Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೇಳೆ ಇಲ್ಲದೆ ಇಡ್ಲಿ ಸಾಂಬಾರ್ ಮಾಡೋದು ಹೇಗೆ? ಈ ಟ್ರಿಕ್ ನಿಮಗೆ ಗೊತ್ತಿದ್ಯಾ?
ನೀವು ಹೋಟೆಲ್‌ನಲ್ಲಿ ಇಡ್ಲಿ ಸಾಂಬಾರ್ ಸವಿದಿರಬಹುದು. ಇಡ್ಲಿಗೆ ಅದ್ಭುತ ರುಚಿಯ ಸಾಂಬಾರ್ ನೀಡಿದ್ರೆ ಅದರ ರುಚಿಯಲ್ಲಿ ಮತ್ತಷ್ಟು ಇಡ್ಲಿ ಸವಿಯಲು ಮನಸ್ಸಾಗುತ್ತೆ. ಹಾಗೆ ಈ ಸಾಂಬಾರ್ ರುಚಿ ಎಲ್ಲರಿಗೂ ಇಷ್ಟವಾಗುತ್ತೆ. ಇಡ್ಲಿಯೊಂದಿಗೆ ಈ ಸಾಂಬಾರ್ ಇದ್ದರೇನೇ ಅದರ ರುಚಿ ದುಪ್ಪಟ್ಟಾಗೋದು.
ಆದ್ರೆ ಈ ಇಡ್ಲಿ ಸಾಂಬಾರ್ ಅನ್ನ ನೀವು ಮನೆಯಲ್ಲಿಯೇ ಮಾಡಿ ಸವಿಯಬಹುದು. ಈ ರುಚಿ ರುಚಿ ಸಾಂಬಾರ್ ಅನ್ನು ನೀವು ಸುಲಭವಾಗಿ ಮನೆಯಲ್ಲೇ ಮಾಡೋದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಅದ್ರಲ್ಲೂ ಬೇಳೆಯನ್ನೇ ಬಳಸದೆ ಈ ರುಚಿ ರುಚಿ ಇಡ್ಲಿ ಸಾಂಬಾರ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಈ ಇಡ್ಲಿ ಸಾಂಬಾರ್ ಮಾಡಲು ಬೇಳೆ ಅಗತ್ಯವೇ ಇಲ್ಲ. ಹಾಗೆ ಸುಲಭಾಗಿ ಮಾಡಬಹುದು. ಇಡ್ಲಿಯೊಂದಿಗೆ ಮಾತ್ರವಲ್ಲ ಬೇರೆ ಯಾವುದೇ ತಿಂಡಿಯೊಂದಿಗೆ ಹಾಗೆ, ಯಾವುದೇ ತಿಂಡಿಯೊಂದಿಗೆ ಹಾಗೆ ಯಾವುದೇ ಊಟದೊಂದಿಗೂ ಅದ್ಭುತ ರುಚಿ ನೀಡಲಿದೆ. ಹಾಗೆ ಇದನ್ನು ಮಾಡೋದು ಕೂಡ ಬಹಳ ಸುಲಭ. ಹಾಗಾದ್ರೆ ನಾವಿಂದು ಮನೆಯಲ್ಲಿ ಬೇಳೆ ಬಳಸದೆಯೇ ಇಡ್ಲಿ ಸಾಂಬಾರ್ ಮಾಡೋದು ಹೇಗೆ ತಿಳಿಯೋಣ.
ಬೇಳೆ ಇಲ್ಲದೆ ರಸಂ ಮಾಡಲು ಯಾವೆಲ್ಲಾ ಪದಾರ್ಥಗಳು
ಬೇಕು?
- ಟೊಮೆಟೊ
- ಈರುಳ್ಳಿ
- ಹಸಿರು ಮೆಣಸಿನಕಾಯಿ
- ಅರಿಶಿನ ಪುಡಿ
- ಇಂಗು
- ಸಾಸಿವೆ
- ಕಡಲೆ ಹಿಟ್ಟು
- ಜೀರಿಗೆ
- ಕರಿಬೇವು
- ಒಣ ಮೆಣಸು
- ಬೆಳ್ಳುಳ್ಳಿ
- ಸಾಂಬಾರ್ ಪುಡಿ
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ಉಪ್ಪು
ಬೇಳೆ ಇಲ್ಲದೆ ರಸಂ ಮಾಡುವುದು ಹೇಗೆ?
