Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯಲ್ಲೇ ಕೆಎಫ್‌ಸಿ ಚಿಕನ್ ಮಾಡಬಹುದು..! ಎಷ್ಟು ಸುಲಭದ ರೆಸಿಪಿ ಗೊತ್ತಾ?
ಚಿಕನ್ ಅಂದ್ರೆ ಎಲ್ಲರಿಗೂ ತುಂಬಾನೆ ಇಷ್ಟ. ಮಾಂಸಹಾರಿಗಳಿಗೆ ಚಿಕನ್‌ನಲ್ಲಿ ಹಲವು ರೀತಿಯ ಖಾದ್ಯ ಮಾಡಿದರೆ ಸವಿಯಲು ಬಲು ಇಷ್ಟಪಡುತ್ತಾರೆ. ಹೋಟೆಲ್‌ಗಳು, ಕ್ಯಾಂಟೀನ್‌ನಲ್ಲಿ ಹಲವು ರೀತಿಯ ಮಾಂಸಹಾರಿ ಖಾದ್ಯ ನಾವು ನೋಡಬಹುದು. ಹಾಗೆ ಮನೆಯಲ್ಲೂ ನಾವು ಚಿಕನ್‌ನಿಂದ ಹಲವು ರೀತಿಯ ಖಾದ್ಯ ಮಾಡಿ ಸವಿಯುತ್ತೇವೆ.
ಇದರಲ್ಲಿ ಹೊಸ ಹೊಸ ಚಿಕನ್ ಖಾದ್ಯ ಸಹ ನಾವು ಮಾಡುತ್ತೇವೆ. ಇನ್ನು ನಗರಳಲ್ಲಿ ನಾವು ದೊಡ್ಡ ಮಾಲ್‌ನಲ್ಲಿ ಹಾಗೆ ಹೊರಗಡೆ ದೊಡ್ಡ ದೊಡ್ಡ ಕೆಎಫ್‌ಸಿ ಔಟ್‌ಲೆಟ್ ನೋಡುತ್ತೇವೆ. ನಗರದಲ್ಲಿ ಕೆಎಫ್‌ಸಿ ಚಿಕನ್ ತುಂಬಾನೆ ಫೇಮಸ್, ಈ ಚಿಕನ್ ರುಚಿ ಇಷ್ಟಪಡದವರೇ ಇಲ್ಲ. ಮಾಲ್‌ಗಳಲ್ಲಿ ಈ ಕೆಎಫ್‌ಸಿ ಚಿಕನ್ ಭರ್ಜರಿಯಾಗಿ ಮಾರಾಟ ಆಗುತ್ತೆ. ದರ ಕೂಡ ಅತ್ಯಂತ ಹೆಚ್ಚಾಗಿರುತ್ತೆ.

ಶನಿವಾರ ಹಾಗೂ ಭಾನುವಾರ ಈ ಅಂಗಡಿಗಳು ಜನರಿಂದ ತುಂಬಿರುವುದು ನೋಡಬಹುದು. ಏಕೆಂದರೆ ಈ ರೀತಿ ಕೆಎಫ್‌ಸಿ ರುಚಿಯಲ್ಲಿ ಮನೆಯಲ್ಲಿ ಮಾಡುವುದು ಕಷ್ಟವಾಗುತ್ತೆ ಎಂದು ಈ ರುಚಿ ಸವಿಯಲು ಜನ ಮುಗಿಬೀಳುತ್ತಾರೆ. ಹಾಗಾದ್ರೆ ಈ ಕೆಎಫ್‌ಸಿ ರುಚಿಯಲ್ಲಿ ಮನೆಯಲ್ಲೇ ಚಿಕನ್ ಮಾಡುವುದು ಹೇಗೆ?
ಕೆಎಫ್‌ಸಿ ರೀತಿಯ ಚಿಕನ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯುತ್ತದೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕೆಎಫ್‌ಸಿ ರೀತಿಯ ಚಿಕನ್ ಮಾಡಲು ಬೇಕಾಗುವ ವಸ್ತುಗಳು
- ಚಿಕನ್- ಅರ್ಧ ಕೆ.ಜಿ
- ಮೈದಾ
- ಅರಶಿನ
- ಕಾಳು ಮೆಣಸಿನ ಪುಡಿ
- ಖಾರದ ಪುಡಿ
- ಉಪ್ಪು
- ಎಣ್ಣೆ
- ಟೊಮೆಟೋ ಸಾಸ್
- ಮ್ಯಾಗಿ ಮಸಾಲೆ
- ಶುಂಠಿ ಪುಡಿ
- ಜೀರಿಗೆ ಪುಡಿ
ಕೆಎಫ್‌ಸಿ ರೀತಿಯ ಚಿಕನ್ ಮಾಡುವ ವಿಧಾನವೇನು?
