Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಲಸಿನ ಬೀಜದ ಸಾಂಬಾರ್ ಹೀಗೆ ಮಾಡಿ ನೋಡಿ..! ಎಂತಹ ರುಚಿ ಇದು!
ಊಟದ ಜೊತೆಗೆ ಸಾಂಬಾರ್ ಮಾಡಿ ಸವಿಯುವುದು ಕಾಮನ್. ಬೇಳೆ ಸಾಂಬಾರ್ ಅಂದರೆ ಬಹುತೇಕರಿಗೆ ಇಷ್ಟವಾಗುತ್ತೆ. ಹಾಗೆ ಎಲ್ಲರಿಗೂ ಸಾಂಬಾರ್ ಇದ್ದತೆ ಊಟದ ರುಚಿ ಮತ್ತಷ್ಟು ಹೆಚ್ಚಾಗೋದು ನೋಡಬಹುದು. ಹಾಗೆ ವಿಶೇಷ ಸಾಂಬಾರ್‌ಗಳನ್ನು ಮಾಡಿಯೂ ನೀವು ಸವಿದಿರುತ್ತೀರಿ. ಅದರಲ್ಲೂ ವಿಭಿನ್ನ ತರಕಾರಿಗಳ ಬಳಸಿಕೊಂಡು ಈ ಸಾಂಬಾರ್ ಮಾಡಿದರೆ ರುಚಿಯೂ ಅದ್ಭುತವಾಗಿರುತ್ತೆ.
ಆದ್ರೆ ನಾವಿಂದು ಸುಲಭವಾಗಿ ಹಾಗೆ ವಿಶೇವಾಗಿ ಹಲಸಿನ ಹಣ್ಣಿನ ಬೀಜದಿಂದ ಮಾಡುವ ಸಾಂಬಾರ್ ಕುರಿತು ತಿಳಿದುಕೊಳ್ಳೋಣ. ಹಲಸಿನ ಹಣ್ಣು ಸವಿದ ಬಳಿಕ ಉಳಿಯುವ ಬೀಜವು ಸಾಂಬಾರ್ ಮಾಡಲು ಅದ್ಭುತ ವಸ್ತು. ಈಗ ಮಾರುಕಟ್ಟೆಯಲ್ಲಿ ಹಲಸಿ ಹಣ್ಣುಗಳು ಸಿಗುತ್ತಿವೆ. ಹಾಗೆ ಮರಗಳಲ್ಲೂ ಹಲಸಿನ ಹಣ್ಣಗಳಾಗಿವೆ. ಅದರ ಬೀಜದಿಂದ ಅದ್ಭುತ ರುಚಿಯ ಈ ಬೇಳೆ ಸಾಂಬಾರ್ ಮಾಡಬಹುದು.

ಹಲಸಿನ ಹಣ್ಣಿನ ಬೀಜವನ್ನು ಒಣಗಿಸಿ ಅದರನ್ನು ಸಾಂಬಾರ್‌ಗೆ ಬಳಸುತ್ತಾರೆ. ಹಾಗೆ ಅದನ್ನು ಬೇಯಿಸಿ ಕೂಡ ಸಾಂಬಾರ್ ಮಾಡಿ ಸವಿಯುತ್ತಾರೆ. ಈ ರುಚಿ ರುಚಿಯ ಹಲಸಿನ ಬೀಜದ ಸಾಂಬಾರ್ ಮಾಡುವ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ. ಹಲಸಿನ ಹಣ್ಣಿನ ಬೀಜದ ಸಾಂಬಾರ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳ ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹಲಸಿನ ಹಣ್ಣಿನ ಬೀಜದಿಂದ ಸಾಂಬಾರ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಹಲಸಿನ ಹಣ್ಣಿನ ಬೀಜ
- ಬೇಳೆ
- ಟೊಮೆಟೋ
- ಎಣ್ಣೆ
- ಉಪ್ಪು
- ಹಸಿ ಮೆಣಸು
- ಖಾರದ ಪುಡಿ
- ದನಿಯಾ ಪುಡಿ
- ಸಾಂಬಾರ್ ಪುಡಿ
- ಹುಣಸೆ ಹುಳಿ
- ಹಸಿ ಶುಂಠಿ
- ಬೆಳ್ಳಳ್ಳಿ
- ಸಾಸಿವೆ
- ಜೀರಿಗೆ
- ಕರಿಬೇವು
- ಕೊತ್ತಂಬರಿ
- ತೆಂಗಿನಕಾಯಿ ತುರಿ
- ಇಂಗು
ಹಲಸಿನ ಹಣ್ಣಿನ ಬೀಜದಿಂದ ಸಾಂಬಾರ್ ಮಾಡುವುದು ಹೇಗೆ?
