Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯಲ್ಲಿ ಕಡ್ಲೆಪುರಿ ಉಂಡೆ ಮಾಡೋದು ಹೇಗೆ? ತುಂಬಾ ಸಿಂಪಲ್ ರೆಸಿಪಿ
ನೀವು ಚಿಕ್ಕವರಿರುವಾಗ ಕಡ್ಲೆಪುರಿ ಉಂಡೆಯನ್ನ ಅಂಗಡಿಯಿಂದ ಖರೀದಿಸಿ ಸವಿದಿರಬಹುದು. ಈಗಲೂ ಕೆಲವು ಕಡೆ ಈ ಕಡ್ಲೆಪುರಿ ಉಂಡೆಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಸಿಹಿಯಾದ ಉಂಡೆ ಮಕ್ಕಳಿಗಂತು ಪಂಚಪ್ರಾಣ. ಹಳ್ಳಿಗಳಿಂದ ಹಿಡಿದು ದೊಡ್ಡ ದೊಡ್ಡ ಶಾಪಿಂಗ್ ಮಾಲ್‌ಗಳಲ್ಲಿ ಈ ಉಂಡೆಗಳು ಸಿಗುತ್ತಿದ್ದವು.
ಆದ್ರೆ ಇತ್ತೀಚಿನ ದಿನಗಳಲ್ಲಿ ಇವು ಕಾಣದಾಗಿದೆ. ಇಲ್ಲವೆ ಕೆಲವೇ ಕಲವು ಭಾಗದಲ್ಲಿ ಮಾತ್ರ ಕಾಣಸಿಗುತ್ತಿವೆ. ಆದರೆ ಇದರ ರುಚಿ ನೋಡಿದವರು ಮತ್ತೆ ಮತ್ತೆ ಹುಡುಕಿಕೊಂಡಿ ಹೋಗಿ ಸವಿಯಬೇಕು ಎನಿಸಿರುತ್ತದೆ. ಅಷ್ಟೊಂದು ರುಚಿ ಇದರದ್ದು, ಹಾಗಾದ್ರೆ ನಾವಿಂದು ಕಡ್ಲೆಪುರಿ ಉಂಡೆಯನ್ನು ಮನೆಯಲ್ಲಿ ಮಾಡುವುದು ಹೇಗೆ ಎಂಬುದನ್ನು ನೋಡೋಣ.

ಕಡ್ಲೆಪುರಿ ಉಂಡೆ ಮಾಡಲು ಬೇಕಾಗುವ ಪದಾರ್ಥಗಳೇನು? ಕಡ್ಲೆಪುರಿ ಉಂಡೆಯ ಪಾಕವಿಧಾನವೇನು? ಮಾಡಲು ಯಾವ ರೀತಿಯ ತಯಾರಿ ಮಾಡಿಕೊಳ್ಳಬೇಕು. ಈ ಕಡ್ಲೆಪುರಿ ಉಂಡೆ ಮಾಡಲು ಎಷ್ಟು ಸಮಯ ಹಿಡಿಯುತ್ತದೆ ಎಂಬ ಕುರಿತು ನಾವಿಂದು ತಿಳಿಯೋಣ.
ಕಡ್ಲೆ ಪುರಿ ಉಂಡೆ ಮಾಡಲು ಬೇಕಾಗುವ ಪದಾರ್ಥಗಳು
- ಕಡ್ಲೆಪುರಿ- 4 ಕಪ್
- ಬೆಲ್ಲ-1 ಕಪ್ (ಪುಡಿ ಮಾಡಿರುವುದು)
- ತುಪ್ಪ
ಕಡ್ಲೆಪುರಿ ಉಂಡೆ ಮಾಡುವ ಪಾಕವಿಧಾನ
ಮೊದಲು ಕಡ್ಲೆ ಪುರಿ ಹಾಗೂ ಬೆಲ್ಲವನ್ನು ಒಂದೇ ಅಳತೆಯ ಕಪ್‌ನಲ್ಲಿ ತೆಗೆದುಕೊಳ್ಳಬೇಕು. 4 ಕಪ್ ಕಡ್ಲೆ ಪುರಿ ತೆಗೆದುಕೊಂಡರೆ 1 ಕಪ್ ಬೆಲ್ಲ ತೆಗೆದುಕೊಳ್ಳಿ. ಈ ಬೆಲ್ಲವನ್ನು ಪಾತ್ರೆಯೊಂದಕ್ಕೆ ಹಾಕಿ ಸ್ವಲ್ಪ ನೀರು ಹಾಕಿ ಪಾಕ ಮಾಡಿಕೊಳ್ಳಿ. ಬೆಲ್ಲ ಕರಗುವವರೆಗೂ ಚೆನ್ನಾಗಿ ತಿರುಗಿಸುತ್ತಾ ಇರಿ.
