Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಟ್ ಪಟ್ ಕಾಬುಲ್ ಮಸಾಲ ಕಡ್ಲೆ ಮಾಡಿ..! ಮಳೆಗಾಲಕ್ಕೆ ಒಂದೊಳ್ಳೆ ಸ್ನ್ಯಾಕ್ಸ್..!
ಮನೆಯಲ್ಲಿ ಅದ್ರಲ್ಲೂ ಮಳೆಗಾಲದಲ್ಲಿ ಏನಾದರು ತಿನ್ನುಲು ಇದ್ದರೆ ಟೀ ಕಾಫಿ ಜೊತೆ ಸವಿಯಲು ಬೊಂಬಾಟ್ ಆಗಿರುತ್ತೆ. ಹೀಗಾಗಿ ಮಳೆಗಾಲದಲ್ಲಿ ಬೇಕರಿ ತಿಂಡಿಗಳಿಗೆ ಇನ್ನಿಲ್ಲದ ಬೇಡಿಕೆ ಇರುತ್ತೆ. ಅದ್ರಲ್ಲೂ ಮಸಾಲೆ ಭರಿತ ಕಡ್ಲೆ, ಫ್ರೈ ಮಾಡಿದ ಕಡ್ಲೆಗಳು ಎಲ್ಲರಿಗೂ ಇಷ್ಟ ಆಗಿರುತ್ತೆ. ಆದ್ರೆ ಸ್ವಲ್ಪ ಆರೋಗ್ಯದ ಮೇಲೂ ಒಂದಿಷ್ಟು ಗಮನವಿಟ್ಟು ನೋಡಿದ್ರೆ ಈ ಕಾಬೂಲ್ ಕಡ್ಲೆ ಸವಿಯೋಕೆ ಸಿಕ್ಕಾಪಟ್ಟೆ ರುಚಿ ಇರುತ್ತೆ.
ಮಸಾಲೆ ಹಾಕಿರುವ ಕಾಬುಲ್ ಕಡ್ಲೆ ತಿನ್ನೋದು ಅಂದ್ರೆ ಬಾಯಿಗೊಂದು ಹಬ್ಬ. ಎಷ್ಟು ತಿಂದರೂ ಸಾಕಾಗುವುದೇ ಇಲ್ಲ. ಅಷ್ಟೊಂದು ರುಚಿಯ ಮತ್ತೊಂದು ಕಡ್ಲೆ ಸಿಗೋದಿಲ್ಲ. ಆದ್ರೆ ಕಾಬುಲ್ ಕಡ್ಲೆಯನ್ನ ಫ್ರೈ ಮಾಡಿ ಇಲ್ಲವ ಹುಸ್ಲಿ ಮಾಡಿ ಸವಿಯೋದೇ ಹೆಚ್ಚು. ಇದಕ್ಕಿಂತ ಕಾಬುಲ್ ಕಡ್ಲೆಯನ್ನ ಮಸಾಲೆ ಹಾಕಿ ಸವಿದರೆ ಅದರ ರುಚಿಯೇ ಬೇರೆ.

ಸಂಜೆ ಹೊತ್ತಲ್ಲಿ ಕಾಬುಲ್ ಕಡ್ಲೆ ಹಾಗೂ ಟಿ ಜೊತೆ ಸವಿಯೋದು ಅಂದ್ರೆ ರುಚಿಗೆ ಸರಿಸಾಟಿ ಇಲ್ಲ. ಆದ್ರೆ ಈ ಮಸಾಲೆ ಕಾಬುಲ್ ಕಡ್ಲೆಯ ಮಾಡೋದು ಕಷ್ಟ ಎಂದುಕೊಂಡಿದ್ದರೆ ನಿಮ್ಮ ಆಲೋಚನೆ ತಪ್ಪಾಗಿದೆ. ಬಹಳ ಸುಲಭವಾಗಿ ಕೆಲವೇ ವಸ್ತುಗಳ ಬಳಸಿ ಈ ಸ್ನ್ಯಾಕ್ಸ್ ಮಾಡಬಹುದು. ಹಾಗಾದ್ರೆ ಬೇಕರಿ ರುಚಿಯ ಮಸಾಲೆ ಕಾಬುಲ್ ಕಡ್ಲೆ ಮಾಡುವುದು ಹೇಗೆ ಎಂಬುದನ್ನು ನಾವಿಂದು ನೋಡೋಣ.
ಮಸಾಲೆ ಕಾಬುಲ್ ಕಡ್ಲೆ ಮಾಡಲು ಬೇಕಾಗುವ ಪದಾರ್ಥಗಳು
- ಕಾಬುಲ್ ಕಡ್ಲೆ- 1 ಬೌಲ್/100 ಗ್ರಾಮ್
- ಎಣ್ಣೆ
- ಉಪ್ಪು
- ಜೀರಿಗೆ ಪುಡಿ-ಕಾಲು ಚಮಚ
- ಕೊತ್ತಂಬರಿ ಪುಡಿ-ಕಾಲು ಚಮಚ
- ಚಾಟ್ ಮಸಾಲೆ ಪುಡಿ-ಕಾಲು ಚಮಚ
- ಬ್ಲಾಕ್ ಸಾಲ್ಟ್-ಕಾಲು ಚಮಚ
- ಖಾರದ ಪುಡಿ-ಕಾಲು ಚಮಚ
- ಅರಶಿನ -ಕಾಲು ಚಮಚ
- ಕರಿಮೆಣಸಿನ ಪುಡಿ- ಕಾಲು ಚಮಚ
ಮಸಾಲೆ ಕಾಬುಲ್ ಕಡ್ಲೆ ಮಾಡೋದು ಹೇಗೆ?
