Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಡಲೆ ಬೇಳೆ ಮಸಾಲ ಫ್ರೈ ಮನೆಯಲ್ಲೇ ಮಾಡಿ..! 5 ನಿಮಿಷಕ್ಕೆ ರೆಡಿ ಮಾಡಬಹುದು
ನೀವು ಮನೆಯಲ್ಲಿ ಸಂಜೆ ಸ್ನ್ಯಾಕ್ಸ್‌ಗೆ ಯಾವ ತಿಂಡಿ ಸವಿಯಲು ಇಷ್ಟಪಡುತ್ತೀರಿ? ಮನೆಯಲ್ಲಿ ಬೆಳಗ್ಗೆ ತಿಂಡಿ ತಿಂದರೆ ಮಧ್ಯಾಹ್ನದ ಊಟ ಬಳಿಕ ರಾತ್ರಿ ಊಟ ಮಾಡುವುದು ಕಾಮನ್, ಈ ನಡುವೆ ಸಮಯ ಸಿಕ್ಕಾಗ, ಟೀ ಕುಡಿಯುವಾಗ ನಾವು ಸ್ನ್ಯಾಕ್ಸ್ ಸವಿಯಲು ಮುಂದಾಗುತ್ತೇವೆ. ಟೀ ಜೊತೆ ಬಿಸ್ಕೇಟ್ ಇಲ್ಲವೆ ಬೇಕರಿ ತಿಂಡಿಗಳ ಸವಿಯುತ್ತೇವೆ.
ಆದ್ರೆ ಮನೆಯಲ್ಲಿ ಒಮ್ಮೆ ಇಂತಹ ಸ್ನ್ಯಾಕ್ಸ್ ಮಾಡಿ ಇಟ್ಟರೆ ಕೆಲವು ದಿನಗಳ ಕಾಲ ಇಟ್ಟು ಸವಿಯಬಹುದು. ಅದ್ರಲ್ಲೂ ಮನೆಗೆ ಯಾರಾದ್ರು ಅತಿಥಿಗಳು ಬಂದರೆ ಅವರಿಗೆ ನೀಡಲು ಈ ಸ್ನ್ಯಾಕ್ಸ್ ಒಳ್ಳೆಯ ತಿಂಡಿಯಾಗಲಿದೆ. ಆದ್ರೆ ಯಾವ ತಿಂಡಿ ಮಾಡುವುದು ಅನ್ನೋದೆ ಎಲ್ಲರ ಪ್ರಶ್ನೆಯಾಗಿರುತ್ತೆ.

ಹಾಗಾದ್ರೆ ನಾವಿಂದು ಸುಲಭವಾಗಿ 10 ನಿಮಿಷದ ಒಳಗೆ ಮಾಡಬಹುದಾದ ಸ್ನ್ಯಾಕ್ಸ್ ಕುರಿತು ನಾವಿಂದು ತಿಳಿದುಕೊಳ್ಳೋಣ. ಹಾಗಾದ್ರೆ ಸುಲಭವಾಗಿ ಮಾಡಬಹುದಾದ ಸ್ನ್ಯಾಕ್ಸ್‌ಗಳಲ್ಲಿ ಕಡಲೆ ಬೇಳೆ ಹುರಿದು ಸವಿಯುವುದು ಸಹ ಒಂದು. ಇದು ರುಚಿಯಲ್ಲಿ ಎತ್ತಿದ ಕೈ. ಮಾಡೋದು ಸಹ ತುಂಬಾನೆ ಸುಲಭ.
ಹಾಗಾದ್ರೆ ಇಂದು ಈ ಕಡಲೆ ಬೇಳೆ ಮಸಾಲ ಫ್ರೈ ಮಾಡೋದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯುತ್ತೆ ಎಂಬ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.
ಕಡಲೆ ಬೇಳೆ ಮಸಾಲ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು
- ಕಡಲೆ ಬೇಳೆ (4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಲು) - 200 ಗ್ರಾಂ
- ಚಾಟ್ ಮಸಾಲಾ ಪುಡಿ - 1/2 ಟೀಸ್ಪೂನ್
- ಖಾರದ ಪುಡಿ - 1/2 ಟೀಸ್ಪೂನ್
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಕಡಲೆ ಬೇಳೆ ಮಸಾಲ ಫ್ರೈ ಮಾಡುವುದು ಹೇಗೆ?
