Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇನ್‌ಸ್ಟಂಟ್ ಮೈಸೂರು ಮಸಾಲೆ ದೋಸೆ ಮಾಡೋದು ಹೇಗೆ? 2 ನಿಮಿಷದಲ್ಲಿ ಮಾಡೋ ವಿಧಾನವಿದು!!
ಬೆಳಗ್ಗೆ ತಿಂಡಿಯ ಸಮಯ ಎಂದರೆ ಎಲ್ಲರು ಬಾಯಿ ರುಚಿ ಹೆಚ್ಚಿಸುವಂತಹ ಖಾದ್ಯದ ಕಡೆಗೆ ಒಲವು ಹೊಂದಿರುತ್ತಾರೆ. ಅದರಲ್ಲೂ ತಿಂಡಿಗೆ ಮಸಾಲೆ ದೋಸೆ ಸವಿಯೋದು ಅಂದ್ರೆ ಎಲ್ಲರಿಗೂ ಪಂಚಪ್ರಾಣ. ನಾವು ಹೆಚ್ಚು ಹೆಚ್ಚಾಗಿ ಈ ಮಸಾಲೆಯನ್ನು ಸವಿಯುವವರ ನೋಡಬಹುದು. ಹೋಟೆಲ್‌ಗಳಲ್ಲಿ ಮಸಾಲೆ ದೋಸೆಗೆ ಯಾವಾಗಲು ಡಿಮ್ಯಾಂಡ್ ಇದ್ದೇ ಇರುತ್ತೆ. ಈಗಂತು ಮಸಾಲೆ ದೋಸೆಯಲ್ಲು ಹಲವು ಬಗೆಯನ್ನು ನಾವು ನೋಡಬಹುದು.
ಹಾಗೆ ತುಂಬಾನೆ ಫೇಮಸ್ ದೋಸೆಯಲ್ಲಿ ಮೈಸೂರು ಮಸಾಲೆ ದೋಸೆ ಕೂಡ ತುಂಬಾನೆ ಫೇಮಸ್. ಮೈಸೂರಿನ ಹಲವು ಹೋಟೆಲ್‌ಗಳ ಹೆಸರು ಕೇಳಿಬರುವುದು ಅಲ್ಲಿ ನೀಡುವ ಈ ಮಸಾಲೆ ದೋಸೆಯ ರುಚಿಯಿಂದ. ಇನ್ನು ಮೈಸೂರಿಗೆ ಬರುವ ಪ್ರವಾಸಿಗರು ಈ ದೋಸೆ ರುಚಿ ಸವಿಯದೇ ಹೋಗವುದು ಬಹಳ ಕಡಿಮೆ. ಸಾಂಸ್ಕೃತಿಕ ನಗರಿ ಎಂಬ ಹೆಗ್ಗಳಿಕೆಯ ಜೊತೆಗೆ ಮೈಸೂರು ಇಂತಹ ವಿಶಿಷ್ಟ ಖಾದ್ಯಕ್ಕೂ ಫೇಮಸ್ ಆಗಿದೆ.

ಆದ್ರೆ ದೋಸೆ ಮಾಡಬೇಕು ಅಂದ್ರೆ ಅದಕ್ಕೆ ತಯಾರಿಯೇ ದೊಡ್ಡ ಕೆಲಸ ಎಂದು ಹಲವರು ಗೊಣಗುತ್ತಾರೆ. ಹಿಂದಿನ ದಿನ ತಯಾರಿ ಮಾರನೆ ದಿನ ಬೆಳಗ್ಗೆ ದೋಸೆ ಮಾಡುವುದು ಸೇರಿ ಬಹಳಷ್ಟು ಸಮಯ ಹಿಡಿಯುತ್ತೆ. ಹೀಗಾಗಿ ಕೆಲವರು ದೋಸೆ ಸವಿಯಲು ಇಷ್ಟ ಪಟ್ಟರು ಕೂಡ ಅದನ್ನು ಮಾಡಲು ಇಷ್ಟಪಡುವುದಿಲ್ಲ. ಆದ್ರೆ ನಾವಿಂದು ಇನ್ಸ್‌ಸ್ಟಂಟ್ ಆಗಿ ರೆಡಿ ಹಿಟ್ಟಿನಿಂದ ಅದ್ಭುತ ರುಚಿಯ ಮೈಸೂರು ಮಸಾಲೆ ದೋಸೆ ಮಾಡುವ ಕುರಿತು ತಿಳಿದುಕೊಳ್ಳೋಣ.
