Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಥಟ್ ಅಂತ 5 ನಿಮಿಷದಲ್ಲಿ ಕಡಲೆ ಉಸ್ಲಿ ಮಾಡಿ..! ಮಾಡೋದು ಹೇಗೆ ಗೊತ್ತಾ?
ಬೆಳಗ್ಗೆ ಬ್ರೇಕ್‌ಫಾಸ್ಟ್ ಆರೋಗ್ಯಕರವಾಗಿ ಇರಬೇಕು ಎಂದು ಹಲವರು ಹೇಳುತ್ತಾರೆ. ಇದಕ್ಕಾಗಿ ಮಸಾಲೆ ಬಳಸಿದ ಬ್ರೇಕ್‌ಫಾಸ್ಟ್ ಮಾಡಲು ಇಷ್ಟಪಡುವುದಿಲ್ಲ. ಹೀಗಾಗಿ ಅಂತವರಿಗಾಗಿ ನಾವು ಕಡಲೆ ಕಾಳಿನ ಕೆಲವು ಬ್ರೇಕ್ ಫಾಸ್ಟ್ ಹೇಳಬಹುದು. ಅದರಲ್ಲೂ ಕಡಲೆ ಉಸ್ಲಿ ಆರೋಗ್ಯಕ್ಕೆ ಬಹಳ ಉತ್ತಮವಾಗಿರುವ ತಿಂಡಿಯಾಗಿದೆ. ಯಾಕಂದ್ರೆ ಇದರಿಂದ ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಪ್ರೋಟಿನ್‌ಗಳು ಸಿಗುತ್ತವೆ. ಹಾಗೆ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮವಾಗಿರುತ್ತೆ.
ಕಡಲೆ ಉಸ್ಲಿಯನ್ನು ಬೆಳಗ್ಗೆ ಮಾತ್ರವಲ್ಲ ಸಂಜೆ ವೇಳೆಯೂ ಮಾಡಬಹುದು. ಈ ಕಡಲೆ ಉಸ್ಲಿಯೂ ಹಲವರ ಇಷ್ಟದ ಖಾದ್ಯ ಆಗಿರುತ್ತೆ. ಏಕಂದರೆ ಅಷ್ಟೊಂದು ರುಚಿಕರವಾಗಿ ಇದನ್ನು ಮಾಡಬಹುದು. ಹಾಗೆ ಎಲ್ಲರಿಗೂ ಇದು ಆರೋಗ್ಯಕರ ಖಾದ್ಯ ಅನ್ನೋದ್ರಲ್ಲಿ ಅನುಮಾನವಿಲ್ಲ. ಹೀಗಾಗಿ ಎಲ್ಲರು ಇಷ್ಟಪಟ್ಟು ಸವಿಯಬಹುದಾದ ತಿಂಡಿಯಾಗಿದೆ.

ಹಾಗಾದ್ರೆ ನಾವಿಂದು ರುಚಿ ರುಚಿಯ ಈ ಕಡಲೆ ಉಸ್ಲಿ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಕಡಲೆ ಉಸ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕಾಗುತ್ತದೆ? ಹೇಗೆಲ್ಲಾ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕಡಲೆ ಉಸ್ಲಿ ಮಾಡಲು ಬೇಕಾಗುವ ಪದಾರ್ಥಗಳು
- ಕಡಲೆ ಕಾಳು
- ತೆಂಗಿನಕಾಯಿ ತುರಿ
- ಸಾಸಿವೆ
- ಜೀರಿಗೆ
- ಕಡಲೆ ಬೇಳೆ
- ಉದ್ದಿನ ಬೇಳೆ
- ಶುಂಠಿ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಹಸಿಮೆಣಸಿನಕಾಯಿ
- ನಿಂಬೆಹಣ್ಣಿನ ರಸ
- ಎಣ್ಣೆ
- ಉಪ್ಪು
ಕಡಲೆ ಉಸ್ಲಿ ಮಾಡುವುದು ಹೇಗೆ?
ಮೊದಲು ಹಿಂದಿನ ದಿನ ಕಡಲೆ ಕಾಳನ್ನು ಚೆನ್ನಾಗಿ ತೊಳೆದು ನೆನೆಸಿಡಬುದು, ಇಲ್ಲವೆ ಬೆಳಗ್ಗೆ ಬಿಸಿ ನೀರಿನಲ್ಲಿ 2 ಗಂಟೆ ನೆನೆಸಿಟ್ಟರೆ ಸಾಕಾಗುತ್ತದೆ. ಈಗ ಈ ಕಡಲೆ ಬೀಜವನ್ನು ಕುಕ್ಕರ್‌ಗೆ ಹಾಕಿ ಸ್ವಲ್ಪ ನೀರು, ಉಪ್ಪು ಹಾಕಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಸಿಕೊಳ್ಳಬೇಕು. 2 ಸೀಟಿ ಹೊಡೆದ ಬಳಿಕ ಕುಕ್ಕರ್ ಮುಚ್ಚಳ ತೆಗೆದು ಕಡಲೆ ಬೀಜವನ್ನು ಬೇರೆ ಎತ್ತಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಅದಕ್ಕೆ ಸಾಸಿವೆ, ಜೀರಿಗೆ, ಶುಂಠಿ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ 2 ನಿಮಿಷ ಫ್ರೈ ಮಾಡಿ. ಈಗ ಹಸಿ ಮೆಣಸು, ಕರಿಬೇವಿನ ಸೊಪ್ಪು ಹಾಕಿ 1 ನಿಮಿಷ ಮತ್ತೆ ಫ್ರೈ ಮಾಡಿಕೊಳ್ಳಿ.
ಇದಾದ ಬಳಿಕ ಒಲೆ ಆಫ್ ಮಾಡಿಕೊಂಡು ಬೇಯಿಸಿಕೊಂಡಿರುವ ಕೆಡಲೆ ಬೀಜವನ್ನು ಇದಕ್ಕೆ ಹಾಕಿಕೊಂಡು ಹಾಗೆ ತೆಂಗಿನಕಾಯಿ ತುರಿ, ನಿಂಬೆ ಹಣ್ಣಿನ ರಸ, ಕೊತ್ತಂಬರಿ ಸೊಪ್ಪು ಹಾಕಿ ತಿರುಗಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಕಡಲೆ ಕಾಳಿನ ಉಸ್ಲಿ ರೆಡಿಯಾಗುತ್ತದೆ. ಮಾಡುವುದು ಸಿಕ್ಕಾಪಟ್ಟೆ ಸುಲಭ ಹಾಗೆ ಆರೋಗ್ಯಕ್ಕೆ ಬಹಳ ಉತ್ತಮವಾದ ರೆಸಿಪಿ ಇದಾಗಿದೆ. ನೀವು ಕೂಡ ಮನೆಯಲ್ಲಿ ಈ ಉಸ್ಲಿ ಒಮ್ಮೆ ಟ್ರೈ ಮಾಡಿ ನೋಡಿ.
ಈ ಉಸ್ಲಿ ಮಾಡಲು ಹೆಚ್ಚಿನ ಪದಾರ್ಥಗಳು, ಸಮಯವೂ ಬೇಡ, ಕಡಿಮೆ ಸಮಯದಲ್ಲಿ ಮಾಡಬಹುದು, ಗಡಿಬಿಡಿಯ ಸಮಯದಲ್ಲಿ ಇದನ್ನು ಮಾಡಿದರೆ ಸಮಯವೂ ಉಳಿಯುತ್ತೆ. ರುಚಿಯೂ ಚೆನ್ನಾಗಿರುತ್ತೆ



Click it and Unblock the Notifications