Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೋಟೆಲ್ ಸ್ಟೈಲ್‌ನ ಗಟ್ಟಿ ಚಟ್ನಿ ಮಾಡುವುದು ಹೇಗೆ? ಈ ರೀತಿ ಚಟ್ನಿ ಎಂದಾದರು ಮಾಡಿದ್ದೀರಾ?
ನಾವು ಬೆಳಗ್ಗೆ ತಿಂಡಿಗೆ ಚಟ್ನಿ, ಪಲ್ಯ ಮಾಡಿ ಸವಿಯುವುದು ಕಾಮನ್, ತಿಂಡಿಗೆ ಈ ರೀತಿ ಚಟ್ನಿ ಅಥವಾ ಪಲ್ಯ ಇದ್ದರೆ ಮಾತ್ರ ಸವಿಯಬಹುದು. ಆದ್ರೆ ಕೆಲವೊಂದು ತಿಂಡಿಗಳನ್ನು ಚಟ್ನಿ ಇಲ್ಲದೆಯೂ ಸವಿಯಬಹುದು. ಚಿತ್ರಾನ್ನ, ಪಲಾವ್ ಹೀಗೆ ಕೆಲವು ರೈಸ್ ಐಟಂಗಳನ್ನ ನಾವು ಚಟ್ನಿಯ ಅಗತ್ಯವಿಲ್ಲದೆ ಸವಿಯಬಹುದು, ಮತ್ತೆ ಕೆಲವು ತಿಂಡಿಗಳನ್ನು ನಾವು ಚಟ್ನಿ ಇಲ್ಲದೆ ಸವಿಯಲು ಸಾಧ್ಯವಿಲ್ಲ.
ಆದ್ರೆ ನಾವು ನಾವು ಮನೆಯಲ್ಲಿ ಸಾಮಾನ್ಯವಾಗಿ ತೆಂಗಿನಕಾಯಿ ಚಟ್ನಿ, ಕಡಲೆ ಚಟ್ನಿ, ಅಥವಾ ಹುರಿಗಡಲೆ ಚಟ್ನಿ ಮಾಡಿ ಸವಿಯುವುದು ನೋಡಬಹುದು. ಆದ್ರೆ ಯಾವಾಗಲಾದರು ಹೋಟೆಲ್‌ನಲ್ಲಿ ಸಿಗುವಂತಹ ಗಟ್ಟಿ ಚಟ್ನಿ ಎಂದಾದರು ಮನೆಯಲ್ಲಿ ತಿಂಡಿಗೆ ಮಾಡಿ ಸವಿದಿದ್ದೀರಾ? ಹೋಟೆಲ್‌ನಲ್ಲಿ ಮಾಡುವಂತಹ ಗಟ್ಟಿ ಚಟ್ನಿ ಮಾಡಿದ್ರೆ ಎಲ್ಲಾ ತಿಂಡಿಯ ಜೊತೆಗೂ ಸವಿಯಬಹುದು.

ಹೋಟೆಲ್‌ನಲ್ಲಿ ಇಡ್ಲಿ ದೋಸೆ ಅಥವಾ ಪೂರಿ ಹೀಗೆ ಕೆಲವೊಂದು ಖಾದ್ಯದ ಜೊತೆಗೆ ನೀಡಲಾಗುವ ಗಟ್ಟಿಯಾದ ಚಟ್ನಿ ಅತ್ಯಂತ ರುಚಿಕರವಾಗಿರುತ್ತೆ. ಆದರೆ ಈ ರೀತಿಯ ಗಟ್ಟಿ ಚಟ್ನಿಯನ್ನು ಮಾಡುವುದು ಹೇಗೆ? ರುಚಿ ರುಚಿಯ ಚಟ್ನಿ ಜೊತೆಗಿದ್ದರೆ ಬೆಳಗ್ಗೆಯ ತಿಂಡಿ ಮತ್ತಷ್ಟು ರುಚಿಕರವಾಗಿರುತ್ತೆ. ಹೀಗಾಗಿ ನಾವಿಂದು ಈ ಹೋಟೆಲ್‌ನಲ್ಲಿ ನೀಡುವಂತ ಗಟ್ಟಿ ಚಟ್ನಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ.
ಗಟ್ಟಿ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ ನೋಡಿ.
