Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೋಟೆಲ್ ರುಚಿಯ ಇಡ್ಲಿ ಸಾಂಬಾರ್ ಮಾಡಿ..! ಬೇಳೆ ಹಾಕದೆಯೇ ಮಾಡಬಹುದು.!
ನಾವು ಬೆಳಗ್ಗೆಯ ತಿಂಡಿಗೆ ಮೃದುವಾದ ಇಡ್ಲಿ ಮಾಡುತ್ತೇವೆ. ದಕ್ಷಿಣ ಭಾರತದಲ್ಲಿ ಇಡ್ಲಿ ಸಿಕ್ಕಾಪಟ್ಟೆ ಫೇಮಸ್ ಬಿಡಿ. ವಾರದಲ್ಲಿ ಒಂದು ಸರಿಯಾದರು ಇಡ್ಲಿ ಮಾಡಿಯೇ ಮಾಡುತ್ತಾರೆ. ಇಲ್ಲವೆ ಹೊರಗಡೆ ಹೋಟೆಲ್ ಅಥವಾ ಬೀದಿ ಬದಿಯ ವ್ಯಾಪಾರಿಗಳ ಬಳಿಯೂ ಇಡ್ಲಿ ಸೇವಿಸುತ್ತೇವೆ. ಈ ಇಡ್ಲಿ ಇಷ್ಟೊಂದು ರುಚಿಸಲು ಕಾರಣ ಅದರ ಜೊತೆ ನಮಗೆ ನೀಡುವ ಸಾಂಬಾರ್ ಆಗಿದೆ.
ಹೌದು ಎರಡು ಇಡ್ಲಿ ತಿನ್ನುವವನು ಇನ್ನೆರಡು ಇಡ್ಲಿ ಹೆಚ್ಚಿಗೆ ತಿನ್ನಲು ಈ ಸಾಂಬಾರ್ ಕಾರಣವಾಗಿರುತ್ತೆ. ಅಷ್ಟೊಂದು ರುಚಿಕರ ಹಾಗು ಅಷ್ಟು ಗಮ ಗಮ ಎಂಬ ಸುವಾಸನೆ ಅದರಿಂದ ಬರುತ್ತಿರುತ್ತದೆ. ಹೀಗಾಗಿ ನೀವು ಹೋಟೆಲ್‌ನಲ್ಲಿ ಇಡ್ಲಿ ವಡೆ ಸೇವಿಸುವಾಗ ಇನ್ನೊಂದು ಕಪ್ ಸಾಂಬಾರ್ ಪ್ರತ್ಯೇಕವಾಗಿ ಪಡೆದೇ ಪಡೆಯುತ್ತೀರಿ.

ಇಡ್ಲಿ, ದೋಸೆಗೆ ಈ ಸಾಂಬಾರ್ ಇಲ್ಲದಿದ್ದರೆ ಆ ತಿಂಡಿ ರುಚಿ ನೀಡುವುದಿಲ್ಲ. ಹೀಗಾಗಿ ಎಲ್ಲರ ಮನೆಯಲ್ಲು ಇಡ್ಲಿ ಜೊತೆ ಚಟ್ನಿ ಇಲ್ಲವೆ ಈ ಸಾಂಬಾರ್ ಮಾಡುತ್ತಾರೆ. ಆದ್ರೆ ಈ ಸಾಂಬಾರ್ ಯಾವ ರೀತಿ ಮಾಡಿದರೆ ಹೆಚ್ಚು ರುಚಿ ಅನ್ನೋದನ್ನು ನಾವಿಂದು ನೋಡಣ. ರುಚಿ ರುಚಿಯ ಇಡ್ಲಿ ಸಾಂಬಾರ್ ಮಾಡುವುದು ಹೇಗೆ? ಅದಕ್ಕೆ ಬೇಕಾಗುವ ವಸ್ತುಗಳೇನು? ಪಾಕವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಇಡ್ಲಿ ಸಾಂಬಾರ್ ಮಾಡಲು ಬೇಕಾಗುವ ಪದಾರ್ಥಗಳು ( 4 ಜನಕ್ಕೆ )
- ಟೊಮೆಟೋ- 2
- ಒಣಮೆಣಸು
- ಬೆಳ್ಳುಳ್ಳಿ- 1
- ಈರುಳ್ಳಿ- 1
- ಹಸಿ ಮೆಣಸಿನ ಕಾಯಿ
- ಖಾರದ ಪುಡಿ- ಅರ್ಧ ಸ್ಪೂನ್
- ಸಾಸಿವೆ- ಅರ್ಧ ಸ್ಪೂನ್
- ಜೀರಿಗೆ- ಅರ್ಧ ಸ್ಪೂನ್
- ಕರಿಬೇವಿನ ಸೊಪ್ಪು
- ಸಾಂಬಾರ್ ಪೌಡರ್
- ಕಡಲೆ ಹಿಟ್ಟು- 2 ಸ್ಪೂನ್
- ಕೊತ್ತಂಬರಿ ಸೊಪ್ಪು
ಇಡ್ಲಿ ಸಾಂಬಾರ್ ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಟೊಮೆಟೋ, ಈರುಳ್ಳಿ, ಹಸಿಮೆಣಸು, ಅರಶಿನ, ಇಂಗು, ಸ್ವಲ್ಪ ನೀರು ಹಾಕಿ ಮೂರು ಸೀಟಿ ಬರುವವರೆಗೂ ಬಿಡಿ. ಮೂರು ಸೀಟಿ ಹಾಕಿದ ಬಳಿಕ ಆಫ್ ಮಾಡಿ ಬದಿಗಿಡಿ.