ಮೊದಲು ಬೋನ್ ಲೆಸ್ ಚಿಕನ್ ಬೇಕಾಗುತ್ತದೆ. ಬೋನ್ ಲೆಸ್ ಇದ್ದರೆ ರುಚಿ ಬಹಳ ಚೆನ್ನಾಗಿರುತ್ತದೆ. ಮೊದಲು ಚಿಕನ್ ದೊಡ್ಡ ಪೀಸ್‌ಗಳಾಗಿ ಕತ್ತರಿಸಿಕೊಂಡು ಅದನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ಒಂದು ಬೌಲ್‌ಗೆ ಹಾಕಿ ಅದಕ್ಕೆ ಅರಶಿನ, ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಖಾರದ ಪುಡಿ, ಉಪ್ಪು, ಶುಂಠಿ ಪುಡಿ, ಟೊಮೆಟೊ ಸಾಸ್, ಮ್ಯಾಗಿ ಮಸಾಲೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈ ಎಲ್ಲಾ ಮಸಾಲೆ ಅರ್ಧ ಚಮಚ ಹಾಕಿಕೊಂಡರೆ ಸಾಕು. ಹೀಗೆ ಹಾಕಿ ಅರ್ಧ ಗಂಟೆ ನೆನೆಯಲು ಬಿಡಿ.
ಈಗ ಒಂದು ಬೌಲ್‌ನಲ್ಲಿ ಅರ್ಧ ಕಪ್ ಮೈದಾ, ಮತ್ತೊಂದು ಕಪ್‌ನಲ್ಲಿ ಒಂದೂವರೆ ಕಪ್ ಮೈದಾ ಹಾಕಿ. ಒಂದು ಬೌಲ್ ನೀರು ಇಟ್ಟುಕೊಳ್ಳಿ. ಈಗ ಒಂದೂವರೆ ಕಪ್ ಮೈದಾ ಹಾಕಿರುವ ಬೌಲ್‌ಗೆ ಉಪ್ಪು, ಖಾರದ ಪುಡಿ, ಶುಂಠಿ ಪುಡಿ ಹಾಗೂ ಅರ್ಧ ಚಮಚ ಮ್ಯಾಗಿ ಮಸಾಲೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಮಿಕ್ಸ್ ಆದ ಬಳಿಕ ಈ ಬೌಲ್ ಬದಿಗೆ ಇಟ್ಟುಕೊಳ್ಳಿ.
ಈಗ ಅರ್ಧ ಕಪ್ ಮೈದಾಗೆ ಚಿಕನ್ ಪೀಸ್‌ಗಳನ್ನು ಅದ್ದಿಕೊಂಡು ಆ ಪೀಸ್ ಅನ್ನು ನೀರಿನಲ್ಲಿ ಹಾಕಬೇಕು. ಎಲ್ಲಾ ಪೀಸ್‌ಗಳನ್ನು ಹೀಗೆ ಮಾಡಿಕೊಳ್ಳಿ. ನೀರಿನಲ್ಲಿ 5 ಸೆಕೆಂಡ್‌ಗಳ ಹಾಕಿದ ಬಳಿಕ ಮೇಲೆ ಎತ್ತಿ ಈಗ ಮತ್ತೊಂದು ಬೌಲ್‌ನಲ್ಲಿರುವ ಮಸಾಲೆ ಹಾಕಿರುವ ಮೈದಾ ಹಿಟ್ಟಿನಲ್ಲಿ ಹಾಕಿ ಚೆನ್ನಾಗಿ ಹಿಟ್ಟು ಹಿಡಿಯುವಂತೆ ಮಾಡಬೇಕು. ಎಲ್ಲಾ ಪೀಸ್‌ಗಳನ್ನು ಮಾಡಿ ಒಂದು ತಟ್ಟೆಯಲ್ಲಿ ಇಟ್ಟುಕೊಳ್ಳಿ.
ನಂತರ ಒಂದು ಪಾತ್ರೆಯನ್ನ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ಚಿಕನ್ ಪೀಸ್‌ಗಳನ್ನು ಹಾಕಬೇಕು. 5 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಬೇಕು. ಸಣ್ಣ ಉರಿಯಲ್ಲಿ ಕಾಯಬೇಕು. ಇಷ್ಟಾದರೆ ನಿಮ್ಮ ಮುಂದೆ ಕೆಎಫ್‌ಸಿ ರುಚಿಯ ಚಿಕನ್ ಮನೆಯಲ್ಲೇ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಮಾಡಿ ನೋಡಿ.



Click it and Unblock the Notifications