Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೋಟೆಲ್ ಶೈಲಿಯ ಚನ್ನಾ ಮಸಾಲೆ ಮಾಡುವುದು ಹೇಗೆ?
ಮನೆಯಲ್ಲಿ ಚಪಾತಿ, ದೋಸೆ, ಇಡ್ಲಿ, ಪರೋಟ, ಅನ್ನ ಹೀಗೆ ಯಾವುದೇ ಖಾದ್ಯ ಇದ್ದರೂ ಅದನ್ನು ಸವಿಯಬೇಕಾದರೆ ಯಾವುದಾದರು ಸೈಡ್ ಡಿಶ್ ಇರಬೇಕಾಗುತ್ತೆ. ಇಲ್ಲದಿದ್ದರೆ ಈ ಖಾದ್ಯಗಳು ಯಾವುದೂ ರುಚಿ ನೀಡುವುದಿಲ್ಲ. ಹೀಗಾಗಿ ಮನೆಯಲ್ಲಿ ಹಲವು ರೀತಿಯ ಮಸಾಲಾ ಭರಿತ ಖಾದ್ಯವಂತು ನಾವು ಮಾಡುತ್ತೇವೆ.
ಅದರಲ್ಲೂ ನಾವು ಚನ್ನಾ ಮಸಾಲ ಮಾಡಿದರೆ ಊಟಕ್ಕೆ, ತಿಂಡಿಗೆ ಎಲ್ಲದಕ್ಕೂ ಬಳಕೆಗೆ ಬರುತ್ತದೆ, ರೊಟ್ಟಿ, ಚಪಾತಿಗೆ ಇದಕ್ಕಿಂತ ಉತ್ತಮ ಸೈಡ್ ಡಿಶ್ ಸವಿಯಲು ಸಿಗುವುದಿಲ್ಲ. ಹೀಗಾಗಿ ನಾವು ಚನ್ನಾ ಮಸಾಲೆಯನ್ನು ಹೋಟೆಲ್‌ನಲ್ಲಿ ಅಥವಾ ರೆಸ್ಟೋರೆಂಟ್‌ನಲ್ಲಿ ಸವಿದಿರುತ್ತೀರಿ. ಹೋಟೆಲ್‌ನಲ್ಲಿ ನೀಡಲಾಗುವ ಚಾನಾ ಮಸಾಲೆಯು ಸಿಕ್ಕಾಪಟ್ಟೆ ಟೇಸ್ಟಿಯಾಗಿರುತ್ತೆ.

ಆದ್ರೆ ನಾವು ಮನೆಯಲ್ಲಿ ಈ ಚನ್ನಾ ಮಸಾಲೆ ಮಾಡಿದಾಗ ನೀರಾಗುವುದು, ಟೇಸ್ಟ್ ಸಹ ಅಷ್ಟೊಂದು ಚೆನ್ನಾಗಿರುವುದಿಲ್ಲ. ಹೀಗಾಗಿಯೇ ನಾವಿಂದು ಮನೆಯಲ್ಲೇ ಈ ಹೋಟೆಲ್ ರುಚಿಯ ಚಾನಾ ಮಸಾಲೆ ಮಾಡುವ ಕುರಿತು ತಿಳಿದುಕೊಳ್ಳೋಣ.
ಹಾಗಾದ್ರೆ ಈ ಚನ್ನಾ ಮಸಾಲೆ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಮಾಡುವಾಗ ಯಾವ ರೀತಿಯ ಮುನ್ಸೂಚನೆ ತೆಗೆದುಕೊಳ್ಳಬೇಕು ಎಂಬುದನ್ನು ಈ ಮೂಲಕ ತಿಳಿದುಕೊಳ್ಳೋಣ.
ಚನ್ನಾ ಮಸಾಲೆ ಮಾಡಲು ಬೇಕಾಗುವ ಪದಾರ್ಥಗಳು
ಚನ್ನಾ ಕಡಲೆ - 100 ಗ್ರಾಮ್
ಜೀರಿಗೆ
ಶುಂಠಿ
ಈರುಳ್ಳಿ
ಹಸಿ ಮೆಣಸು
ಟೊಮೆಟೋ
ಅರಶಿಣ
ಏಲಕ್ಕಿ
ಪಲಾವ್ ಎಲೆ
ಎಣ್ಣೆ
ಉಪ್ಪು
ಚನ್ನಾ ಮಸಾಲೆ ಮಾಡುವುದು ಹೇಗೆ?
