ಅಮ್ಮಂದಿರಿಗೆ ಟೆನ್ಷನ್ ಫ್ರೀ! 10 ನಿಮಿಷ ಸಾಕು.. ಮಾರ್ನಿಂಗ್ ಟಿಫಿನ್, ಸಂಜೆ ಸ್ನಾಕ್‌ಗೆ ಬ್ರೆಡ್ ಚಿಲ್ಲಿ ಬೆಸ್ಟ್

Posted By:

ಇನ್ಮುಂದೆ ಅಮ್ಮಂದಿರಿಗೆ ನೋ ಟೆಕ್ಷನ್! ಮಾರ್ನಿಂಗ್ ಟಿಫಿನ್ ಬಾಕ್ಸ್ ಆಗಿರಲಿ ಅಥವಾ ಸಂಜೆ ಟೈಮ್ ತಿಂಡಿ ಬಗ್ಗೆ ಚಿಂತೆ ಬೇಡವೇ ಬೇಡ. ಕೇವಲ 10 ನಿಮಿಷಗಳಲ್ಲಿ ರುಚಿಯಾದ ಬ್ರೆಡ್ ಚಿಲ್ಲಿ (Bread Chilli) ಮಾಡಬಹುದು. ಹೌದು, ಇದು ತ್ವರಿತ ತಿಂಡಿ ರೆಸಿಪಿ ಆಗಿದೆ. ಸಾಮಾನ್ಯವಾಗಿ ಮಕ್ಕಳು ನಿತ್ಯ ತಮ್ಮ ಲಂಚ್ ಬಾಕ್ಸ್‌ನಲ್ಲಿ ಒಂದೇ ತಿಂಡಿ ಬಯಸಲ್ಲ. ಅವರು ತಮ್ಮ ಡಬ್ಬಿಯಲ್ಲಿಯೂ ವಿಭಿನ್ನ ತಿಂಡಿ ಕೇಳುತ್ತಾರೆ. ಕೆಲವು ಮಕ್ಕಳಂತೂ ಹಿಡಿದಿದ್ದೇ ಹಠ. ಈ ಪರಿಸ್ಥಿತಿಯಲ್ಲಿ ನಿಮಗೆ ಏನು ಮಾಡಬೇಕು ಎಂಬ ಚಿಂತೆ ಸಾಮಾನ್ಯ. ನಿಮ್ಮ ಈ ಚಿಂತೆ ದೂರ ಮಾಡಲು ನಾವಿಂದು ಬೇಗನೇ ತಯಾರಾಗುವ ಬ್ರೆಡ್ ಚಿಲ್ಲಿ ಬಗ್ಗೆ ತಿಳಿಸಿಕೊಡಲಿದ್ದೇವೆ.

ಬ್ರೆಡ್ ಚಿಲ್ಲಿ ಕೇವಲ ಬೆಳಗ್ಗಿನ ಉಪಹಾರಕ್ಕೆ ಮಾತ್ರವಲ್ಲ, ಸಂಜೆ ಸ್ನಾಕ್‌ಗೂ (Evening snack) ಪರ್ಫೆಕ್ಟ್ ಚಾಯ್ಸ್. ‌ಸಂಜೆ ಬಹಳಷ್ಟು ಹಸಿವು ಇರುತ್ತದೆ. ಈ ವೇಳೆ ಕಷ್ಟಪಟ್ಟು ಕೆಲಸ ಮಾಡಲು ಆಗಲ್ಲ. ಆದರೆ, ಬೇಗ ಏನನ್ನಾದರೂ ಮಾಡಿ ತಿನ್ನಬೇಕು ಅನಿಸುತ್ತೆ. ಈ ಸಮಯದಲ್ಲಿ ಬ್ರೆಡ್ ಚಿಲ್ಲಿ ನಿಮಗೆ ಸಹಕಾರಿಯಾಗಿದೆ. ಇದನ್ನು ಬ್ರೆಡ್ ಮತ್ತು ಮನೆಯಲ್ಲಿ ಇರುವ ವಸ್ತುಗಳನ್ನು ಬಳಸಿ ಸುಲಭವಾಗಿ ಮಾಡಬಹುದು. ಇನ್ನೇಕೆ ತಡ, ಟೇಸ್ಟಿಯಾದ ಬ್ರೆಡ್ ಚಿಲ್ಲಿ (Bread Chilli Recipe) ಮಾಡೋದು ಹೇಗೆ ಅಂತ ತಿಳಿಯೋಣ ಬನ್ನಿ.

Bread Chilli

ಬ್ರೆಡ್ ಚಿಲ್ಲಿ ತಯಾರಿಸಲು ಬೇಕಾಗುವ ಸಾಮಗ್ರಿಗಳು

- ಬ್ರೆಡ್
- ಈರುಳ್ಳಿ
- ಕ್ಯಾಪ್ಸಿಕಂ
- ಟೊಮ್ಯಾಟೊ
- ಹಸಿ ಮೆಣಸಿನಕಾಯಿ
- ಬೆಳ್ಳುಳ್ಳಿ
- ಟೊಮ್ಯಾಟೊ ಸಾಸ್
- ಚಿಲ್ಲಿ ಸಾಸ್
- ವಿನೆಗರ್
- ಸಾಸಿವೆ ಮತ್ತು ಜೀರಿಗೆ
- ಉಪ್ಪು
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ

Take a Poll

ಬ್ರೆಡ್ ಚಿಲ್ಲಿ ಮಾಡುವ ವಿಧಾನ

ಮೊದಲು ನಾವು ಆರು ಬ್ರೆಡ್ ತೆಗೆದುಕೊಳ್ಳೋಣ. ಅವುಗಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಕೊಳ್ಳೋಣ. ಈಗ ಬಾಣಲೆ ತೆಗೆದುಕೊಳ್ಳಿ, ಅದು ಸ್ವಲ್ಪ ಬಿಸಿಯಾಗಲಿ. ಅದರಲ್ಲಿ ಅಡುಗೆ ಎಣ್ಣೆ ಹಾಕಿ, ಒಗ್ಗರಣೆ ಮಾಡಿ. ಒಂದು ಸ್ಪೂನ್ ಸಾಸಿವೆ ಮತ್ತು ಜೀರಿಗೆಯನ್ನು ಹಾಕಬೇಕು. ಇದು ಚೆನ್ನಾಗಿ ಬೆಂದ ಬಳಿಕ, ಸಣ್ಣದಾಗಿ ಕತ್ತರಿಸಿ ಹಸಿ ಮೆಣಸಿನಕಾಯಿ ಮತ್ತು 4 ರಿಂದ 5 ಎಸಳು ಬೆಳ್ಳುಳ್ಳಿ ಸೇರಿಸಿ. ಹಾಗೆಯೇ ಸ್ವಲ್ಪ ಚೆನ್ನಾಗಿ ಬೇಯಿಸಿ.

ಇದನ್ನೂ ಓದಿ: ಈಗಲೇ ಬರೆದಿಟ್ಟುಕೊಳ್ಳಿ! ದಿನಾಲು ಮಾಡಿದ್ದೆ ಮಾಡ್ಬೇಡಿ.. ಟೈಮ್ ಸೇವ್ ಮಾಡುವ ಟಿಫನ್‌ಗಳಿವು

ಇದಾದ ಬಳಿಕ, ಎರಡು ಕತ್ತರಿಸಿದ ಈರುಳ್ಳಿ ತೆಗೆದುಕೊಂಡು ಅದರಲ್ಲಿ ಹಾಕಿ ಚೆನ್ನಾಗಿ ಹುರಿಯಬೇಕು. ಈರುಳ್ಳಿ ಗೋಲ್ಡ್ ಬಣ್ಣ ಬಂದ ಬಳಿಕ, ಅದಕ್ಕೆ ಒಂದು ಕತ್ತರಿಸಿದ ಕ್ಯಾಪ್ಸಿಕಂ ಹಾಕಬೇಕು. ಎರಡನ್ನೂ ಸ್ವಲ್ಪ ಹುರಿದ ಬಳಿಕ, ಈಗ ಅದಕ್ಕೆ ಒಂದು ಕತ್ತರಿಸಿದ ಟೊಮ್ಯಾಟೊ ಹಾಕಿ. ಸ್ವಲ್ಪ ಕಾಲ ಹುರಿಯಿರಿ. ಬಳಿಕ ಎಲ್ಲಾ ಸಾಸ್ ಸೇರಿಸಿ. ಈಗ ಗ್ಯಾಸ್ ಆಫ್ ಮಾಡಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿ. ಇಷ್ಟು ಮಾಡಿದರೆ ಸಾಕು ಬಿಸಿ ಬಿಸಿಯಾದ ಬ್ರೆಡ್ ಚಿಲ್ಲಿ ಸವಿಯಲು ಸಿದ್ಧವಾಗುತ್ತದೆ. ಈ ಮೇಲಿನ ರೀತಿಯಲ್ಲಿ ಕೇವಲ 10 ನಿಮಿಷಗಳಲ್ಲಿ ನೀವು ಸುಲಭವಾಗಿ ರುಚಿಯಾದ ಬ್ರೆಡ್ ಚಿಲ್ಲಿ ತಯಾರಿಸಬಹುದು.

ಒಟ್ಟಾರೆಯಾಗಿ, ಈ ಬ್ರೆಡ್ ಚಿಲ್ಲಿ ನಿಮ್ಮ ಚಿಂತೆಯನ್ನು ಮಾತ್ರ ಕಡಿಮೆ ಮಾಡುವುದಿಲ್ಲ. ನಿಮ್ಮ ಸಮಯವನ್ನೂ ಉಳಿಸುತ್ತದೆ. ನೀವು ಮನೆಯಲ್ಲಿಯೇ ಮಾಡುವುದರಿಂದ ಹೆಚ್ಚು ರುಚಿಕರವಾಗಿರುತ್ತದೆ ಮತ್ತು ಮಕ್ಕಳ ಆರೋಗ್ಯಕ್ಕೂ ಒಳ್ಳೆಯದು.

[ of 5 - Users]
Story first published: Tuesday, June 3, 2025, 8:31 [IST]
X
Desktop Bottom Promotion