Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೋಟೆಲ್ ರುಚಿಯ ನೀರ್ ಚಟ್ನಿ ಮಾಡೋದು ಹೇಗೆ? ರೆಸಿಪಿ ಏನು ಗೊತ್ತಾ?
ಬೆಳಗ್ಗೆಯ ತಿಂಡಿಗೆ ಏನಾದರು ಚಟ್ನಿ ಇದ್ದರೆ ರುಚಿ ರುಚಿಯಾಗಿ ತಿಂಡಿ ಸವಿಯಬಹುದು. ಆಗ ಮಾತ್ರ ಆ ತಿಂಡಿಗೆ ಒಂದಿಷ್ಟು ರುಚಿ ಹೆಚ್ಚಾಗುತ್ತೆ. ಅದ್ರೆ ಯಾವ ತಿಂಡಿಗೆ ಯಾವ ಚಟ್ನಿ ಮಾಡಬೇಕು ಅನ್ನೋದೆ ಹಲವರ ಗೊಂದಲ. ಯಾಕಂದ್ರೆ ಚಟ್ನಿ ಮಾಡಿದರೆ ಆ ತಿಂಡಿಗೆ ಅದು ಸೆಟ್ ಆಗಬೇಕು. ಮನೆಯಲ್ಲಿ ಎಲ್ಲರಿಗೂ ಈ ಚಟ್ನಿ ಇಷ್ಟವಾಗಬೇಕಾಗುತ್ತದೆ. ಹೀಗಾಗಿ ಯಾವ ಚಟ್ನಿ ಮಾಡುವುದು ಅನ್ನೋದೆ ಪ್ರಶ್ನೆ.
ಹೀಗಿರುವಾಗ ಸುಲಭವಾಗಿ ರುಚಿ ರುಚಿಯಾಗಿ ಚಟ್ನಿ ಮಾಡಬೇಕು ಅಂದುಕೊಂಡಿದ್ದರೆ ಹೋಟೆಲ್‌ನಲ್ಲಿ ಮಾಡುವ ನೀರ್ ಚಟ್ನಿ ಮಾಡಿ ನೋಡಿ. ನಿಮಗೆ ದೋಸೆ, ಇಡ್ಲಿ ಜೊತೆಗೆ ಅವರು ನೀಡಿರುತ್ತಾರೆ. ನೋಡಲು ಸಿಂಪಲ್ ಆಗಿ ಕಂಡರು ಅದರ ರುಚಿಗೆ ಸಾಟಿ ಇಲ್ಲ. ತಂಗಿನ ಕಾಯಿ ಬಳಸಿ ಮಾಡುವ ಚಟ್ನಿಯನ್ನ ನಾವು ಸಹ ಮನೆಯಲ್ಲಿ ಮಾಡುತ್ತೇವೆ. ಆದ್ರೆ ಹೋಟೆಲ್‌ನಲ್ಲಿ ನೀಡುವ ಈ ಚಟ್ನಿಯ ರುಚಿಯೇ ಬೇರೆಯಾಗಿರುತ್ತದೆ.

ಹಾಗಾದ್ರೆ ಹೋಟೆಲ್ ರುಚಿಯ ಈ ಕಾಯಿ ಚಟ್ನಿ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ನೀರ್ ಚಟ್ನಿ ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನೀರ್ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
- ಕಡಲೆ
- ಹುರಿಗಡಲೆ
- ತೆಂಗಿನಕಾಯಿ
- ಶುಂಠಿ
- ಬೆಳ್ಳುಳ್ಳಿ
- ಹಸಿರು ಮೆಣಸಿನಕಾಯಿ - 10
- ಈರುಳ್ಳಿ - 1/2 (ಸಣ್ಣ ಗಾತ್ರ)
- ಹುಣಸೆಹಣ್ಣು - ಚಿಕ್ಕ ಗಾತ್ರ
- ಉಪ್ಪು
- ನೀರು
- ಕೊತ್ತಂಬರಿ ಸೊಪ್ಪು - 1/4 ಕಪ್
ಒಗ್ಗರಣೆ ಮಾಡಿಕೊಳ್ಳಲು
- ಎಣ್ಣೆ - 2 ಟೀಸ್ಪೂನ್
- ಸಾಸಿವೆ - 1 tbsp
- ಉದ್ದು
- ಹುರಿಗಡಲೆ
- ಕೆಂಪು ಮೆಣಸಿನಕಾಯಿ - 2
- ಕರಿಬೇವು
- ಇಂಗು - 1 tbsp
ನೀರ್ ಚಟ್ನಿ ಮಾಡುವುದು ಹೇಗೆ?
