Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
ಮನೆಯಲ್ಲಿ ಹಬ್ಬ ಇರಲಿ ಅಥವಾ ಯಾವುದಾದರೆ ಕಾರ್ಯಕ್ರಮವೇ ಇರಲಿ, ಇಲ್ಲವೇ ಯಾವುದೇ ಸಂಭ್ರಮ ಇಲ್ಲದಿದ್ದರೂ ತಿಂಡಿಗಳ ಮಾಡಿ ಸವಿಯುವುದು ಸಾಮಾನ್ಯ. ಕೆಲವು ಬಾರಿ ಅಂಗಡಿಯಿಂದ ಹಣ ನೀಡಿ ಖರೀದಿಸಿ ತಂದು ಮನೆ ಮಂದಿಯಲ್ಲ ಸವಿದರೆ ಮತ್ತೆ ಕೆಲವು ಬಾರಿ ಮನೆಯಲ್ಲೇ ಮಾಡಿಕೊಂಡು ಸವಿಯುತ್ತೇವೆ.
ಈ ರೀತಿ ಮನೆಯಲ್ಲೂ ಮಾಡಿ ಸವಿಯಬಹುದಾದ ತಿಂಡಿಯಲ್ಲಿ ಕೋಡುಬಳೆ ಸಹ ಒಂದಾಗಿದೆ. ಕೋಡುಬಳೆ ಬೇಕರಿಗಳಲ್ಲಿ ಸಿಗುವುದನ್ನೇ ಹೆಚ್ಚಾಗಿ ಬಳಸುತ್ತೇವೆ. ಆದರೆ ನಿಮಗೆ ಗೊತ್ತಾ ಈ ಕೋಡುಬಳೆ ಮಾಡೋದು ಸಿಕ್ಕಾಪಟ್ಟೆ ಸುಲಭ. ಈ ಕೋಡುಬಳೆ ಮಕ್ಕಳ ನೆಚ್ಚಿನ ತಿಂಡಿಯಲ್ಲಿ ಒಂದು. ಸಂಜೆ ಟೀ-ಕಾಫಿ ಜೊತೆ, ಊಟದ ಜೊತೆ ಬೆಳಗ್ಗೆ ತಿಂಡಿಯ ಜೊತೆಗೂ ಈ ಕೋಡುಬಳೆಯನ್ನು ಸವಿಯುತ್ತಾರೆ.

ಕ್ರಿಸ್ಪಿ ಕ್ರಿಸ್ಪಿಯಾಗಿರುವ ಅದರ ರುಚಿ ಹಿಡಿದರೆ ಯಾವಾಗಲು ಸವಿಯುತ್ತಿರಬೇಕು ಎನಿಸದೆ ಇರದು. ಈ ಕೋಡುಬಳೆಯಲ್ಲು ಹಲವು ವಿಧಗಳಿವೆ. ಹಲವು ಪ್ರಕಾರವಾಗಿ ಮಾಡಬಹುದು. ಒಂದು ಶೈಲಿಯ ವಿಧಾನ ಒಂದೊಂದು ರೀತಿ ರುಚಿ ನೀಡಲಿದೆ. ಹಾಗಾದರೆ ನಾವಿಂದು ಮನೆಯಲ್ಲೇ ಕುಳಿತು ಸವಿಯಬಹುದಾದ ಗರಿ ಗರಿಯಾದ ಕೋಡುಬಳೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕಾಗುತ್ತದೆ. ಇದನ್ನು ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.
ಕೋಡುಬಳೆ ಮಾಡಲು ಬೇಕಾದ ಪದಾರ್ಥಗಳೇನು?
