Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ರುಚಿಯ ರಾಜ! ಕೇರಳ ಸ್ಟೈಲ್ ಯಮ್ಮೀ ಚಿಕನ್ ರೋಸ್ಟ್.. ಮಾಡೋದು ತುಂಬಾ ಈಸಿ
ವೀಕೆಂಡ್ ಬಂದರೆ ಸಾಕು, ಬಹುತೇಕರು ಮನೆಯಲ್ಲಿ ಚಿಕನ್ ರೆಸಿಪಿ ಮಾಡುವ ಬಗ್ಗೆ ಪ್ಲ್ಯಾನ್ ಮಾಡ್ತಾರೆ. ಅದರಲ್ಲೂ ಬ್ಯಾಚುಲರ್ ಬಾಯ್ಸ್ಗೆ ಚಿಕನ್ ಇಲ್ಲದೇ ವೀಕೆಂಡ್ ಕಂಪ್ಲೀಟ್ ಆಗಲ್ಲ. ಆದರೆ, ಅದೇ ಮಾಮೂಲಿ ಮಾಡುವ ಚಿಕನ್ ಸಾರು, ಚಿಕನ್ ಫ್ರೈ, ಕಬಾಬ್ ಮಾಡುವ ಬದಲು ಈ ಬಾರಿ ಕೇರಳ ಶೈಲಿಯ ಚಿಕನ್ ರೋಸ್ಟ್ (Chicken Roast) ಒಮ್ಮೆ ಟ್ರೈ ಮಾಡಿ ನೋಡಿ. ಹೌದು, ಇದು ತನ್ನ ವಿಶಿಷ್ಟ ರುಚಿಯಿಂದಾಗಿ ಜನಪ್ರಿಯವಾಗಿದೆ. ಕೇರಳದ ಸಾಂಪ್ರದಾಯಿಕ ಮಸಾಲೆಗಳ ಬಳಕೆಯು ಈ ಚಿಕನ್ ರೋಸ್ಟ್ ಅನ್ನು ಇನ್ನಷ್ಟು ಟೇಸ್ಟಿ ಆಗಿಸುತ್ತದೆ. ಇದನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು. ಹಬ್ಬ ಹರಿದಿನಗಳಲ್ಲಿ ಮತ್ತು ವಿಶೇಷ ಸಂದರ್ಭಗಳಲ್ಲಿ ಇದನ್ನು ಹೆಚ್ಚಾಗಿ ಮಾಡಲಾಗುತ್ತದೆ.
ಚಿಕನ್ ರೋಸ್ಟ್ ಕೇರಳದ ಪ್ರಸಿದ್ಧ ತಿಂಡಿಗಳಲ್ಲಿ ಒಂದು. ಇದನ್ನು ವಿವಿಧ ರೀತಿಯ ಮಸಾಲೆಗಳನ್ನು ಬಳಸಿ ತಯಾರಿಸಲಾಗುತ್ತದೆ. ಇದನ್ನು ದಕ್ಷಿಣ ಭಾರತದಾದ್ಯಂತ ತಯಾರಿಸಲಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ ಅಥವಾ ಅತಿಥಿಗಳು ಮನೆಗೆ ಬಂದಾಗ ಈ ಖಾದ್ಯವನ್ನು ಸೈಡ್ ಡಿಶ್ ಆಗಿ ತಯಾರಿಸಬಹುದು. ಅನ್ನದೊಂದಿಗೆ ಸವಿಯಲು ಇದು ಉತ್ತಮ. ಇದು ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಲು ಬಯಸುವಂತಹ ಟೇಸ್ಟ್ ಹೊಂದಿರುತ್ತದೆ. ಇದನ್ನು ಬ್ರೆಡ್ನೊಂದಿಗೆ ಕೂಡ ಸವಿಯಬಹುದು. ನಾವಿಂದು ಈ ಲೇಖನದಲ್ಲಿ ಕೇರಳ ಶೈಲಿಯ ಚಿಕನ್ ರೋಸ್ಟ್ (Kerala Style Chicken Roast) ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸುವುದು ಹೇಗೆ ಎಂಬುದನ್ನು ತಿಳಿಸಿದ್ದೇವೆ.

