Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಹೋಟೆಲ್‌ನಲ್ಲಿ ನೀಡುವಂತಹ ಮೃದುವಾದ ಪೂರಿ ಮಾಡೋದು ಹೇಗೆ? ಇಲ್ಲಿದೆ ಹಿಟ್ಟು ಮಾಡುವ ಟ್ರಿಕ್ಸ್
ನೀವು ಹೋಟೆಲ್‌ಗಳಿಗೆ ತೆರಳಿದ ವೇಳೆ ಅಲ್ಲಿ ನೀಡುವ ಪೂರಿ ಸವಿದಿರಬಹುದು. ಮೃದುವಾದ ಹೂವಿನಂತಹ ಪೂರಿ ಬಾಯಲ್ಲಿ ಇಟ್ಟರೆ ಕರಗಿ ಬಿಡುತ್ತೆ. ಅದರ ಜೊತೆಗೆ ನೀಡುವ ತರಕಾರಿ ಸಾಗು ಕೂಡ ಅಷ್ಟೇ ರುಚಿಯಾಗಿರುತ್ತೆ. ಮೂರು ನಾಲ್ಕು ಪೂರಿಯನ್ನು ಸವಿಯದೆ ಹೋಟೆಲ್‌ನಿಂದ ಹೊರಬರಲು ಮನಸಾಗೋದಿಲ್ಲ. ಹಾಗೆ ಹೋಟೆಲ್‌ನಲ್ಲಿ ಯಾವ ರೀತಿಯಾಗಿ ಈ ಪೂರಿ ಮಾಡುತ್ತಾರೆ ಅನ್ನೋದು ನಿಮ್ಮ ಹಲವು ದಿನದ ಪ್ರಶ್ನೆಯೂ ಆಗಿರಬಹುದು.
ಹೋಟೆಲ್‌ನಲ್ಲಿ ನೀವು ಬಳಸುವ ವಸ್ತುಗಳನ್ನೇ ಬಳಸಿ ಈ ಪೂರಿ ಮಾಡುತ್ತಾರೆ. ಆದ್ರೆ ಅಲ್ಲಿ ಮೃದುವಾಗಿ ಹಾಗೆ ದೊಡ್ಡದಾಗಿ ತೆಳುವಾಗಿಯೂ ಬಂದಿರುತ್ತೆ. ರುಚಿಯಲ್ಲೂ ಬೆಸ್ಟ್ ಅನಿಸುತ್ತೆ. ಹೀಗಾಗಿ ಈ ರುಚಿಯಲ್ಲಿ ನೀವು ಪೂರಿ ಸವಿಯಲು ಬಹಳ ಇಷ್ಟಪಡುತ್ತೀರಿ. ಹಾಗೆ ಮನೆಯಲ್ಲೂ ಪೂರಿ ಮಾಡುವಾಗ ಮೃದುವಾಗಿ ಬರಬೇಕು ಎಂಬ ಬಯಕೆ ನಿಮ್ಮದಾಗಿರುತ್ತೆ.

ಮನೆಯಲ್ಲಿ ಹೋಟೆಲ್ ರೀತಿಯಲ್ಲೇ ಪೂರಿ ಮಾಡಲು ನೀವು ಎಂದಾದರು ಪ್ರಯತ್ನಿಸಿದ್ದೀರಾ? ಇದು ಸುಲಭವಲ್ಲ. ಹಾಗೆ ಮನೆಯಲ್ಲಿ ಈ ಪೂರಿ ಮಾಡಿ ಸವಿಯುವ ಕುರಿತು ನಾವಿಂದು ತಿಳಿದುಕೊಳ್ಳೋಣ. ಅದ್ರಲ್ಲೂ ಹೋಟೆಲ್‌ನಲ್ಲಿ ಸಿಗುವಂತಹ ರುಚಿ ರುಚಿಯ ಪೂರಿಗೆ ಮನೆಯಲ್ಲಿ ಹಿಟ್ಟು ಮಾಡಿಕೊಳ್ಳುವುದು ಹೇಗೆ ಅನ್ನೋದನ್ನು ತಿಳಿಯೋಣ.
ಈ ಪೂರಿ ಹಿಟ್ಟು ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹೋಟೆಲ್‌ನ ಮೃದುವಾದ ಪೂರಿಯನ್ನು ಮಾಡುವ ಟ್ರಿಕ್ಸ್ ಏನು?
