Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
10 ನಿಮಿಷದಲ್ಲಿ ಕುಕ್ಕರ್ ಬಳಸಿ ಹನಿ ಕೇಕ್ ಮಾಡಿ..! ಎಷ್ಟು ಸುಲಭ ಗೊತ್ತಾ?
ಬೇಕರಿಯಲ್ಲಿ ನಿಮ್ಮ ಕಣ್ಣಿಗೆ ಬೀಳುಹ ಹನಿ ಕೇಕ್ ಅನ್ನ ನೀವು ಬಾಯಿ ಚಪ್ಪರಿಸಿ ಸವಿದಿರಬಹುದು. ಮಕ್ಕಳಿಗಂತು ಈ ಹನಿ ಕೇಕ್ ಅಂದ್ರೆ ಪಂಚಪ್ರಾಣ. ಅದರಲ್ಲಿರುವ ಸಿಹಿ ಮತ್ತು ಮೃದುತ್ವ ಮತ್ತಷ್ಟು ತಿನ್ನಬೇಕು ಅನಿಸದೆ ಇರದು. ಹೀಗಾಗಿ ಎಲ್ಲಾ ಬೇಕರಿಗಳಲ್ಲೂ ಹನಿ ಕೇಕ್‌ಗೆ ಅಷ್ಟು ಬೇಡಿಕೆ ಇದ್ದೇ ಇರುತ್ತದೆ.
ಆದ್ರೆ ಬೇಕರಿಗಳಲ್ಲಿ ಸಿಗುವ ಹನಿಕೇಕ್ ಎಷ್ಟು ರುಚಿಕರವಾಗಿರುತ್ತೋ ಅದನ್ನು ಸೇವಿಸಲು ಸಹ ನಾವು ಹಿಂದು ಮುಂದು ನೋಡಬೇಕಾದ ಅನಿವಾರ್ಯತೆಯೂ ಈಗ ಇದೆ, ಯಾಕೆಂದ್ರೆ ಅದರಲ್ಲಿ ಯಾವೆಲ್ಲಾ ಅಂಶ ಹಾಕಿರುತ್ತಾರೋ, ಹೇಗೆ ಮಾಡಿರುತ್ತಾರೋ ಎಂದು ಅನುಮಾನಗೊಂಡು ಸುಮ್ಮನಾಗುತ್ತೇವೆ. ಅಲ್ಲದೆ ಕೆಲವು ಬಾರಿ ಬೇಕರಿಯ ಕೇಕ್ ಸೇವಿಸಲು ಇಷ್ಟವಾಗೋದಿಲ್ಲ.

ಆದ್ರೆ ನಾವು ಕೆಲವೇ ವಸ್ತುವನ್ನು ಬಳಸಿಕೊಂಡು ಬೇಕರಿ ರುಚಿಯ ಹನಿ ಕೇಕ್ ಅನ್ನು ಮನೆಯಲ್ಲೇ ಮಾಡಬಹುದು. ಮನೆಯಲ್ಲಿ ಕುಕ್ಕರ್ ಬಳಸಿ ಮೊಟ್ಟೆ ಹಾಕದೆಯೇ ತುಂಬಾ ಕಡಿಮೆ ಸಮಯದಲ್ಲಿ ಹನಿ ಕೇಕ್ ಮಾಡಬಹುದು. ಹಾಗಾದ್ರೆ ಮನೆಯಲ್ಲೇ ಹನಿ ಕೇಕ್ ಮಾಡಲು ಬೇಕಾಗುವ ಪದಾರ್ಥಗಳೇನು?, ಹನಿ ಕೇಕ್ ಮಾಡುವ ವಿಧಾನವೇನು?, ಮೊಟ್ಟೆ ಬಳಸದೆ ಮಾಡೋದು ಹೇಗೆ ಎಂಬುದನ್ನು ನೋಡಿ.
ಹನಿ ಕೇಕ್ ಮಾಡಲು ಬೇಕಾಗುವ ವಸ್ತುಗಳು
- ಬೇಕಿಂಗ್ ಪೇಪರ್
- ಎಣ್ಣೆ
- ಸಕ್ಕರೆ
- ಜಾಮ್
- ಮೈದಾ ಹಿಟ್ಟು
- ಹಾಲು
- ಉಪ್ಪು
- ಬೇಕಿಂಗ್ ಸೋಡಾ
- ಬೇಕಿಂಗ್ ಪೌಡರ್
- ವೆನಿಲ್ಲಾ ಎಸೆನ್ಸ್
- ಏಲಕ್ಕಿ ಪುಡಿ
- ಜೇನು ತುಪ್ಪ
- ಕೊಬ್ಬರಿ ತುರಿ
ಹನಿ ಕೇಕ್ ಮಾಡುವ ವಿಧಾನವೇನು?
ಮೊದಲು ಕುಕ್ಕರ್‌ಗೆ ಎಣ್ಣೆ ಹಾಕಿಕೊಂಡು ಸವರಿಕೊಳ್ಳಿ. ನಂತರ ಬೇಕಿಂಗ್ ಪೇಪರ್ ತೆಗೆದುಕೊಳ್ಳಿ. ಇದನ್ನು ವೃತ್ತಾಕಾರವಾಗಿ ಕತ್ತರಿಸಿ ಕುಕ್ಕರ್ ಒಳಗೆ ಹಾಕಿ, ಕುಕ್ಕರ್ ತಳ ಸಂಪೂರ್ಣವಾಗಿ ಮುಚ್ಚುವಂತೆ ಈ ಪೇಪರ್ ಹಾಕಿಕೊಳ್ಳಿ. ಈಗ ಕೇಕ್ ಬಟರ್ ಮಾಡಿ.
