Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೇಕರಿ ರುಚಿಯ ಖಾರ ಬೂಂದಿ ಮನೆಯಲ್ಲೇ ಮಾಡಿ! ಸಖತ್ ಟೇಸ್ಟಿ ಸ್ನ್ಯಾಕ್ಸ್!
ನೀವು ಮನೆಯಲ್ಲಿದ್ದಾಗ ಸಂಜೆ ಸಮಯದಲ್ಲಿ ಯಾವುದಾದರು ಸ್ನ್ಯಾಕ್ಸ್ ಸವಿಯಲು ನೀವು ಮುಂದಾದರೆ ಹಲವು ರೀತಿಯ ಬೇಕರಿ ತಿಂಡಿಗಳು ನೆನಪಿಗೆ ಬರುವುದು ಸಹಜ. ಅದ್ರಲ್ಲೂ ಸಂಜೆ ಸಮಯದಲ್ಲಿ ಖಾರ ಖಾರವಾಗಿ ಟೀ-ಕಾಫಿಯೊಂದಿಗೆ ಸವಿಯಲು ಯಾವುದಾದರು ಖಾದ್ಯ ಇದ್ದರೆ ಅದರ ರುಚಿಯೇ ಬೇರೆ. ಹಾಗಾದ್ರೆ ನಾವಿಂದು ಬೇಕರಿಯಲ್ಲಿ ಮಾಡುವಂತಹ ಗರಿ ಗರಿ ಬೂಂದಿ ಖಾರ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಈ ಗರಿ ಗರಿ ಬೂಂದಿ ಖಾರವನ್ನು ನೀವು ಮನೆಯಲ್ಲೇ ಮಾಡಿ ಸವಿಯಬಹುದು. ಬೇಕರಿಯಲ್ಲಿ ಸವಿಯುವಂತಹ ಈ ಬೂಂದಿ ಕಾಳಿನ ಖಾರ ಸವಿಯಲು ಬಹಳ ರುಚಿ ನೀಡಲಿದೆ. ಸಂಜೆ ಸಮಯದಲ್ಲಿ ಹಾಗೆ ಬೆಳಗ್ಗೆ ತಿಂಡಿಯೊಂದಿಗೆ ಸವಿಯಲು ಊಟದೊಂದಿಗೂ ಇದು ಅದ್ಭುತ ರುಚಿ ನೀಡಲಿದೆ. ನೀವು ಕೂಡ ಮನೆಯಲ್ಲಿ ಇದನ್ನು ಮಾಡಿದ್ರೆ ಎಲ್ಲರಿಗೂ ಇಷ್ಟವಾಗುತ್ತೆ.

ಈ ಖಾರವನ್ನ ನೀವು ಹಲವು ದಿನಗಳ ಕಾಲ ಇಟ್ಟು ಸವಿಯಬಹುದು. ಹಾಗೆ ಇದನ್ನು ನೀವು ಮನೆಗೆ ಯಾರಾದರು ಬಂದಾಗ, ಶುಭ ಕಾರ್ಯದಲ್ಲಿ, ಮಕ್ಕಳಿಗೆ ಸವಿಯಲು ಕೂಡ ನೀಡಬಹುದು. ಹಾಗೆ ಬೇಕರಿಯಲ್ಲಿ ಮಾಡುವಂತೆಯೇ ಮನೆಯಲ್ಲಿ ಮಾಡುವುದು ಕೂಡ ಸುಲಭವಾಗಿದೆ. ಹಾಗಾದ್ರೆ ಇದನ್ನು ಮನೆಯಲ್ಲೇ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಬೇಕರಿ ರುಚಿಯ ಈ ಬೂಂದಿ ಖಾರ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಬೇಕರಿ ರುಚಿ ಖಾರ ಬೂಂದಿ ಮಾಡಲು ಬೇಕಾಗುವ ಪದಾರ್ಥಗಳು
- ಕಡಲೆ ಹಿಟ್ಟು
- ಅರಶಿಣ
- ಖಾರದ ಪುಡಿ
- ಇಂಗು
- ಕಲರ್ ಪುಡಿ
- ಉಪ್ಪು
- ಎಣ್ಣೆ
- ಶೇಂಗಾ
- ಹುರಿಗಡಲೆ
- ಕರಿಬೇವು
- ಗೋಡಂಬಿ
ಬೇಕರಿ ರುಚಿ ಖಾರ ಬೂಂದಿ ಮಾಡುವುದು ಹೇಗೆ?