ಇನ್ನು ಕಡ್ಲೆ ಪುರಿ ಗರಿಗರಿಯಾಗಿಲ್ಲದಿದ್ದರೆ ಅದನ್ನು ಪಾತ್ರೆಗೆ ಹಾಕಿ ಸ್ವಲ್ಪ ಕಾಯಿಸಿಕೊಳ್ಳಿ. ಬೆಲ್ಲದ ಪಾಕ ರೆಡಿಯಾದ ಬಳಿಕ ಅದಕ್ಕೆ ಸ್ವಲ್ಪ ತುಪ್ಪ ಹಾಕಿ ಮಿಶ್ರಣ ಮಾಡಿ. ಉರಿಯನ್ನು ಸಣ್ಣಗೆ ಮಾಡಿಟ್ಟುಕೊಂಡು ಅದಕ್ಕೆ ಕಡ್ಲೆ ಪುರಿಯನ್ನು ಹಾಕಿ ಚೆನ್ನಾಗಿ ತಿರುಗಿಸಿ. ಈ ವೇಳೆ ಜಾಸ್ತಿ ಹೊತ್ತು ಒಲೆಯಲ್ಲಿ ಇಡಬೇಡಿ. ತಕ್ಷಣ ಕೆಳಗೆ ಇಳಿಸಿಕೊಳ್ಳಿ. ಈಗ ಕೈಗೆ ನೀರು ಹಚ್ಚಿಕೊಂಡು ಬಿಸಿಯಾಗಿರುವಾಗಲೇ ಕಡ್ಲೆಪುರಿಯನ್ನು ಉಂಡೆ ಕಟ್ಟಲು ಮುಂದಾಗಿ
ಈ ಕಡ್ಲೆಪುರಿಯನ್ನು ತಣ್ಣಗಾಗಲು ಬಿಡಬೇಡಿ, ತಣ್ಣಗಾಗುವ ಮೊದಲೇ ಉಂಡೆ ಕಟ್ಟಿ ಇಡಿ. ಉಂಡೆ ಕಟ್ಟಿ ಇಟ್ಟ ಸುಮಾರು 6 ಬಳಿಕ ಬಳಿಕ ಸೇವಿಸಬಹುದು. ಬೇಗ ಸೇವಿಸಿದರೆ ಪಾಕ ಹಲ್ಲಿಗೆ ಹಿಡಿಯುತ್ತದೆ. ಇದನ್ನು 2 ಕ್ಕಿಂತ ಹೆಚ್ಚು ತಿಂಗಳ ಕಾಲ ಇಟ್ಟು ಸೇವಿಸಬಹುದು. ಎಷ್ಟು ದಿನ ಇಟ್ಟರು ಹಾಳಾಗುವುದಿಲ್ಲ.
ತೂಕ ನಷ್ಟಕ್ಕೆ ಕಡ್ಲೆಪುರಿ ಆರೋಗ್ಯಕರ ಪ್ರಯೋಜನಗಳು:-
ಪಫ್ಡ್ ರೈಸ್ (Puffed rice) ಭಾರತೀಯರ ಜನರು ಹೆಚ್ಚು ಇಷ್ಟಪಟ್ಟು ತಿನ್ನುವ ಆಹಾರಗಳಲ್ಲಿ ಒಂದಾಗಿದೆ. ಇದೊಂದು ಬಹುಮುಖ ತಿಂಡಿ. ಇದರಿಂದ ನಾನಾ ಬಗೆಯ ಮಸಾಲೆಯುಕ್ತ ಆಹಾರವನ್ನು ತಯಾರಿಸಬಹುದು. ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಕಡಿಮೆ ಕ್ಯಾಲೋರಿಗಳು: ಪಫ್ಡ್ ರೈಸ್ (15 ಗ್ರಾಂ) ಕೇವಲ 54 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದು ಚಿಪ್ಸ್ ಅಥವಾ ಕುಕೀಗಳಿಗೆ ಹೋಲಿಸಿದರೆ ಕಡಿಮೆ ಕ್ಯಾಲೋರಿ ತಿಂಡಿಯಾಗಿದೆ. ಇದು ನಿಮ್ಮ ಕ್ಯಾಲೋರಿ ಕೊರತೆಯನ್ನು ಹಳಿತಪ್ಪಿಸದೆ ಹಸಿವಿನ ಸಂಕಟವನ್ನು ನಿಗ್ರಹಿಸಲು ಉತ್ತಮ ಆಯ್ಕೆಯಾಗಿದೆ.
ರಕ್ತದಲ್ಲಿನ ಸಕ್ಕರೆ ಮಟ್ಟ ನಿರ್ವಹಿಸಲು ಸಹಾಯ: ಪಫ್ಡ್ ರೈಸ್‌ನಲ್ಲಿರುವ ಕಾರ್ಬೋಹೈಡ್ರೇಟ್‌ಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣ ಮಾಡುತ್ತವೆ. ಶಕ್ತಿ ಕುಸಿಯುವುದನ್ನು ತಡೆದು ತಿನ್ನುವ ಕಡುಬಯಕೆಗಳನ್ನು ತಡೆಯುತ್ತದೆ.
ಹೆಚ್ಚಿನ ಫೈಬರ್: ಪಫ್ಡ್ ರೈಸ್ ಆಹಾರದ ಫೈಬರ್‌ನ ಉತ್ತಮ ಮೂಲವಾಗಿದೆ. ಇದು ಕರುಳಿನ ಆರೋಗ್ಯ ಮತ್ತು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಫೈಬರ್ ನಿಮ್ಮ ಊಟಕ್ಕೆ ದೊಡ್ಡ ಪ್ರಮಾಣದಲ್ಲಿ ಸೇರಿಸುತ್ತದೆ. ಇದನ್ನು ತಿಂದರೆ ಹೆಚ್ಚು ಕಾಲ ಹೊಟ್ಟೆ ಪೂರ್ಣವಾಗಿರುವಂತೆ ಮಾಡುತ್ತದೆ.



Click it and Unblock the Notifications