Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
5 ನಿಮಿಷದಲ್ಲಿ ಮಾಡಬಹುದು ಈ ಕರದಂಟು ಸಿಹಿ..! ಹಬ್ಬದಲ್ಲಿ ಟ್ರೈ ಮಾಡಿ!!
ದೀಪಾವಳಿಯಲ್ಲಿ ವಾರ ಪೂರ್ತಿ ಸವಿಯಲು ಸಿಹಿ ತಿಂಡಿಯನ್ನು ಮಾಡಲು ನೀವು ಇಷ್ಟಪಡುತ್ತೀರಿ. ಹಾಗೆ ಈ ಹಬ್ಬದಲ್ಲಿ ಯಾವ ತಿಂಡಿ ಮಾಡಬೇಕು ಎಂಬ ಗೊಂದಲದಲ್ಲೂ ಇರುತ್ತೀರಿ. ಏಕೆಂದರೆ ದೀಪಾವಳಿಗೆ ಸಂಪ್ರದಾಯದಂತೆ ಹೋಳಿಗೆ ಮಾಡುವುದು ಸರ್ವೇ ಸಾಮಾನ್ಯ. ಹಾಗೆ ಕರ್ಜಿಕಾಯಿ, ಕಜ್ಜಾಯ ಸೇರಿ ಹಲವು ರೀತಿಯ ಸಿಹಿ ತಿಂಡಿಗಳನ್ನು ಮಾಡಿ ಸವಿಯುತ್ತೇವೆ.
ಹೀಗಾಗಿ ನಾವಿಂದು ಹಬ್ಬದಲ್ಲಿ ಮಾಡಬಹುದಾದ ಅತ್ಯಂತ ರುಚಿಕರ ಸಿಹಿ ತಿಂಡಿಯೊಂದನ್ನು ಮಾಡುವ ಕುರಿತು ತಿಳಿದುಕೊಳ್ಳೋಣ. ನಾವಿಂದು ಉತ್ತರ ಕರ್ನಾಟಕದಲ್ಲಿ ಅತ್ಯಂತ ಫೇಮಸ್ ಖಾದ್ಯ ಆಗಿರುವ ಕರದಂಟು ಮಾಡುವ ಕುರಿತು ತಿಳಿಯೋಣ. ಕರದಂಟು ಉತ್ತರ ಕರ್ನಾಟಕ ಭಾಗದಲ್ಲಿ ಮಾಡುವಂತಹ ರುಚಿ ರುಚಿಯ ಸಿಹಿ ಖಾದ್ಯ ಆಗಿದೆ.

ಈ ಕರದಂಟು ಹಲವು ರೀತಿಯಲ್ಲಿ ಬಗೆ ಬಗೆಯ ರುಚಿಯಲ್ಲಿ ಮಾಡಬಹುದು. ಉತ್ತರ ಕರ್ನಾಟಕದಲ್ಲಿ ಎಲ್ಲಾ ಹಬ್ಬದಲ್ಲೂ ಕರದಂಟು ಮಾಡುತ್ತಾರೆ. ಕರದಂಟಿನಲ್ಲಿ ಪ್ರೋಟೀನ್ ಅಂಶಗಳು ಹೆಚ್ಚಿರುವ ಕಾರಣ ಆರೋಗ್ಯಕ್ಕೆ ಬಹಳ ಉತ್ತಮ ಎಂದು ಹೇಳಲಾಗುತ್ತದೆ. ಹೀಗಾಗಿ ನಾವಿಂದು ಈ ಕರದಂಟು ಸಿಹಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ.
ಕರದಂಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಕರದಂಟು ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಯಾವೆಲ್ಲಾ ತಯಾರಿ ಮಾಡಿಕೊಳ್ಳಬೇಕು ಎಂಬ ಕುರಿತ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಕರದಂಟು ಮಾಡಲು ಬೇಕಾಗುವ ಪದಾರ್ಥಗಳು
- ಹುರಿಗಡಲೆ - 1 ಕಪ್
- ಸಕ್ಕರೆ - 1 ಕಪ್
- ತುಪ್ಪ
- ಏಲಕ್ಕಿ ಪುಡಿ
- ಒಣ ಕೊಬ್ಬರಿ
- ಗಸೆಗಸೆ
- ಟ್ರೈ ಫ್ರೂಟ್ಸ್
ಕರದಂಟು ಸಿಹಿ ಮಾಡುವ ವಿಧಾನವೇನು?