ಮೊದಲು ಕಡಲೆ ಬೀಜವನ್ನು ಹುರಿದುಕೊಂಡು ಅದರ ಸಿಪ್ಪೆ ತೆಗೆದುಕೊಳ್ಳಬೇಕು. ಒಂದು ಪಾತ್ರೆಗೆ ಎಣ್ಣೆ ಹಾಕಿಕೊಂಡು ಹಸಿ ಮೆಣಸು, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹುಣಸೆ ಹಣ್ಣು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಬಳಿಕ ಇದನ್ನು ತಣ್ಣಗಾಗಲು ಬಿಟ್ಟು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಅದಕ್ಕೆ ಹುರಿದುಕೊಂಡ ಕಡಲೆ ಬೀಜ, ಹುರಿಗಡಲೆ, ತೆಂಗಿನ ತುರಿ ಸಹ ಹಾಕಿಕೊಂಡು ರುಬ್ಬಿಕೊಳ್ಳಿ.
ರುಬ್ಬುವಾಗ ಉಪ್ಪು ಸಹ ಹಾಕಿಕೊಳ್ಳಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿ ಹಾಗೂ ನೀರು ಸಹ ಹಾಕಿ ಒಂದು ಸುತ್ತು ರುಬ್ಬಿಕೊಂಡು ತೆಗೆದುಕೊಳ್ಳಿ. ಈಗ ಒಂದು ಬೌಲ್‌ಗೆ ಹಾಕಿಕೊಳ್ಳಿ.
ನಂತರ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಸಾಸಿವೆ, ಕರಿವೇವು, ಮೆಣಸು, ಇಂಗು, ಉದ್ದಿನ ಬೇಳೆ, ಕಡಲೆಬೇಳೆ ಹಾಕಿಕೊಂಡು ಫ್ರೈ ಮಾಡಿ. 2 ನಿಮಿಷ ಫ್ರೈ ಮಾಡಿದ ಬಳಿಕ ಅದನ್ನು ಈಗ ರುಬ್ಬಿಕೊಂಡಿರುವ ಚಟ್ನಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ನೀರ್ ಚಟ್ನಿ ರೆಡಿಯಾಗುತ್ತದೆ. ಇದನ್ನು ಟೇಸ್ಟ್ ಮಾಡಿ ಉಪ್ಪು ಸರಿಯಾಗಿದೆಯೇ ನೋಡಿ. ತಿಂಡಿ ಹೊತೆ ಸವಿಯಲು ನೀಡಿ. ಇದಕ್ಕೆ ಎಷ್ಟು ನೀರು ಬೇಕಾದರೂ ಹಾಕಿಕೊಳ್ಳಿ. ತೆಳುವಾದರೆ ದೋಸೆ, ಇಡ್ಲಿಗೆ ರುಚಿಯಾಗಿರುತ್ತದೆ. ಒಮ್ಮೆ ಮನೆಯಲ್ಲಿ ಈ ರೀತಿಯ ಚಟ್ನಿ ಟ್ರೈ ಮಾಡಿ ನೋಡಿ.
ಇನ್ನು ಒದೇ ಚಟ್ನಿ ಸ್ವಲ್ಪ ಗಟ್ಟಿಯಾಗಬೇಕಾದರೆ ರುಬ್ಬಿಕೊಳ್ಳುವಾಗ ನೀರು ಹಾಕಿಕೊಳ್ಳದೆ ರುಬ್ಬಿಕೊಳ್ಳಿ. ಕೊನೆಯದಾಗಿ ಮಿಕ್ಸಿ ಜಾರ್‌ನಿಂದ ತೆಗೆದುಕೊಂಡು ಸ್ವಲ್ಪವೇ ನೀರು ಹಾಕಿಕೊಳ್ಳಿ. ಆಗ ಚಟ್ನಿ ದಪ್ಪವಾಗುತ್ತೆ ಅಷ್ಟೆ.



Click it and Unblock the Notifications