Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪಿತೃಪಕ್ಷಕ್ಕೆ ಮಾಡಿ ರುಚಿ ರುಚಿಯ ಕಜ್ಜಾಯ..! ಇಲ್ಲಿದೆ ಸುಲಭದ ರೆಸಿಪಿ
ಮನೆಯಲ್ಲಿ ಏನಾದರು ಶುಭ ಕಾರ್ಯ ಅಥವಾ ಹಬ್ಬ ಇದ್ದರೆ ಯಾವುದಾದರೊಂದು ಸಿಹಿ ತಿಂಡಿ ಮಾಡುತ್ತೇವೆ. ಸಿಹಿ ಇಲ್ಲದಿದ್ದರೆ ಹಬ್ಬ ಅಪೂರ್ಣವಾದಂತೆ. ಹಾಗೆ ಈಗ ಪಿತೃಪಕ್ಷ ಆರಂಭಗೊಂಡಿದೆ. ಅಂದರೆ ಪಿತೃಪಕ್ಷದಲ್ಲಿ ಪೂರ್ವಜರಿಗೆ ಅನ್ನಾಹಾರ, ಪಿಂಡದಾನ ಮಾಡಲಾಗುತ್ತದೆ. ಈ ವೇಳೆ ಪೂರ್ವಜನರಿಗೆ ಇಷ್ಟದ ಖಾದ್ಯಗಳ ಮಾಡಲಾಗುತ್ತದೆ.
ಇನ್ನು ಈ ಮಹಾಲಯ ಅಮಾವಾಸ್ಯೆಯ ದಿನದಂದು ಮೂಲ ಮನೆಯಲ್ಲಿ ಪೂಜೆ ನೆರವೇರಲಿದೆ. ಈ ಪೂಜೆ ಬಳಿಕ ಪೂವರ್ಜರ ಇಷ್ಟದ ತಿಂಡಿ ಮಾಡಿ ಸವಿಯುತ್ತಾರೆ. ಹೀಗಾಗಿ ನಾವಿಂದು ಈ ವಿಶೇಷ ದಿನಕ್ಕಾಗಿ ಕಜ್ಜಾಯ ಮಾಡಿ ನೋಡೋಣ. ಕಜ್ಜಾಯ ಸಿಹಿ ಮಾಡಿದರೆ ಅದರ ರುಚಿಗೆ ಮಕ್ಕಳಿಂದ ಹಿಡಿದು ಹಿರಿಯರು ಸವಿಯುತ್ತಾರೆ.

ಕಜ್ಜಾಯ ಸಿಹಿಯು ಸವಿಯಲು ಕ್ರಿಸ್ಪಿ ಕ್ರಿಸ್ಪಿಯಾಗಿರುತ್ತೆ. ಆದರೆ ಈಗ ಈ ಕಜ್ಜಾಯವನ್ನು ಈಗ ಮನೆಯಲ್ಲಿ ಮಾಡುವವರಿಗಿಂತ ಹೆಚ್ಚಾಗಿ ಅಂಗಡಿಯಲ್ಲಿ, ಬೇಕರಿಯಿಂದ ತಂದು ಸವಿಯುತ್ತಾರೆ. ಆದ್ರೆ ನಾವು ಮನೆಯಲ್ಲೇ ಮಾಡುವುದು ಹೇಗೆ ಎಂಬುದನ್ನು ನೋಡೋಣ.
ಕಜ್ಜಾಯ ಮಾಡಲು ಬೇಕಾಗುವ ಪದಾರ್ಥಗಳು ಯಾವುವು?
- ಅಕ್ಕಿ - 2ಕಪ್
- ತೆಂಗಿನ ಕಾಯಿ
- ಶುಂಠಿ
- ಏಲಕ್ಕಿ
- ಬೆಲ್ಲ - ಕಪ್
- ಎಣ್ಣೆ
ಕಜ್ಜಾಯ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್‌ನಲ್ಲಿ 2 ಕಪ್ ಅಕ್ಕಿ ಹಾಕಿ ಅದನ್ನು ಚೆfನಾಗಿ ತೊಳೆದುಕೊಳ್ಳಬೇಕು. ನಂತರ ಎರಡು ದಿನ ನೆನೆಸಿಡಬೇಕು. ಈ ಅಕ್ಕಿಯನ್ನ ದಿನವೂ ತೊಳೆದು ಬೇರೆ ನೀರು ಹಾಕುತ್ತಾ ಇರಬೇಕು. ಒಟ್ಟು ಎರಡು ದಿನ ನೆನೆಸಿಡಬೇಕು.
