ರುಚಿ ರುಚಿಯ ತೊಂಡೆಕಾಯಿ ಮಸಾಲ ಗ್ರೇವಿ ಮಾಡಿ..! ಅದ್ಭುತ ರುಚಿಯ ಗ್ರೇವಿ ಇದು!

Posted By:

ತೊಂಡೆಕಾಯಿಯಿಂದ ಎಷ್ಟೆಲ್ಲಾ ಅದ್ಭುತ ಖಾದ್ಯಗಳ ಮಾಡಬಹುದು ಎಂಬುದನ್ನು ನೀವಿ ತಿಳಿದಿರುತ್ತೀರಿ. ತೊಂಡೆಕಾಯಿಯ ಸಾಂಬಾರ್, ಚಟ್ನಿ, ಪಲ್ಯ ಊಟದ ರುಚಿಯನ್ನೇ ಬದಲಿಸಿ ಮತ್ತಷ್ಟು ಸವಿಯುವಂತೆ ಮಾಡುತ್ತವೆ. ತೊಂಡೆಕಾಯಿಯ ಪಲ್ಯವಂತು ಎಲ್ಲರ ಅಚ್ಚುಮೆಚ್ಚಿನ ಖಾದ್ಯ. ಅದರಲ್ಲೂ ಕಾಯಿ ಒಗ್ಗರಣೆ ಹಾಕಿ,

ಮಾಡಿದ ಪಲ್ಯ ಸವಿಯಲು ಬಹಳ ರುಚಿಯಾಗಿರುತ್ತೆ. ಈ ರೀತಿ ಹೆಚ್ಚಾಗಿ ಮದುವೆ ಮನೆಯಲ್ಲಿ ಮಾಡುವುದು ನಾವೆಲ್ಲಾ ನೋಡಿರುತ್ತೇವೆ. ಹಾಗೆ ತೊಂಡೆಕಾಯಿಯ ಪ್ರತಿಯೊಂದು ಖಾದ್ಯವೂ ಕೂಡ ನಮಗೆ ಬಹಳ ಇಷ್ಟವಾಗುತ್ತೆ. ಆದ್ರೆ ನಾವಿಂದು ತೊಂಡೆಕಾಯಿಯ ಮಸಾಲ ಕರಿ ಮಾಡುವ ಕುರಿತು ತಿಳಿದುಕೊಳ್ಳೋಣ. ತೊಂಡೆಕಾಯಿ ಮಸಾಲೆ ಗ್ರೇವಿ ಅದ್ಭುತ ರುಚಿ ನೀಡಲಿದೆ.

How To Make Ivy Gourd Masala Curry At Home In Kannada

ಅದರಲ್ಲೂ ಯಾವುದೇ ತಿಂಡಿ ಇದ್ದರೂ ಇದು ರುಚಿ ಅದ್ಭುತವಾಗಿರುತ್ತೆ. ಚಪಾತಿ, ದೋಸೆ, ಇಡ್ಲಿ, ಊಟಕ್ಕೆ ಈ ತೊಂಡೆಕಾಯಿ ಮಸಾಲೆ ಗ್ರೇವಿ ರುಚಿಕರವಾಗಿರುತ್ತೆ. ಹೀಗಾಗಿ ನಾವಿಂದು ಈ ಸ್ಪೆಷಲ್ ಖಾದ್ಯ ಮಾಡುವ ಕುರಿತು ತಿಳಿದುಕೊಳ್ಳೋಣ. ತೊಂಡೆಕಾಯಿ ಮಸಾಲೆ ಗ್ರೇವಿ ಮಾಡುವುದು ಹೇಗೆ? ಈ ಗ್ರೇವಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ನೋಡೋಣ.

ತೊಂಡೆಕಾಯಿ ಗ್ರೇವಿ ಮಾಡಲು ಬೇಕಾಗುವ ಪದಾರ್ಥಗಳೇನು?

  • ತೊಂಡೆಕಾಯಿ-250 ಗ್ರಾಂ
  • ಕಡಲೆ ಬೀಜ
  • ಗೋಡಂಬಿ
  • ದಾಲ್ಚಿನ್ನಿ
  • ಲವಂಗ
  • ಏಲಕ್ಕಿ
  • ಬಿಳಿ ಎಳ್ಳು
  • ಗಸಗಸೆ
  • ಒಣ ಕೊಬ್ಬರಿ
  • ಸೋಂಪು
  • ಪಲಾವ್ ಎಲೆ
  • ಈರುಳ್ಳಿ-2
  • ಟೊಮೆಟೊ-2
  • ಶುಂಠಿ ಬೆಳ್ಳುಳ್ಳಿ ಪೇಸ್ಟ್
  • ಅರಿಶಿನ ಪುಡಿ
  • ಖಾರದ ಪುಡಿ
  • ಧನಿಯಾ ಪುಡಿ
  • ಕೊತ್ತಂಬರಿ ಸೊಪ್ಪು
  • ಅಡುಗೆ ಎಣ್ಣೆ
  • ರುಚಿಗೆ ಉಪ್ಪು

ತೊಂಡೆಕಾಯಿ ಗ್ರೇವಿ ಮಾಡುವ ವಿಧಾನವೇನು?

ಮೊದಲು ತೊಂಡೆಕಾಯಿಯ ಎರಡು ಬದಿಯಲ್ಲಿ ಕತ್ತರಿಸಿಕೊಂಡು ನೀವು ಮಧ್ಯಕ್ಕೆ ಸೀಳಿಕೊಂಡು ಎರಡು ಭಾಗವಾಗಿ ಕತ್ತರಿಸಿಕೊಂಡು ಇಟ್ಟುಕೊಳ್ಳಿ. ಈಗ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಕಡಲೆ ಬೀಜ ಹಾಕಿ 1 ನಿಮಿಷ ಹುರಿದುಕೊಂಡು ಬಳಿಕ ಚಕ್ಕೆ, ಲವಂಗ, ಏಲಕ್ಕಿ ಹಾಕಿಕೊಂಡು ಹಿರಿದುಕೊಳ್ಳಿ. ನಂತರ ಇದಕ್ಕೆ ಬಿಳಿ ಎಳ್ಳು, ಗಸೆಗಸೆ ಹಾಕಿಕೊಳ್ಳಿ.

ಸಣ್ಣ ಉರಿಯಲ್ಲಿ ಇಟ್ಟು ನಂತರ ಇದಕ್ಕೆ ಕೊಬ್ಬರಿ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಈಗ ಒಲೆ ಮೇಲೆ ಮತ್ತೊಂದು ಪಾತ್ರೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಹೆಚ್ಚಿಕೊಂಡಿರುವ ತೊಂಡೆಕಾಯಿಯನ್ನು ಅದಕ್ಕೆ ಹಾಕಿ ಮುಚ್ಚಳ ಮುಚ್ಚಿ ರೋಸ್ಟ್ ಮಾಡಿ. 2 ನಿಮಿಷ ಬೇಯಿಸಿದರೆ ಸಾಕಾಗುತ್ತದೆ. ನಂತರ ಆ ಪಾತ್ರೆಯಿಂದ ಎಲ್ಲಾ ತೊಂಡೆಕಾಯಿ ತೆಗೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.

ನಂತರ ಅದೇ ಪಾತ್ರೆಗೆ ಸೋಂಪು, ಪಲಾವ್ ಎಲೆ, ಈರುಳ್ಳಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಅನಂತರ ಟೊಮಟೋ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಆಗಲು ಬಿಡಿ. ಈಗ ಒಂದು ಮಿಕ್ಸಿ ಜಾರ್‌ ತೆಗೆದುಕೊಂಡು ಮೊದಲು ಫ್ರೈ ಮಾಡಿರುವ ಮಸಾಲೆಗಳನ್ನು ಇದಕ್ಕೆ ಹಾಕಿ ಪುಡಿ ಪುಡಿ ಆಗುವಂತೆ ರುಬ್ಬಿಕೊಳ್ಳಿ. ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ.

ಅನಂತರ ಈ ರುಬ್ಬಿದ ಮಸಾಲೆಯನ್ನು ಬದಿಗಿಟ್ಟುಕೊಳ್ಳಿ. ಈಗ ಒಲೆ ಮೇಲೆ ಫ್ರೈ ಆಗುತ್ತಿರುವ ವಸ್ತುಗಳಿಗೆ ಮತ್ತೆ ಖಾರದ ಪುಡಿ, ಅರಶಿಣ, ಉಪ್ಪು ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ರುಬ್ಬಿರುವ ಮಸಾಲೆ ಪೇಸ್ಟ್ ಅನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ತಳ ಹಿಡಿಯಲು ಬಿಡಬೇಡಿ. ಒಂದು ನಿಮಿಷ ಮಿಕ್ಸ್ ಮಾಡಿದ ಬಳಿಕ ರೋಸ್ಟ್ ಮಾಡಿದ ತೊಂಡೆಕಾಯಿಯನ್ನು ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ತೆಳುವಾಗಿ ಬೇಕಾದರೆ ಇದಕ್ಕೆ ಅರ್ಧ ಗ್ಲಾಸ್ ನೀರು ಹಾಕಿಕೊಂಡು ಕುದಿಯಲು ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿಕೊಳ್ಳಿ.

ಇಷ್ಟಾದರೆ ನಿಮ್ಮ ಮುಂದೆ ಅದ್ಭುತ ರುಚಿಯ ತೊಂಡೆಕಾಯಿ ಮಸಾಲ ಗ್ರೇವಿ ರೆಡಿಯಾಗುತ್ತೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಮಾಡಿ ನೋಡಿ.

[ of 5 - Users]
Story first published: Sunday, January 5, 2025, 7:15 [IST]
X
Desktop Bottom Promotion