ಒಲೆ ಮೇಲೆ ಕುಕ್ಕರ್ ಇಟ್ಟು ಎರಡು ಟೊಮೆಟೊ ಕತ್ತರಿಸಿ ಹಾಕಿಕೊಳ್ಳಿ. ಇದಕ್ಕೆ ಒಂದು ಈರುಳ್ಳಿ, ಹಸಿ ಮೆಣಸು, ಅರಶಿಣ ಪುಡಿ, ಇಂಗು, 2 ಗ್ಲಾಸ್ ನೀರು ಹಾಕಿ ಮಿಕ್ಸ್ ಮಾಡಿ. ನಂತರ ಮುಚ್ಚಳ ಮುಚ್ಚಿ 3 ಸೀಟಿ ಹೊಡೆಯಲು ಬಿಡಿ. 3 ಸೀಟಿ ಹೊಡೆದ ಬಳಿಕ ಕುಕ್ಕರ್ ಬದಿಗಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿಕೊಳ್ಳಿ.
ಬಳಿಕ ಎಣ್ಣೆಗೆ ಸಾಸಿವೆ, ಜೀರಿಗೆ, ಜಜ್ಜಿದ ಬೆಳ್ಳುಳ್ಳಿ, ಒಣ ಮೆಣಸು, ಕರಿಬೇವು ಹಾಕಿಕೊಳ್ಳಿ. ನಂತರ 1 ನಿಮಿಷ ಬಿಟ್ಟು ಕುಕ್ಕರ್‌ನಲ್ಲಿನ ಬೇಳೆ ನೀರನ್ನು ಇದಕ್ಕೆ ಹಾಕಿಕೊಳ್ಳಿ. ಹಾಗೆ 1 ಗ್ಲಾಸ್ ಬೇರೆ ನೀರು ಕೂಡ ಹಾಕಿಕೊಳ್ಳಿ. ನಂತರ ರುಚಿಗೆ ತಕ್ಕಷ್ಟು ಉಪ್ಪು, ಸಾಂಬಾರ್ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಕುದಿಯಲು ಬಿಡಿ.
ಈಗ ಕುಕ್ಕರ್‌ನಲ್ಲಿನ ಪದಾರ್ಥಗಳನ್ನು ಸ್ವಲ್ಪ ಪುಡಿ ಮಾಡಬೇಕು. ಯಾವುದಾದರು ವಸ್ತು ಬಳಸಿ ಚೆನ್ನಾಗಿ ಪುಡಿ ಮಾಡಿ. ಈಗ ಒಲೆ ಮೇಲೆ ಕುದಿಯುತ್ತಿರುವ ಪಾತ್ರೆಗೆ ಕುಕ್ಕರ್‌ನಲ್ಲಿನ ಎಲ್ಲಾ ಪದಾರ್ಥಗಳನ್ನು ಹಾಕಿಕೊಂಡು ಮಿಕ್ಸ್ ಮಾಡಿ. ಹಾಗೆ ಇದಕ್ಕೆ 2 ಸ್ಪೂನ್ ಕಡಲೆ ಹಿಟ್ಟು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ಗಂಟುಗಳಿಲ್ಲದಂತೆ ಚೆನ್ನಾಗಿ ಮಿಕ್ಸ್ ಮಾಡಿ ಬಾಣಲೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಹಾಗೆ 5 ನಿಮಿಷ ಕುದಿಯಲು ಬಿಟ್ಟು ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಂಡು ಇಳಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಸಾಂಬಾರ್ ರೆಡಿಯಾಗುತ್ತದೆ. ಇಡ್ಲಿಯೊಂದಿಗೆ, ದೋಸೆಯೊಂದಿಗೆ ಹಾಗೆ ಊಟದ ಜೊತೆಗೂ ಕೂಡ ಅದ್ಭುತ ರುಚಿ ನೀಡಲಿದೆ. ಹೋಟೆಲ್‌ಗಳಲ್ಲಿ ಇಡ್ಲಿ ಜೊತೆಗೆ ನೀಡುವ ಸಾಂಬಾರ್ ಕೂಡ ಹೀಗೆ ಮಾಡಲಾಗುತ್ತೆ. ಇದಕ್ಕೆ ಬೇಳೆಯ ಅವಶ್ಯಕತೆ ಇಲ್ಲ. ಹಾಗೆ ಸಮಯವೂ ಹೆಚ್ಚು ಬೇಕಾಗಿಲ್ಲ.



Click it and Unblock the Notifications