Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೋಟೆಲ್ ಸ್ಟೈಲ್‌ನ ರವೆ ಕಿಚಡಿ ಸವಿದು ನೋಡಿ..! ಇದರ ರುಚಿಗೆ ಮನಸೋಲೋದು ಪಕ್ಕ..!
ನೀವು ಹೋಟೆಲ್‌ನಲ್ಲಿ ವಿಧ ವಿಧವಾದ ಖಾದ್ಯ ಸವಿದಿರುತ್ತೀರಿ. ಅದರಲ್ಲೂ ಹೋಟೆಲ್‌ಗೆ ಹೀಗಾದ ಉತ್ತರ ಭಾರತ ಸ್ಟೈಲ್‌ನ ಒಂದಿಷ್ಟು ರುಚಿಕರ ಖಾದ್ಯ ನಿಮ್ಮ ಖಣ್ಣಿಗೆ ಬೀಳಬಹುದು. ಅದರಲ್ಲೂ ಕಿಚಡಿ ಖಾದ್ಯ ನಿಮಗೂ ಇಷ್ಟವಾಗಬಹುದು. ಕಿಚಡಿ ಉತ್ತರ ಭಾರತೀಯರ ಫೇಮಸ್ ಖಾದ್ಯ, ಎಲ್ಲಾ ವಸ್ತುಗಳಿಂದ ಅವರು ಕಿಚಡಿ ಮಾಡಿ ಸವಿಯುತ್ತಾರೆ. ಇನ್ನು ಬೆಳಗ್ಗೆ ತಿಂಡಿಗೆ ಅವರು ರವೆಯಿಂದ ಮಾಡುವಂತಹ ಕಿಚಡಿ ಬಹಳ ಫೇಮಸ್.
ನೀವು ಕೂಡ ಬ್ರೇಕ್ ಫಾಸ್ಟ್‌ಗೆ ಈ ಕಿಚಡಿ ಸವಿದಿರಬಹುದು, ರವೆಯಿಂದ ಮಾಡುವಂತಹ ಈ ಕಿಚಡಿ ನಾವು ನೀವು ಮಾಡುವಂತಹ ಉಪ್ಪಿಟ್ಟಿನಂತಹ ಕಿಚಡಿ ಮಾಡುತ್ತಾರೆ. ಈ ಕಿಚಡಿ ಸವಿಯಲು ಬಹಳ ರುಚಿಕರ ಹಾಗೆ ಬಹಳ ಕಡಿಮೆ ಸಮಯದಲ್ಲಿ ಇದನ್ನು ಮಾಡಬಹುದು. ಹಾಗಾದ್ರೆ ನಾವು ಕೂಡ ಇಂದು ಹೊಸ ರೀತಿಯ ಕಿಚಡಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ.

ಹೋಟೆಲ್‌ನಲ್ಲಿ ನೀಡುವಂತಹ ಈ ಕಿಚಡಿಯನ್ನು ನಾವಿಂದು ಮನೆಯಲ್ಲೇ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಹಾಗಾದ್ರೆ ಈ ರವೆ ಕಿಚಡಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ರವೆ ಕಿಚಡಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ರವೆ - 200 ಗ್ರಾಂ
- ಈರುಳ್ಳಿ - 1
- ಟೊಮೇಟೊ - 1
- ಬಟಾಣಿ - 1/4 ಕಪ್
- ಕ್ಯಾರೆಟ್
- ಆಲೂಗಡ್ಡೆ
- ಹಸಿರು ಮೆಣಸಿನಕಾಯಿ - 5
- ಹುರಿಗಡಲೆ
- ಕರಿಬೇವಿನ ಎಲೆಗಳು
- ಜೀರಿಗೆ
- ಸಾಸಿವೆ
- ಉದ್ದಿನಬೇಳೆ
- ಗೋಡಂಬಿ
- ಶುಂಠಿ
- ಎಣ್ಣೆ
- ಉಪ್ಪು
- ತುಪ್ಪ
ರವೆ ಕಿಚಡಿ ಮಾಡುವ ವಿಧಾನವೇನು?