2 ದಿನದ ಬಳಿಕ ಅಕ್ಕಿಯನ್ನು ನೀರಿನಿಂದ ಬೇರ್ಪಡಿಸಿ ಒಂದು ಬಟ್ಟೆ ಮೇಲೆ ಹಾಕಿ ಒಣಗಲು ಬಿಡಬೇಕು. ಇದನ್ನು ಬಿಸಿಲಿನಲ್ಲೀ ಅಥವಾ ಫ್ಯಾನ್ ಕೆಳಗೆ ಒಣಗಲು ಬಿಡಿ. ಸ್ವಲ್ಪ ಹೊತ್ತು ಒಣಗಲು ಇಟ್ಟರೆ ಸಾಕು. ಈಗ ಈ ಅಕ್ಕಿಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ನುಣ್ಣಗೆ ರುಬ್ಬಿಕೊಳ್ಳಿ, ಜರಡಿ ಹಿಡಿದು ನುಣ್ಣಗಿರುವ ಹಿಟ್ಟು ತೆಗೆದಿಟ್ಟು ಕೊಳ್ಳಿ.
ಈಗ ಸಣ್ಣ ಮಿಕ್ಸಿ ಜಾರ್‌ಗೆ ತೆಂಗಿನ ಕಾಯಿ ತುರಿ, ಏಲಕ್ಕಿ, ಶುಂಠಿ, ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ತರಿತರಿಯಾಗಿ ರುಬ್ಬಿದ ಬಳಿಕ ಇದನ್ನು ಬದಿಗೆ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಪಾನ್ ಇಟ್ಟು ಅದಕ್ಕೆ ಬಿಳಿ ಎಳ್ಳು ಹಾಕಿ ಹುರಿದುಕೊಳ್ಳಿ. ನಂತರ ಇದನ್ನು ತೆಂಗಿನ ತುರಿ ಹಾಕಿರುವ ಬೌಲ್‌ಗೆ ಹಾಕಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ.
ಈಗ 2 ಕಪ್ ಬೆಲ್ಲ ತೆಗೆದಿಕೊಂಡು ಪಾತ್ರೆಗೆ ಹಾಕಿ ಕರಗಲು ಸ್ವಲ್ಪ ನೀರು ಹಾಕಿ ಕರಗಿಸಿಕೊಳ್ಳಿ. ಗ್ಯಾಸ್ ಸಣ್ಣದಾಗಿ ಇರಲಿ. ಬೆಲ್ಲ ಕರಗಿದ ಬಳಿಕ ಅದನ್ನು ಜರಡಿ ಹಿಡಿದು ಬೆಲ್ಲದ ಪಾಕ ಮಾಡಿ. ಈಗ ಇದೇ ಬೆಲ್ಲಕ್ಕೆ ಕೊಬ್ಬರಿ ಎಳ್ಳಿನ ಮಿಕ್ಸ್ ಹಾಕಿ ಮಿಕ್ಸ್ ಮಾಡಿ. ತಕ್ಷಣ ಜರಡಿ ಹಿಡಿದ ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, 1 ನಿಮಿಷ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ.
ನಂತರ ಇದನ್ನು ತಣ್ಣಗಾಗಲು ಬಿಡಿ. ಅನಂತರ ಅರ್ಧ ಸ್ಪೂನ್ ಎಣ್ಣೆಯನ್ನು ಇದರ ಮೇಲೆ ಹಾಕಿ ಮುಚ್ಚಳ ಮುಚ್ಚಿ ರಾತ್ರಿ ಇಡಿ. ಮತ್ತೆ ಬೆಳಗ್ಗೆ ಈ ಹಿಟ್ಟು ಗಟ್ಟಿಯಾಗಿರುತ್ತದೆ. ಈಗ ಉಂಡೆ ಮಾಡಿಕೊಳ್ಳಲು ಸುಲಭವಾಗುತ್ತದೆ.
ಈಗ ಒಲೆ ಮೇಲೆ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಕಾಯಲು ಬಿಡಿ. ಇನ್ನೊಂದು ಕಡೆ ಒಂದು ಪ್ಲಾಸ್ಟಿಕ್ ಕವರ್‌ಗೆ ಎಣ್ಣೆ ಹಚ್ಚಿಕೊಂಡು ನಿಂಬೆ ಹಣ್ಣಿನ ಗಾತ್ರದಲ್ಲಿ ಹಿಟ್ಟು ತೆಗೆದುಕೊಂಡು ಸಣ್ಣದಾಗಿ ತಟ್ಟಿಕೊಳ್ಳಿ. ನಂತರ ಅದನ್ನು ಎಣ್ಣೆಗೆ ಇಳಿ ಬಿಡಿ. ಸುಮಾರು 5ರಿಂದ 6 ನಿಮಿಷ ಎರಡೂ ಕಡೆ ಕರಿದುಕೊಂಡರೆ ಕಜ್ಜಾಯ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications