Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಒಂದು ಪೀಸ್ ತರಕಾರಿ ಬಳಸದೆ ರುಚಿ ರುಚಿಯ ಪಲಾವ್ ಮಾಡಿ..! ಹೋಟೆಲ್ ರುಚಿಯ ಪಲಾವ್ ಇದು!
ನಾವು ಸಾಮಾನ್ಯವಾಗಿ ಬೆಳಗ್ಗೆ ತಿಂಡಿಗೆ ಪಲಾವ್ ಮಾಡಬೇಕು ಅಂದುಕೊಂಡರೆ ಒಂದಿಷ್ಟು ತರಕಾರಿ ಹಾಕಿಯೇ ಮಾಡುತ್ತೇವೆ. ತರಕಾರಿ ಇಲ್ಲಿದ್ದರೆ ಪಲಾವ್ ತಂಟೆಗೂ ಹೋಗುವುದಿಲ್ಲ. ಏಕೆಂದರೆ ಪಲಾವ್‌ಗೆ ತರಕಾರಿ ಹಾಕಿದರೆ ಮಾತ್ರ ಅದರ ರುಚಿ ದುಪ್ಪಟ್ಟಾಗುತ್ತೆ ಎಂದು ಭಾವಿಸುತ್ತೇವೆ. ಇನ್ನು ಎಲ್ಲಾ ಸಮಯದಲ್ಲೂ ನಾವು ಪಲಾವ್‌ಗೆ ತರಕಾರಿಯಾಗಿ ಕ್ಯಾರೆಟ್, ನವಿಲುಕೋಸು, ಬೀನ್ಸ್ ಹೀಗೆ ಒಂದಿಷ್ಟು ತರಕಾರಿ ಹಾಕೋದು ಖಾಯಂ.
ಆದ್ರೆ ಒಂದೇ ಒಂದು ತರಕಾರಿಯನ್ನು ಬಳಸದೆಯೂ ಪಲಾವ್ ಮಾಡಬಹುದು, ನೀವು ಕೂಡ ಹಲವು ಬಾರಿ ಈ ರೀತಿ ತರಕಾರಿಯನ್ನೇ ಬಳಸದೆ ಪಲಾವ್ ಮಾಡಿರಬಹುದು. ಆದ್ರೆ ನೀವಂದುಕೊಂಡಂತಹ ರುಚಿಯಲ್ಲಿ ಮಾಡಲು ಸಾಧ್ಯವಾಗದೇ ಇರಬಹುದು. ಪಲಾವ್‌ಗೆ ತರಕಾರಿ ಹಾಕಿದಾಗ ಒದಗಿ ಬರುತ್ತದೆ. ಆದ್ರೆ ತರಕಾರಿ ಇಲ್ಲದೆ ಮಾಡಿದ್ರೆ ಬರಿ ಅನ್ನ ಮಾತ್ರ ಸಿಗುತ್ತದೆ ಎಂಬ ದೂರು ನಿಮ್ಮದಾಗಿರಬಹುದು.

ಆದ್ರೆ ನಾವಿಂದು ತರಕಾರಿಯನ್ನೇ ಬಳಸದೆ ಅತ್ಯಂತ ರುಚಿಕರವಾಗಿ ಮನೆ ಮಂದಿಯಲ್ಲರು ಇಷ್ಟ ಪಟ್ಟು ಸವಿಯುವಂತಹ ರೀತಿಯಲ್ಲಿ ಈ ಪಲಾವ್ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಈ ಪಲಾವ್ ಮಾಡಲು ಯಾವುದೇ ತರಕಾರಿ ಬೇಡ, ಬಟಾಣಿ ಕಾಳು ಸೇರಿ ಕೆಲವೇ ಕೆಲವು ವಸ್ತು ಬಳಸಿ ಮಾಡಬಹುದು.