ಹೋಟೆಲ್ ರುಚಿ ಗಟ್ಟಿ ಚಟ್ನಿ ಮಾಡಲು ಬೇಕಾಗುವ ವಸ್ತುಗಳು
- ಕಡಲೆ ಬೀಜ
- ತೆಂಗಿನಕಾಯಿ
- ಪುದಿನ ಎಲೆ
- ಕೊತ್ತಂಬರಿ ಸೊಪ್ಪು
- ಉದ್ದಿನ ಬೇಳೆ
- ಬೆಳ್ಳುಳ್ಳಿ
- ಶುಂಠಿ
- ಹುಣಸೆ ಹಣ್ಣು
- ಉಪ್ಪು
- ಸಾಸಿವೆ
- ಜೀರಿಗೆ
- ಇಂಗು
- ಕರಿಬೇವು
- ಎಣ್ಣೆ
- ಒಣಮೆಣಸು
ಹೋಟೆಲ್ ರುಚಿ ಗಟ್ಟಿ ಚಟ್ನಿ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಕಡಲೆಬೀಜ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಇದರ ಜೊತೆಗೆ ಸ್ವಲ್ಪ ಪುದಿನ, ಹಸಿ ಮೆಣಸು, ಜೀರಿಗೆ, ಬೆಳ್ಳುಳ್ಳಿ, ಶುಂಠಿ ಹಾಕಿಕೊಂಡು 2 ನಿಮಿಷ ಫ್ರೈ ಮಾಡಿ. ಬಳಿಕ ಇದಕ್ಕೆ ಕರಿಬೇವು ಹಾಕಿ ಮತ್ತೆ 2 ನಿಮಿಷ ಫ್ರೈ ಮಾಡಿಕೊಳ್ಳಿ. ಕೊನೆಯದಾಗಿ ಹುರಿಗಡಲೆ ಹಾಕಿ 1 ನಿಮಿಷ ಫ್ರೈ ಮಾಡಿ.
ಈಗ ಈ ಒಲೆ ಆಫ್ ಮಾಡಿಕೊಂಡು ಮಸಾಲೆಗಳು ತಣ್ಣಗಾಗಲು ಬಿಡಬೇಕು. ಮಸಾಲೆಗಳು ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಇದಕ್ಕೆ ಸ್ವಲ್ಪ ತೆಂಗಿನಕಾಯಿ, ಕೊತ್ತಂಬರಿ ಸೊಪ್ಪು, ಹುಣಸೆ ಹಣ್ಣು, ಉಪ್ಪು, ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ಹೆಚ್ಚು ನೀರು ಹಾಕಿಕೊಳ್ಳದೆ ರುಬ್ಬಿಕೊಳ್ಳಬೇಕು.
ಕಡಿಮೆ ನೀರು ಹಾಕಿದ್ರೆ ಚಟ್ನಿ ಗಟ್ಟಿಯಾಗುತ್ತದೆ. ಹೀಗೆ ರುಬ್ಬಿಕೊಂಡ ಚಟ್ನಿಯನ್ನು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಅನಂತರ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ಬಳಿಕ ಅದಕ್ಕೆ ಸಾಸಿವೆ ಹಾಗೂ ಒಣಮೆಣಸು, ಇಂಗು, ಉದ್ದಿನ ಬೇಳೆ, ಕರಿಬೇವು ಹಾಕಿಕೊಂಡು ಫ್ರೈ ಮಾಡಿ. ನಂತರ ಈ ಬೌಲ್‌ನಲ್ಲಿರುವ ಚಟ್ನಿಗೆ ಹಾಕಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಹೋಟೆಲ್ ರುಚಿಯ ಗಟ್ಟಿ ಚಟ್ನಿ ರೆಡಿಯಾಗುತ್ತದೆ. ನೀವು ಕೂಡ ಯಾವುದೇ ತಿಂಡಿಗೆ ಇದನ್ನು ಮಾಡಿಕೊಳ್ಳಬಹುದು.
ಅದರಲ್ಲೂ ನೀರು ಹಾಕದೆಯೇ ಕೂಡ ಇದನ್ನು ತರಿತರಿಯಾಗಿ ರುಬ್ಬಿಕೊಂಡು ಮಾಡಿಕೊಳ್ಳಬಹುದು. ಹಾಗೆ ಎಲ್ಲಾ ಖಾದ್ಯದ ಜೊತೆಗೂ ಕೂಡ ಇದನ್ನು ಸವಿಯಲು ನೀಡಬಹುದು. ಸುಲಭವಾಗಿ ಇದನ್ನು ಮಾಡುವುದರಿಂದ ಕಡಿಮೆ ಸಮಯದಲ್ಲಿ ರುಚಿ ರುಚಿ ಚಟ್ನಿ ಸವಿಯಲು ಸಿದ್ದ ಮಾಡಬಹುದು.



Click it and Unblock the Notifications