Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೆಲವೇ ವಸ್ತು ಬಳಸಿ ಕಾಯಿ ಸಾರು ಮಾಡಿ..! ಸಖತ್ ರುಚಿ.!
ಮಧ್ಯಾಹ್ನ ಇಲ್ಲವೆ ರಾತ್ರಿ ಊಟಕ್ಕೆ ಒಳ್ಳೆಯ ಸಾಂಬಾರ್ ಇದ್ದರೆ ಮಾತ್ರವೇ ಆ ಊಟದ ರುಚಿ ಹೆಚ್ಚಾಗುತ್ತದೆ. ಇಲ್ಲದಿದ್ದರೆ ಊಟ ಮಾಡಿದರೂ ಅದರ ರುಚಿ ಸಿಗುವುದಿಲ್ಲ. ನಿತ್ಯ ರುಚಿಕರ ಸಾಂಬಾರ್ ಮಾಡುವುದು ಅಸಾಧ್ಯ ಕೆಲವೊಮ್ಮೆ ತರಕಾರಿ ಸಾರು ಅಂದರೆ ಮೂಗು ಮುರಿಯುತ್ತಾರೆ.
ಹೀಗಾಗಿ ಸಾರಿನ ಜೊತೆ ಯಾವುದಾದರು ಪಲ್ಯ, ಹಪ್ಪಳ, ಬಜ್ಜಿ ಸವಿಯುವುದು ಹಲವರ ಅಭ್ಯಾಸವಾಗಿರುತ್ತದೆ. ಆದ್ರೆ ಇಷ್ಟೆಲ್ಲಾ ಮಾಡಲು ಸಮಯವು ತುಸು ಹೆಚ್ಚು ಬೇಕಾಗುತ್ತದೆ. ಆದ್ರೆ ಈ ಸಾರು ಮಾಡಿದರೆ ಯಾವ ಪಲ್ಯವೂ ಬೇಕಾಗುವುದಿಲ್ಲ.

ಹೌದು ರುಚಿಕರ ಕಾಯಿ ಸಾರು ಮಾಡಿದರೆ ಇದರ ಜೊತೆ ಯಾವ ಪಲ್ಯವೂ ಬೇಡ. ಏಕೆಂದರೆ ಕಾಯಿ ಸಾರಿನ ರುಚಿಯೇ ಅಂತದ್ದು, ಅನ್ನದ ಜೊತೆ ಕಾಯಿಯ ಸಾರು ಇದ್ದರೆ ಬೇರೆ ಯಾವ ಪದಾರ್ಥ ಬೇಕೆನಿಸುವುದಿಲ್ಲ. ಹಾಗಾದ್ರೆ ಈ ಕಾಯಿ ಸಾರು ಮಾಡುವುದು ಹೇಗೆ ಎಂಬುದು ಹಲವರ ಪ್ರಶ್ನೆಯಾಗಿದೆ.
ತೆಂಗಿನ ಕಾಯಿ ಸಾರು ಮಾಡುವುದು ಹೇಗೆ? ತೆಂಗಿನ ಕಾಯಿ ಸಾರು ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕಾಯಿ ಸಾರು ಮಾಡಲು ಬೇಕಾಗುವ ಪದಾರ್ಥಗಳು
- ತೆಂಗಿನ ಕಾಯಿ- 1/2 ಕಪ್
- ಸಾಂಬಾರ್ ಪುಡಿ - 2 ಟೀಸ್ಪೂನ್
- ಹುಣಸೆಹಣ್ಣು-5 ಗ್ರಾಂ
- ಜೀರಿಗೆ - 1 ಟೀಸ್ಪೂನ್
- ಕೊತ್ತಂಬರಿ ಸೊಪ್ಪು - 1/4 ಕಪ್
- ಬೆಳ್ಳುಳ್ಳಿ-1
- ಹುರಿಗಡಲೆ - 1 tbs
- ಈರುಳ್ಳಿ - 2
- ಒಣ ಕೆಂಪು ಮೆಣಸಿನಕಾಯಿ - 2
- ಕರಿಬೇವಿನ ಎಲೆಗಳು - 1 tbs
- ಸಾಸಿವೆ- 1/4 ಟೀಸ್ಪೂನ್
- ಇಂಗು - 1/4 ಟೀಸ್ಪೂನ್
- ಅಡುಗೆ ಎಣ್ಣೆ
ಕಾಯಿ ಸಾರು ಮಾಡುವ ವಿಧಾನ
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಕತ್ತರಿಸಿಕೊಂಡ ತೆಂಗಿನ ಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಹುರಿಗಡಲೆ, ಜೀರಿಗೆ, ಹುಣಸೆ ಹಣ್ಣು, ಸಾಂಬಾರ್ ಪುಡಿ ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ಇದು ಚಟ್ನಿಯಂತಾಗುವಂತೆ ರುಬ್ಬಿಕೊಳ್ಳಿ.