ಒಂದು ಕಪ್ ಕಲಡ ಬೇಳೆಯನ್ನು ಚೆನ್ನಾಗಿ ತೊಳೆದು ಅದನ್ನು 3ರಿಂದ 4 ಗಂಟೆ ನೆನೆಸಿಡಬೇಕು. ಬಳಿಕ ಈ ಬೇಳೆಯನ್ನ ಚೆನ್ನಾಗಿ ಒಣಗಿಸಿಕೊಳ್ಳಬೇಕು. ಹೀಗಾಗಿ ಒಂದು ಕಾಟನ್ ಬಟ್ಟೆಯಿಂದ ಒತ್ತಿ ಡ್ರೈ ಮಾಡಬೇಕು. ಇಲ್ಲವೆ ಫ್ಯಾನ್ ಕೆಳಗೆ ಒಣಗಿಸಿಕೊಳ್ಳಿ.
ಈಗ ಒಲೆ ಮೇಲೆ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಕಾಯಿಸಿಕೊಳ್ಳಿ. ಬಳಿಕ ಸ್ವಲ್ಪ ಸ್ವಲ್ಪ ಬೇಳೆಯನ್ನು ಎಣ್ಣೆಗೆ ಹಾಕಿಕೊಳ್ಳಿ. ಎಣ್ಣೆಯಲ್ಲಿ ನೊರೆ ಬರುವುದು ನಿಂತು ಬೇಳೆಗಳು ಎಣ್ಣೆಯ ಮೇಲೆ ತೇಲಬೇಕು. ಹೀಗಾದಾಗ ಕಡಲೆ ಬೇಳೆ ಎಣ್ಣೆಯಿಂದ ತೆಗೆಯಲು ಸಿದ್ಧವಾದಂತೆ.
ಎಣ್ಣೆಯಿಂದ ತೆಗೆದು ಅದರಲ್ಲಿರುವ ಎಣ್ಣೆ ಅಂಶ ಹೋಗುವಂತೆ ಮಾಡಬೇಕು. ಹೀಗಾಗಿ ಖಾಲಿ ಪೇಪರ್ ಮೇಲೆ ಹಾಕಿದರೂ ನಡೆಯುತ್ತದೆ. ಬಳಿಕ ಒಂದು ಬೌಲ್‌ಗೆ ಹಾಕಿಕೊಂಡು ಅದಕ್ಕೆ ಚಾಟ್ ಮಸಾಲ, ಉಪ್ಪು, ಖಾರದ ಪುಡಿ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಿಮಗೆ ಎಷ್ಟು ಖಾರ ಬೇಕೋ ಅಷ್ಟು ಹಾಕಿಕೊಳ್ಳಿ. ನಿಧಾನವಾಗಿ ಮಿಕ್ಸ್ ಮಾಡಿಕೊಂಡು ಒಂದು ಬಾಕ್ಸ್‌ಗೆ ಹಾಕಿಟ್ಟರೆ 20 ದಿನಕ್ಕೂ ಹೆಚ್ಚು ದಿನ ಇಟ್ಟು ಸವಿಯಬಹುದು. ಈ ಸ್ನ್ಯಾಕ್ಸ್ ಅನ್ನ ಟೀ -ಕಾಫಿ ಜೊತೆ ಸವಿಯಬಹುದು. ಇಲ್ಲವೆ ಅತಿಥಿಗಳು ಆಗಮಿಸಿದ್ರೆ ಈ ಸ್ನ್ಯಾಕ್ಸ್ ನೀಡಬಹುದು. ಇದು ಮನೆಯಲ್ಲಿ ಮಾಡಿರೋದ್ರಿಂದ ರುಚಿಯೂ ಹೆಚ್ಚು ಆರೋಗ್ಯಕ್ಕೂ ಉತ್ತಮ.



Click it and Unblock the Notifications