ಕಾಬೂಲ್ ಕಡಲಯೆನ್ನ ಹಿಂದಿನ ದಿನವೇ ಒಂದು ಬೌಲ್‌ಗೆ ಹಾಕಿ ನೆನೆಸಿಡಬೇಕು. ಮಾರನೆ ದಿನ ಬೆಳಗ್ಗೆ ನೀರು ತೆಗೆದು ಕಡ್ಲೆಯನ್ನ ಬದಿಗೆ ಇಡಿ. ನಂತರ ಕಡ್ಲೆಯನ್ನ ಕುಕ್ಕರ್‌ಗೆ ಹಾಕಿ ನೀರು ಹಾಕಿ ಒಂದು ಸೀಟಿ ಹೊಡೆಯಲು ಬಿಟ್ಟು ಕುಕ್ಕರ್ ಆಫ್ ಮಾಡಿ. ಬಳಿಕ ಕುಕ್ಕರ್ ಗ್ಯಾಸ್ ಖಾಲಿಯಾಗಲು ಬಿಡಿ.
ಈಗ ಕಾಬುಲ್ ಕಡಲೆಯಲ್ಲಿ ಸ್ವಲ್ಪವೂ ನೀರಿಲ್ಲದಂತೆ ಬಸಿದುಕೊಳ್ಳಿ. ನಂತರ ಒಂದು ತಟ್ಟೆಯಲ್ಲಿ ಹಾಕಿ ಬಿಸಿಲಿನಲ್ಲಿ ಒಂದು ಗಂಟೆ ಒಣಗಲು ಬಿಡಿ. ನಂತರ ಗಟ್ಟಿಯಾಗಿರುವ ಕಾಬೂಲ್ ಕಡ್ಲೆಯನ್ನ ಫ್ರೈ ಮಾಡಿಕೊಳ್ಳಬೇಕು.
ಈಗ ಒಲೆ ಮೇಲೆ ಎಣ್ಣೆ ಇಟ್ಟು ಎಣ್ಣೆ ಕಾದ ಬಳಿಕ ಅದಕ್ಕೆ ಕಾಬುಲ್ ಕಡ್ಲೆಯನ್ನ ಹಾಕಿಕೊಂಡು ಕರಿದುಕೊಳ್ಳಿ. ಮಧ್ಯಮ ಉರಿಯಲ್ಲಿ ನಿಧಾನವಾಗಿ 10 ನಿಮಿಷಗಳ ಕಾಲ ಕರಿದುಕೊಳ್ಳಬೇಕು. ಕಾಬುಲ್ ಕಡ್ಲೆ ಕರಿದು ಬಣ್ಣ ಬದಲಾದಾಗ ಒಲೆ ಆಫ್ ಮಾಡಿಕೊಳ್ಳಿ. ಈಗ ಇದಕ್ಕೆ ಮಸಾಲೆ ಹಾಕಿಕೊಳ್ಳಬೇಕು.
ಈಗ ಒಂದು ಬೌಲ್‌ನಲ್ಲಿ ಕರಿದ ಕಡ್ಲೆ ತೆಗೆದುಕೊಂಡು ಅದಕ್ಕೆ ಉಪ್ಪು, ಜೀರಿಗೆ
ಪುಡಿ, ಕೊತ್ತಂಬರಿ ಪುಡಿ, ಚಾಟ್ ಮಸಾಲೆ ಪುಡಿ, ಬ್ಲಾಕ್
ಸಾಲ್ಟ್, ಖಾರದ ಪುಡಿ, ಕರಿಮೆಣಸಿನ ಪುಡಿ, ಅರಶಿನ ಹಾಕಿಕೊಂಡು ಚೆನ್ನಾಗಿ ಮಿಕ್ಸ್
ಮಾಡಿಕೊಳ್ಳಿ. ಮಸಾಲೆ ಹಾಕಿ ಕಲಸಿದ ಬಳಿಕ ತಣ್ಣಗಾಗಲು ಬಿಟ್ಟು ಬಳಿಕ ಯಾವುದಾದರು
ಡಬ್ಬಿಯೊಳಗೆ ಹಾಕಿ ಇಡಬೇಕು.
ಇದನ್ನು ಒಂದು ತಿಂಗಳ ಕಾಲ ಸಹ ಇಟ್ಟು ಸವಿಯಬಹುದು. ಅದ್ರಲ್ಲೂ ಮಳೆ ಬೀಳುವ ಹೊತ್ತಲ್ಲಿ ಕೈಯಲ್ಲಿ ಟೀ ಜೊತೆ ಈ ಕಾಬುಲ್ ಕಡ್ಲೆ ಇದ್ದರೆ ಅದರ ರುಚಿಯೇ ಬೇರೆ. ನೀವು ಸಹ ಒಮ್ಮೆ ಮನೆಯಲ್ಲೀ ಈ ಮಸಾಲೆ ಕಡ್ಲೆ ಮಾಡಿ ನೋಡಿ.



Click it and Unblock the Notifications