Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಳೆಗಾಲಕ್ಕೆ ಜೀರಿಗೆ ಕಾಳು ಮೆಣಸಿನ ಸಾರು..! ಮಾಡೋದು ತುಂಬಾನೆ ಸಿಂಪಲ್!
ಮಳೆಗಾಲ ಆರಂಭಗೊಂಡಿದೆ. ಮಳೆಗಾಲದ ಆರಂಭ ಎಂದರೆ ಸಣ್ಣ ಪುಟ್ಟ ಕಾಯಿಲೆಗಳ ಸಮಯ. ಅಂದ್ರೆ ಶೀತ, ಕೆಮ್ಮು, ಗಂಟಲು ನೋವು ಈ ರೀತಿ ಹವಾಮಾನ ಬದಲಾವಣೆಯಿಂದಾಗುವ ಕಾಯಿಲೆಗಳು ಸಾಮಾನ್ಯ. ಅದರ ಜೊತೆಗೆ ಸಾವು ಸೇವಿಸುವ ಆಹಾರವು ಸಹ ನಮ್ಮ ಅನಾರೊಗ್ಯಕ್ಕೆ ಕಾರಣವಾಗಬಹುದು. ಜೊತೆಗೆ ಇಂತಹ ಸಣ್ಣ ಪುಟ್ಟ ಕಾಯಿಲೆಗೆ ಆಹಾರದಲ್ಲೇ ಪರಿಹಾರೂ ಸಹ ಇದೆ.
ಅದ್ರಲ್ಲೂ ಕೆಮ್ಮು, ಶೀತ, ಗಂಟಲು ನೋವು ಸೇರಿದಂತೆ ಮಳೆಗಾಲದ ಈ ತಣ್ಣನೆಯ ವಾತಾವರಣಕ್ಕೆ ಬಿಸಿಬಿಸಿಯ ಆಹಾರಗಳು ಮಜಾ ನೀಡಲಿವೆ. ಅದರಲ್ಲೂ ಜೀರಿಗೆ ಮತ್ತು ಮೆಣಸಿನ ಸಾರು ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮ. ಏಕೆಂದರೆ ಮಳೆಗಾಲದಲ್ಲಿ ನಿಮಗೆ ತಣ್ಣನೆಯ ವಾತಾವರಣದ ಕಾರಣ ಅನಾರೋಗ್ಯ ಕಾಡಬಹುದು. ಆದರೆ ಈ ಜೀರಿಗೆ ಮೆಣಸಿನ ಸಾರು ಇದಕ್ಕೆ ಪರಿಹಾರ ನೀಡಬಹುದು.

ಜೀರಿಗೆ ಮತ್ತು ಮೆಣಸು ಹಲವು ಆರೋಗ್ಯಕರ ಅಂಶಗಳ ತನ್ನಲ್ಲಿಟ್ಟುಕೊಂಡಿದೆ. ಹಲವು ಖಾದ್ಯದಲ್ಲೂ ಈ ಜೀರಿಗೆ ಮೆಣಸು ಬಳಸುತ್ತಾರೆ. ಹಾಗಾದ್ರೆ ನಾವಿಂದು ಜೀರಿಗೆ ಮೆಣಸಿನಿಂದ ಮಾಡುವ ಮೆಣಸಿನ ಸಾರಿನ ಕುರಿತು ತಿಳಿದುಕೊಳ್ಳೋಣ. ಆದ್ರೆ ಜೀರಿಗೆ ಮೆಣಸು ಎಂಬ ಮೆಣಸಿನ ಒಂದೂ ವಿಧವೂ ಇದೆ. ಆದ್ರೆ ನಾವಿಂದು ಹೇಳ ಹೊರಟಿರೋದು ಜೀರಿಗೆ ಮತ್ತು ಒಣ ಮೆಣಸು ಹಾಕಿ ಮಾಡುವ ಸಾರು.
ಜೀರಿಗೆ ಮೆಣಸಿನ ಸಾರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮೆಣಸಿನ ಸಾರು ಮಾಡುವುದು ಹೇಗೆ? ಜೀರಿಗೆ ಮೆಣಸಿನ ಸಾರು ಮಾಡುವ ವಿಧಾನವೇನು ಎಂಬುದನ್ನು ನಾವಿಂದು ನೋಡೋಣ.
ಜೀರಿಗೆ ಮೆಣಸಿನ ಸಾರು ಮಾಡಲು ಬೇಕಾಗುವ ಪದಾರ್ಥಗಳು
- ಈರುಳ್ಳಿ - 1/2
- ಜೀರಿಗೆ - 1 tbs
- ಮೆಣಸು - 3/4 tbs
- ಬೆಳ್ಳುಳ್ಳಿ
- ತುರಿದ ತೆಂಗಿನಕಾಯಿ - 1 ಕಪ್
- ಹುಣಸೆಹಣ್ಣು
- ಸಾಂಬಾರ್ ಪುಡಿ - 1 tbs
- ಅರಿಶಿನ ಪುಡಿ
- ಕೊತ್ತಂಬರಿ ಸೊಪ್ಪು
- ಎಣ್ಣೆ - 1 ಟೀಸ್ಪೂನ್
- ತುಪ್ಪ - 1 tbs
- ಸಾಸಿವೆ
- ಕರಿಬೇವು
- ಮೆಣಸಿನಕಾಯಿ - 2
- ರುಚಿಗೆ ಉಪ್ಪು
ಜೀರಿಗೆ ಮೆಣಸಿನ ಸಾರು ಮಾಡುವ ವಿಧಾನ
ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಒಂದು ಈರುಳ್ಳಿ ಕತ್ತರಿಸಿ ಹಾಕಿಕೊಳ್ಳಿ. ಇದಕ್ಕೆ ಜೀರಿಗೆ, ಕಾಳು ಮೆಣಸು, ಬೆಳ್ಳುಳ್ಳಿ, ಕಾಯಿತುರಿ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. 2 ನಿಮಿಷ ಫ್ರೈ ಮಾಡಿದ ಬಳಿಕ ಒಲೆ ಆಫ್ ಮಾಡಿ ಇಳಿಸಿಕೊಳ್ಳಿ.
ಇದು ತಣ್ಣಗಾದ ಬಳಿಕ ಮಿಕ್ಸಿ ಜಾರ್‌ಗೆ ಹಾಕಿಕೊಂಡು ಅದಕ್ಕೆ ಅರಶಿಣ, ಹುಣಸೆ ಹುಳಿ, ಖಾರದ ಪುಡಿ, ಸಾಂಬಾರ್ ಪುಡಿ, ನೀರು ಹಾಕಿಕೊಂಡು ತರಿ ತರಿಯಾಗಿ ರುಬ್ಬಿಕೊಳ್ಳಿ. ಈಗ ಅದಕ್ಕೆ ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತೆ ನುಣ್ಣಗೆ ರುಬ್ಬಿಕೊಳ್ಳಿ.
ಈಗ ಒಲೆ ಮೇಲೆ ಪಾತ್ರೆ ಇಟ್ಟು ಅದಕ್ಕೆ ತುಪ್ಪು, ಸಾಸಿವೆ, ಕರಿಬೇವು, ಮೆಣಸು, ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ಬಳಿಕ ಇದಕ್ಕೆ ನುಣ್ಣಗೆ ರುಬ್ಬಿಕೊಂಡಿರುವ ಮಸಾಲೆಯನ್ನು ಇದಕ್ಕೆ ಹಾಕಿ. ಬಳಿಕ ನೀರು ಸಹ ಹಾಕಿಕೊಂಡು ಚೆನ್ನಾಗಿ ತಿರುಗಿಸಿಕೊಳ್ಳಿ. ಬಳಿಕ ಇದಕ್ಕೆ ಉಪ್ಪು ಹಾಕಿಕೊಳ್ಳಿ;. ಈಗ ಕುದಿಯಲು ಬಿಡಿ.
ಚೆನ್ನಾಗಿ ಕುದಿ ಬಂದ ಬಳಿಕ ಟೇಸ್ಟ್ ನೋಡಿಕೊಂಡು ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ಜೀರಿಗೆ ಕಾಳು ಮೆಣಸಿನ ಸಾರು ರೆಡಿಯಾಗಿರುತ್ತೆ. ಇದನ್ನು ಊಟಕ್ಕೆ ಹಾಕಿಕೊಂಡು ಸವಿದರೆ ಅದರ ರುಚಿಯೇ ಬೇರೆ. ಜೊತೆಗೆ ಆರೋಗ್ಯಕ್ಕೂ ಬಹಳ ಒಳ್ಳೆಯದು.



Click it and Unblock the Notifications