Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬ್ರಾಹ್ಮಣ ಶೈಲಿಯ ಅಯ್ಯಂಗಾರ್ ಪುಳಿಯೋಗರೆ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
ಬೆಳಗ್ಗೆ ತಿಂಡಿಗೆ ಪುಳಿಯೋಗರೆ ನಿಮ್ಮ ನಿಚ್ಚಿನ ಖಾದ್ಯ ಆಗಿರಬಹುದು. ಆದರೆ ಒಂದೇ ರೀತಿಯ ಖಾದ್ಯ ಅಲ್ಲ ಬದಲಿಗೆ ನಿಮ್ಮ ಮನೆಯಲ್ಲಿ ಅಯ್ಯಂಗಾರ್ ಶೈಲಿಯ ಪುಳಿಯೋಗರೆ ಮಾಡಿದ್ರೆ ಅದರ ರುಚಿಯೆ ಬೇರೆ. ಪುಳಿಯೋಗರೆಗೆ ಒಂದಿಷ್ಟು ವಸ್ರು ಹಾಕದಿದ್ದರೂ ಖಾದ್ಯ ರೆಡಿ ಮಾಡಬಹುದು.
ಆದರೆ ವಿಭಿನ್ನವಾಗಿ ಮಾಡಬೇಕಾದರೆ ಅದಕ್ಕೆ ವಿಶೇಷ ವಸ್ತುಗಳ ಸೇರಿಸಿದರೆ ವಿಭಿನ್ನ ರುಚಿ ತರಲಿದೆ. ಆದರೆ ಅಯ್ಯಂಗಾರ್ ಶೈಲಿಯ ಪುಳಿಯೋಗರೆ ಎಲ್ಲ ಕಡೆಯೂ ಫೇಮಸ್, ಅಯ್ಯಂಗಾರ್ ಪುಳಿಯೋಗರೆ ನೀಡಲೆಂದೆ ಹೋಟೆಲ್‌ಗಳು, ಕ್ಯಾಂಟಿನ್‌ಗಳಿವೆ. ಇದೊಂದು ಅದ್ಭುತ ರುಚಿಯ ಖಾದ್ಯ ಎನ್ನಬಹುದು.

ಹಾಗಾದ್ರೆ ಬೇರೆಲ್ಲಾ ಪುಳಿಯೋಗರೆಗಿಂತ ಈ ಅಯ್ಯಂಗಾರ್ ಪುಳಿಯೋಗರೆ ವಿಶೇಷ ಹೇಗೆ? ಪುಳಿಯೋಗರೆ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು. ಯಾವೆಲ್ಲಾ ವಸ್ತುಗಳನ್ನು ಹಾಕಿದರೆ ವಿಶೇಷ ಪುಳಿಯೋಗರೆ ಎನಿಸಲಿದೆ ಎಂಬುದನ್ನು ನೋಡೋಣ.
ಅಯ್ಯಂಗಾರ್ ಶೈಲಿಯ ಪುಳಿಯೋಗರೆ ಮಾಡಲು ಬೇಕಾಗುವ ವಸ್ತುಗಳು
- ಅನ್ನ- 1 ಬೌಲ್
- ಬೆಲ್ಲ
- ಹುಣಸೆ ಹುಳಿ
- ಸಾಸಿವೆ
- ಜೀರಿಗೆ
- ಒಣ ಮೆಣಸು
- ಕರಿಮೆಣಸು
- ಕರಿಬೇವು
- ನೆಲ ಕಡಲೆ
- ಮೆಂತ್ಯ
- ಉದ್ದು
- ಅರಶಿಣ
- ಇಂಗು
- ಎಣ್ಣೆ
- ಉಪ್ಪು
ಅಯ್ಯಂಗಾರ್ ಶೈಲಿಯ ಪುಳಿಯೋಗರೆ ಮಾಡುವುದು ಹೇಗೆ?
ಮೊದಲು ಒಂದು ಬೌಲ್‌ನಲ್ಲಿ ಹುಣಸೆ ಹುಳಿಯನ್ನು ಹಾಕಿ ಚೆನ್ನಾಗಿ ಕಲಸಿಕೊಂಡು ಹುಳಿಯನ್ನು ಮಾಡಿಕೊಳ್ಳಬೇಕು ಬಳಿಕ ಅದಕ್ಕೆ ಬೆಲ್ಲ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಬೆಲ್ಲ ಕರಗಬೇಕಾದರೆ ಚೆನ್ನಾಗಿ ಕಲಿಸಿಕೊಳ್ಲಿ ಇಲ್ಲವೆ ಒಲೆ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಕಾಯಲು ಒಲೆ ಮೇಲೆ ಇಟ್ಟುಕೊಳ್ಳಿ. ಇನ್ನೊಂದು ಕಡೆ ಪುಳಿಯೋಗರೆಗೆ ಬೇಕಾದ ಮಸಾಲೆಗಳ ಮಾಡಿಕೊಳ್ಳಿ.