- ಗೋಧಿ ಹಿಟ್ಟು
- ಚಿರೋಟಿ ರವೆ
- ಜೀರಿಗೆ ಸಾಸಿವೆ
- ಸಕ್ಕರೆ ಉಪ್ಪು
- ಕ್ಯಾರೆಟ್
- ಬಟಾಣಿ
- ಬೀನ್ಸ್
- ಆಲೂಗಡ್ಡೆ
- ತೆಂಗಿನಕಾಯಿ
- ಕೊತ್ತಂಬರಿ ಸೊಪ್ಪು
- ಪುದಿನ
- ಚಕ್ಕೆ
- ಲವಂಗ
- ಶುಂಠಿ
ಹೋಟೆಲ್‌ನ ಮೃದುವಾದ ಪೂರಿ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್‌ನಲ್ಲಿ ಗೋಧಿ ಹಿಟ್ಟು ಹಾಕಿಕೊಳ್ಳಿ. 1 ಕಪ್ ಗೋಧಿ ಹಿಟ್ಟಿಗೆ 3 ಕಪ್ ಚಿರೋಟಿ ರವೆ ಹಾಕಿಕೊಳ್ಳಿ. ಸ್ವಲ್ಪ ಸಕ್ಕರೆ, ಉಪ್ಪು, ಎಣ್ಣೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಬೇಕು. ಜಾಸ್ತಿ ನೀರು ಹಾಕಿಕೊಳ್ಳಬೇಡಿ. ನಿಧಾನವಾಗಿ ಹದ ಮಾಡಿಕೊಳ್ಳಿ.
ಹಿಟ್ಟು ಹದ ಆಗಲು ಬೌಲ್‌ನಲ್ಲಿ ಇಟ್ಟು ಪ್ಲೇಟ್ ಮುಚ್ಚಿ 10 ನಿಮಿಷ ಆದರು ಬಿಡಬೇಕು. ನಂತರ ಸಾಕು ಮಾಡಲು ಒಂದು ಸೀಟಿ ಹೊಡೆಸಿದ ಬಟಾಣಿ, ಆಲೂಗಡ್ಡೆ, ಕ್ಯಾರೆಟ್, ಬೀನ್ಸ್ ಕ್ಯಾರೆಟ್‌ಗೆ ಹಾಕಿ ನೀರು ಸಹ ಹಾಕಿಕೊಂಡು ಕುದಿಬರಲು ಬಿಡಿ. ಸೀಟಿ ಹೊಡೆಸಿಕೊಳ್ಳುವ ಅಗತ್ಯವಿಲ್ಲ.
ಈಗ ಇನ್ನೊಂದು ಕಡೆ ಮಿಕ್ಸಿ ಜಾರ್‌ಗೆ ತೆಂಗಿನಕಾಯಿ, ಚಕ್ಕೆ, ಕಾಳು ಮೆಣಸು, ಕೊತ್ತಂಬರಿ ಸೊಪ್ಪು, ಶುಂಠಿ, ಹಸಿ ಮೆಣಸು, ಬೆಳ್ಳುಳ್ಳಿ, ಲವಂಗ ಪುದಿನ, ನೆನೆಸಿಟ್ಟ ಗೋಡಂಬಿ, ಗಸೆಗಸೆ ಹಾಕಿ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಟೊಮೆಟೋ ಹಾಕಿಕೊಂಡು 1 ನಿಮಿಷ ಬಿಟ್ಟು ಈಗ ರುಬ್ಬಿಕೊಂಡಿದ್ದ ಮಸಾಲೆಗಳ ಹಾಕಿಕೊಳ್ಳಿ. ಹಾಗೆ ಮುಚ್ಚಳ ಮುಚ್ಚಿ 2 ನಿಮಿಷ ಬಿಡಿ. ಈಗ ಇದಕ್ಕೆ ಧನಿಯಾ ಪುಡಿ ಹಾಕಿ ಮಿಕ್ಸ್ ಮಾಡಿ. ಈಗ ಇದಕ್ಕೆ ಸ್ವಲ್ಪ ನೀರಿ ಹಾಕಿ. ಈಗ ಒಲೆ ಮೇಲೆ ಕುದಿಯುತ್ತಿದ್ದ ತರಕಾರಿಗಳ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಹಾಗೆ ಈಗ ಹಿಟ್ಟಿಗೆ ಎಣ್ಣೆ ಹಾಕಿಕೊಂಡು ಮತ್ತೆ ಹದ ಮಾಡಿಕೊಂಡು ಮತ್ತೆ ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಅದನ್ನು ಇಟ್ಟುಕೊಳ್ಳಿ ಹಾಗೆ ಮೆತ್ತಗೆ ಒಂದೊಂದೆ ಲಟ್ಟಿಸಿಕೊಂಡು ಎಣ್ಣೆಯಲ್ಲಿ ಬಿಟ್ಟು ಕರಿದುಕೊಳ್ಳಿ. ಇಷ್ಟಾದರೆ ಹೋಟೆಲ್ ರುಚಿಯ ಪೂರಿ ಸಿದ್ದವಾಗುತ್ತೆ, ನೀವು ಸಹ ಮನೆಯಲ್ಲಿ ಇದನ್ನ ಮಾಡಿ ನೋಡಿ.



Click it and Unblock the Notifications