ಒಂದು ಬೌಲ್ ತೆಗೆದುಕೊಂಡು ಅರ್ಧ ಗ್ಲಾಸ್ ಮೊಸರು ಹಾಕಿ ಒಂದು ಗ್ಲಾಸ್ ಸಕ್ಕರೆ ಹಾಕಿ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ. ಎರಡು ಚೆನ್ನಾಗಿ ಮಿಶ್ರಣ ಆಗುವಂತೆ ಮಾಡಿ. ನಂತರ ಈ ಮಿಶ್ರಣಕ್ಕೆ ಅರ್ಧ ಗ್ಲಾಸ್ ಎಣ್ಣೆ ಹಾಕಿ ಮಿಕ್ಸ್ ಮಾಡಿ ಬಳಿಕ ಎರಡು ಗ್ಲಾಸ್ ಮೈದಾ ಹಿಟ್ಟು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಬಳಿಕ ಇದಕ್ಕೆ ಬಿಸಿ ಮಾಡಿರುವ ಹಾಲನ್ನು ತಣ್ಣಗಾಗಿಸಿಕೊಂಡು ಸ್ವಲ್ಪ ಸ್ವಲ್ಪವೆ ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿ. ಒಟ್ಟು ಅರ್ಧ ಗ್ಲಾಸ್ ಹಾಕಿದರೆ ಸಾಕಾಗುತ್ತದೆ. ದೋಸೆ ಹಿಟ್ಟಿನಂತೆ ಈ ಕೇಕ್ ಬಟರ್ ಆಗಬೇಕು. ನಂತರ ಇದಕ್ಕೆ ಚಿಟಿಕೆ ಉಪ್ಪು, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಕಾಲು ಸ್ಪೂನ್ ವೆನಿಲ್ಲಾ ಎಸೆನ್ಸ್ ಹಾಗೂ ಚಿಟಿಕೆಯಷ್ಟು ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ.
ಈಗ ಈ ಮಿಶ್ರಣವನ್ನ ಕುಕ್ಕರ್‌ಗೆ ಹಾಕಿ. ಬಳಿಕ ನೇರವಾಗಿ ಕುಕ್ಕರ್ ಅನ್ನು ಒಲೆ ಮೇಲೆ ಇಡಬೇಡಿ. ಅದಕ್ಕು ಮುನ್ನ ರೊಟ್ಟಿ ಮಾಡುವ ಕಾವಲಿಯನ್ನ ಒಲೆ ಮೇಲೆ ಇಟ್ಟು ಬಿಸಿ ಮಾಡಿ. ಕಾವಲಿ ಬಿಸಿಯಾದ ಬಳಿಕ ಅದರ ಮೇಲೆ ಕುಕ್ಕರ್ ಇಟ್ಟು ಬೇಯಿಸಿ. ಕೇಕ್ ರೆಡಿಯಾಗಲು ಹೆಚ್ಚು ಸಮಯ ಬೇಡ 15 ರಿಂದ 25 ನಿಮಿಷದಲ್ಲಿ ಕೇಕ್ ರೆಡಿಯಾಗುತ್ತೆ.
ಬಳಿಕ ಮುಚ್ಚಳ ತೆಗೆದು ಕುಕ್ಕರ್ ಒಳಗಿರುವ ಕೇಕ್ ಅನ್ನ ತೆಗೆದು ತಟ್ಟೆಗೆ ಹಾಕಿಕೊಳ್ಳಿ. ಬಳಿಕ ಸಕ್ಕರೆ ನೀರು ಮಾಡಿಕೊಳ್ಳಿ. ಒಂದು ಪಾತ್ರೆಗೆ ಒಂದು ಗ್ಲಾಸ್ ನೀರು ಹಾಕಿ, 1 ಗ್ಲಾಸ್ ಸಕ್ಕರೆ ಹಾಕಿ ಕುದಿಸಿ. ಸಕ್ಕರೆ ಕರಗಿದ ಬಳಿಕ 2 ಸ್ಪೂನ್ ಜೇನು ತುಪ್ಪ ಹಾಕಿ ಒಲೆ ಆಫ್ ಮಾಡಿ. ಬಳಿಕ ಈ ಸಕ್ಕರೆ ನೀರನ್ನು ಕೇಕ್ ಮೇಲೆ ಸ್ವಲ್ಪ ಸ್ವಲ್ಪವೇ ಹಾಕಿಕೊಳ್ಳಿ. ಈಗ ಅದೇ ಪಾತ್ರೆಗೆ ಯಾವುದಾದರು ಜಾಮ್ ಹಾಕಿಕೊಂಡು ಅದಕ್ಕೆ ಸಕ್ಕರೆ ನೀರು ಹಾಕಿ ಕರಗಿಸಿಕೊಳ್ಳಿ. ಜಾಮ್ ಕರಗಿದ ಬಳಿಕ ಅದನ್ನು ಸಹ ಕೇಕ್ ಮೇಲೆ ನಿಧಾನವಾಗಿ ಹಾಕಿಕೊಳ್ಳಿ. ಕೇಕ್ ಮೇಲೆ ಹಚ್ಚಿಕೊಂಡ ಬಳಿಕ ಅದರ ಮೇಲೆ ಕೊಬ್ಬರಿ ತುರಿ ಹಾಕಿಕೊಂಡು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಹನಿ ಕೇಕ್ ರೆಡಿಯಾಗುತ್ತೆ.



Click it and Unblock the Notifications