Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Tawa Idli: ಹೈದರಾಬಾದ್ ಸ್ಪೆಷಲ್ ತವಾ ಇಡ್ಲಿ! ಬ್ರೇಕ್ಫಾಸ್ಟ್ಗೆ ಬೆಸ್ಟ್.. ಮಾಡೋದು ಈಸಿ
ಬೆಳಗಿನ ತಿಂಡಿಗೆ ಹೈದರಾಬಾದ್ನ ಜನಪ್ರಿಯ ತವಾ ಇಡ್ಲಿ (Tawa Idli) ಮಾಡಿ. ಇದು ಹೈದರಾಬಾದ್ನಲ್ಲಿ ಸಖತ್ ಫೇಮಸ್ ಆಗಿದೆ. ಕೆಲವರಿಗೆ ತಿಂಡಿ ಇಷ್ಟವಾಗುವುದಿಲ್ಲ. ಹಾಗಾಗಿ ಬೆಳಗಿನ ತಿಂಡಿ ಸೇವನೆ ಬಿಡದಂತೆ ಸಲಹೆ ನೀಡಲಾಗುತ್ತದೆ. ಬೆಳಗಿನ ತಿಂಡಿ ತಪ್ಪಿಸಿದರೆ ಹೊಟ್ಟೆಯ ಅಸ್ವಸ್ಥತೆ ಕಾಡುತ್ತವೆ. ಬೆಳಗಿನ ಉಪಹಾರ ಬಿಡುವುದು ಆರೋಗ್ಯಕ್ಕೆ ಎಂದಿಗೂ ಒಳ್ಳೆಯದಲ್ಲ. ಬೆಳಗ್ಗೆ ಆರೋಗ್ಯಕರ ಮತ್ತು ಪೌಷ್ಠಿಕಾಂಶದ ಊಟ ಸೇವಿಸುವುದು ನಿಮಗೆ ಇಂಧನವಿದ್ದಂತೆ. ಅನೇಕ ಜನರಂತೆ ನೀವು ಸಹ ಟೋಸ್ಟ್ ಅಥವಾ ಏಕದಳ ಜೊತೆಗೆ ತ್ವರಿತ ಮತ್ತು ಸುಲಭ ಉಪಹಾರ ಮಾಡಬಹುದು. ಈ ಸಾಮಾನ್ಯ ತಿನಿಸುಗಳಿಗಿಂತ ಇದನ್ನು ವಿಭಿನ್ನವಾಗಿಸಲು ಕೆಲವು ರುಚಿಕರವಾದ ಭಕ್ಷ್ಯಗಳನ್ನು ಸುಲಭವಾಗಿ ಮತ್ತು ಅತಿ ಶೀಘ್ರವಾಗಿ ತಯಾರಿಸಬಹುದು.
ಬೆಳಗ್ಗೆ ಬೇಗನೆ ಏಳುವುದು, ಇವತ್ತಿನ ತಿಂಡಿ ಏನು ಮಾಡಬೇಕು ಎಂದು ಯೋಚಿಸುವುದು ಅಮ್ಮಂದಿರಿಗೆದೊಡ್ಡ ಸವಾಲು. ಎಷ್ಟೋ ಜನ ಗಹಿಣಿಯರು ರಾತ್ರಿಯೇ ಬೆಳಗಿನ ತಿಂಡಿಗೆ ಏನು ಮಾಡಬೇಕು ಅಂತ ಥಿಂಕ್ ಮಾಡ್ತಾರೆ. ಬೆಳಗ್ಗೆ ಮಕ್ಕಳು, ಗಂಡ, ಅತ್ತೆ, ಮಾವ ಎಲ್ಲರಿಗೂ ಮೆಚ್ಚುವ ತಿಂಡಿ ತಯಾರಿಸುವುದು ಮುಖ್ಯ. ಮಧ್ಯಾಹ್ನದ ಊಟಕ್ಕೆ ಬೇರೆ, ಬೆಳಗಿನ ತಿಂಡಿಗೆ ಬೇರೆ ಅಡುಗೆ ಮಾಡುವುದು ತುಸು ಕಷ್ಟದ ಕೆಲಸ. ತಿಂಡಿಯನ್ನು ಯೋಜಿಸುವುದು ಒಂದು ದೊಡ್ಡ ಕೆಲಸವೇ ಸರಿ. ಹೀಗಾಗಿಯೇ, ಅನೇಕರು ಬೆಳಗಿನ ಉಪಾಹಾರ ತ್ಯಜಿಸುತ್ತಾರೆ. ಕೆಲವರಿಗೆ ಸಮಯಕ್ಕೆ ಸರಿಯಾಗಿ ತಿನ್ನಲು ಸಮಯ ಇರುವುದಿಲ್ಲ.