ಇದಾದ ಬಳಿಕ ಒಂದು ಪಾತ್ರೆಯಲ್ಲಿ ಕೊತ್ತಂಬರಿ ಬೀಜವನ್ನು ಹಾಕಿ ಹುರಿದುಕೊಳ್ಳಿ. ಬಳಿಕ ಕೊತ್ತಂಬರಿ ಬೀಜ ತೆಗೆದು ಬದಿಗಿಟ್ಟು ಕೊಂಡು ಅದೇ ಪಾತ್ರೆಗೆ ಉದ್ದು ಹಾಕಿ ಹುರಿದುಕೊಂಡು ತೆಗೆದಿಡಿ, ಬಳಿಕ ಮೆಂತ್ಯೆ, ಕರಿಮೆಣಸು, ಜೀರಿಗೆ ಹಾಕಿಕೊಂಡು ಫ್ರೈ ಮಾಡಿಕೊಂಡು ತೆಗೆದಿಟ್ಟುಕೊಳ್ಳಿ.
ಬಳಿಕ ಎಳ್ಳು ಹುರಿದು ಬದಿಗಿಡಿ, ನಂತರ ಒಣ ಮೆಣಸು ಸಹ ಹಾಕಿಕೊಂಡು ಹುರಿದು ಬದಿಗೆ ಇಟ್ಟುಕೊಳ್ಳಿ. ನಂತರ ಈವರೆಗೆ ಹುರಿದುಕೊಂಡ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಒಂದು ಮಿಕ್ಸಿ ಜಾರ್‌ಗೆ ಹಾಕಿ ಅದನ್ನು ರುಬ್ಬಿಕೊಳ್ಳಿ. ಪುಡಿ ನುಣ್ಣಗೆ ಆಗುವಂತೆ ರುಬ್ಬಿಕೊಳ್ಳಿ ರುಬ್ಬಿಕೊಳ್ಳಿವಾಗ ಒಂದು ಚಿಟಿಕೆ ಇಂಗು ಸಹ ಹಾಕಿಕೊಳ್ಳಿ.
ಹೀಗೆ ಪುಡಿ ಮಾಡಿಕೊಂಡ ಎಲ್ಲಾ ಮಸಾಲೆಯನ್ನು ಈಗ ಒಲೆ ಮೇಲೆ ಇಟ್ಟಿರುವ ಹುಳಿ ಹಾಗೂ ಬೆಲ್ಲದ ಪಾಕಕ್ಕೆ ಜಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಳ್ಳಿ. ಹೀಗೆ ಚೆನ್ನಾಗಿ ತಿರುಗಿಸುವಾಗ ಅದಕ್ಕೆ 2 ಸ್ಪೂನ್ ಎಣ್ಣೆಯನ್ನೂ ಸಹ ಹಾಕಿಕೊಳ್ಳಿ.
ಇಷ್ಟಾದರೆ ಇದು ಪುಳಿಯೋಗರೆ ಮಿಕ್ಸ್ ಆಗಿರುತ್ತದೆ. ಅದನ್ನು ಹಾಗೆ ಇಟ್ಟು. ಈಗ ಇನ್ನೊಂದು ಪಾತ್ರೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿಕೊಳ್ಳಿ. ಬಳಿಕ ಅದಕ್ಕೆ ಸಾಸಿವೆ, ಕಡಲೆ ಬೇಳೆ, ನೆಲಗಡಲೆ, ಕರಿಬೇವು, ಒಣ ಮೆಣಸು, ಅರಶಿನ, ಹಾಕಿ ಗೊಜ್ಜು ಮಾಡುವ ರೀತಿ ಮಾಡಿಕೊಂಡು ಈಗ ಅದನ್ನು ಒಲೆ ಮೇಲೆ ಮಾಡಿಕೊಂಡಿರುವ ಪೇಸ್ಟ್‌ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಬಳಿಕ ಒಂದು ತಟ್ಟೆಯಲ್ಲಿ ಅನ್ನ ತೆಗೆದುಕೊಂಡು ಅದಕ್ಕೆ ಈ ಮಿಕ್ಸ್ ಮಾಡಲಾದ ಪುಳಿಯೋಗರೆ ಗೊಜ್ಜನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ನಿಮ್ಮ ಮುಂದೆ ಅಯ್ಯಂಗಾರ್ ಶೈಲಿಯ ರುಚಿಕರ ಪುಳಿಯೋಗರೆ ರೆಡಿ.



Click it and Unblock the Notifications