ಈಗ ಒಲೆ ಮೇಲೆ ಪಾತ್ರೆಯಿಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಸಾಸಿವೆ, ಜೀರಿಗೆ, ಸಿಪ್ಪೆ ಬಿಡಿಸಿದ ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. ಬಳಿಕ ಒಣ ಮೆಣಸು, ಕರಬೇವಿನ ಸೊಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ. ಒಲೆಯನ್ನು ಸಣ್ಣಗೆ ಇಟ್ಟುಕೊಳ್ಳಿ. ಇದಾದ ಮೇಲೆ ಈ ಒಗ್ಗರಣೆಗೆ ಕುಕ್ಕರ್‌ನಲ್ಲಿರುವ ದಾಲ್ ನೀರನ್ನು ಹಾಕಿಕೊಳ್ಳೊ, ಇದರ ಜೊತೆ ಒಂದು ಲೋಟ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುದಿಯಲು ಬಿಡಿ.
ಇನ್ನೊಂದೆಡೆ ಕುಕ್ಕರ್‌ನಲ್ಲಿ ನೀರು ತೆಗೆದ ಮೇಲೆ ಅದನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಟೊಮೆಟೋ ಈರುಳ್ಳಿ ಚೆನ್ನಾಗಿ ಪುಡಿ ಮಾಡಿ. ಬಳಿಕ ಇದನ್ನು ಒಲೆ ಮೇಲೆ ಕುದಿಯುತ್ತಿರುವ ಸಾಂಬಾರ್‌ಗೆ ಹಾಕಿ ಚೆನ್ನಾಗಿ ತಿರುಗಿಸಿ. ಇದಕ್ಕೆ ಸಾಂಬಾರ್ ಪೌಡರ್ ಹಾಕಿ ಮಿಶ್ರಣ ಮಾಡಿ. ಇದೆಲ್ಲ ಆದ ಬಳಿಕ ಕಡಲೆ ಹಿಟ್ಟು ತೆಗೆದುಕೊಂಡು ಅದಕ್ಕೆ ನೀರು ಹಾಕಿ ಗಂಟುಗಳು ಇಲ್ಲದಂತೆ ಕಲಸಿ ಇದನ್ನು ಸಾಂಬಾರ್‌ಗೆ ಹಾಕಿ ಮಿಶ್ರಣ ಮಾಡಿ.
ಕೊನೆಯದಾಗಿ ಒಂದು 5 ನಿಮಿಷದ ವರೆಗೂ ಚೆನ್ನಾಗಿ ಕುದಿಯಲು ಬಿಡಿ. ಅಂತಿಮವಾಗಿ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ ತಕ್ಷಣ ಒಲೆ ಆಫ್ ಮಾಡಿ ಇಳಿಸಿಕೊಳ್ಳಿ. ಇಷ್ಟಾದರೆ ಬೊಂಬಾಟ್ ರುಚಿಯ ಇಡ್ಲಿ ಸಾಂಬಾರ್ ರೆಡಿ. ಇದನ್ನು ಇಡ್ಲಿ, ದೋಸೆ, ಅನ್ನದ ಜೊತೆಯೂ ಸವಿಯಬಹುದು.



Click it and Unblock the Notifications