Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸ್ಟೋರೆಂಟ್ ರುಚಿಯ ಎಗ್ ಮಸಾಲ ಫ್ರೈ: ಬಾಯಲ್ಲಿ ನೀರು ತರಿಸುವ ರುಚಿ!
ಊಟದೊಂದಿಗೆ ನೀವು ಸೈಡ್ ಡಿಶ್ ಆಗಿ ಹಲವು ರೀತಿ ರುಚಿ ರುಚಿಯ ಖಾದ್ಯಗಳ ಬಯಸುತ್ತೀರಿ. ಅದ್ರಲ್ಲೂ ನಿಮಗೆ ಹೋಟೆಲ್, ರೆಸ್ಟೋರೆಂಟ್ ರುಚಿಯ ಯಾವುದಾದರು ಖಾದ್ಯ ಸವಿಯೋದು ಅಂದ್ರೆ ಬಹಳ ಇಷ್ಟವಾಗಿರಬಹುದು. ಹಾಗೆ ರೆಸ್ಟೋರೆಂಟ್‌ನಲ್ಲಿ ಊಟದೊಂದಿಗೆ ನೀವು ಎಂದಾದರು ಮೊಟ್ಟೆ ಫ್ರೈ ಆರ್ಡರ್ ಮಾಡಿದ್ರೆ ಬಾಯಲ್ಲಿ ನೀರು ತರಿಸುತ್ತೆ.
ಇನ್ನು ನೀವು ಸಹ ಮನೆಯಲ್ಲಿ ಈ ಮೊಟ್ಟೆ ಫ್ರೈ ಮಾಡಿ ಸವಿದಿರುತ್ತೀರಿ. ಆದ್ರೆ ಎಂದಾದ್ರು ಮಸಾಲೆ ಭರಿತವಾಗಿ ರೆಸ್ಟೋರೆಂಟ್ ಹಾಗೆ ಡಾಬಾ ರುಚಿಯಲ್ಲಿ ಎಗ್ ಫ್ರೈ ಮಾಡಿದ್ರೆ ಬಾಯಲ್ಲಿ ನೀರು ಬರೋದು ಖಚಿತ. ಹಾಗೆ ಇದನ್ನು ಮಾಡೋದು ಸಹ ಬಹಳ ಸುಲಭ. ನಾವಿಂದು ಊಟದೊಂದಿಗೆ ಇಲ್ಲವೆ ಚಪಾತಿ, ಪರೋಟ, ರೊಟ್ಟಿ ಸೇರಿ ಯಾವುದೇ ತಿಂಡಿಯೊಂದಿಗೂ ಸಹ ಸವಿಯಬಹುದು.

ಹಾಗೆ ರೆಸ್ಟೋರೆಂಟ್ ರುಚಿಯ ಈ ಎಗ್ ಫ್ರೈ ಸವಿಯಲು ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ನೀವು ಈ ಎಗ್ ಫ್ರೈ ಮನೆಯಲ್ಲಿಯೂ ಮಾಡಿ ಸವಿಯಲು ಟ್ರೈ ಮಾಡಿರಬಹುದು. ನಾವಿಂದು ಮನೆಯಲ್ಲಿ ಈ ಎಗ್ ಫ್ರೈ ಮಾಡುವುದು ಹೇಗೆ ಮಾಡಲು ಯಾವೆಲ್ಲಾ ವಸ್ತು ಬೇಕು? ವಿಧಾನವೇನು ಎಂಬುದನ್ನು ಒಂದೊಂದಾಗಿ ತಿಳಿದುಕೊಳ್ಳೋಣ.
ಎಗ್ ಮಸಾಲ ಫ್ರೈ ಮಾಡಲು ಬೇಕಾಗುವ ವಸ್ತುಗಳು
- ಮೊಟ್ಟೆ
- ಬೆಳ್ಳುಳ್ಳಿ - 1
- ಈರುಳ್ಳಿ - 4
- ಕರಿಬೇವು
- ಖಾರದ ಪುಡಿ
- ಅರಿಶಿನ ಪುಡಿ
- ಗರಂ ಮಸಾಲ ಪುಡಿ
- ದನಿಯ ಪುಡಿ
- ಸಾಸಿವೆ
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಎಗ್ ಮಸಾಲ ಫ್ರೈ ಮಾಡುವ ವಿಧಾನವೇನು?
ಮೊದಲಿಗೆ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಎಣ್ಣೆ ಕಾದ ಬಳಿಕ ಇದಕ್ಕೆ ಸಾಸಿವೆ, ಬೆಳ್ಳುಳ್ಳಿ, ಈರುಳ್ಳಿ, ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 2 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಕರಿಬೇವು ಸಹ ಹಾಕಿಕೊಂಡು ಬಳಿಕ ಖಾರದ ಪುಡಿ, ಅರಶಿಣ ಪುಡಿ, ಗರಂ ಮಸಾಲ, ಎಗ್ ಮಸಾಲ, ಧನಿಯಾ ಪುಡಿ, ಹಾಗೆ ಕಾಳು ಮೆಣಸಿನ ಪುಡಿ ಕೂಡ ನಿಮಗೆ ಬೇಕಿದ್ದರೆ ಹಾಕಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಫ್ರೈ ಮಾಡಿ.
ಈಗ ಒಂದು ಬೌಲ್‌ಗೆ ಮೊಟ್ಟೆಯನ್ನು ಒಡೆದು ಇಟ್ಟುಕೊಳ್ಳಿ. ಆ ಮೊಟ್ಟೆಯನ್ನು ತೆಗೆದು ಈ ಬಾಣಲೆಗೆ ಹಾಕಿ ಒಮ್ಮೆ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. 2 ನಿಮಿಷದ ಬಳಿಕ ಮುಚ್ಚಳ ತೆಗೆದು ಮೊಟ್ಟೆ ಸ್ವಲ್ಪ ಗಟ್ಟಿಯಾಗಿದ್ದರೆ ಸ್ವಲ್ಪ ಪುಡಿ ಮಾಡಿ ಮಿಕ್ಸ್ ಮಾಡಿಕೊಳ್ಳಿ.
ಎಲ್ಲಾ ಮಸಾಲೆಗಳು ಮೊಟ್ಟೆಗೆ ಹಿಡಿಯುವಂತೆ ತಿರುಗಿಸಿಕೊಳ್ಳಿ. ಹಾಗೆ ಉರಿ ಹೆಚ್ಚಿಸಿಕೊಂಡು ತಿರುಗಿಸಿಕೊಳ್ಳಿ, ಹಾಗೆ ಬಹಳ ಒಣಗಿದ್ದರೆ ಸ್ವಲ್ಪವೇ ಸ್ವಲ್ಪ ನೀರು ಸಹ ಹಾಕಿಕೊಳ್ಳಬಹುದು. ಹಾಗೆ ಚೆನ್ನಾಗಿ ಫ್ರೈ ಆಗಲು ಬಿಡಿ. ನಂತರ ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಹೋಟೆಲ್ ಡಾಬಾ ರುಚಿಯ ಎಗ್ ಮಸಾಲ ಫ್ರೈ ಸಿದ್ದವಾಗುತ್ತೆ. ನೀವು ಇದಕ್ಕೆ ಕ್ಯಾಪ್ಸಿಕಂ ಸಹ ಹಾಕಿ ಮಾಡಿಕೊಳ್ಳಬಹುದು.



Click it and Unblock the Notifications