ಮೊದಲು ಒಂದು ಬೌಲ್‌ನಲ್ಲಿ ಒಂದು ಕಡಲೆ ಹಿಟ್ಟು ತೆಗೆದುಕೊಂಡು ಅದಕ್ಕೆ ಉಪ್ಪು, ಖಾರದ ಪುಡಿ, ಅರಶಿಣ, ಇಂಗು, ಕಲರ್ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಬಿಸಿ ಮಾಡಿಕೊಂಡ 3ರಿಂದ 4 ಸ್ಪೂನ್ ಎಣ್ಣೆ ಹಾಕಿ ಹಾಗೆ ಬಿಸಿ ಇದ್ದಾಗಲೇ ಮಿಕ್ಸ್ ಮಾಡಿಕೊಳ್ಳಿ.
ಈಗ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಬೇಕು. ಇದು ತೆಳುವಾದ ಹಿಟ್ಟಿನಂತೆ ಹದ ಬರವೇಕು. ದೋಸೆ ಹಿಟ್ಟಿನಷ್ಟು ತೆಳುವಾಗಿ ಬರಬೇಕು. ಅಥವಾ ಜಿಲೇಬಿ ಮಾಡುವ ಹಿಟ್ಟಿನಂತಹ ಹದಕ್ಕೆ ಬರಬೇಕು. ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ನಂತರ ಅನ್ನ ಮಾಡುವ ತೂತು ತೂತಿಗಳಿರುವ ಸೌಟಿನ ಸಹಾಯದಿಂದ ಬೂಂದಿ ಮಾಡಬಹುದು.
ಮೊದಲು ಈ ಸೌಟನ್ನು ಎಣ್ಣೆ ಬಾಣಲೆ ಮೇಲೆ ಇಟ್ಟುಕೊಂಡು ಅದರ ಮೇಲೆ ಈ ಹಿಟ್ಟನ್ನು ಹಾಕಬೇಕು. ಹಿಟ್ಟು ಕಾಳುಗಳಂತೆ ಎಣ್ಣೆಯಲ್ಲಿ ಬಿದ್ದು ಕುದಿಯಲು ಆರಂಭಿಸಬೇಕು. ಅದರ ನೊರೆ ಸಂಪೂರ್ಣ ಮಾಯವಾಗಿ ಬೂಂದಿ ಚೆನ್ನಾಗಿ ಕರಿದುಕೊಂಡಾಗ ಎಣ್ಣೆಯಿಂದ ತೆಗೆದು ಜರಡಿಯಲ್ಲಿ ಹಾಕಿಕೊಳ್ಳಿ.
ಹಾಗೆ ಇದೇ ಎಣ್ಣೆಗೆ ಶೇಂಗಾ, ಹುರಿಗಡಲೆ, ಗೋಡಂಬಿ, ಕರಿಬೇವು ಈ ಎಲ್ಲಾ ವಸ್ತುಗಳನ್ನು ಬೇರೆ ಬೇರೆಯಾಗಿ ಕರಿದುಕೊಂಡು ಅದೇ ಬೂಂದಿಯೊಂದಿಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಈ ಖಾರ ಬೂಂದಿ ಸಿದ್ದವಾಗುತ್ತೆ. ಮನೆಯಲ್ಲಿ ನೀವು ಸಹ ಮಾಡಿ ನೋಡಿ. ಸಂಜೆ ಸಮಯದಲ್ಲಿ ಸವಿಯಲು ಸ್ನಾಕ್ಸ್ ಆಗಿ, ಊಟ, ತಿಂಡಿಯ ರುಚಿ ಹೆಚ್ಚಿಸುವ ಸೈಡ್ಸ್ ಆಗಿಯೂ ನೀವು ಇದನ್ನು ಸವಿಯಬಹುದು.



Click it and Unblock the Notifications