Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
3 ವಸ್ತು ಇದ್ರೆ ಈ ಸಿಹಿ ಕಲಾಕಂದ್ ಮಾಡಿ ಸವಿಯಬಹುದು..! ಇಲ್ಲಿದೆ ರೆಸಿಪಿ
ಸಿಹಿ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಈ ಸಿಹಿಯನ್ನು ಬಹಳ ಇಷ್ಟಪಟ್ಟು ಸವಿಯುತ್ತಾರೆ. ಎಲ್ಲರಿಗೂ ಸಿಹಿ ಅಂದರೆ ಬಹಳ ಇಷ್ಟ. ಅದರಲ್ಲೂ ಮೈಸೂರು ಪಾಕ್ ಹಾಗೆ ಕಲಾಕಂದ್ ಎಲ್ಲರಿಗೂ ಇಷ್ಟವಾಗೋ ಸಿಹಿ. ಮೈಸೂರು ಪಾಕ್ ಹಾಗೆ ಕಲಾಕಂದ್ ಸಿಹಿ ನಡುವೆ ಕೆಲವರಿಗೆ ವ್ಯತ್ಯಾಸವೇ ತಿಳಿಯೋದಿಲ್ಲ. ಎರಡು ಕೂಡ ಒಂದೇ ರೀತಿಯ ಸಿಹಿ ಇರಲಿದೆ. ಹಾಗೆ ನೋಡಲು ಕೂಡ ಒಂದೇ ರೀತಿಯಲ್ಲಿ ಕಾಣಿಸಲಿದೆ.
ಕಲಾಕಂದ್ ಸಿಹಿ ಬಹಳ ರುಚಿಕರವಾಗಿರುತ್ತೆ. ಅದರಲ್ಲೂ ಕಲಾಕಂದ್ ಸಿಹಿ ಬಹಳ ರುಚಿಯಾಗಿರುತ್ತೆ. ಮೃದುವಾದ ಸಿಹಿಗೆ ಎಲ್ಲರು ಮನಸೋಲುತ್ತಾರೆ. ಇನ್ನು ಮನೆಯಲ್ಲಿ ಯಾವುದಾದರು ಶುಭ ಕಾರ್ಯ, ಅತಿಥಿಗಳು ಬರುವುದು, ಸಮಾರಂಭ, ಪೂಜೆ, ಹಬ್ಚ, ಇದ್ದಾಗ ಈ ಕಲಾಕಂದ್ ಸಿಹಿ ನೋಡಿ, ಇದು ಹಬ್ಬದ ವಿಶೇಷತೆಯನ್ನ ದುಪ್ಪಟ್ಟಾಗಿಸುತ್ತೆ. ಇದನ್ನು ಮಾಡಲು ಕೇವಲ ಮೂರು ವಸ್ತುಗಳು ನಿಮ್ಮ ಬಳಿ ಇದ್ದರೆ ಸಾಕಾಗುತ್ತದೆ ಹಾಗೆ ಕೆಲವೆ ನಿಮಿಷದಲ್ಲಿ ಈ ಸಿಹಿ ಮಾಡಿ ಸವಿಯಬಹುದು. ಹೀಗಾಗಿ ಎಲ್ಲರೂ ಈ ಸಿಹಿ ಸವಿಯಲು ಮುಂದಾಗುತ್ತಾರೆ.

ಹಾಗಾದ್ರೆ ಈ ಕಲಾಕಂದ್ ಸಿಹಿ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಕಲಾಕಂದ್ ಸಿಹಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕಲಾಕಂದ್ ಸಿಹಿ ಮಾಡಲು ಬೇಕಾಗುವ ವಸ್ತುಗಳು?
ಹಾಲಿನ ಪೌಡರ್
ನಿಂಬೆ ರಸ
ಸಕ್ಕರೆ
ಬಟರ್ ಪೇಪರ್
ತುಪ್ಪ
ಕಲಾಕಂದ್ ಸಿಹಿ ಮಾಡುವುದು ಹೇಗೆ?