ಮೊದಲು ಬಾಣಲೆಯಲ್ಲಿ ರವೆ ಹಾಕಿಕೊಂಡು ಹುರಿದುಕೊಳ್ಳಬೇಕು. ಇದಕ್ಕೆ ತುಪ್ಪ ಹಾಕಿ ಹುರಿದುಕೊಂಡರೆ ಅದ್ಭುತವಾಗಿರುತ್ತೆ. ಸಣ್ಣ ಉರಿಯಲ್ಲಿ 5 ನಿಮಿಷ ಹುರಿದುಕೊಳ್ಳಿ. ಅನಂತರ ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಬಾಣಲೆಗೆ ಎಣ್ಣೆ ಹಾಕಿ, ಅದಕ್ಕೆ ಕಡಲೆಬೇಳೆ, ಸಾಸಿವೆ, ಜೀರಿಗೆ, ಹಾಕಿ ಹಾಗೆ ಇದಕ್ಕೆ ಉದ್ದಿನ ಬೇಳೆ, ಗೋಡಂಬಿ ಹಾಕಿ ಫ್ರೈ ಮಾಡಿಕೊಳ್ಳಿ.
ಈಗ ಇದಕ್ಕೆ ಈರುಳ್ಳಿ, ಹಸಿ ಮೆಣಸು, ಸಣ್ಣದಾಗಿ ಕತ್ತರಿಸಿಕೊಂಡಿರುವ ಕ್ಯಾರೆಟ್, ಆಲೂಗಡ್ಡೆ ಹಾಕಿಕೊಳ್ಳಿ. ಬಟಾಣಿ, ಕರಿಬೇವು, ಶುಂಠಿ ಸಹ ಹಾಕಿ ಫ್ರೈ ಮಾಡಿ. 2 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಉಪ್ಪು ಹಾಕಿ ಒಮ್ಮೆ ಮಿಕ್ಸ್ ಮಾಡಿ. ಇದು ಬೇಗ ಫ್ರೈ ಮಾಡಬೇಕಾದರೆ ಸಣ್ಣದಾಗಿ ಕತ್ತರಿಸಿಕೊಳ್ಳಿ. ನಂತರ ಟೊಮೆಟೋ ಕೂಡ ಹಾಕಿ 1 ನಿಮಿಷ ಫ್ರೈ ಮಾಡಿ.
ಈಗ ರವೆ ತೆಗೆದುಕೊಂಡ ಅಳತೆಯ ಕಪ್‌ನಲ್ಲಿಯೇ 1 ಕಪ್ ರವೆಗೆ 3 ಕಪ್ ನೀರು ಹಾಕಿಕೊಂಡು ಕುದಿಯಲು ಬಿಡಿ. ಈ ನೀರು ಕುದಿ ಬರಲು ಆರಂಭಿಸಿದಾಗ ರವೆ ಹಾಕಿಕೊಳ್ಳಿ. ಸಣ್ಣ ಉರಿಯಲ್ಲಿ ಇಟ್ಟು ರವೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇದು ಗಂಟು ಆಗದಂತೆ ಚೆನ್ನಾಗಿ ಕೈ ಬಿಡದೆ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಖಾರದ ಪುಡಿ, ಹಾಗೆ ರುಚಿ ನೋಡಿ ಉಪ್ಪು ಸಹ ಈಗ ಹಾಕಿಕೊಂಡು ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ 3 ನಿಮಿಷ ಮುಚ್ಚಳ ಮುಚ್ಚಿ ಬೇಯಲು ಬಿಡಿ.
ಇದಾದರೆ ನಿಮ್ಮ ಮುಂದೆ ರವೆ ಕಿಚಡಿ ರೆಡಿಯಾಗುತ್ತದೆ, ಕೊನೆಯದಾಗಿ ಒಂದು ಸ್ಪೂನ್ ತುಪ್ಪ ಹಾಕಿ ಮಿಕ್ಸ್ ಮಾಡಿದರೆ ರುಚಿ ರುಚಿಯ ಘಮ ಘಮ ಎನ್ನುವ ಕಿಚಡಿ ರೆಡಿಯಾಗುತ್ತೆ. ನೀವು ಕೂಡ ಮನೆಯಲ್ಲಿ ಇದನ್ನು ಮಾಡಿ ನೋಡಿ.



Click it and Unblock the Notifications