Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪಿತೃಪಕ್ಷಕ್ಕೆ ಕಾಯಿ ಹೋಳಿಗೆ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
ಪಿತೃ ಪಕ್ಷ ಆರಂಭಗೊಂಡಿದೆ. ಮನೆಯಲ್ಲಿ ಪೂರ್ವಜನರಿಗೆ ಅನ್ನ ಹಾಕುವುದು ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ. ವರ್ಷದಲ್ಲಿ ಒಂದು ಬಾರಿ ಪೂರ್ವಜನರನ್ನು ನೆನೆಯಲಾಗುತ್ತದೆ. ಹೀಗೆ ಈ ವರ್ಷ ಕೂಡ ಇಂದಿನಿಂದ ಅಕ್ಟೋಬರ್ 2ರ ತನಕ ಪಿತೃ ಪಕ್ಷ ಇರಲಿದೆ. ಹೀಗಾಗಿ ಎಲ್ಲರ ಮನೆಯಲ್ಲಿ ಒಂದು ದಿನ ಪೂರ್ವಜನರಿಗೆ ಇಷ್ಟದ ಅಡುಗೆ ಮಾಡಿ ಹಾಕುತ್ತಾರೆ.
ಹೀಗಾಗಿ ಪೂರ್ವಜನರಿಗೆ ಸಿಹಿ ತಿಂಡಿ ಮಾಡಿ ಹಾಕುವ ನಿಮ್ಮ ಆಲೋಚನೆಗೆ ನಾವಿಂದು ಹೋಳಿಗೆ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಹೋಳಿಗಯಲ್ಲಿ ಹತ್ತಾರು ವಿಧದ ಖಾದ್ಯವಿದೆ. ಒಂದೊಂದು ಒಂದೊಂದು ರೀತಿಯ ರುಚಿ ನೀಡಲಿದೆ. ಅದರಲ್ಲಿ ಬೇಳೆ ಹೋಳಿಗೆ, ಕಾಯಿ ಹೋಳಿಗೆ ತುಂಬಾನೆ ಫೇಮಸ್.

ಈ ಹೋಳಿಗೆ ರುಚಿಗೆ ಮಾರುಹೋಗದವರೇ ಇಲ್ಲ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಹೋಳಿಗೆ ಸವಿಯುತ್ತಾರೆ. ಹೀಗಾಗಿ ಪಿತೃಪಕ್ಷದ ದಿನದಂದು ಮನೆಯಲ್ಲಿ ಈ ಸಿಹಿಯನ್ನು ಮಾಡಿ ನೋಡಿ. ಏಕೆಂದರೆ ಈ ಸಿಹಿ ಎಲ್ಲರಿಗೂ ಇಷ್ಟವಾಗುತ್ತೆ, ಈ ಹೋಳಿಗೆ ಮೇಲೆ ಬಿಸಿ ಬಿಸಿ ತುಪ್ಪ ಹಾಕಿಕೊಂಡು ಸವಿದರೆ ಹಬ್ಬದ ಊಟ ಪೂರ್ಣವಾಗುತ್ತೆ.
ಹಾಗಾದ್ರೆ ನಾವಿಂದು ಕಾಯಿ ಹೋಳಿಗೆ ಮಾಡುವ ಸರಿಯಾದ ವಿಧಾನದ ಕುರಿತು ತಿಳಿದುಕೊಳ್ಳೋಣ. ಕಾಯಿ ಹೋಳಿಗೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ಸರಿಯಾದ ವಿಧಾನವೇನು? ಮಾಡುವಾಗ ಏನೆಲ್ಲಾ ಕ್ರಮ ವಹಿಸಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕಾಯಿ ಹೋಳಿಗೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮೈದಾ ಹಿಟ್ಟು - ಅರ್ಧ ಕಪ್
- ಚಿರೋಟಿ ರವೆ - 1 ಕಪ್
- ಉಪ್ಪು
- ತೆಂಗಿನ ಕಾಯಿ
- ಬೆಲ್ಲ
- ಏಲಕ್ಕಿ ಪುಡಿ
- ಎಣ್ಣೆ
ಕಾಯಿ ಹೋಳಿಗೆ ಮಾಡುವುದು ಹೇಗೆ?
ಒಂದು ಬೌಲ್‌ಗೆ ಚಿರೋಟಿ ರವೆ ಹಾಕಿ ಅದಕ್ಕೆ ಮೈದಾ ಹಿಟ್ಟು, ಉಪ್ಪು ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಕಲಸಿಕೊಳ್ಳಬೇಕು. ಈ ಹಿಟ್ಟು ಮೆದುವಾಗಿ ಬರಬೇಕು. ಚಪಾತಿ ಹಿಟ್ಟಿನಂತೆ ಚೆನ್ನಾಗಿ ಹದ ಮಾಡಿಕೊಳ್ಳಿ. ಎಣ್ಣೆ ಹಾಕಿಕೊಳ್ಳುತ್ತಾ ಹದ ಮಾಡಿಕೊಂಡರೆ ಮೃದುವಾಗಿ ಬರುತ್ತದೆ. ಹಿಟ್ಟು ಗಂಟು ಗಂಟಾಗದಂತೆ ಮೆದುವಾಗಿ ಕಲಸಿಕೊಳ್ಳಿ. ನಂತರ ಹಿಟ್ಟನ್ನು ನೆನೆಯಲು ಇಡಿ. ಅದರ ಮೇಲೆ ಸ್ವಲ್ಪ ಎಣ್ಣೆ ಹಾಕಿಟ್ಟುಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್‌ಗೆ ತುರಿದುಕೊಂಡಿರುವ ಕಾಯಿಯನ್ನು ಹಾಕಿ ರುಬ್ಬಬೇಕು. ಒಂದೆರಡು ಸುತ್ತು ರುಬ್ಬಿದರೆ ಸಾಕು. ತರಿತರಿಯಾಗಿ ಕಾಯಿಯನ್ನು ರುಬ್ಬಿಕೊಳ್ಳಬೇಕು. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಬೆಲ್ಲ ಹಾಕಿಕೊಂಡು ಬೆಲ್ಲ ಕರಗಲು ಸ್ವಲ್ಪ ನೀರು ಹಾಕಿಕೊಳ್ಳಿ. ಬೆಲ್ಲದ ಪಾಕ ಮಾಡುವ ಅವಶ್ಯಕತೆ ಇಲ್ಲ. ಬದಲಿಗೆ ಬೆಲ್ಲ ಚೆನ್ನಾಗಿ ಕರಗಬೇಕು.
ಬೆಲ್ಲ ಕರಗಿದ ಬಳಿಕ ಇದಕ್ಕೆ ರುಬ್ಬಿಕೊಂಡಿರುವ ಕಾಯಿ ತುರಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಸಣ್ಣ ಉರಿಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ. ಈ ವೇಳೆ ಬೇಕಿದ್ದರೆ ಏಲಕ್ಕಿ ಪುಡಿ ಸಹ ಹಾಕಿ ಮಿಕ್ಸ್ ಮಾಡಿಕೊಳ್ಳಿ. 7ರಿಂದ 8 ನಿಮಿಷ ಮಿಕ್ಸ್ ಮಾಡಿಕೊಂಡರೆ ಸಾಕು. ನಂತರ ಇದನ್ನು ಸಣ್ಣ ಸಣ್ಣ ಉಂಡೆ ಮಾಡಿಟ್ಟುಕೊಳ್ಳಿ. ತಣ್ಣಗಾದ ಬಳಿಕ ಉಂಡೆ ಮಾಡಿ ಇಟ್ಟುಕೊಳ್ಳಿ.
ಈಗ ಎಣ್ಣೆಹಾಕಿ ನೆನೆಸಿಟ್ಟಿದ್ದ ಹಿಟ್ಟನ್ನು ಮತ್ತೆ ಕಲಸಿಕೊಳ್ಳಿ. ಬಳಿಕ ಕೈಗೆ ಎಣ್ಣೆ ಹಚ್ಚಿಕೊಂಡು ಇದನ್ನು ಕೂಡ ಹೂರ್ಣದಂತೆ ಉಂಡೆ ಮಾಡಿ ಇಟ್ಟುಕೊಳ್ಳಿ. ನಂತರ ಒಂದು ಪ್ಲಾಸ್ಟಿಕ್ ಅಥವಾ ಹೋಳಿಗೆ ಪೇಪರ್‌ಗೆ ಎಣ್ಣೆ ಹಚ್ಚಿಕೊಂಡು ಹಿಟ್ಟಿನ ಉಂಡೆಯನ್ನು ಸ್ವಲ್ಪ ತಟ್ಟಿಕೊಂಡು ಒಂದು ಉಂಡೆ ಹೂರ್ಣ ತೆಗೆದುಕೊಂಡು ಮಧ್ಯದಲ್ಲಿ ಇಟ್ಟು ಬಂದ್ ಮಾಡಿ. ನಂತರ ನಿಧಾನವಾಗಿ ಚಪಾತಿಯಂತೆ ತಟ್ಟಿಕೊಂಡು ಕಾವಲಿ ಮೇಲೆ ಹಾಕಿಕೊಳ್ಳಿ.
ಈ ಹೋಳಿಗೆ ಎರಡೂ ಕಡೆಗಳಲ್ಲೂ ಚೆನ್ನಾಗಿ ಕಾಯಬೇಕು. 5ರಿಂದ 6 ನಿಮಿಷ ಕಾಯಿಸಿದರೆ ಹೋಳಿಗೆ ಬೇಯುತ್ತದೆ. ಇಷ್ಟದರೆ ನಿಮ್ಮ ಮುಂದೆ ಕಾಯಿ ಹೋಳಿಗೆ ರೆಡಿಯಾಗುತ್ತದೆ. ಇದರ ರುಚಿ ನೋಡಬೇಕಾದರೆ ನೀವು ಸಹ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications