಕು. ಚಪಾತಿ ತಟ್ಟುವಂತೆ ಹದಕ್ಕೆ ಇದು ಬರಬೇಕು.
ಈಗ ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಒಂದು ಕಡೆ ಇಟ್ಟುಕೊಳ್ಳಿ. ಅನಂತರ ಈ ಉಂಡೆಯನ್ನು ತೆಗೆದುಕೊಂಡು ಕೈಗೆ ಎಣ್ಣೆ ಹಚ್ಚಿಕೊಂಡು ಉದ್ದ ಕಡ್ಡಿಯಂತೆ ಮಾಡಿಕೊಂಡು ಎರಡೂ ತುದಿಯನ್ನು ಅಂಟಿಸಿಕೊಂಡು ಇಟ್ಟುಕೊಳ್ಳಿ. ಹೀಗೆ ಎಲ್ಲಾ ಉಂಡೆಯನ್ನು ಮಾಡಿ ಒಂದು ಕಡೆ ಇಟ್ಟುಕೊಳ್ಳಬೇಕು. ಅನಂತರ ಈ ಕೋಡುಬಳೆಯನ್ನು ಬಾಣಲೆಯಲ್ಲಿ ಹಾಕಿರುವ ಎಣ್ಣೆ ಕಾದ ಬಳಿಕ ಹಾಕಿಕೊಳ್ಳಿ.
ಒಂದು ಬಾರಿಗೆ 8ರಿಂದ 10 ಕೋಡುಬಳೆ ಹಾಕಿ ಕರಿದುಕೊಳ್ಳಿ. ಚೆನ್ನಾಗಿ ಕರಿಯುವವರೆಗೂ ಬಿಡಬೇಕು. 10 ನಿಮಿಷ ಒಂದು ಹಂತದಲ್ಲಿ ಕರಿದು ಅದನ್ನು ಎಣ್ಣೆಯಿಂದ ಎತ್ತಿ ಜರಡಿಯಲ್ಲಿ ಇಟ್ಟುಕೊಳ್ಳಿ. ಚೆನ್ನಾಗಿ ಎಣ್ಣೆ ಇಳಿದ ಬಳಿಕ ಒಂದು ಡಬ್ಬಿಗೆ ಹಾಕಬಹುದು, ಇಷ್ಟಾದರೆ ನಿಮ್ಮ ಮುಂದೆ ಕರಿಕರಿಯಾದ ಈ ಕೋಡುಬಳೆ ರೆಡಿಯಾಗುತ್ತದೆ, ನೀವು ಕೂಡ ಇದನ್ನು ಸುಲಭದ ವಿಧಾನದ ಮೂಲಕ ಮಾಡಿ ನೋಡಿ.



Click it and Unblock the Notifications