Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Breakfast: ತಮಿಳುನಾಡು ಶೈಲಿಯಲ್ಲಿ ಖಾರ ಪೊಂಗಲ್ ಮಾಡಿ..! ತಿಂಡಿಗೆ ಅದ್ಭುತ ರುಚಿ!
ನಾವು ಮನೆಯಲ್ಲಿ ಬೆಳಗ್ಗೆ ತಿಂಡಿಗೆ ಎಷ್ಟು ವಿಧವಾದ ಖಾದ್ಯ ಮಾಡುತ್ತೇವೆ. ನಿತ್ಯ ಒಂದೇ ರೀತಿ ಖಾದ್ಯ ಮಾಡದಿದ್ದರೂ ವಾರವೆಲ್ಲ ಬೇರೆ ಬೇರೆ ತಿಂಡಿ ಮಾಡಲು ಪ್ರಯತ್ನಿಸುತ್ತೇವೆ. ಆದ್ರೆ ಕೆಲವರಿಗೆ ನಿತ್ಯ ಬೇರೆ ಬೇರೆ ತಿಂಡಿ ಮಾಡಿದರೂ ಕೂಡ ಹೊಸದಾದ ಯಾವುದಾದರು ತಿಂಡಿ ಸವಿಯುವವರೆಗೂ ನೆಮ್ಮದಿ ಇರುವುದಿಲ್ಲ.
ಇನ್ನು ಹೊಸ ತಿಂಡಿ ಅಂದರೆ ನಮಗೆ ಯಾವುದೇ ತಿಂಡಿ ನೆನೆಪಿಗೆ ಬರುವುದಿಲ್ಲ. ಕೆಲವೊಮ್ಮೆ ನಾವು ಮಾಡಿರುವ ತಿಂಡಿ ಹೊಸದಾಗಿ, ಹೊಸ ರುಚಿಯಲ್ಲಿ ಮಾಡುವುದು ಹೇಗೆ ಎಂಬುದು ಸಹ ಗೊತ್ತಿರುವುದಿಲ್ಲ. ಆದ್ರೆ ನಾವಿಂದು ಹೊಸದಾಗಿ ಬೆಳಗ್ಗೆ ನಿಮ್ಮ ಬಾಯಿಗೆ ರುಚಿ ರುಚಿಯ ಘಮ ನೀಡುವ ಪೊಂಗಲ್ ಮಾಡುವ ಕುರಿತು ತಿಳಿಯೋಣ.

ಖಾರ ಪೊಂಗಲ್ ತಮಿಳುನಾಡಿನ ಅತ್ಯಂತ ಫೇಮಸ್ ಖಾದ್ಯ, ಅಲ್ಲಿ ಪ್ರತಿ ದಿನ ಹೋಟೆಲ್, ಮನೆಯಲ್ಲಿ ಮಾಡಿಯೇ ಮಾಡುತ್ತಾರೆ. ಖಾರ ಪೊಂಗಲ್ ಅಷ್ಟೊಂದು ರುಚಿ ಹಾಗೂ ಅದ್ಭುತ ಆರೋಗ್ಯದ ಖಾದ್ಯವಿದು. ಹಾಗಾದ್ರೆ ನಾವು ತಮಿಳುನಾಡು ಶೈಲಿಯಲ್ಲಿ ಮನೆಯಲ್ಲೇ ಬೆಳಗ್ಗೆ ತಿಂಡಿಗೆ ಖಾರ ಪೊಂಗಲ್ ಮಾಡುವುದು ಹೇಗೆ ಎಂಬುದನ್ನು ನೋಡೋಣ.
ಖಾರ ಪೊಂಗಲ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಖಾರ ಪೊಂಗಲ್ ಮಾಡುವುದು ಹೇಗೆ?, ಪೊಂಗಲ್ ಮಾಡುವಾಗ ಅನುಸರಿಸುವ ಕ್ರಮವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಖಾರ ಪೊಂಗಲ್ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ- 1 ಕಪ್
- ಹೆಸರು ಬೇಳೆ- 1 ಕಪ್
- ಶುಂಠಿ
- ಕಾಳು ಮೆಣಸು
- ಕರಿಬೇವು
- ಎಣ್ಣೆ
- ಅರಶಿನ
- ಜೀರಿಗೆ
- ಹಸಿಮೆಣಸು
- ಗೋಡಂಬಿ
ಖಾರ ಪೊಂಗಲ್ ಮಾಡುವುದು ಹೇಗೆ?