ಹೈದರಾಬಾದ್ ಸ್ಪೆಷಲ್ ತವಾ ಇಡ್ಲಿ
ನೀವು ಸಹ ಬೆಳಗ್ಗೆ ಯಾವ ತಿಂಡಿ ಮಾಡಬೇಕು ಅಂತ ಹುಡುಕುತ್ತಿದ್ದರೆ, ತವಾ ಸ್ಪಾಟ್ ಇಡ್ಲಿ ರೆಸಿಪಿ (Tawa Idli Recipe) ಇಲ್ಲಿದೆ. ಇದು ಮಸಾಲೆಯುಕ್ತ, ರುಚಿಕರ ಮತ್ತು ಕೇವಲ ಎರಡು ನಿಮಿಷಗಳಲ್ಲಿ ತಯಾರಿಸಬಹುದಾದ ಇಡ್ಲಿ ಆಗಿದೆ. ತವಾ ಸ್ಪಾಟ್ ಇಡ್ಲಿ ಒಂದು ಜನಪ್ರಿಯ ಬೀದಿ ಬದಿಯ ಆಹಾರ. ಇದು ದಕ್ಷಿಣ ಭಾರತದಲ್ಲಿ ಅದರ ರುಚಿ ಮತ್ತು ತಯಾರಿಕೆಯ ಸುಲಭತೆಗೆ ಹೆಸರುವಾಸಿ. ಇದು ಮೂಲಭೂತವಾಗಿ ಮೃದುವಾದ ಇಡ್ಲಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ತವಾ ಅಥವಾ ಬಾಣಲೆಯಲ್ಲಿ ಮಸಾಲೆಗಳು ಮತ್ತು ತರಕಾರಿಗಳೊಂದಿಗೆ ಹುರಿಯಲಾಗುತ್ತದೆ. ಈ ಇಡ್ಲಿ ತ್ವರಿತ ಉಪಹಾರ ಅಥವಾ ರಾತ್ರಿಯ ಊಟಕ್ಕೆ ಸೂಕ್ತ. ಹೈದರಾಬಾದ್ನ ಜನಪ್ರಿಯ ತವಾ ಇಡ್ಲಿ (Hyderabadi Tawa Idli) ಮಾಡುವುದು ಹೇಗೆ ಎಂದು ನೋಡೋಣ ಬನ್ನಿ.
ತವಾ ಇಡ್ಲಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ರವೆ
• ಮೊಸರು
• ಎಣ್ಣೆ
• ಸಣ್ಣದಾಗಿ ಕೊಚ್ಚಿದ ಈರುಳ್ಳಿ
• ಸಣ್ಣದಾಗಿ ಕೊಚ್ಚಿದ ಹಸಿ ಮೆಣಸಿನಕಾಯಿ
• ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್
• ಸಣ್ಣದಾಗಿ ಹಚ್ಚಿದ ಟೊಮೆಟೊ
• ರುಚಿಗೆ ತಕ್ಕಷ್ಟು ಉಪ್ಪು
• ಸಾಂಬಾರ್ ಮಸಾಲಾ
• ಸಣ್ಣದಾಗಿ ಹಚ್ಚಿದ ಕೊತ್ತಂಬರಿ ಸೊಪ್ಪು

ತವಾ ಇಡ್ಲಿ ಮಾಡುವ ವಿಧಾನ
ಮೊದಲು ಎಣ್ಣೆ ಬಿಸಿ ಮಾಡಿ. ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ. ಎಲ್ಲವನ್ನೂ ಒಟ್ಟಿಗೆ ಬೇಯಿಸಿ.ಈಗ ಟೊಮೆಟೊ ಮತ್ತು ಉಪ್ಪು ಹಾಕಿ. ಕಡಿಮೆ ಉರಿಯಲ್ಲಿ ಬೇಯಿಸಿ. ಕೊತ್ತಂಬರಿ ಸೊಪ್ಪು, ಸಾಂಬಾರ್ ಮಸಾಲಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಅಷ್ಟರಲ್ಲಿ ಒಂದು ಬಟ್ಟಲಿನಲ್ಲಿ ರವೆ, ಮೊಸರು, ಉಪ್ಪು, ಎಣ್ಣೆ ಸೇರಿಸಿ ದಪ್ಪ ಹಿಟ್ಟನ್ನು ತಯಾರಿಸಿ. ಅಗತ್ಯವಿದ್ದರೆ ಇದಕ್ಕೆ ನೀರು ಸೇರಿಸಿ. ಈಗ ಟೊಮೆಟೊ ಮತ್ತು ಈರುಳ್ಳಿ ಮಿಶ್ರಣವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಇಷ್ಟು ಮಾಡಿದರೆ ಬಿಸಿ ಬಿಸಿಯಾದ ತವಾ ಇಡ್ಲಿ ಸಿದ್ಧ.
ತವಾ ಸ್ಪಾಟ್ ಇಡ್ಲಿಯನ್ನು ವಿವಿಧ ರೀತಿಯಲ್ಲಿ ತಯಾರಿಸಬಹುದು. ಕೆಲವರು ಇದಕ್ಕೆ ತರಕಾರಿಗಳನ್ನು ಸೇರಿಸಿದರೆ, ಮತ್ತೆ ಕೆಲವರು ಚೀಸ್ ಅಥವಾ ಪನೀರ್ ಸೇರಿಸಿ, ಇನ್ನಷ್ಟು ರುಚಿಕರವಾಗಿಸುತ್ತಾರೆ. ಮೈಸೂರು ಮಸಾಲಾ ದೋಸೆ ಮಸಾಲೆಯನ್ನು ಸಹ ಬಳಸಬಹುದು. ನಿಮ್ಮ ಆಯ್ಕೆಗೆ ಅನುಗುಣವಾಗಿ ನೀವು ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಈ ಇಡ್ಲಿ ಆರೋಗ್ಯಕರ ಆಹಾರ. ಇದು ಕಡಿಮೆ ಕೊಬ್ಬು ಮತ್ತು ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿದೆ. ತರಕಾರಿಗಳನ್ನು ಸೇರಿಸುವುದರಿಂದ ಇದು ಇನ್ನಷ್ಟು ಆರೋಗ್ಯಕರವಾಗುತ್ತದೆ. ಮಿತವಾಗಿ ಸೇವಿಸಿದರೆ, ತವಾ ಸ್ಪಾಟ್ ಇಡ್ಲಿ ಆರೋಗ್ಯಕ್ಕೆ ಒಳ್ಳೆಯದು.



Click it and Unblock the Notifications