ಈಗ ರುಬ್ಬಿಕೊಂಡ ಮಸಾಲೆ ಪಕ್ಕಕ್ಕೆ ಇಟ್ಟು ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಒಲೆ ಮೇಲೆ ಇಡಿ. ಅದಕ್ಕೆ ಒಣ ಮೆಣಸು, ಈರುಳ್ಳಿ, ಸಾಸಿವೆ, ಕರಿಬೇವು, ಹಾಕಿಕೊಂಡಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ಅರಶಿನ ಪುಡಿ ಸಹ ಹಾಕಿಕೊಂಡು ನೀವು ರುಬ್ಬಿಕೊಂಡಿರುವ ಮಸಾಲೆಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಬಳಿಕ ಇದಕ್ಕೆ ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಕುದಿಸಿಕೊಳ್ಳಿ. ನಿಮಗೆ ಎಷ್ಟು ನೀರು ಬೇಕೋ ಅಷ್ಟು ಹಾಕಿಕೊಳ್ಳಬಹುದು. 5ರಿಂದ 6 ನಿಮಿಷಗಳ ಕಾಲ ಮುಚ್ಚಳ ಮುಚ್ಚಿ ಕುದಿಸಿಕೊಳ್ಳಿ, ಇಷ್ಟಾದರೆ ನಿಮ್ಮ ಮುಂದೆ ಕಾಯಿ ಸಾರು ರೆಡಿಯಾಗಿರುತ್ತದೆ.
ಈ ತೆಂಗಿನಕಾಯಿ ಸಾರನ್ನು ಅನ್ನ, ಮುದ್ದೆ, ಚಪಾತಿ ಜೊತೆಯೂ ಸವಿಯಬಹುದು. ರುಚಿ ಕೂಡ ಎಲ್ಲದಕ್ಕಿಂತ ಅದ್ಭುತವಾಗಿರುತ್ತೆ. ಮಾಡೋದು ಸಹ ತುಂಬಾನೆ ಸುಲಭ. ಹೆಚ್ಚು ಸಮಯವನ್ನೂ ಇದು ತೆಗೆದುಕೊಳ್ಳುವುದಿಲ್ಲ. ಒಮ್ಮೆ ನೀವು ಈ ಕಾಯಿ ಸಾರು ಮಾಡಿ ಸವಿದರೆ ಮತ್ತೆಂದು ಮರೆಯುವುದಿಲ್ಲ. ಕೆಲವರು ಈ ಸಾರಿಗೆ ಖಾರದ ಪುಡಿ ಬಳಸುತ್ತಾರೆ, ಮತ್ತೆ ಕೆಲವರು ಬಳಸುವುದಿಲ್ಲ. ನೀವು ಹೇಗೆ ಬೇಕಾದರು ಇದನ್ನು ಮಾಡಬಹುದು.
ಜೊತೆಗೆ ನೀವು ತೆಂಗಿನ ಕಾಯಿ ಎಷ್ಟು ಪ್ರಮಾಣದಲ್ಲಿ ತೆಗೆದುಕೊಂಡಿರುತ್ತೀರೋ ಅಷ್ಟು ಪ್ರಮಾಣದಲ್ಲಿ ನೀರು ಹಾಕಿಕೊಂಡು ಇದನ್ನು ಮಾಡಬಹುದು. ತೆಳುವಾಗಿ ಮಾಡುವುದಕ್ಕಿಂತ ದಪ್ಪವಾದ ಸಾರು ಹೆಚ್ಚು ರುಚಿ ನೀಡುತ್ತದೆ. ಹಾಗಾದ್ರೆ ನೀವು ಸಹ ಇದನ್ನು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ಇದರ ರುಚಿ ನೋಡಿ.



Click it and Unblock the Notifications