Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರುಚಿ ರುಚಿಯ ಕೇಸರಿ ಹಲ್ವಾ ಮಾಡುವುದು ಹೇಗೆ? ಇಲ್ಲಿದೆ ರೆಸಿಪಿ
ಮನೆಯಲ್ಲಿ ಕಡಿಮೆ ಸಮಯದಲ್ಲಿ ಕಡಿಮೆ ಪದಾರ್ಥ ಬಳಸಿ ಒಂದೊಳ್ಳೆ ಸಿಹಿ ತಿಂಡಿ ಮಾಡಬೇಕು ಎಂದು ಎಲ್ಲರು ಅಂದುಕೊಂಡಿರುತ್ತಾರೆ. ಯಾಕೆಂದ್ರೆ ಈಗ ಅಡುಗೆ ಮನೆಯಲ್ಲಿ ಕಡಿಮೆ ಸಮಯ ವ್ಯಯಿಸಬೇಕು ಅಂತ ಗೃಹಿಣಿಯರು ಅಂದುಕೊಂಡಿರುತ್ತಾರೆ. ಇನ್ನು ಹಬ್ಬದ ಸಮಯದಲ್ಲಿ ಖರ್ಚು ಹೆಚ್ಚಾಗೋದ್ರಿಂದ ಕಡಿಮೆ ಪದಾರ್ಥಗಳ ಬಳಸಿ ಯಾವುದಾದ್ರು ಸಿಹಿ ತಿಂಡಿ ಮಾಡಬಹುದಾ ಎಂಬುದು ಅವರ ಆಲೋಚನೆಯಾಗಿರುತ್ತೆ.
ಹೀಗಾಗಿ ನಾವಿಂದು ಕಡಿಮೆ ಸಮಯದಲ್ಲಿ ಕಡಿಮೆ ಪದಾರ್ಥಗಳ ಬಳಸಿ ಮಾಡುವ ಸಿಹಿ ತಿಂಡಿಯ ಕಡೆ ಗಮನಕೊಡೋಣ. ಹಬ್ಬದ ದಿನಗಳಲ್ಲಿ ಹೆಚ್ಚಾಗಿ ಹಲ್ವಾಗಳ ಮಾಡುತ್ತಾರೆ. ಹಲ್ವಾ ಮಾಡಲು ಕಡಿಮೆ ಸಮಯ ಕಡಿಮೆ ಪದಾರ್ಥಗಳು ಇದ್ದರೆ ಸಾಕು. ಇನ್ನು ಹಲ್ವಾಗಳಲ್ಲಿ ಹತ್ತಾರು ವಿಧಗಳಿವೆ, ಕುಂಬಳ ಕಾಯಿ ಹಲ್ವಾ, ಹೆಸರು ಬೇಳೆ ಹಲ್ವಾ, ಕ್ಯಾರೆಟ್ ಹಲ್ವಾ ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇತ್ತೀಚಿಗೆ ಎಲ್ಲಾ ವಸ್ತುಗಳ ಹಲ್ವಾಗಳನ್ನೂ ಮಾಡಬಹುದು ಎಂದು ಹೊಸ ಹೊಸ ರೆಸಿಪಿಗಳ ನಾವು ನೋಡಬಹುದು.

ಆದ್ರೆ ನಾವಿಂದು ಜೋಳದ ಹಿಟ್ಟಿನ ಮೂಲಕ ಮಾಡುವ ಸಿಹಿಯಾದ ಹಲ್ವಾ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಈ ಹಲ್ವಾ ಅತ್ಯಂತ ಮೃದು ಮತ್ತು ಸಿಹಿಯಾಗಿರೋದ್ರಿಂದ ಎಲ್ಲಾ ವರ್ಗದರಿಗೂ ಇಷ್ಟವಾಗುತ್ತದೆ. ಜೊತೆಗೆ ಮಾಡುವುದು ಸಹ ತುಂಬಾನೆ ಸುಲಭ. ಹಾಗಾದ್ರೆ ಈ ಹಲ್ವಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕಾಗುತ್ತವೆ? ಈ ಹಲ್ವಾ ಮಾಡುವ ಪಾಕವಿಧಾನವೇನು ಎಂಬುದನ್ನು ನಾವಿಂದು ತಿಳಿಯೋಣ.
ಹಲ್ವಾ ಮಾಡಲು ಬೇಕಾಗುವ ಪದಾರ್ಥಗಳು
- ಸಕ್ಕರೆ - 1 ಕಪ್
- ಜೋಳದ ಹಿಟ್ಟು/ ಕಾರ್ನ್ ಫ್ಲೋರ್ - 1/2 ಕಪ್
- ತುಪ್ಪ - 4 ಚಮಚ
- ನಿಂಬೆಹಣ್ಣು- 1/2
- ಬಾದಾಮಿ (ಕತ್ತರಿಸಿದ)- 6
- ಗೋಡಂಬಿ (ಕತ್ತರಿಸಿದ)- 6
- ಕಲರ್- ಕೆಂಪು ಅಥವಾ ಹಳದಿ
ಹಲ್ವಾ ಮಾಡುವ ವಿಧಾನ
ಮೊದಲು ಒಂದು ಪಾತ್ರೆಗೆ ಕಾರ್ನ್ ಫ್ಲೋರ್ ಅನ್ನು ಒಂದು ಪಾತ್ರೆಗೆ ಹಾಕಿ. ನೀವು ಯಾವ ಕಪ್‌ನಲ್ಲಿ ಕಾರ್ನ್ ಫ್ಲೋರ್ ತೆಗೆದುಕೊಂಡಿದ್ದೀರೋ ಅದೇ ಕಪ್‌ನಲ್ಲಿ ಅಳತೆ ಮಾಡಿ 2 ಕಪ್ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಈ ಹಿಟ್ಟು ಗಂಟಾಗದಂತೆ ಮಿಶ್ರಣ ಮಾಡಬೇಕು. ಬಳಿಕ ಹಳದಿ ಮತ್ತು ಕೆಂಪು ಬಣ್ಣ ಸ್ವಲ್ಪ ಹಾಕಿಕೊಳ್ಳಿ. ಈ ಎರಡೂ ಬಣ್ಣ ಹಾಕೋದ್ರಿಂದ ಹಲ್ವಾ ಕೇಸರಿಯಾಗುತ್ತದೆ.
ಈಗ ಒಲೆ ಮೇಲೆ ಒಂದು ಪಾತ್ರೆಯಿಟ್ಟು ಅದಕ್ಕೆ ಒಂದು ಕಪ್ ಸಕ್ಕರೆ ಹಾಕಿ ಜೊತೆಗೆ ಸಕ್ಕರೆ ಹಾಕಲು ಬಳಸಿದ ಕಪ್‌ನಲ್ಲೇ ಒಂದು ಕಪ್ ನೀರನ್ನು ಹಾಕಿಕೊಳ್ಳಿ. ನಿಮಗೆ ಎಷ್ಟು ರುಚಿ ಅಗತ್ಯವೋ ಅಷ್ಟು ಸಕ್ಕರೆ ಹಾಕಿಕೊಳ್ಳಬಹುದು. ಸಕ್ಕರೆ ಕರಗಿ ಕುದಿಯುತ್ತಿರುವಾಗ ಅರ್ಧ ನಿಂಬೆಹಣ್ಣನ್ನು ಅದಕ್ಕೆ ಹಿಂಡಿಕೊಳ್ಳಿ. ಇದಾದ ಬಳಿಕ ಮಿಶ್ರಣ ಮಾಡಿಕೊಂಡ ಹಿಟ್ಟನ್ನು ಪಾಕಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ದಪ್ಪ ಆಗುವವರೆಗೆ ಮಿಶ್ರಣ ಮಾಡುತ್ತಿರಿ.
ಈ ವೇಳೆ ಅದಕ್ಕೆ ತುಪ್ಪ ಹಾಗೂ ಸಣ್ಣದಾಗಿ ಹೆಚ್ಚಿಟ್ಟುಕೊಂಡಿರುವ ಬಾದಾಮಿ, ಗೋಡಂಬಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇನ್ನೊಂದೆಡೆ ಕೇಕ್ ಮಾಡುವ ಪಾತ್ರೆಗೆ ತುಪ್ಪ ಹಚ್ಚಿಟ್ಟುಕೊಳ್ಳಿ. ಈ ಪಾತ್ರೆಗೆ ಹಲ್ವಾ ಮಿಶ್ರಣವನ್ನು ಹಾಕಿ ತಣ್ಣಗಾಗಲು ಬಿಡಿ. ಇನ್ನು ಅಲಂಕಾರಕ್ಕೆ ಇದರ ಮೇಲೆ ಡ್ರೈ ಫ್ರೂಟ್ಸ್ ಹಾಕಿಕೊಳ್ಳಬಹುದು. ತಣ್ಣಗಾದ ಬಳಿಕ ನಿಮಗೆ ಯಾವ ಸೈಜ್‌ಗೆ ಹ್ವಾ ಬೇಕೋ ಅಷ್ಟಕ್ಕೆ ಕತ್ತರಿಸಿಕೊಂಡು ಸವಿಯಲು ಇಡಿ.



Click it and Unblock the Notifications