ಮೊದಲು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಮೂರು ಕಪ್ ಹಾಲಿನ ಪೌಡರ್ ಹಾಕಿಕೊಳ್ಳಿ. ನಂತರ ಅದೇ ಕಪ್ನಲ್ಲಿ 2 ಕಪ್ ನೀರು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಒಲೆ ಹತ್ತಿಸಿಕೊಂಡು ಅದರೆ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಕಾಯಿಸಿಕೊಳ್ಳಿ. ಈಗ ಒಂದು ನಿಂಬೆ ರಸವನ್ನು ಹಿಂಡಿಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ ಒಲೆ ಮೇಲೆನ ಹಾಲಿನ ಪೌಡರ್ಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಈಗ ಹಾಲು ಒಡೆಯಲು ಆರಂಭಿಸುತ್ತದೆ. ಹಾಗೆ ಕುದಿಯಲು ಬಿಡಿ. ನೀರು ಚೆನ್ನಾಗಿ ಡ್ರೈ ಆಗಬೇಕು. ನೀರು ಚೆನ್ನಾಗಿ ಒಣಗಿದ ಬಳಿಕ ಇದಕ್ಕೆ ಒಂದೂವರೆ ಕಪ್ ಸಕ್ಕರೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಸಕ್ಕರೆ ಕರಗಿ ಸ್ವಲ್ಪ ನೀರಾಗುತ್ತದೆ. ಹಾಗೆ ಗಟ್ಟಿಯಾಗಲು ಆರಂಭಿಸುತ್ತದೆ. ಈಗ ಬಟರ್ ಪೇಪರ್ ತೆಗೆದುಕೊಂಡು ಒಂದು ಪ್ಲೇಟ್ಗೆ ಅಥವಾ ಅಚ್ಚು ಪಾತ್ರೆಗೆ ಪೇಪರ್ ಹಾಕಿ ಅದಕ್ಕೆ ತುಪ್ಪ ಸವರಿಕೊಂಡು ಈ ಕಲಾಕಂದ್ ಅನ್ನು ಹಾಕಿಕೊಂಡು ಗಟ್ಟಿಯಾಗುವ ಕತ್ತರಿಸಿಕೊಂಡು ಗಟ್ಟಿಯಾಗಲು ಬಿಡಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಕಲಾಕಂದ್ ಸಿಹಿ ರೆಡಿಯಾಗುತ್ತದೆ. ಸವಿಯಲು ಮೈಸೂರು ಪಾಕ್ನಂತಹ ರುಚಿ ಇದರದ್ದಾಗಿದೆ. ಹಾಗೆ ಕೆಲವ ನಿಮಿಷದಲ್ಲಿ ಕೆಲವೇ ವಸ್ತುಗಳ ಬಳಸಿ ಥಟ್ ಅಂತ ಮಾಡಬಹುದು. ನೀವು ಕೂಡ ಇದನ್ನು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ. ಇದರ ರುಚಿ ನೀವು ಸವಿದರೆ ಪದೇ ಪದೇ ಮಾಡಿ ಸವಿಯಲು ಮುಂದಾಗುತ್ತೀರಿ. ಅದರಲ್ಲು ವಿಶೇಷ ಸಂದರ್ಭದಲ್ಲಿ ಈ ಸಿಹಿ ಬಹಳ ರುಚಿ ನೀಡುತ್ತದೆ. ಹಬ್ಬ, ಶುಭ ಕಾರ್ಯ, ಅತಿಥಿಗಳು ಆಗಮಿಸಿದಾಗ ಈ ಸಿಹಿ ಮಾಡಿ ನೀಡಬಹುದು. ನೀವು ಕೂಡ ಒಮ್ಮೆ ಇದನ್ನು ಮಾಡಿ ನೋಡಿ.



Click it and Unblock the Notifications