Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆ ಮಂದಿ ಮೆಚ್ಚುವ ಪನೀರ್ ಗ್ರೇವಿ..! ಕಡಿಮೆ ವಸ್ತು ಬಳಸಿ ಮಾಡಿ..!
ಪನೀರ್ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಪನೀರ್ ಪಲಾವ್, ಪನೀರ್ ಗ್ರೇವಿ, ಪನೀರ್ ಮಸಾಲಾ ಹೀಗೆ ವೆಜ್ ನಾನ್ ವೆಜ್ ಯಾವುದೇ ಇರಲಿ ಪನೀರ್ ಬಳಕೆಯಾಗೋದು ಕಾಮನ್. ಪನೀರ್ ಆರೋಗ್ಯದ ದೃಷ್ಟಿಯಿಂದಲೂ ಕೂಡ ಅತ್ಯುತ್ತಮ ಆಹಾರ ಎನ್ನಬಹುದು. ತೂಕ ಇಳಿಸಲು ಪನೀರ್ ಬಹಳ ಸಹಕಾರಿ ಎಂಬುದು ಕೂಡ ನಮಗೆ ತಿಳಿದಿದೆ.
ಪನ್ನೀರ್ ಪೋಷಕಾಂಶಗಳನ್ನು ಹೊಂದಿರುವ ಆಹಾರವಾಗಿದೆ. ಪನ್ನೀರ್‌ನಲ್ಲಿ ಕಾರ್ಬ್ಸ್, ಪ್ರೊಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ12, ಸೆಲೆನಿಯಮ್, ರಂಜಕ ಹಾಗೂ ಫೋಲೆಟ್ ಅಂಶವಿದೆ. ಹೀಗಾಗಿ ಪನೀರ್ ನಮ್ಮ ದೇಹಕ್ಕೆ ಅಗತ್ಯ ಅಂಶಗಳಲ್ಲಿ ಒಂದಾಗಿದೆ. ರೊಟ್ಟಿ, ಚಪಾತಿಗೆ ಸೇರಿ ಯಾವುದೇ ತಿಂಡಿಗೆ ಹಾಗೆ ಊಟಕ್ಕೂ ಕೂಡ ಪನೀರ್‌ನಿಂದ ಮಾಡಿರುವ ಖಾದ್ಯ ಅದ್ಭುತ ರುಚಿ ನೀಡುತ್ತದೆ.

ಹೀಗೆ ನಾವಿಂದು ಪನೀರ್‌ನಿಂದ ಮಾಡುವಂತಹ ಅದ್ಭುತವಾದ ಗ್ರೇವಿ ಮಾಡುವುದನ್ನು ತಿಳಿದುಕೊಳ್ಳೋಣ. ಪನೀರ್ ಗ್ರೇವಿ ಎಲ್ಲಾ ಖಾದ್ಯದ ಜೊತೆಗೂ ಕೂಡ ಸವಿಯಲು ರುಚಿ ನೀಡುತ್ತೆ. ಹೀಗಾಗಿ ರೆಸ್ಟೋರೆಂಟ್ ರುಚಿಯಲ್ಲಿ ಈ ಪನೀರ್ ಗ್ರೇವಿ ಮಾಡುವುದಾದರು ಹೇಗೆ? ಮನೆಯಲ್ಲಿ ಈ ರುಚಿಯಲ್ಲಿ ಮಾಡಬಹುದೇ? ಯಾವೆಲ್ಲಾ ರೀತಿ ತಯಾರಿ ಮಾಡಬೇಕು ಎಂಬೆಲ್ಲಾ ನೋಡಿ.
