Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗರ್ಭಿಣಿಯರಿಗೂ ನೀಡಬಹುದಾದ ಏಡಿ ಕರಿ; ಮಾಡೋದು ಹೇಗೆ ಗೊತ್ತಾ?
ನಾನ್‌ವೆಜ್ ಪ್ರಿಯರು ವಾರದಲ್ಲಿ ಒಮ್ಮೆಯಾದರು ರುಚಿ ರುಚಿಯಾದ ನಾನ್‌ವೆಜ್ ಖಾದ್ಯಗಳ ಮಾಡಿ ಸವಿಯೋದು ನೋಡಬಹುದು. ಚಿಕನ್, ಮಟನ್, ಫಿಶ್ ಹೀಗೆ ಹಲವು ರೀತಿಯ ಖಾದ್ಯ ಮಾಡುವುದು ನೋಡಬಹುದು. ಹಾಗೆ ನಾನ್‌ವೆಜ್ ಪ್ರಿಯರಿಗೆ ಸೀಫುಡ್ ಅಂದ್ರೆ ಪಂಚಪ್ರಾಣ. ಅದ್ರಲ್ಲೂ ಏಡಿಯಿಂದ ಮಾಡುವ ಹಲವು ಖಾದ್ಯಗಳು ಎಲ್ಲರಿಗೂ ಇಷ್ಟವಾಗುತ್ತೆ.
ಏಡಿ ಪ್ರಿಯರು ಏಡಿಯಿಂದ ಮಾಡುವ ಹಲವು ಖಾದ್ಯ ಮಾಡಬಹುದು. ಅದ್ರಲ್ಲೂ ಏಡಿ ಕರಿ ಆರೋಗ್ಯಕ್ಕೂ ಬಹಳ ಉತ್ತಮ. ಅದ್ರಲ್ಲೂ ಗರ್ಭಿಣಿಯರ ಆರೋಗ್ಯಕ್ಕೆ ಇದು ಬಹಳ ಉತ್ತಮ ಎಂದು ಹೇಳಲಾಗಿದೆ. ಅದ್ರಲ್ಲೂ ಸಮುದ್ರ ಏಡಿಗಳು ವಿಶೇಷ ಆರೋಗ್ಯಕರ ಅಂಶಗಳನ್ನು ತಮ್ಮಲ್ಲಿಟ್ಟುಕೊಂಡಿರಲಿದೆ. ಇವು ಗರ್ಭಿಣಿಯರ ಆರೋಗ್ಯಕ್ಕೆ ಉತ್ತಮ ಎನ್ನಲಾಗಿದೆ.

ಏಡಿ ಕರಿ ನೀವು ಹೋಟೆಲ್‌ಗಳಲ್ಲಿ ಸವಿಯಲು ಬಹಳ ದುಬಾರಿಯಾಗಿರುತ್ತದೆ. ಆದ್ರೆ ಬಹುತೇಕರಿಗೆ ಇದನ್ನು ಮನೆಯಲ್ಲಿ ಮಾಡುವ ವಿಧಾನ ತಿಳಿದಿರುವುದಿಲ್ಲ. ಆದ್ರೆ ನಾವಿಂದು ಸುಲಭವಾಗಿ ಮನೆಯಲ್ಲಿ ಮಾಡುವ ಕುರಿತು ಹೇಳಲಿದ್ದೇವೆ. ಏಡಿ ಕರಿಯನ್ನು ಮನೆಯಲ್ಲಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಏಡಿ ಕರಿ ಮಾಡಲು ಬೇಕಾಗುವ ಅಗತ್ಯ ಪದಾರ್ಥಗಳು
- ಏಡಿ
- ಹುಣಸೆ ಹುಳಿ
- ಖಾರದ ಪುಡಿ
- ಧನಿಯಾ ಪುಡಿ
- ಅರಿಶಿನ ಪುಡಿ
- ಏಲಕ್ಕಿ
- ಲವಂಗ
- ಮೆಂತ್ಯ
- ಸೊಂಪು ಕಾಳು
- ಕಾಳು ಮೆಣಸು
- ಜೀರಿಗೆ
- ಕರಿಬೇವು
- ಟೊಮೆಟೊ 1
- ಈರುಳ್ಳಿ 1
- ತೆಂಗಿನಕಾಯಿ
- ಕೊತ್ತಂಬರಿ ಸೊಪ್ಪು
- ಬೆಳ್ಳುಳ್ಳಿ
- ಶುಂಠಿ
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಏಡಿ ಕರಿ ಮಾಡುವ ವಿಧಾನವೇನು?
ಮೊದಲು ಏಡಿಗಳನ್ನು ಚೆನ್ನಾಗಿ ತೊಳೆದು ಕತ್ತರಿಸಿಕೊಳ್ಳಬೇಕು. ಅಥವಾ ಮಾರುಕಟ್ಟೆಯಲ್ಲಿ ಕತ್ತರಿಸಿಕೊಂಡು ಬಂದರೂ ಸುಲಭವಾಗುತ್ತೆ. ನಂತರ ಚೆನ್ನಾಗಿ ತೊಳೆದು ಅದನ್ನು ಬಿಸಿ ನೀರಿನಲ್ಲಿ ಹಾಕಿ ತೊಳೆಯಿರಿ.
ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಅದಕ್ಕೆ ಕಾಳು ಮೆಣಸು, ಏಲಕ್ಕಿ, ಸೋಂಪು, ಜೀರಿಗೆ, ಬೆಳ್ಳುಳ್ಳಿ, ಈರುಳ್ಳಿ, ಲವಂಗ ಹಾಕಿ ಫ್ರೈ ಮಾಡಿಕೊಳ್ಳಿ ನಂತರ ಇದನ್ನು ತಣ್ಣಗಾಗಲು ಬಿಡಿ.
ಅನಂತರ ಮಿಕ್ಸಿ ಜಾರ್‌ಗೆ ಈ ಮಸಾಲೆಗಳ ಹಾಕಿಕೊಂಡು ಬಳಿಕ ತೆಂಗಿನಕಾಯಿ ತುರಿ ಖಾರದ ಪುಡಿ, ಕೊತ್ತಂಬರಿ ಸೊಪ್ಪು, ಧನಿಯಾ ಪುಡಿ, ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಈ ಮಸಾಲೆ ತೆಗೆದು ಒಂದು ಬೌಲ್‌ಗೆ ಹಾಕಿಡಿ. ಈಗ ಒಲೆ ಮೇಲಿನ ಬಾಣಲೆಗೆ ಎಣ್ಣೆ ಹಾಕಿ ಇದಕ್ಕೆ ಜೀರಿಗೆ ಈರುಳ್ಳಿ, ಕರಿಬೇವು, ಟೊಮೆಟೋ ಹಾಕಿ ಫ್ರೈ ಮಾಡಿಕೊಳ್ಳಿ. ಹಾಗೆ ಇದಕ್ಕೆ ಅರಶಿಣ ಹಾಕಿ 1 ನಿಮಿಷ ಫ್ರೈ ಮಾಡಿ.
ಈಗ ನೀರಿನಲ್ಲಿ ತೊಳೆದು ಇಟ್ಟುಕೊಂಡ ಏಡಿಯನ್ನು ಇದಕ್ಕೆ ಹಾಕಿ 3 ನಿಮಿಷ ಫ್ರೈ ಮಾಡಿಕೊಳ್ಳಿ. ಇದಾದ ಬಳಿಕ ನೀರಿನಲ್ಲಿ ನೆನೆಸಿಟ್ಟ ಹುಣಸೆ ಹುಳಿಯನ್ನು ಇದಕ್ಕೆ ಹಾಕಿಕೊಳ್ಳಿ. ಹಾಗೆ ಇದಕ್ಕೆ ಸ್ವಲ್ಪ ಉಪ್ಪು ಹಾಗೆ ನೀರು ಸಹ ಹಾಕಿಕೊಂಡು ಮತ್ತೆ ಕುದಿಬರಲು ಬಿಡಿ. ಮುಚ್ಚಳ ಮುಚ್ಚಿ 3 ನಿಮಿಷ ಕುದಿಸಿ ಕೊಳ್ಳಿ. ಆಗಾಗ ಮಿಕ್ಸ್ ಮಾಡಿ. ಅನಂತರ ಮುಚ್ಚಳ ತೆಗೆದು 10 ನಿಮಿಷ ಕುದಿ ಬರಲು ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಏಡಿ ಕರಿ ಸಿದ್ದವಾಗುತ್ತೆ. ಈ ಕರಿಯ ರುಚಿ ಒಮ್ಮೆ ಸವಿದರೆ ಪದೆ ಪದೇ ಮಾಡಿ ಸವಿಯಲು ನೀವು ಮುಂದಾಗುವುದು ಖಚಿತ.



Click it and Unblock the Notifications