Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಊಟಕ್ಕೆ ಅದ್ಭುತ ರುಚಿಯ ತೊಂಡೆಕಾಯಿ ರೋಸ್ಟ್ ಫ್ರೈ ಮಾಡಿ..! ಸರಳವಾಗಿ 5 ನಿಮಿಷದಲ್ಲಿ ಮಾಡಬಹುದು!
ಮನೆಯಲ್ಲಿ ಊಟಕ್ಕೆ ನೀವು ಚಟ್ನಿ, ಪಲ್ಯದಂತೆ ಏನಾದರು ಒಂದು ಪದಾರ್ಥ ಇದ್ದರೆ ಉಟದ ರುಚಿ ಅದ್ಭುತವಾಗುತ್ತೆ. ಹೀಗಾಗಿ ದಿನಾಲು ನಾವು ಒಂದೊಂದು ಖಾದ್ಯ ಮಾಡಿ ಸವಿಯುವುದು ಕಾಮನ್. ಹಾಗೆ ಉಪ್ಪಿನಕಾಯಿಯಂತೆ ಊಟದ ಜೊತೆಗೆ ಏನಾದರು ಸ್ಪೆಷಲ್ ಖಾದ್ಯ ಇದ್ದರೆ ಊಟದ ರುಚಿ ಮತ್ತಷ್ಟು ಹೆಚ್ಚುತ್ತದೆ. ಇಂತಹ ಖಾದ್ಯಗಳಲ್ಲಿ ನಾವು ಹಲವು ರೀತಿ ತರಕಾರಿಯ ರೋಸ್ಟ್ ಮಾಡಿ ಸವಿದರೆ ಊಟಕ್ಕೆ ಮತ್ತಷ್ಟು ರುಚಿ ಬರಲಿದೆ.
ಅದರಲ್ಲೂ ನಾವು ಬೆಂಡೆಕಾಯಿ ರೋಸ್ಟ್, ಮೆಣಸಿನಕಾಯಿ, ಎಣ್ಣೆಯಲ್ಲಿ ಹುರಿದ ಮೆಣಸು, ಹಪ್ಪಳ ಹೀಗೆ ಏನಾದರು ಒಂದು ಖಾದ್ಯ ಮಾಡಿಯೇ ಮಾಡುತ್ತೇವೆ. ಇನ್ನು ಮಧ್ಯಾಹ್ನದ ಊಟ ಹಾಗೆ ರಾತ್ರಿ ಊಟಕ್ಕೆ ನಾವಿಂದ ತೊಂಡೆಕಾಯಿಯ ರೋಸ್ಟ್ ಮಾಡಿ ಸವಿಯೋಣ. ತೊಂಡೆಕಾಯಿಯಲ್ಲಿ ಪಲ್ಯ, ಕರಿ, ಸಾಂಬಾರ್ ಮಾಡಿ ಸವಿದಿರುತ್ತೇವೆ. ಅದೇ ರೀತಿ ಇಂದು ರೋಸ್ಟ್ ಮಾಡಿ ಸವಿಯೋಣ.

ಊಟದ ಜೊತೆಗೆ ಈ ತೊಂಡೆಕಾಯಿ ರೋಸ್ಟ್ ಮಾಡಿದ್ರೆ ಊಟದ ರುಚಿ ಕೂಡ ಹೆಚ್ಚಾಗುತ್ತೆ. ಇದನ್ನು ಮಾಡುವುದು ಕೂಡ ತುಂಬಾನೆ ಸುಲಭ. ಹಾಗಾದ್ರೆ ಈ ರೋಸ್ಟ್ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಈ ತೊಂಡೆಕಾಯಿ ರೋಸ್ಟ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ತೊಂಡೆಕಾಯು ರೋಸ್ಟ್ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತೊಂಡೆಕಾಯಿ ರೋಸ್ಟ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ತೊಂಡೆಕಾಯಿ
- ಸಾಸಿವೆ
- ಬೆಳ್ಳುಳ್ಳಿ
- ಈರುಳ್ಳಿ
- ಒಣ ಮೆಣಸು
- ಕರಿಬೇವು
- ಅರಿಶಿನ ಪುಡಿ
- ಕೆಂಪು ಮೆಣಸಿನ ಪುಡಿ
- ಕೊತ್ತಂಬರಿ ಪುಡಿ
- ಗರಂ ಮಸಾಲ ಪುಡಿ
- ಕೊತ್ತಂಬರಿ ಸೊಪ್ಪು
- ಉಪ್ಪು
- ಎಣ್ಣೆ
ತೊಂಡೆಕಾಯಿ ರೋಸ್ಟ್ ಮಾಡುವ ವಿಧಾನವೇನು?
ತಂಡೆಕಾಯಿಯನ್ನು ಚೆನ್ನಾಗಿ ತೊಳೆದು ನಂತರ ಒಂದು ತೊಂಡೆಕಾಯಿಯಲ್ಲಿ 5ರಿಂದ 6 ಪೀಸ್‌ಗಳು ಬರುವಂತೆ ಸಿಳಿಕೊಳ್ಳಬೇಕು. ನಂತರ ಒಂದು ಬೌಲ್‌ಗೆ ಹಾಕಿಕೊಂಡು ಇದಕ್ಕೆ ಸ್ವಲ್ಪ ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಹೀಗೆ ಕಲಸಿಕೊಳ್ಳುವಾಗ ನೊರೆ ನೊರೆಯಾಗಿ ನೋಳೆ ಬರುತ್ತದೆ. ಹೀಗಾಗಿ ಮತ್ತೆ ನೀರು ಹಾಕಿಕೊಂಡು ಮತ್ತೆ ತೊಳೆದುಕೊಳ್ಳಬೇಕು. 4ರಿಂದ 5 ಬಾರಿ ಚೆನ್ನಾಗಿ ನೀರು ಹಾಕಿಕೊಂಡು ತೊಳೆದುಕೊಳ್ಳಿ.
ಅನಂತರ ನೀರು ತೆಗೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಅದಕ್ಕೆ ಸಾವಿವೆ ಹಾಕಿಕೊಳ್ಳಿ. ಹಾಗೆ ಬೆಳ್ಳುಳ್ಳಿ, ಸಣ್ಣದಾಗಿ ಹೆಚ್ಚಿಕೊಂಡಿರುವ ಒಂದು ಈರುಳ್ಳಿಯನ್ನು ಕೂಡ ಹಾಕಿಕೊಳ್ಳಿ. ಹಾಗೆ 3 ಒಣಮೆಣಸು ಮಧ್ಯದಲ್ಲಿ ಕತ್ತರಿಸಿಕೊಂಡು ಹಾಕಿಕೊಳ್ಳಿ. ಹಾಗೆ ಕರಿವೇವು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
1 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಹೆಚ್ಚಿಕೊಂಡಿರುವ ತೊಂಡೆಕಾಯಿಯನ್ನು ಇದಕ್ಕೆ ಹಾಕಿಕೊಳ್ಳಬೇಕು. ಇದು ಫ್ರೈ ಆಗುವಾಗ ಉಪ್ಪು ಹಾಕಿಕೊಳ್ಳಿ. 2 ನಿಮಿಷ ಫ್ರೈ ಮಾಡಿದ ಬಳಿಕ ಅರಶಿಣ, ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ ಕೂಡ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಮತ್ತೆ 3 ನಿಮಿಷ ಫ್ರೈ ಮಾಡಿಕೊಳ್ಳಿ. ಅನಂತರ ಉರಿ ಸಣ್ಣ ಮಾಡಿ ಮುಚ್ಚಳ ಮುಚ್ಚಿ 5 ನಿಮಿಷ ಬೇಯಲು ಬಿಡಿ. 5 ನಿಮಿಷದ ಬಳಿಕ ಮುಚ್ಚಳ ತೆಗೆದು ಕೊನೆಯದಾಗಿ ಕೊತ್ತಂಬರಿ ಸೊಪ್ಪನ್ನು ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ತೊಂಡೆಕಾಯಿ ರೋಸ್ಟ್ ಫ್ರೈ ರೆಡಿಯಾಗುತ್ತದೆ. ನೀವು ಕೂಡ ಊಟಕ್ಕೆ ಈ ರೀತಿಯ ರೋಸ್ಟ್ ಮಾಡಿ ನೋಡಿ. ರುಚಿ ಅದ್ಭುತವಾಗಿರುತ್ತೆ.



Click it and Unblock the Notifications