ಪನೀರ್ ಗ್ರೇವಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕಾಗುತ್ತದೆ? ಪನೀರ್ ಗ್ರೇವಿ ಮಾಡುವ ಸರಿಯಾದ ವಿಧಾನ ಯಾವುದು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಪನೀರ್ ಗ್ರೇವಿ ಮಾಡಲು ಬೇಕಾಗುವ ಪದಾರ್ಥಗಳು
- ಪನೀರ್ - 400 ಗ್ರಾಮ್
- ತೆಂಗಿನ ಕಾಯಿ ತುರಿ
- ಮೆಣಸಿನ ಪುಡಿ
- ಅರಶಿನ ಪುಡಿ
- ಗೋಡಂಬಿ
- ಈರುಳ್ಳಿ
- ಶುಂಠಿ/ಬೆಳ್ಳುಳ್ಳಿ ಪೇಸ್ಟ್
- ಟೊಮೆಟೋ ಪೇಸ್ಟ್ -3
- ಧನಿಯಾ ಪುಡಿ
- ಗರಂ ಮಸಾಲಾ
- ಬೆಣ್ಣೆ
- ಕೊತ್ತಂಬರಿ ಸೊಪ್ಪು
- ಉಪ್ಪು
- ಎಣ್ಣೆ
ಪನೀರ್ ಗ್ರೇವಿ ಮಾಡುವ ವಿಧಾನ
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತೆಂಗಿನಕಾಯಿ ತುರಿ, ಗೋಡಂಬಿ, ಸೋಂಕಾಳು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಈ ರುಬ್ಬಿದ ಪೇಸ್ಟ್ ಅನ್ನು ತೆಗೆದು ಒಂದು ಬೌಲ್‌ಗೆ ಹಾಕಿಡಿ. ನಂತರ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಬೇಕು. ಪನೀರ್ ಖಾದ್ಯ ಮಾಡುವಾಗ ಎಣ್ಣೆ ಸ್ವಲ್ಪ ಹೆಚ್ಚಾಗಿ ಬಳಸಿ.
ಎಣ್ಣೆ ಕಾದ ಬಳಿಕ ಒಂದು ಸ್ಪೂನ್ ಖಾರದ ಪುಡಿ, ಅರಶಿನ, ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಉರಿ ಸಣ್ಣದಾಗಿ ಇರಲಿ. ಈಗ ಹೆಚ್ಚಿಕೊಂಡಿರುವ ಪನೀರ್ ಅನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. 2 ನಿಮಿಷ ಫ್ರೈ ಮಾಡಿದ ಬಳಿಕ ಪನೀರ್ ಅನ್ನು ತೆಗೆದು ಒಂದು ಪ್ಲೇಟ್‌ಗೆ ಹಾಕಿಟ್ಟುಕೊಳ್ಳಿ.
ಈಗ ಅದೇ ಪಾತ್ರೆಗೆ ಜೀರಿಗೆ, ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. 3 ರಿಂದ 4 ನಿಮಿಷ ಇದನ್ನು ಫ್ರೈ ಮಾಡಬೇಕು. ಅನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ. ನಂತರ ಮೂರು ಟೊಮೆಟೋ ಅನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಪೇಸ್ಟ್ ಮಾಡಿಕೊಂಡು ಅದನ್ನು ಕೂಡ ಈ ಪಾತ್ರೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಮತ್ತೆ ಸ್ಬಲ್ಪ ಖಾರದ ಪುಡಿ, ಧನಿಯಾ ಹಾಕಿ ಮಿಕ್ಸ್ ಮಾಡುತ್ತಾ 1 ನಿಮಿಷ ಫ್ರೈ ಮಾಡಲು ಬಿಡಬೇಕು.
1 ನಿಮಿಷದ ಬಳಿಕ ಮೊದಲು ರುಬ್ಬಿಕೊಂಡಿದ್ದ ತೆಂಗಿನ ತುರಿ ಹಾಗೂ ಗೋಡಂಬಿ ಮಿಕ್ಸ್ ಅನ್ನು ಇದಕ್ಕೆ ಹಾಕಿ ಸ್ವಲ್ಪ ನೀರು, ಉಪ್ಪು ಹಾಕಿಕೊಂಡು ತಿರುಗಿಸಿಕೊಳ್ಳಿ. ಮತ್ತೆ 1 ನಿಮಿಷ ಬೇಯಿಸಿದ ಬಳಿಕ ಈಗ ಫ್ರೈ ಮಾಡಿರುವ ಪನೀರ್ ಅನ್ನು ಇದಕ್ಕೆ ಹಾಕಿ 2 ನಿಮಿಷ ಬೇಯಲು ಬಿಡಿ. ಅಂತಿಮವಾಗಿ ಸ್ವಲ್ಪ ಗರಂ ಮಸಾಲ ಹಾಕಿ ಮಿಕ್ಸ್ ಮಾಡಿ 2 ನಿಮಿಷ ಬೇಯಿಸಿ, ಕೊನೆಗೆ 1 ಸ್ಪೂನ್ ಬೆಣ್ಣೆ, ಕೊತ್ತಂಬರಿ ಸೊಪ್ಪು ಹಾಕಿದರೆ ನಿಮ್ಮ ಮುಂದೆ ಪನೀರ್ ಗ್ರೇವಿ ರೆಡಿಯಾಗುತ್ತದೆ.



Click it and Unblock the Notifications