Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಉದ್ದು, ಮೆಂತ್ಯ, ಅವಲಕ್ಕಿ ಏನು ಬೇಡ 2 ವಸ್ತು ಬಳಸಿ ದೋಸೆ ಮಾಡಿ! ಇನ್ಸ್ಟಂಟ್ ದೋಸೆ ರೆಸಿಪಿ
ಬೆಳಗ್ಗೆ ತಿಂಡಿಗೆ ನೀವು ಯಾವೆಲ್ಲಾ ರೀತಿಯ ತಿಂಡಿಯನ್ನು ಮಾಡಿ ಸವಿದಿರುತ್ತೀರಿ. ಅದ್ರಲ್ಲೂ ಬೆಳಗ್ಗೆ ತಿಂಡಿಗೆ ರುಚಿ ರುಚಿಯಾದ ವಿಶೇಷ ಬಗೆಯ ಖಾದ್ಯ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ನೀವು ನಿತ್ಯ ಒಂದೇ ರೀತಿಯ ಬ್ರೇಕ್‌ಫಾಸ್ಟ್ ಅಂದ್ರೆ ಯಾರಿಗೂ ಇಷ್ಟವಾಗೋದಿಲ್ಲ. ಆದ್ರೆ ಆಗಾಗ ನೀವು ವಿಶೇಷ ರೀತಿಯ ತಿಂಡಿ ಮಾಡಿ ಸವಿಯುವ ಆಲೋಚನೆಯಲ್ಲಿದ್ದರೆ ನಾವಿಂದು ಹೊಸ ರೀತಿಯ ದೋಸೆ ಮಾಡುವ ಕುರಿತಾಗಿ ಹೇಳಲಿದ್ದೇವೆ.
ದೋಸೆ ಅಂದರೆ ಎಲ್ಲರಿಗೂ ಇಷ್ಟವಾಗುವ ರುಚಿ ರುಚಿಯ ತಿಂಡಿ. ಮನೆಯಲ್ಲಿ ದೋಸೆ ಮಾಡಿದ ದಿನ ಎಲ್ಲರೂ ಇಷ್ಟಪಟ್ಟು ಸವಿದು ಖಾಲಿ ಮಾಡುತ್ತಾರೆ. ಆದ್ರೆ ದೋಸೆ ಮಾಡೋದು ಅಂದ್ರೆ ಎರಡು ದಿನದ ತಯಾರಿ ಮಾಡಬೇಕು ಎಂಬುದು ಹಲವರ ನಂಬಿಕೆಯಾಗಿದೆ. ಆದ್ರೆ ಯಾವುದೇ ತಯಾರಿ ಇಲ್ಲದೆಯೂ ನೀವು ದೋಸೆ ಮಾಡಬಹುದು ಎಂಬುದು ಸಹ ನಿಮಗೂ ತಿಳಿದಿರಲಿದೆ.

ನೀವು ಬೆಳಗ್ಗೆ ಎದ್ದ ತಕ್ಷಣ ನೀವು ಏನು ಮಾಡಬೇಕು ಎಂದು ಹೊಳೆಯದೆ ಇರಬಹುದು. ಆದ್ರೆ ಈ ಸಮಯದಲ್ಲಿ ನೀವು ಸುಲಭವಾಗಿ ದೋಸೆ ಮಾಡುವ ವಿಧಾನ ನಾವಿಂದು ಹೇಳಲಿದ್ದೇವೆ. ಅಕ್ಕಿ ಹಾಗೆ ಕಡಲೆ ಬೇಳೆ ಬಳಸಿಕೊಂಡು ಸಡನ್ ಆಗಿ ದೋಸೆ ಮಾಡಬಹುದು. ಹೌದು ಈ ವಿಧಾನದಲ್ಲಿ ನೆನೆಸುವುದು, ರುಬ್ಬುವ ಮೂಲಕ ಹಿಟ್ಟು ಹುಳಿಯಾಗುವವರೆಗೂ ಕಾಯವುದು ಸಹ ಬೇಕಾಗಿಲ್ಲ.
