Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ಬೆಳಗ್ಗೆ ತಿಂಡಿಗೆ ಜೀರಿಗೆ ರೈಸ್ ಮಾಡಿ ನೋಡಿ..! 10 ನಿಮಿಷದಲ್ಲಿ ರೆಡಿ..!
ಬೆಳಗ್ಗೆ ತಿಂಡಿಗೆ ನೀವು ಯಾವ ತಿಂಡಿ ಮಾಡಬೇಕು ಅಂದುಕೊಳ್ತೀರಿ. ನಿಮ್ಮ ಮುಂದೆ ಕೆಲವೇ ಕೆಲವು ವಿಧದ ತಿಂಡಿ ಮಾತ್ರ ನೆನಪಿಗೆ ಬರುತ್ತೆ. ಅದರಲ್ಲೂ ನಿಮಗೆ ರೈಸ್ ಐಟಂ ಮಾಡಬೇಕು ಅಂದ್ರೆ ಪಲಾವ್, ಚಿತ್ರಾನ್ನ, ವಾಂಗೀಬಾತ್, ಬಿಸಿ ಬೇಳೆ ಬಾತ್, ಹೀಗೆ ಒಂದಿಷ್ಟು ಐಟಂಗಳು ನೆನಪಿಗೆ ಬರಬಹುದು.
ಬೆಳಗ್ಗೆ ಎದ್ದಾಗ ಇಂದು ತಿಂಡಿಗೆ ಏನು ಮಾಡುವುದು ಎಂಬುದು ಬಹುದೊಡ್ಡ ಪ್ರಶ್ನೆಯಾಗಿರುತ್ತೆ. ಆದ್ರೆ ಎಷ್ಟು ನೆನಪು ಮಾಡಿದರೂ ಏನು ಮಾಡಬೇಕು? ಯಾವ ವಸ್ತು ಇದೆ ಎಂದು ತಿಳಿಯುವುದಿಲ್ಲ ಆದ್ರೆ ಸುಲಭವಾಗಿ ನೀವು ಜೀರಿಗೆ ರೈಸ್ ಮಾಡಲು ಇಚ್ಛಿಸಿದ್ದರೆ ನಾವಿಂದು ಅದರ ಬಗ್ಗೆ ತಿಳಿದುಕೊಳ್ಳೋಣ.

ಆದ್ರೆ ಯಾವಾಗಲು ಇದನ್ನೇ ಮಾಡಿ ಸವಿಯಲು ನಿಮಗೆ ಬೋರ್ ಎನಿಸಬಹುದು. ಹೀಗಿದ್ದಾಗ ನೀವೇವಾದರು ಹೊಸದೊಂದು ರೆಸಿಪಿ ಮಾಡಲು ಹೊರಟಿದ್ದರೆ ಈ ರೆಸಿಪಿ ನಿಮಗಾಗಿದೆ. ನೀವು ಬೆಳಗ್ಗೆ ಜೀರಿಗೆ ರೈಸ್ ಮಾಡಿ ಸವಿಯಬಹುದು. ಜೀರಿಗೆ ರೈಸ್ ಆರೋಗ್ಯಕ್ಕೂ ಉತ್ತಮ. ಹೀಗಾಗಿ ನೀವು ಒಮ್ಮೆ ಈ ಜೀರಿಗೆ ರೈಸ್ ಮಾಡಿ ನೋಡಿ.
ಹಾಗಾದ್ರೆ ಈ ಜೀರಿಗೆ ರೈಸ್ ಮಾಡೋದು ಹೇಗೆ? ಜೀರಿಗೆ ರೈಸ್ ಮಾಡಲು ಬೇಕಾಗುವ ಪದಾರ್ಥಗಳೇನು?, ಜೀರಿಗೆ ರೈಸ್ ಮಾಡಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ನೋಡಿ. ಬೆಳಗ್ಗೆಯ ತಿಂಡಿಗೆ ಈ ಜೀರಿಗೆ ರೈಸ್ ಮಾಡೋದು ತುಂಬಾನೆ ಸುಲಭ. ಕೆಲವೇ ನಿಮಷದಲ್ಲಿ ಜೀರಿಗೆ ರೈಸ್ ಮಾಡಬಹುದು. ಜೊತೆಗೆ ರುಚಿಯೂ ತುಂಬಾನೆ ಚೆನ್ನಾಗಿರುತ್ತದೆ.
ಜೀರಿಗೆ ರೈಸ್ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ - 1 ಕಪ್
- ಹಸಿಮೆಣಸು - 3
- ಜೀರಿಗೆ - 1 ಟೀಸ್ಪೂನ್
- ಏಲಕ್ಕಿ - 2
- ಕೊತ್ತಂಬರಿ ಸೊಪ್ಪು
- ಶುಂಠಿ
- ಪಲಾವ್ ಎಲೆ - 2
- ಚಕ್ಕೆ
- ತುಪ್ಪ/ ಎಣ್ಣೆ
- ಉಪ್ಪು
ಜೀರಿಗೆ ರೈಸ್ ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ತುಪ್ಪ ಹಾಕಿ ಅಥವಾ ಎಣ್ಣೆ ಸಹ ಹಾಕಿಕೊಳ್ಳಬಹುದು. ಅದಕ್ಕೆ ಏಲಕ್ಕಿ, ಲವಂಗ, ಪಲಾವ್ ಎಲೆ, ಚಕ್ಕೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಇದಕ್ಕೆ ಹಸಿ ಮೆಣಸು, ಶುಂಠಿ, ಜೀರಿಗೆ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಬಳಿಕ ಇದಕ್ಕೆ ಅಕ್ಕಿಯನ್ನು ಹಾಕಿ 1 ನಿಮಿಷ ಫ್ರೈ ಮಾಡಿ. ಬಳಿಕ ಅದೇ ಅಳತೆಯಲ್ಲಿ ನೀರು ಹಾಕಿಕೊಳ್ಳಬೇಕು. 1 ಕಪ್ ಅಕ್ಕಿಗೆ 2 ಕಪ್ ನೀರಿನಂತೆ ಹಾಕಿಕೊಳ್ಳಿ. ಬಳಿಕ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಕುದಿಯಲು ಬಿಡಿ. 15ರಿಂದ 20 ನಿಮಿಷ ಸಣ್ಣ ಉರಿಯಲು ಬೇಯಲು ಬಿಡಿ.
ಇದಾದ ಬಳಿಕ ಮುಚ್ಚಳ ತೆಗೆದು ಜೀರಿಗೆ ರೈಸ್ ಅನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಜೀರಿಗೆ ರೈಸ್ ಸವಿಯಲು ಸಿದ್ಧವಾಗಿರುತ್ತದೆ. ಇದನ್ನು ಚಟ್ನಿ, ಮೊಸರು ಬಜ್ಜಿ ಜೊತೆಯೂ ಸವಿಯಬಹುದು. ಮಾಡೋದು ತುಂಬಾನೆ ಸುಲಭ ಜೊತೆಗೆ ಸಮಯವೂ ಉಳಿತಾಯವಾಗಲಿದೆ. ನೀವು ಸಹ ಒಮ್ಮೆ ಟ್ರೈ ಮಾಡಿ ನೋಡಿ. ಬೆಳಗ್ಗೆಯ ತಿಂಡಿಗೆ ಹಾಗೂ ಟಿಫನ್ ಬಾಕ್ಸ್ಗೂ ಇದನ್ನು ಬಳಸಬಹುದು.
ಇದನ್ನು ನೀವು ಕುಕ್ಕರ್ನಲ್ಲೂ ಮಾಡಬಹುದು. ಅಳತೆಗೆ ಸರಿಯಾಗಿ ನೀರು ಇಟ್ಟು ಕುಕ್ಕರ್ನಲ್ಲಿಟ್ಟು ಮೂರು ಸೀಟಿ ಹೊಡೆಸಿದರೆ ಜೀರಿಗೆ ರೈಸ್ ರೆಡಿಯಾಗುತ್ತದೆ. ಆದರೆ ಪಾತ್ರೆಯಲ್ಲಿ ಮಾಡುವುದರಿಂದ ಇದು ತಳ ಹಿಡಿಯುವುದಿಲ್ಲ. ಇನ್ನು ಈ ರೈಸ್ ಮಾಡಲು ಬಾಸುಮತಿ ರೈಸ್ ಇದ್ದರೆ ಇದರ ರುಚಿ ಇನ್ನಷ್ಟು ಹೆಚ್ಚಾಗುತ್ತದೆ, ಇಲ್ಲದಿದ್ದರೆ ನೀವು ಮನೆಯಲ್ಲಿಯೇ ಬಳಸುವ ಸಾಮಾನ್ಯ ಅಕ್ಕಿಯನ್ನೇ ಬಳಸಿ.



Click it and Unblock the Notifications