ಕೇರಳ ಶೈಲಿಯ ಚಿಕನ್ ರೋಸ್ಟ್ ತಯಾರಿಸಲು ಬೇಕಾಗುವ ಪದಾರ್ಥಗಳು
• ಚಿಕನ್ - 1 ಕಿಲೋ
• ಈರುಳ್ಳಿ - 4
• ಟೊಮೆಟೊ - 2
• ಹಸಿಮೆಣಸು - 4 ರಿಂದ 5
• ಶುಂಠಿ - ಬೆಳ್ಳುಳ್ಳಿ ಪೇಸ್ಟ್ - 3 ಚಮಚ
• ಗರಂ ಮಸಾಲ - 1 ಚಮಚ
• ಕೆಂಪು ಮೆಣಸಿನ ಪುಡಿ - 1 ಚಮಚ
• ಧನಿಯಾ ಪುಡಿ - 2 ಚಮಚ
• ಅರಿಶಿನ ಪುಡಿ - 1/2 ಚಮಚ
• ಕರಿಬೇವಿನ ಎಲೆಗಳು -1 ಕಪ್
• ತೆಂಗಿನ ಎಣ್ಣೆ - 3 ಚಮಚ
• ಉಪ್ಪು - ರುಚಿಗೆ ತಕ್ಕಷ್ಟು
• ಅಡುಗೆ ಎಣ್ಣೆ - 5 ಚಮಚ
• ಮೆಣಸಿನಕಾಯಿ ಚಕ್ಕೆಗಳು - 1 ಚಮಚ
ಕೇರಳ ಶೈಲಿಯ ಚಿಕನ್ ರೋಸ್ಟ್ ತಯಾರಿಸುವ ವಿಧಾನ
ಮೊದಲಿಗೆ, ಚಿಕನ್ ಅನ್ನು ಸ್ವಚ್ಚಗೊಳಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ಬಳಿಕ ಕರಿಬೇವಿನ ಎಲೆ ಮತ್ತು ಸಣ್ಣಗೆ ಕತ್ತರಿಸಿದ ಈರುಳ್ಳಿ ಹಾಕಿ ಎರಡು ನಿಮಿಷಗಳ ಕಾಲ ಫ್ರೈ ಮಾಡಿ. ನಂತರ, ವಿನೆಗರ್, ಬೆಳ್ಳುಳ್ಳಿ ಮತ್ತು ಶುಂಠಿ ಹಾಕಿ 2 ರಿಂದ 3 ನಿಮಿಷಗಳ ಕಾಲ ಫ್ರೈ ಮಾಡಿ. ಈ ಚಿಕನ್, ಕೆಂಪು ಮೆಣಸಿನ ಫ್ಲೇಕ್ಸ್ ಮತ್ತು ಸ್ವಲ್ಪ ನೀರನ್ನು ಹಾಕಿ 8 ರಿಂದ 10 ನಿಮಿಷಗಳ ಕಾಲ ಬೇಯಿಸಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ. ಚಿಕನ್ ಚೆನ್ನಾಗಿ ಬೇಯುವವರೆಗೆ ಹಾಗೆಯೇ ಮಾಡಿ.

ಚಿಕನ್ ಚೆನ್ನಾಗಿ ಬೆಂದು ಮೃದುವಾಗಲು ಸ್ವಲ್ಪ ತುಪ್ಪ ಅಥವಾ ಬೆಣ್ಣೆ ಸೇರಿಸಬಹುದು. ಇದು ಚಿಕನ್ ರೋಸ್ಟ್ನ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇಷ್ಟು ಮಾಡಿದರೆ ರುಚಿಕರವಾದ ಕೇರಳ ಶೈಲಿಯ ಚಿಕನ್ ರೋಸ್ಟ್ ಸವಿಯಲು ಸಿದ್ಧ. ಇದನ್ನು ನಿಮ್ಮ ಆಯ್ಕೆಗೆ ಅನುಗುಣವಾಗಿ ರೊಟ್ಟಿ, ಬ್ರೆಡ್ ಅಥವಾ ಅನ್ನದೊಂದಿಗೆ ಬಿಸಿಯಾಗಿ ಸವಿಯಬಹುದು. ಇದನ್ನು ತಯಾರಿಸಲು ಈ ಸುಲಭ ಮತ್ತು ಸರಳ ವಿಧಾನವನ್ನು ನೀವು ಫಾಲೋ ಮಾಡಿ.



Click it and Unblock the Notifications