ತರಕಾರಿ ಬಳಸದೆಯೇ ಈ ಪಲಾವ್ ಮಾಡುವುದು ಹೇಗೆ? ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನ ಯಾವ ರೀತಿ? ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ತರಕಾರಿ ಬಳಸದೆ ಪಲಾವ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅಕ್ಕಿ
- ಟೊಮೆಟೋ
- ಈರುಳ್ಳಿ
- ಕೊತ್ತಂಬರಿ ಸೊಪ್ಪು
- ಒಣ ಮೆಣಸು
- ಶುಂಠಿ
- ಬೆಳ್ಳುಳ್ಳಿ
- ಬಟಾಣಿ
- ಜೀರಿಗೆ
- ಪಲಾವ್ ಎಲೆ
- ಚಕ್ಕೆ
- ಮರಾಠಿ ಮೊಗ್ಗು
ತರಕಾರಿ ಬಳಸದೆ ಪಲಾವ್ ಮಾಡುವುದು ಹೇಗೆ?
ಒಂದು ಕಪ್ ಸೋನಾ ಮಸೂರಿ ಅಕ್ಕಿಯನ್ನು ಬೌಲ್‌ಗೆ ಹಾಕಿ ಚೆನ್ನಾಗಿ ತೊಳೆದು ನೆನೆಸಿಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಕೊತ್ತಂಬರಿ, ಶುಂಠಿ, ಬೆಳ್ಳುಳ್ಳಿ, ಒಣ ಮೆಣಸು, ಜಿರಿಗೆ, ನೀರು ಹಾಕಿ ರುಬ್ಬಿಕೊಳ್ಳಬೇಕು. ಈ ಮಸಾಲೆಯನ್ನು ರುಬ್ಬಿಕೊಂಡು ಬದಿಗೆ ಇಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಕುಕ್ಕರ್ ಇಟ್ಟುಕೊಂಡು ಅದಕ್ಕೆ ಎಣ್ಣೆ ಹಾಕಿಕೊಂಡು ಪಲಾವ್ ಎಲೆ, ಗೋಡಂಬಿ, ಲವಂಗ, ಚಕ್ಕೆ, ಏಲಕ್ಕಿ, ಮರಾಠಿ ಮೊಗ್ಗಿ, ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ಎರಡು ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ ನೆನೆಸಿರುವ ಬಟಾಣಿ ಹಾಕಿ 1 ನಿಮಿಷ ಫ್ರೈ ಮಾಡಿ. ಅನಂತರ ಇದಕ್ಕೆ ಒಂದು ಟೊಮೆಟೋ ಅನ್ನು ಚೆನ್ನಾಗಿ ಹೆಚ್ಚಿಕೊಂಡು ಇದಕ್ಕೆ ಹಾಕಿಕೊಳ್ಳಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿ.
ಈಗ ರುಬ್ಬಿಕೊಂಡಿರುವ ಮಸಾಲೆಯನ್ನು ಇದಕ್ಕೆ ಹಾಕಿ ಫ್ರೈ ಮಾಡಿ. 2 ನಿಮಿಷ ಫ್ರೈ ಮಾಡಿಕೊಂಡರೆ ಸಾಕಾಗುತ್ತದೆ. ಇದು ಎಣ್ಣೆ ಬಿಟ್ಟುಕೊಳ್ಳುತ್ತದೆ. ಈಗ ಅಳತೆ ಕಪ್‌ನಲ್ಲಿ ಬಿಸಿ ನೀರು ಸೇರಿಸಿಕೊಳ್ಳಬೇಕು. ಹಾಗೆ ನಂತರ ಕುದಿಬರಲು ಬಿಡಿ. ನಂತರ ನೆನೆಸಿಟ್ಟಿರುವ ಅಕ್ಕಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ ಸೀಟಿ ಹೊಡೆಯಲು ಬಿಡಿ. ನೀವು 2 ಅಥವಾ 3 ಸೀಟಿ ಹೊಡೆಯಲು ಬಿಡಬೇಕು. ಇಷ್ಟಾದರೆ ತರಕಾರಿ ಇಲ್ಲದ ರುಚಿಕರ ಪಲಾವ್ ರೆಡಿಯಾಗುತ್ತದೆ. ನೀವು ಕೂಡ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications