Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅರ್ಧ ಗಂಟೆಯ ಇಡ್ಲಿ; ನೆನೆಸುವ ಅಗತ್ಯವಿಲ್ಲ, ಹಿಟ್ಟು ರುಬ್ಬೋದು ಬೇಡ!
ಬೆಳಗ್ಗೆ ತಿಂಡಿಗೆ ನೀವು ಹಲವು ಬಗೆಯ ಖಾದ್ಯಗಳ ಮಾಡಿ ಸವಿಯುವ ಆಲೋಚನೆಯಲ್ಲಿರುತ್ತೀರಿ. ಅಂದ ಹಾಗೆ ಬೆಳಗ್ಗೆ ತಿಂಡಿಗೆ ಇಡ್ಲಿ ಮಾಡಿ ಸವಿಯುವ ನಿಮ್ಮ ಆಸೆ ಯಾವಾಗಲು ಈಡೇರಿಸಿಕೊಳ್ಳುವಿರಿ. ಇಡ್ಲಿ ಅಂದ್ರೆ ಎಲ್ಲರಿಗೂ ಇಷ್ಟವಾಗುವ ಖಾದ್ಯ. ಅದ್ರಲ್ಲೂ ಕಡಿಮೆ ಎಣ್ಣೆ ಬಳಸಿಕೊಂಡು ಮಾಡುವುದರಿಂದ ಆರೋಗ್ಯಕ್ಕೂ ಸಹ ಇದು ಬಹಳ ಉತ್ತಮ.
ಆದ್ರೆ ಇಡ್ಲಿ ಅಂದ್ರೆ ಹಿಂದಿನ ದಿನವೇ ಅದಕ್ಕೆ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಹಲವರು ಇಡ್ಲಿ ಮಾಡುವ ಬದಲಾಗಿ ಬೇರೆ ಬೇರೆ ಖಾದ್ಯಗಳ ಮಾಡಿ ಸವಿಯೋದನ್ನು ಇಷ್ಟಪಡುತ್ತಾರೆ. ಆದ್ರೆ ನೀವು ಥಟ್ ಅಂತ ಅರ್ಧ ಗಂಟೆಯಲ್ಲಿ ಇಡ್ಲಿ ಮಾಡಿ ಸವಿಯಬಹುದು ಎಂಬುದು ನಿಮಗೆ ಗೊತ್ತಾ? ಇಡ್ಲಿಯಲ್ಲಿನ ಹಲವು ಬಗೆಯಲ್ಲಿ ಈ ವಿಧಾನದಲ್ಲಿ ಇಡ್ಲಿಯನ್ನು ಅರ್ಧ ಗಂಟೆಯಲ್ಲಿ ಮಾಡಿ ಸವಿಯಬಹುದು.

ಹಾಗಾದ್ರೆ ಸುಲಭವಾಗಿ ಅರ್ಧ ಗಂಟೆಯಲ್ಲಿ ರವೆ ಬಳಸಿಕೊಂಡು ಈ ಇಡ್ಲಿಯನ್ನು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಇನ್ಸ್ಟಂಟ್ ಇಡ್ಲಿ ಮಾಡುವ ವಿಧಾನವೇನು? ರವೆ ಇಡ್ಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ರವೆ ಇಡ್ಲಿ ಮಾಡಲು ಬೇಕಾಗುವ ಪದಾರ್ಥಗಳು
- ರವೆ
- ಸೋಡಾ
- ಎಣ್ಣೆ
- ಮೊಸರು
- ಉಪ್ಪು
ರವೆ ಇಡ್ಲಿ ಮಾಡುವ ಸುಲಭದ ವಿಧಾನವೇನು?
ಮೊದಲಿಗೆ ಅಳತೆ ಕಪ್ನಲ್ಲಿ 2 ಕಪ್ ರವೆ ತೆಗೆದುಕೊಳ್ಳಿ. ಇದು ಉಪ್ಪಿಟ್ಟು ರವೆ ಆಗಿರಲಿ. ಇದನ್ನು ಬಾಣಲೆಗೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. 2 ನಿಮಿಷ ಹುರಿದುಕೊಂಡರೆ ಸಾಕಾಗುತ್ತದೆ. ಉಪ್ಪಿಟ್ಟಿಗೆ ಹುರಿಯುವಷ್ಟು ಹುರಿದುಕೊಳ್ಳುವ ಅಗತ್ಯವಿಲ್ಲ. ಅನಂತರ ಇದನ್ನು ಒಂದು ಪ್ಲೇಟ್ಗೆ ಹಾಕಿಕೊಂಡು ತಣ್ಣಗಾಗಲು ಬಿಡಬೇಕು.
ಈಗ ಬೌಲ್ಗೆ ಈ ರವೆ ಹಾಕಿ ಅದಕ್ಕೆ 1 ಕಪ್ ಮೊಸರು ಸೇರಿಸಿಕೊಂಡು 1 ಕಪ್ ನೀರು ಸಹ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಉಪ್ಪು ಸೇರಿಸಿ ಕಾಲು ಕಪ್ ನೀರು ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು. ಇದು ಗಟ್ಟಿಯಾಗಿ ಬರಬೇಕು. ನಂತರ ಮುಚ್ಚಳ ಮುಚ್ಚಿ ಅರ್ಧ ಗಂಟೆ ಹಿಟ್ಟನ್ನು ನೆನೆಯಲು ಬಿಡಬೇಕು. ಈ ಸಮಯದಲ್ಲಿ ನೀವು ಇಡ್ಲಿಗೆ ಬೇಕಾಗುವ ಚಟ್ನಿ ಮಾಡಿಕೊಳ್ಳಬಹುದು.
ಈಗ ಇಡ್ಲಿ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಗಟ್ಟಿಯಾಗಿದ್ದರೆ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಚಿಟಿಕೆ ಸೋಡಾ ಸಹ ಸೇರಿಸಿಕೊಂಡು ಮಿಶ್ರಣ ಮಾಡಿಕೊಂಡರೆ ಉತ್ತಮ. ಇಷ್ಟಾದರೆ ಇಡ್ಲಿ ಹಿಟ್ಟು ಸಿದ್ದವಾಗುತ್ತೆ. ಈಗ ಇಡ್ಲಿ ಅಚ್ಚುಗಳಿಗೆ ಎಣ್ಣೆ ಸವರಿಕೊಂಡು ನಿಧಾನವಾಗಿ ಇಡ್ಲಿ ಹಿಟ್ಟು ಹಾಕಿಕೊಳ್ಳಿ. ಆದ್ರೆ ಇಡ್ಲಿ ಕುಕ್ಕರ್ ಒಲೆ ಮೇಲೆ ಇಟ್ಟ ಅದು ಬಿಸಿಯಾದ ಬಳಿಕ ಈ ಇಡ್ಲಿ ಅಚ್ಚುಗಳನ್ನು ಅದರೊಳಗೆ ಇಡಬೇಕು. ಅನಂತರ 12ರಿಂದ 15 ನಿಮಿಷ ಬೇಯಿಸಿಕೊಂಡರೆ ಸಾಕಾಗುತ್ತದೆ. ನೀವು ಸಹ ಒಮ್ಮೆ ಮನೆಯಲ್ಲಿ ಈ ರೀತಿಯಾಗಿ ಇಡ್ಲಿ ಮಾಡಿ ಸವಿದು ನೋಡಿ.



Click it and Unblock the Notifications