ನೀವು ಅಂಗಡಿಯಲ್ಲಿ ಸಿಗುವಂತಹ ರೆಡಿಮೇಡ್ ಹಿಟ್ಟನ್ನು ತಂದು ತಕ್ಷಣವೇ ದೋಸೆ ಮಾಡಿ ಸವಿದಿರಬಹುದು. ಇದೇ ರೀತಿ ನಾವಿಂದು ಮಾಡೋಣ. ಈ ಮೈಸೂರು ಮಸಾಲೆ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮೈಸೂರು ಮಸಾಲೆ ದೋಸೆ ಮಾಡುವ ವಿಧಾನವೇನು?, ಮೈಸೂರು ಮಸಾಲೆ ದೊಸೆ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೈಸೂರು ಮಸಾಲೆ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
- ರೆಡಿ ದೋಸೆ ಹಿಟ್ಟು
- ಎಣ್ಣೆ
- ತುಪ್ಪ
ಮೈಸೂರು ಮಸಾಲೆ ದೋಸೆ ಮಾಡುವುದು ಹೇಗೆ?
ಮೊದಲಿಗೆ ಈ ರೆಡಿ ಹಿಟ್ಟನ್ನು ತಂದು ಅದನ್ನು ಕತ್ತರಿಸಿಕೊಂಡು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ನೀವು ಇದಕ್ಕೆ ಯಾವುದೇ ಪದಾರ್ಥವನ್ನು ಸೇರಿಸುವ ಅಗತ್ಯ ಇರುವುದಿಲ್ಲ. ಒಂದು ವೇಳೆ ಹಿಟ್ಟು ಗಟ್ಟಿಯಾಗಿದೆ ಎನಿಸಿದರೂ ಕೂಡ ಹಾಗೆಯೇ ಪಾತ್ರೆಗೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮಿಕ್ಸ್ ಮಾಡುವುದರಿಂದ ಹಿಟ್ಟು ತೆಳುವಾಗುತ್ತೆ.
ಅನಂತರ ಒಲೆ ಮೇಲೆ ಇಂದು ದೋಸೆ ಕಾವಲಿ ಇಟ್ಟು ಬಿಸಿಯಾಗಲು ಬಿಡಿ. ಬಿಸಿಯಾದ ಬಳಿಕ ಇದಕ್ಕೆ ಎಣ್ಣೆ ಹಚ್ಚಲು ಒಂದು ಈರುಳ್ಳಿಯನ್ನು ಅರ್ಧ ಕತ್ತರಿಸಿಕೊಂಡು ಬಳಸಿಕೊಳ್ಳಿ, ಆ ಈರುಳ್ಳಿಗೆ ಎಣ್ಣೆ ಹಚ್ಚಿ ಬಳಿಕ ಕಾವಲಿ ಮೇಲೆ ಸವರಿಕೊಳ್ಳಿ. ಅನಂತರ ದೋಸೆ ಹಿಟ್ಟನ್ನು ಕಾವಲಿಯ ಮೇಲೆ ಹಾಕಿಕೊಳ್ಳಿ. ನಂತರ ಒಂದು ಬದಿಯನ್ನು 3ರಿಂದ 4 ನಿಮಿಷ ಸಣ್ಣ ಉರಿಯಲ್ಲಿ ಕಾಯಿಸಿಕೊಳ್ಳಿ.
ಮಸಾಲೆ ದೋಸೆ ರೋಸ್ಟ್ ಆಗಿದ್ದರೆ ಸವಿಯಲು ಚೆನ್ನಾಗಿರುತ್ತೆ. ಹೀಗಾಗಿ ಒಂದು ಕಡೆ ರೋಸ್ಟ್ ಆಗಲು ಬಿಡಿ. ಈಗ ಇದರ ಮೇಲೆ ಬೆಣ್ಣೆ ಅಥವಾ ತುಪ್ಪ ಕೂಡ ಸವರಬಹುದು. ಈ ದೋಸೆ ಗೋಲ್ಡನ್ ಬ್ರೌನ್ ಕಲರ್‌ಗೆ ಬರುವವರೆಗೂ ಕರಿದುಕೊಳ್ಳಬೇಕು. ನಂತರ ಇದನ್ನು ಚಟ್ನಿ ಮತ್ತು ಒಳ್ಳೆ ಸಿಹಿ ಸಾಂಬಾರ್ ಜೊತೆಗೆ ಸವಿಯಲು ನೀಡಿದ್ರೆ ಮೈಸೂರು ಮಸಾಲೆ ದೊಸೆ ರೆಡಿಯಾಗುತ್ತೆ.
ನೀವು ಈ ದೋಸೆಗೆ ಆಲೂಗಡ್ಡೆಯ ರುಚಿ ರುಚಿಯ ಪಲ್ಯ ಕೂಡ ಮಾಡಿ ಸವಿಯಬಹುದು, ಈ ದೋಸೆ ಮಾಡಲು ಯಾವುದೇ ಪೂರ್ವ ತಯಾರಿಯ ಅಗತ್ಯವಿಲ್ಲ 5 ನಿಮಿಷದಲ್ಲಿ ಒಂದು ದೋಸೆ ಮಾಡಿ ಮುಗಿಸಬಹುದು.



Click it and Unblock the Notifications