ಮೊದಲು ಹಲಸಿನ ಬೀಜಗಳ ತೊಳೆದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಂದು ಕುಕ್ಕರ್‌ನಲ್ಲಿ ಬೇಳೆ ಹಾಕಿ ಅದಕ್ಕೆ ಟೊಮೆಟೋ, ನೀರು, ಎಣ್ಣೆ, ಹಾಕಿಕೊಂಡು 3 ಸೀಟಿ ಹೊಡೆಯಲು ಬಿಡಿ. ಈಗ ಹಲಸಿನ ಬೀಜದ ಸಿಪ್ಪೆಯನ್ನು ತೆಗೆದು ಇಟ್ಟುಕೊಳ್ಳಿ. ಒಮ್ಮೆ ಹಲಸಿನ ಬೀಜವನ್ನು ಜಜ್ಜಿ ಅದರ ಸಿಪ್ಪೆ ತೆಗೆದಿಟ್ಟುಕೊಳ್ಳಿ.
ಈಗ ಸೀಟಿ ಹೊಡೆದ ಕುಕ್ಕರ್ ಮುಚ್ಚಳ ತೆಗೆದು ಅದಕ್ಕೆ ಹಲಸಿನ ಬೀಜ, ಖಾರದ ಪುಡಿ, ಉಪ್ಪು, ಈರುಳ್ಳಿ, ಸಾಂಬಾರ್ ಪುಡಿ, ಹುಣಸೆ ಹುಳಿ ಹಾಕಿ ಮಿಕ್ಸ್ ಮಾಡಿಕೊಂಡು ಬಳಿಕ ಇದಕ್ಕೆ ಹಸಿ ಶುಂಠಿ ತುರಿ, ಬೆಳ್ಳುಳ್ಳಿ ಹಾಕಿ ಮುಚ್ಚಳ ಹಾಕಿ 1 ಸೀಟಿ ಹೊಡೆಯಲು ಬಿಡಿ. 1 ಸೀಟಿ ಹೊಡೆದ ಬಳಿಕ ಮುಚ್ಚಳ ತೆಗೆದು ಮತ್ತೆ ಕುದಿಯಲು ಬಿಡಿ.
ಈಗ ಇದಕ್ಕೆ ಹಸಿ ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಮತ್ತೆ ಕುದಿಯಲು ಬಿಡಿ. ಕೊನೆಯದಾಗಿ ಹಲಸಿನ ಬೀಜ ಬೆಂದಿದೆಯೇ ಎಂಬುದನ್ನು ತೆಗೆದು ನೋಡಿ. ಗಟ್ಟಿಯಾಗಿದ್ದರೆ ಸ್ವಲ್ಪ ಹೊತ್ತು ಕುದಿಸಿಕೊಳ್ಳಿ. ಹಾಗೆ ಬೆಳೆ ಬಳಸುವುದರಿಂದ ಸಾಂಬಾರ್ ಗಟ್ಟಿಯಾಗಬಹುದು. ಹೀಗಾಗಿ ನೀರು ಬೇಕಿದ್ದರೆ ಹಾಕಿ.
ಈಗ ಮತ್ತೊಂದು ಕಡೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ, ಸಾಸಿವೆ, ಜೀರಿಗೆ, ಒಣ ಮೆಣಸು, ಇಂಗು, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಂಡು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಹಲಸಿನ ಬೀಜದ ಸಾಂಬಾರ್ ರೆಡಿಯಾಗುತ್ತದೆ. ನೀವು ಕೂಡ ಮಾಡಿ ನೋಡಿ. ಇದು ಊಟ ತಿಂಡಿ ಮುದ್ದೆಯ ಜೊತೆಗೆ ಒಂದೊಳ್ಳೆ ರುಚಿ ನೀಡಲಿದೆ.



Click it and Unblock the Notifications