ಮೊದಲು ಹುರಿಗಡಲೆಯನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಚೆನ್ನಾಗಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಸಕ್ಕರೆ ಹಾಕಿ ಸಕ್ಕರೆ ಮುಳುಗುವಷ್ಟು ನೀರು ಹಾಕಿ ಪಾಕ ಮಾಡಿಕೊಳ್ಳಬೇಕು. ಸಕ್ಕರೆಯನ್ನು ಚೆನ್ನಾಗಿ ಕೈ ಆಡಿಸಿಕೊಂಡು ಪಾಕ ಮಾಡಿಕೊಳ್ಳಿ. ಈಗ ಒಂದು ಪ್ಲೇಟ್ ತೆಗೆದುಕೊಂಡು ಅದಕ್ಕೆ ತುಪ್ಪ ಅಥವಾ ಎಣ್ಣೆ ಹಚ್ಚಿಕೊಂಡು ಪಕ್ಕಕ್ಕೆ ಇಟ್ಟುಕೊಳ್ಳಿ. ಇಷ್ಟರಾಗಲೆ ಅಕ್ಕರೆ ಪಾಕ ಆಗಿರುತ್ತದೆ. ಒಂದು ಎಳೆ ಪಾಕ ಮಾಡಿಕೊಂಡರೆ ಸಾಕಾಗುತ್ತದೆ.
ಈ ಸಕ್ಕರೆ ಪಾಕಕ್ಕೆ ಏಲಕ್ಕಿ ಪುಡಿ, ಗಸೆಗಸೆ, ಒಣ ಕೊಬ್ಬರಿ, ಡ್ರೈ ಫ್ರೂಟ್ಸ್ ಎಲ್ಲಾ ಸ್ವಲ್ಪ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಮಿಕ್ಸಿಯಲ್ಲಿ ರುಬ್ಬಿಕೊಂಡಿರುವ ಹುರಿಗಡಲೆ ಹಿಟ್ಟನ್ನು ಈ ಪಾಕಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಒಲೆಯ ಉರಿ ಸಣ್ಣದಾಗಿ ಇಟ್ಟುಕೊಳ್ಳಿ. ಗಂಟು ಗಂಟು ಆಗದಂತೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ತಕ್ಷಣ ತುಪ್ಪ ಸವರಿಕೊಂಡಿರುವ ತಟ್ಟೆಗೆ ಈ ಮಿಶ್ರಣ ಸುರಿದುಕೊಳ್ಳಿ.
ನಂತರ ಇದರ ಮೇಲೆ ಇನ್ನೊಂದು ಸ್ವಲ್ಪ ಡ್ರೈ ಫ್ರೂಟ್ಸ್ ಹಾಗೂ ಒಣ ಕೊಬ್ಬರಿ ಹಾಕಿ ಸ್ವಲ್ಪ ಮೇಲೆ ಕೈಯಿಂದ ಒತ್ತಿಕೊಳ್ಳಿ. ನಂತರ 15 ನಿಮಿಷ ತಣ್ಣಗಾಗಲು ಬಿಡಿ. ನಂತರ ಇದನ್ನು ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಕರದಂಟು ರೆಡಿಯಾಗುತ್ತದೆ. ಇದನ್ನು ಒಂದು ಬಾಕ್ಸ್‌ಗೆ ಹಾಕಿಕೊಂಡರೆ ತಿಂಗಳ ಕಾಲ ಇಟ್ಟು ಸವಿಯಬಹುದು.
ಕಡಿಮೆ ಸಮಯದಲ್ಲಿ ಕಡಿಮೆ ವಸ್ತು ಬಳಸಿ ಅತ್ಯಂತ ರುಚಿಕರ ತಿಂಡಿಯಾಗಿ ಇದನ್ನು ಮಾಡಬಹುದು. ನೀವು ಸಹ ಈ ಹಬ್ಬದಲ್ಲಿ ಇದನ್ನು ಮಾಡಿ ನೋಡಿ. ನೀವು ಕೂಡ ಮುಂದೆ ಯಾವಾಗಲು ಈ ಸಿಹಿ ತಿಂಡಿಯನ್ನು ಮಾಡುತ್ತಲೇ ಇರುತ್ತೀರಿ.



Click it and Unblock the Notifications