- ಕಡಲೆ ಹಿಟ್ಟು - 1 ಕಪ್ ಕಾಲು ಕೆ.ಜಿ
- ಅಕ್ಕಿ ಹಿಟ್ಟು - ಅರ್ಧ ಕಪ್
- ಖಾರದ ಪುಡಿ - 2 ಟೀಸ್ಪೂನ್
- ಜೀರಿಗೆ ಪುಡಿ - 1 ಟೀ ಸ್ಪೂನ್
- ಇಂಗು
- ಓಂಕಾಳು
- ಬಿಳಿ ಎಳ್ಳು
- ಉಪ್ಪು
- ಎಣ್ಣೆ
ಕೋಡುಬಳೆ ಮಾಡುವ ವಿಧಾನ
ಮೊದಲು ಒಂದು ಬೌಲ್‌ನಲ್ಲಿ ಕಡಲೆ ಹಿಟ್ಟು ಹಾಕಿಕೊಂಡು ಅದಕ್ಕೆ ಅಕ್ಕಿ ಹಿಟ್ಟು ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಇಂಗು, ಜೀರಿಗೆ ಪುಡಿ, ಖಾರದ ಪುಡಿ, ಉಪ್ಪು, ಓಂಕಾಳು ಸಹ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿಕೊಂಡು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಈ ಹಿಟ್ಟು ಉಂಡೆ ಕಟ್ಟಲು ಬರುವಂತೆ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಿ. ಈ ಹಿಟ್ಟು ಹೆಚ್ಚು ಮೃದುವಾಗಿಯೂ ಅಥವಾ ಗಟ್ಟಿಯಾಗಿ ಇರಬಾರದು ಚಪಾತಿ ಹಿಟ್ಟಿನಂತೆ ಬರಬೇಕು. ಚೆನ್ನಾಗಿ ಹಿಟ್ಟು ಕಲಸಿಕೊಳ್ಳಿ.
ಬಳಿಕ ಒಂದು ಚಿಕ್ಕ ಗಾತ್ರದ ಉಂಡೆಯಾಕಾರದಲ್ಲಿ ಹಿಟ್ಟು ತೆಗೆದುಕೊಳ್ಳಿ. ಕೈಗೆ ಎಣ್ಣೆ ಹಚ್ಚಿಕೊಂಡು ಹಿಟ್ಟನ್ನು ಕಡ್ಡಿ ಆಕಾರದಲ್ಲಿ ಉಜ್ಜಿಕೊಳ್ಳಿ, ಬಳಿಕ ಅದನ್ನು ಉಂಗುರದ ಆಕಾರದಲ್ಲಿ ಒತ್ತಿಕೊಳ್ಳಿ. ಹೀಗೆ ನಿಮಗೆ ಎಷ್ಟು ಬೇಕೋ ಅಷ್ಟು ಹಿಟ್ಟನ್ನು ಈ ರೀತಿ ಒತ್ತಿಕೊಂಡು ರೆಡಿಮಾಡಿಕೊಳ್ಳಿ.
ಇನ್ನೊಂದೆಡೆ ಒಂದು ಪಾತ್ರೆಯಲ್ಲಿ ಎಣ್ಣೆ ಹಿಟ್ಟು ಕಾಯಲು ಬಿಡಿ. ಮಧ್ಯಮ ಉರಿಯಲ್ಲಿ ಎಣ್ಣೆ ಕಾದ ಬಳಿಕ ಒತ್ತಿಕೊಂಡು ರೆಡಿ ಮಾಡಿಕೊಂಡ ಕೋಡುಬಳೆಯನ್ನು ಎಣ್ಣೆಯಲ್ಲಿ ಹಾಕಿರಿ. ಈ ವೇಳೆ ಕೋಡುಬೆಳೆ ಸುಡದಂತೆ ಅದನ್ನು ತಿರುಗಿಸುತ್ತಿರಿ. ಒಂದು 2 ರಿಂದ 3 ನಿಮಿಷ ಎಣ್ಣೆಯಲ್ಲಿ ಕಾದರೆ ಸಾಕು, ಬಳಿಕ ಅದನ್ನು ತೆಗೆದು ಬೇರೆ ಪಾತ್ರೆಗೆ ಹಾಕಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಕೋಡುಬಳೆ ಸವಿಯಲು ಸಿದ್ಧವಾಗಿತ್ತದೆ.
ಇದನ್ನು ನೀವು ಟೀ - ಕಾಫಿಯ ಜೊತೆ ಸವಿಯಲು ನೀಡಬಹುದು. ಅಲ್ಲದೆ ಗಾಳಿಯಾಡದ ದೊಡ್ಡ ಪ್ಲಾಸ್ಟಿಕ್ ಜಾರ್‌ನಲ್ಲಿ ಹಾಕಿ ಇಟ್ಟರೆ ತಿಂಗಳುಗಳ ಕಾಲ ಇಡಬಹುದು. ಒಮ್ಮೆ ನಿಮ್ಮ ಮನೆಯಲ್ಲೇ ಈ ತಿಂಡಿ ಮಾಡಲು ಪ್ರಯತ್ನಿಸಿ.



Click it and Unblock the Notifications