ಹಾಗಾದ್ರೆ ಅಕ್ಕಿ ಹಾಗೂ ಕಡಲೆ ಬೇಳೆ ಬಳಸಿಕೊಂಡು ಇನ್ಸ್ಸ್ಟಂಟ್ ಆಗಿ ದೋಸೆ ಮಾಡುವುದು ಹೇಗೆ? ಈ ದೋಸೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕಡಲೆ ಬೇಳೆ ಪಾಯಸ ಮಾಡಲು ಬೇಕಾಗುವ ವಸ್ತುಗಳು
- ಅಕ್ಕಿ
- ಕಡಲೆ ಬೇಳೆ
- ಜೀರಿಗೆ
- ತೆಂಗಿನಕಾಯಿ
- ಕೊತ್ತಂಬರಿ ಸೊಪ್ಪು
- ಉಪ್ಪು
- ಎಣ್ಣೆ
- ಸೋಡಾ ಪುಡಿ
- ಹಸಿ ಮೆಣಸು
- ಕಾಳು ಮೆಣಸು
- ಈರುಳ್ಳಿ
ಕಡಲೆ ಬೇಳೆ ಪಾಯಸ ಮಾಡುವ ವಿಧಾನವೇನು?
ಮೊದಲಿಗೆ 1 ಕಪ್ ಕಡಲೆ ಬೇಳೆಯನ್ನು ಬೌಲ್‌ಗೆ ಹಾಕಿ ನೆನೆಸಿಕೊಳ್ಳಿ. ಹಾಗೆ 1 ಕಪ್ ಅಕ್ಕಿ ಸಹ ತೆಗೆದುಕೊಂಡು ಬೌಲ್‌ಗೆ ಹಾಕಿ ಎರಡನ್ನು ತೊಳೆದು ಬಳಿಕ ನೀರು ಹಾಕಿ ನೆನೆಸಿಡಬೇಕು. ಹಿಂದಿನ ದಿನ ರಾತ್ರಿ ನೆನೆಸಿಡಬೇಕು. ಮಾರನೆ ದಿನ ಬೆಳಗ್ಗೆ ಅದರ ನೀರು ತೆಗೆದು ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಬೇಕು.
ಮೊದಲಿಗೆ ಮಿಕ್ಸಿ ಜಾರ್‌ಗೆ ಈರುಳ್ಳಿ, ಹಸಿ ಮೆಣಸು, ಜೀರಿಗೆ, ಕಾಳು ಮೆಣಸು, ಅರಶಿಣ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ನೀರು ಹಾಕಿ ಮಸಾಲೆಯನ್ನು ತರಿತರಿಯಾಗಿ ರುಬ್ಬಿಕೊಳ್ಳಿ. ಈಗ ಈ ಮಸಾಲೆ ತೆಗೆದಿಟ್ಟು ಅದೇ ಮಿಕ್ಸಿ ಜಾರ್‌ಗೆ ಅಕ್ಕಿ ಕಡಲೆ ಬೇಳೆ ಹಾಕಿ ರುಬ್ಬಿಕೊಳ್ಳಿ, ನುಣ್ಣಗೆ ರುಬ್ಬಿ ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ.
ಈಗ ರುಬ್ಬಿದ ಹಿಟ್ಟಿನೊಂದಿಗೆ ಮೊದಲು ರುಬ್ಬಿದ ಮಸಾಲೆಯನ್ನು ಸಹ ಇದಕ್ಕೆ ಹಾಕಿಕೊಳ್ಳಿ. ಅನಂತರ ರುಚಿಗೆ ತಕ್ಕಷ್ಟು ಉಪ್ಪು, ಸೋಡಾ ಪುಡಿ ಕೂಡ ಸೇರಿಸಿಕೊಂಡು ಮಿಶ್ರಣ ಮಾಡಿ. ಈ ಹಿಟ್ಟು ಗಟ್ಟಿಯಾಗಬಾರದು, ನೀವು ಉದ್ದಿನ ದೋಸೆ ಮಾಡಲು ಬೇಕಾದ ಹಿಟ್ಟಿನ ಹದಕ್ಕೆ ಮಾಡಿ. ಈ ಹಿಟ್ಟನ್ನು 10 ನಿಮಿಷಗಳ ಕಾಲ ಬೆರೆಯಲು ಬಿಡಿ.
10 ನಿಮಿಷದ ಬಳಿಕ ಮತ್ತೆ ಮಿಶ್ರಣ ಮಾಡಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಚ್ಚಿಕೊಂಡು ಕಾಯಲು ಬಿಡಿ. ಅನಂತರ ದೋಸೆ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ದೋಸೆ ಸಿದ್ದವಾಗುತ್ತೆ. ನೀವು ಕೂಡ ಮನೆಯಲ್ಲಿ ಈ ವಿಧಾನವಾಗಿ ದೋಸೆ ಮಾಡಿ ಸವಿದು ನೋಡಿ.



Click it and Unblock the Notifications