ಮೊದಲು ಒಂದು ಕಪ್ ಅಕ್ಕಿಯನ್ನು ಚೆನ್ನಾಗಿ ತೊಳೆದು ಒಂದು ಬೌಲ್‌ಗೆ ಹಾಕಿ ನೆನೆಯಲು ಬಿಡಬೇಕು. ಸುಮಾರು 10 ನಿಮಿಷ ನೆನೆಸಿದರೆ ಸಾಕಾಗುತ್ತದೆ. ಹಾಗೆ 1 ಕಪ್ ಹೆಸರು ಬೇಳೆಯನ್ನು ಸಹ ತೊಳೆದುಕೊಂಡು ಅಡುಗೆಗೆ ಸಿದ್ಧತೆ ಮಾಡಿಕೊಳ್ಳಿ.
ಮೊದಲಿಗೆ ಒಂದು ಕುಕ್ಕರ್ ಅನ್ನು ಒಲೆ ಮೇಲೆ ಇಟ್ಟು ಅದಕ್ಕೆ ನೆನೆಸಿಕೊಂಡಿರುವ ಹೆಸರು ಬೇಳೆ ಹಾಗೂ ಅಕ್ಕಿಯನ್ನು ಹಾಕಿಕೊಳ್ಳಿ. ಒಂದಕ್ಕೆ ಎರಡರಷ್ಟು ನೀರಿನ ಅಳತೆಯಲ್ಲಿ ನೀರು ಹಾಕಿಕೊಳ್ಳಿ. ಇದಕ್ಕೆ ಸ್ವಲ್ಪ ಅರಶಿನ, ಉಪ್ಪು ಹಾಕಿ ಮುಚ್ಚಳ ಮುಚ್ಚಿ 1 ಸೀಟಿ ಹೊಡೆಯಲು ಬಿಡಿ.
ಒಂದು ಸೀಟಿ ಹೊಡೆದರೆ ಚೆನ್ನಾಗಿ ಬೆಂದಿರುತ್ತದೆ. ಬಳಿಕ ಇದಕ್ಕೆ ಉಗುರು ಬೆಚ್ಚಗಿನ ನೀರು ಹಾಕಿ ಅದೇ ಕುಕ್ಕರ್‌ನಲ್ಲಿ ಕುದಿಯಲು ಬಿಡಿ. ಬೇಳೆ ಅಕ್ಕಿ ಮುಳುಗುವಷ್ಟು ನೀರು ಹಾಕಿದರೆ ಸಾಕಾಗುತ್ತದೆ. ಈಗ ಮತ್ತೊಂದು ಕಡೆ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಗೋಡಂಬಿ ಹುರಿದು ತೆಗೆದಿಟ್ಟುಕೊಳ್ಳಿ.
ನಂತರ ಇದೇ ಪಾತ್ರೆಗೆ ಸಾಸಿವೆ, ಕಾಳು ಮೆಣಸು, ಜೀರಿಗೆ, ಹಸಿ ಮೆಣಸು, ಶುಂಠಿ, ಕರಿಬೇವು ಹಾಕಿಕೊಂಡು ಫ್ರೈ ಮಾಡಿ. ಫ್ರೈ ಮಾಡಿದ ಬಳಿಕ ಇದನ್ನು ಒಲೆಯಲ್ಲಿ ಕುದಿಯುತ್ತಿರುವ ಪೊಂಗಲ್‌ಗೆ ಮಿಕ್ಸ್ ಮಾಡಿ. ಬಳಿಕ ಒಂದು ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಗೋಡಂಬಿ ಹಾಕಿ ಮಿಕ್ಸ್ ಮಾಡಿ.
ಇಷ್ಟಾದರೆ ನಿಮ್ಮ ಮುಂದೆ ತಮಿಳುನಾಡು ಶೈಲಿಯ ಖಾರ ಪೊಂಗಲ್ ರೆಡಿಯಾಗುತ್ತದೆ. ನೀವು ನೀರು ಹಾಕುವ ಮುನ್ನವೇ ಪೊಂಗಲ್ ಎಷ್ಟು ಗಟ್ಟಿಯಾಗಿರಬೇಕು, ಅಥವಾ ತೆಳುವಾಗಿರಬೇಕು ಎಂಬುದನ್ನು ನಿರ್ಧರಿಸಿಕೊಳ್ಳಿ. ನೀವು ಸಹ ಮನೆಯಲ್ಲಿ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ. ಇದನ್ನು ಬೆಳಗ್ಗೆ ತಿಂಡಿಗೆ ಮಾಡಿ ಸವಿದರೆ ತಿನ್ನಲು ಬಹಳ ಚೆನ್ನಾಗಿರುತ್ತದೆ. ಆರೋಗ್ಯಕ್ಕೂ ಒಳ್ಳೆಯದು.



Click it and Unblock the Notifications