100 ಗ್ರಾಮ್ ಚನ್ನಾ ಮಸಾಲೆ ಕಡ್ಲೆಯನ್ನು ಚೆನ್ನಾಗಿ ತೊಳೆದು ಅದನ್ನು ಪಾತ್ರೆಗೆ ಹಾಕಿ ನೀರು ಹಾಕಿ ರಾತ್ರಿಯೇ ನೆನೆಸಿಡಬೇಕು. ಈಗ ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ ಚಾನಾ ಕಡಲೆ ಹಾಕಿ ಅದಕ್ಕೆ ನೀರು ಸಹ ಹಾಕಿಕೊಳ್ಳಿ. ಬಳಿಕ ಚೆನ್ನಾಗಿ 5 ನಿಮಿಷ ಬೇಯಿಸಿಕೊಳ್ಳಿ. ಬಳಿಕ ಸಣ್ಣ ಉರಿಯಲ್ಲಿ ಮತ್ತೆ 10 ನಿಮಿಷ ಬೇಯಿಸಿಕೊಳ್ಳಿ.
ಈಗ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಜೀರಿಗೆ, ಶುಂಠಿ, ಈರುಳ್ಳಿ, ಹಾಕಿ ಹುರಿದುಕೊಳ್ಳಿ. 1 ನಿಮಿಷದ ಬಳಿಕ ಇದಕ್ಕೆ ಟೊಮೆಟೋ, ಉಪ್ಪು ಹಾಕಿ ಫ್ರೈ ಮಾಡಿ. ಟೊಮೆಟೋ ಬೆಂದ ಬಳಿಕ ಅರಶಿನ ಪುಡಿ ಹಾಕಿ ಫ್ರೈ ಮಾಡಿ. ಸುಮಾರು 3 ನಿಮಿಷಗಳ ಕಾಲ ಫ್ರೈ ಮಾಡಿ ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ.
ಈ ಮಸಾಲೆ ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಿ, ನೀರು ಹಾಕದೆಯೇ ರುಬ್ಬಕೊಳ್ಳಬೇಕು. ಹೀಗೆ ರುಬ್ಬಿದ ಮಸಾಲೆ ಒಂದು ಬೌಲ್‌ನಲ್ಲಿ ಇಟ್ಟುಕೊಳ್ಳಿ. ಈಗ ಕುಕ್ಕರ್‌ನಲ್ಲಿರುವ ಚನ್ನಾ ಕಡಲೆ ಬೆಂದಿದೆಯೇ ನೋಡಿಕೊಳ್ಳಿ. ಮೆತ್ತಗೆ ಬೇಯಬೇಕು.
ನಂತರ ಒಲೆ ಮೇಲೆ ಒಂದು ತವಾ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಬಳಿಕ ಅದಕ್ಕೆ ಪಲಾವ್ ಎಲೆ, ಏಲಕ್ಕಿ, ಹಸಿ ಮೆಣಸು, ಈರುಳ್ಳಿ ಸಹ ಹಾಕಿಕೊಂಡು ಸ್ವಲ್ಪ ಫ್ರೈ ಮಾಡಿಕೊಳ್ಳಿ. ಈರುಳ್ಳಿ ಫ್ರೈ ಆದ ಬಳಿಕ ಇದಕ್ಕೆ ರುಬ್ಬಿಕೊಂಡಿರುವ ಮಸಾಲೆಯನ್ನು ಇದಕ್ಕೆ ಹಾಕಿ 1 ನಿಮಿಷ ಚೆನ್ನಾಗಿ ತಿರುಗಿಸಿ. ಇದಕ್ಕೆ ಗರಂ ಮಸಾಲೆ ಹಾಗೂ ಚನ್ನಾ ಮಸಾಲೆಯನ್ನು ಹಾಕಿಕೊಂಡು ತಿರುಗಿಸಿ. ಈಗ ಬೇಯಿಸಿಕೊಂಡಿರುವ ಚನ್ನಾ ಕಡಲೆಯನ್ನು ಹಾಕಿ 15 ನಿಮಿಷ ಮುಚ್ಚಿಟ್ಟು ಬೇಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸವಿಯಲು ಹೋಟೆಲ್ ರುಚಿಯ ಚನ್ನಾ ಮಸಾಲೆ ರೆಡಿಯಾಗುತ್ತದೆ.



Click it and Unblock the Notifications